"ಬಿಗ್ ಬಾಸ್ ಸ್ಪರ್ಧಿಯಾಗಿದ್ದು ನನ್ನ ಜೀವನದ ತಪ್ಪು ನಿರ್ಧಾರ"; ನಟಿ ಅಕ್ಷತಾ ಪಾಂಡವಪುರ
ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದಿರುವ ನಟಿ ಅಕ್ಷತಾ ಪಾಂಡವಪುರ ಬಿಗ್ ಬಾಸ್ ಬಗ್ಗೆ ಒಂದಷ್ಟು ವಿಚಾರಗಳನ್ನು ಶೇರ್ ಮಾಡಿದ್ದಾರೆ. ರಂಗ ಕಲಾವಿದೆ, ನಟಿ ಅಕ್ಷತಾ ಪಾಂಡವಪುರ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿ ಹಲವಾರು ಕಾಂಟ್ರವರ್ಸಿಗಳಿಗೆ ಗುರಿಯಾಗಿದ್ದರು.
ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ಕಲಾವಿದೆ ಅಕ್ಷತಾ ಪಾಂಡವಪುರ ಬಿಗ್ ಬಾಸ್ ಬಗ್ಗೆ ಇರುವ ತಮ್ಮ ಸಮಾಧಾನವನ್ನು ಹೊರಹಾಕಿದ್ದಾರೆ. ಅಂದ ಹಾಗೆ ನಟಿ ಅಕ್ಷತಾ ಪಾಂಡವಪುರ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 6ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.

ಬಿಗ್ ಬಾಸ್ ಮನೆಯಲ್ಲಿ ಮತ್ತೋರ್ವ ಸ್ಪರ್ಧಿ ಆಗಿದ್ದ ರಾಕೇಶ್ ಅವರೊಂದಿಗೆ ಅಕ್ಷತಾ ಪಾಂಡವಪುರ ಬಹಳ ಕ್ಲೋಸ್ ಆಗಿದ್ದರು. ಈ ಕಾರಣಕ್ಕೆ ಇವರಿಬ್ಬರನ್ನು ಪ್ರೇಕ್ಷಕರು ಸ್ನೇಹಿತರಿಗಿಂತ ಹೆಚ್ಚಾಗಿ ಕಾಣಲು ಆರಂಭಿಸಿದ್ದರು. ಈ ವಿಚಾರಗಳ ಬಗ್ಗೆ ಮನೆಯಿಂದ ಹೊರಬಂದು ತಿಳಿದ ಅಕ್ಷತಾ ಪಾಂಡವಪುರ ಬಹಳ ಅಪ್ಸೆಟ್ ಆಗಿದ್ದರು.
"ನಾನು ರಾಕೇಶ್ ಅವರನ್ನು ನನ್ನ ಸ್ನೇಹಿತನಂತೆ ನೋಡಿದ್ದೇನೆ. ಅವರಲ್ಲಿ ನನ್ನ ತಾಯಿಯನ್ನು ಕಂಡಿದ್ದೇನೆ. ನಾವಿಬ್ಬರೂ ಒಳ್ಳೆಯ ಸ್ನೇಹಿತರು ಬಿಟ್ಟರೆ ಮತ್ತೇನು ಅಲ್ಲ. ಆದರೆ ಬಿಗ್ ಬಾಸ್ ನಮ್ಮ ಸ್ನೇಹವನ್ನು ಬಹಳ ಕೆಟ್ಟದಾಗಿ ತೋರಿಸಿದ್ದಾರೆ. ಹೊರಗಿನ ಪ್ರಪಂಚಕ್ಕೆ ಇಷ್ಟು ಕೆಟ್ಟದಾಗಿ ನಮ್ಮ ಸ್ನೇಹವನ್ನು ತೋರಿಸುತ್ತಿದ್ದಾರೆ ಎಂಬ ಕಿಂಚಿತ್ ಕಲ್ಪನೆಯೂ ನಮಗಿರಲಿಲ್ಲ. ಈ ರೀತಿಯಾಗಿ ನಮ್ಮನ್ನು ತೋರಿಸಬಾರದಿತ್ತು. ನೈತಿಕವಾಗಿ ಇದು ಸರಿಯಲ್ಲ. ಹಾಗಾಗಿ ನಾನು ಬಿಗ್ ಬಾಸ್ ಗೆ ಸ್ಪರ್ಧಿಯಾಗಿ ಹೋಗಿರುವ ನನ್ನ ನಿರ್ಧಾರವನ್ನೇ, ನನ್ನ ಜೀವನದ ತಪ್ಪು ನಿರ್ಧಾರಗಳಲ್ಲಿ ಒಂದು ಎಂದು ಪರಿಗಣಿಸುತ್ತೇನೆ" ಎಂದು ನಟಿ ಅಕ್ಷತಾ ಪಾಂಡವಪುರ ಹೇಳಿಕೊಂಡಿದ್ದಾರೆ.
