ಕಿರುತೆರೆಯಲ್ಲಿ ಸ್ಯಾಂಡಲ್‌ವುಡ್‌ ಚಿನಕುರಳಿ ಅದಿತಿ ಪ್ರಭುದೇವ ವಿವಾಹ ಸಂಭ್ರಮ: ಯಾವಾಗ? ಎಲ್ಲಿ? ಫುಲ್ ಡಿಟೈಲ್ಸ್

ಸ್ಯಾಂಡಲ್‌ವುಡ್‌ ಚಿನಕುರಳಿ ತಾರೆ ಅದಿತಿ ಪ್ರಭುದೇವ ಮದುವೆಯಾಗಿದ್ದು ನಿಮಗೆ ಗೊತ್ತಲ್ವಾ? ಕೊಡಗಿನ ಕಾಫಿ ಬೆಳೆಗಾರ ಯಶಸ್ ಪಟ್ಲ ಜೊತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದಿತಿ ಅದ್ಧೂರಿಯಾಗಿ ಹಸೆಮಣೆ ಏರಿದ್ರು. ಕಳೆದ ವರ್ಷ ನವೆಂಬರ್ 28 ರಂದು ಮದುವೆಯಾದ ಈ ಜೋಡಿಯ ಚಿತ್ರಗಳು ಎಲ್ಲಾ ಕಡೆ ರಾರಾಜಿಸಿದ್ವು. ಅಬ್ಬಾ.. ಎಷ್ಟು ಮುದ್ದಾಗಿದೆ ಈ ಜೋಡಿ ಅಂತ ಎಲ್ಲರೂ ಮಾತಾಡಿಕೊಂಡ್ರು.

ಅದಿತಿ -ಯಶಸ್ ಮದುವೆಯಲ್ಲಿ ಇಡೀ ಸ್ಯಾಂಡಲ್‌ವುಡ್ ಭಾಗಿಯಾಗಿತ್ತು. ರಾಧಿಕಾ ಪಂಡಿತ್ -ಯಶ್, ಮೇಘಾ ಶೆಟ್ಟಿ, ರಚನಾ ಇಂದರ್, ರಂಜನಿ ರಾಘವನ್, ಮೇಘನಾ ರಾಜ್, ಅಭಿಷೇಕ್ ಅಂಬರೀಶ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಅದಿತಿ -ಯಶಸ್ ದಾಂಪತ್ಯಕ್ಕೆ ಶುಭ ಹಾರೈಸಿದ್ರು.

Actress Aditi Prabhudeva wedding with Yashas Patla video telecast in star suvarna date and time details

ಆದರೆ, ನವೆಂಬರ್‌ನಲ್ಲಿ ನಡೆದ ಮದುವೆ ಈಗ 10 ತಿಂಗಳಾದ್ಮೇಲೆ ಯಾಕೆ ಚರ್ಚೆಗೆ ಬಂದಿದೆ ಅಂದ್ರೆ, ಅದಕ್ಕೊಂದು ವಿಶೇಷ ಕಾರಣವಿದೆ. ಅದಿತಿ ಪ್ರಭುದೇವ ತಮ್ಮಇನ್‌ಸ್ಟಾಗ್ರಾಂ ಖಾತೆಯ ಮೂಲಕ ಮದುವೆಯ ಅನೇಕ ಫೋಟೊಗಳನ್ನು ಹಂಚಿಕೊಂಡಿದ್ದರು. ಅದನ್ನ ಹೊರತುಪಡಿಸಿ ಮಾಧ್ಯಮಗಳು ಮತ್ತಷ್ಟು ಫೋಟೊ ಹಾಗೂ ವಿಡಿಯೋಗಳನ್ನು ಬಿತ್ತರಿಸಿದ್ದವು.

ಅದರೆ, ಈಗ ಅದಿತಿ ವಿವಾಹದ ಸಂಪೂರ್ಣ ವಿಡಿಯೋ ನಿಮ್ಮ ಮುಂದೆ ಬರಲಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಅದಿತಿ -ಯಶಸ್ ಕಲ್ಯಾಣದ ಶಾಸ್ತ್ರಗಳು, ಮಾಂಗಲ್ಯಧಾರಣೆ, ಮದುವೆ ಬಗ್ಗೆ ಅತಿಥಿಗಳು ಇಂತಹ ಸುಮಧುರ ಕ್ಷಣಗಳನ್ನು ಸೆರೆಹಿಡಿದ ವಿಡಿಯೋ ಪ್ರಸಾರವಾಗಲಿದೆ. ಈ ಬಗ್ಗೆ ಈಗಾಗಲೇ ಸಣ್ಣ ವಿಡಿಯೋ ತುಣುಕುಗಳ ಪ್ರೊಮೋ ಕೂಡಾ ಎಲ್ಲೆಡೆ ಹರಿದಾಡ್ತಿದೆ.

Actress Aditi Prabhudeva wedding with Yashas Patla video telecast in star suvarna date and time details

ಗೊಂಬೆಯಂತೆ ಕಂಗೊಳಿಸ್ತಿದ್ದ ವಧು ಅದಿತಿ, ರಾಜಕುಮಾರನಂತೆ ಮಿಂಚುತ್ತಿದ್ದ ವರ ಯಶಸ್ ಇವರಿಬ್ಬರ ಸುಂದರ ಮದುವೆಯ ಫುಲ್ ವಿಡಿಯೋ ಸ್ಟಾರ್ ಸುವರ್ಣದಲ್ಲಿ ಬಿಡುಗಡೆಯಾಗ್ತಿದೆ. ಅಂದ್ಹಾಗೆ, ಸ್ಯಾಂಡಲ್‌ವುಡ್‌ನಲ್ಲಿ ಇದೇ ಮೊದಲ ಬಾರಿಗೆ ತಾರೆಯೊಬ್ಬರ ಮದುವೆಯ ವಿಡಿಯೋವನ್ನು ವಾಹಿನಿಯೊಂದು ಪ್ರಸಾರ ಮಾಡ್ತಿದೆ.

ಬಹುಭಾಷಾ ತಾರೆ ನಯನತಾರಾ ಮದುವೆಯ ವಿಡಿಯೋ ಕೂಡಾ ನೆಟ್‌ಫ್ಲಿಕ್ಸ್ ಭಾರೀ ಮೊತ್ತ ಕೊಟ್ಟು ಖರೀದಿಸಿದೆ ಎನ್ನಲಾಗಿತ್ತು. ಆದರೆ, ಇಷ್ಟು ಸಮಯ ಕಳೆದರೂ ಯಾಕೋ ಆ ಮದುವೆಯ ವಿಡಿಯೋ ಬಿಡುಗಡೆಯೇ ಆಗಿಲ್ಲ. ಇನ್ನು ಅನೇಕ ಬಾಲಿವುಡ್-ಹಾಲಿವುಡ್ ಸೆಲಬ್ರಿಟಿಗಳು ತಮ್ಮ ಮದುವೆಯ ವಿಡಿಯೋ ಅಥವಾ ಫೋಟೊಗಳ ಪ್ರಸಾರದ ಹಕ್ಕನ್ನು ದೊಡ್ಡ ಮೊತ್ತಕ್ಕೇ ಮಾರಾಟ ಮಾಡ್ತಾರೆ.

ಹಾಗಂತ ಅದಿತಿ ಪ್ರಭುದೇವ ಮದುವೆಯ ವಿಡಿಯೋವನ್ನು ಸ್ಟಾರ್ ಸುವರ್ಣ ಕೊಂಡುಕೊಂಡಿದ್ದಲ್ಲ. ಮುದ್ದಾದ ಜೋಡಿಯನ್ನ ಎಲ್ರೂ ಕಣ್ತುಂಬಿಕೊಳ್ಳಲಿ ಅಂತ ಈ ರಿಲೀಸ್ ಪ್ಲಾನ್ ಮಾಡಲಾಗಿದೆ, ಅಷ್ಟೇ. ಅಲ್ಲದೆ ಅದಿತಿ ಪ್ರಭುದೇವ ಸ್ಟಾರ್ ಸುವರ್ಣದ 'ಗುಂಡ್ಯಾನ್ ಹೆಂಡ್ತಿ' ಧಾರಾವಾಹಿ ಮೂಲಕ ಕಿರುತೆರೆಗೆ ಪ್ರಸಾರ ಮಾಡಿದ್ದರು. ಹೀಗಾಗಿ ಸ್ಟಾರ್ ಸುವರ್ಣಗೂ ಅದಿತಿ ಪ್ರಭುದೇವಗೂ ಬಿಡಿಸಲಾರದ ಒಂದು ನಂಟಿದೆ.

ಇನ್ನು ಅದಿತಿ ಮದುವೆಯ ವಿಡಿಯೋ ಯಾವಾಗ ಪ್ರಸಾರವಾಗಲಿದೆ ಎನ್ನುವ ಬಗ್ಗೆ ಚಾನೆಲ್ ಮಟ್ಟದಲ್ಲಿ ಇನ್ನೂ ನಿರ್ಧಾರವಾದಂತಿಲ್ಲ. ಬಹುಶಃ ಯಾವುದಾದರೂ ಹಬ್ಬದ ಸಂದರ್ಭದಲ್ಲಿ ಅಥವಾ ವೀಕೆಂಡ್‌ನಲ್ಲಿ ಈ ವಿಡಿಯೋ ಬಿಡುಗಡೆಯಾಗುವ ಸಾಧ್ಯತೆ ಇದೆ. ಜನ ಆರಾಮಾಗಿ ಮನೆಯಲ್ಲಿ ಕುಳಿತು ಮದುವೆಯ ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಬಹುದು.

ಅಂದ್ಹಾಗೆ, ಮದುವೆಯಾದ ನಂತರ ಅದಿತಿ ಪ್ರಭುದೇವ ನಟನೆಯನ್ನು ಮುಂದುವರೆಸಿದ್ದಾರೆ. ಈ ವರ್ಷ ಅವರಿಗೆ ಕೈತುಂಬಾ ಕೆಲಸವಿದ್ದು ಬ್ಯುಸಿಯಾಗಿದ್ದಾರೆ ಕೂಡಾ. ಈ ವರ್ಷ 'ತೋತಾಪುರಿ 2', 'ದಿಲ್ಮಾರ್', 'ಅಂದೊಂದಿತ್ತು ಕಾಲ', 'ಮಾಫಿಯಾ', 'ಮ್ಯಾಟ್ನಿ','ಛೂಮಂತ್ರ' ಸೇರಿದಂತೆ ಅನೇಕ ಪ್ರಾಜೆಕ್ಟ್‌ಗಳಲ್ಲಿ ಅದಿತಿ ಬ್ಯುಸಿಯಾಗಿದ್ದಾರೆ.

More from Filmibeat

English summary
Actress Aditi Prabhudeva wedding with Yashas Patla video telecast in star suvarna date and time details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X