ಇನ್ನು ಇತ್ತೀಚೆಗೆ ನೀಡಿದ ಸಂದರ್ಶನದಲ್ಲೂ ಈ ಬಗ್ಗೆಯೇ ಮಾತನಾಡಿದ ನಟಿ ಅಕ್ಷತಾ ಪಾಂಡವಪುರ ಬಿಗ್ ಬಾಸ್ ಹೊರಗಿಂದ ನೋಡಲು ಮಾತ್ರ ಚೆಂದ. ಪ್ರೇಕ್ಷಕರಾಗಿ ನಾವು ಬಿಗ್ ಬಾಸ್ ಅಂತಹ ಕಾರ್ಯಕ್ರಮಗಳನ್ನು ಎಂಜಾಯ್ ಮಾಡಬಹುದು. ಆದರೆ ಸ್ಪರ್ಧಿಯಾಗಿ ಅಲ್ಲಿ ಹೋಗುವ ಮೊದಲು ಹಲವು ಬಾರಿ ಯೋಚಿಸಬೇಕು. ನನ್ನನ್ನು ಯಾರಾದರೂ ಬಿಗ್ ಬಾಸ್ ಸ್ಪರ್ಧೆ ಎಂದು ಗುರುತಿಸಿದರೆ ನನಗೆ ಇಷ್ಟವಾಗುವುದಿಲ್ಲ. ಯಾಕೆಂದರೆ ನಾನು ಅದನ್ನು ಮೀರಿದ ಐಡೆಂಟಿಟಿಯನ್ನು ಹೊಂದಿದ್ದೇನೆ. ಜೊತೆಗೆ ಬಿಗ್ ಬಾಸ್ ನನ್ನನ್ನು ತೋರಿಸಿದ ರೀತಿ ನನಗೆ ಸ್ವಲ್ಪವೂ ಇಷ್ಟವಾಗಿಲ್ಲ. ನಾನು ಬಿಗ್ ಬಾಸ್ ನಂತಹ ಯಾವ ಕಾರ್ಯಕ್ರಮಗಳನ್ನು ನೋಡುವುದಿಲ್ಲ. ಏಕೆಂದರೆ ನಮ್ಮ ಮನೆಯಲ್ಲಿ ಟಿವಿ ಕನೆಕ್ಷನ್ನನ್ನೇ ನಾವು ಕೊಡಿಸಿಲ್ಲ. ಮೊಬೈಲ್ ನಲ್ಲಿ ಏನಾದರೂ ಬಂದಾಗ ನೋಡುವುದು ಬಿಟ್ಟರೆ ಯಾವುದೇ ಕಾರ್ಯಕ್ರಮವನ್ನು ನಾನು ನೋಡುವುದಿಲ್ಲ. ಎಂದಿದ್ದಾರೆ ನಟಿ ಅಕ್ಷತಾ.

ಜನಮನ ಎನ್ನುವ ಒಂದು ಬಟ್ಟೆ ಶಾಪನ್ನು ಹೊಂದಿರುವ ನಟಿ ಅಕ್ಷತಾ ಪಾಂಡವಪುರ, ಮುದ್ದಾದ ನಾಲ್ಕು ವರ್ಷದ ಹೆಣ್ಣು ಮಗುವಿನ ತಾಯಿ. ಜನಮನ ಎನ್ನುವ ಸ್ವಂತ ಅಂಗಡಿಯನ್ನು ಹೊಂದಿರುವ ಇವರು, ಅದರಲ್ಲಿ ಕರಕುಶಲ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಜೊತೆಗೆ ನಟನಾ ತರಬೇತಿಯನ್ನು ಕೊಡುವ ಈಕೆ, ನಟನೆಯಲ್ಲಿಯೇ ಹಲವು ಸಾಧನಗಳನ್ನು ಮಾಡಿದ್ದಾರೆ. ಇತ್ತೀಚೆಗೆ ತಮ್ಮ ಅತ್ಯುತ್ತಮ ನಟನೆಗೆ ರಾಜ್ಯ ಪ್ರಶಸ್ತಿಯನ್ನು ಪಡೆದರು.
ಪ್ರಖ್ಯಾತಿ ಹಾಗೂ ಕುಖ್ಯಾತಿ ಎಂಬ ಎರಡು ವಿಚಾರಗಳಿವೆ. ಮೊದಲಿನಿಂದಲೂ ನಟನೆಯನ್ನೇ ನನ್ನ ಜೀವಾಳವಾಗಿ ನಾನು ಇಟ್ಟುಕೊಂಡಿದ್ದೇನೆ. ಪಾತ್ರಕ್ಕೆ ತೂಕವಿರಬೇಕು, ಅದು ರಂಗಭೂಮಿ, ಹಿರಿತೆರೆಯಾಗಲಿ, ಅಥವಾ ಕಿರುತೆರೆಯಾಗಲಿ ನಾನು ನಟನೆ ಮಾಡಲು ಸಿದ್ಧ. ನಟನೆ ನನ್ನ ಮೂಲಭೂತ ವೃತ್ತಿ. ನಾನು ಇದನ್ನು ಫೇಮ್‌ಗಾಗಿ ಅಥವಾ ನೇಮ್ ಗಾಗಿ ಮಾಡುವುದಲ್ಲ. ಬಿಗ್ ಬಾಸ್‌ಗೆ ಹೋಗಬೇಕೆಂದು ನಾನು ನಿರ್ಧರಿಸಿದ್ದು ಬಹಳ ತಪ್ಪು ನಿರ್ಧಾರವಾಗಿತ್ತು. ಇದರಿಂದ ನಾನು ಪ್ರಖ್ಯಾತಳೇನೂ ಆಗಲಿಲ್ಲ ಎಂದಿದ್ದಾರೆ ನಟಿ ಅಕ್ಷತಾ ಪಾಂಡವಪುರ. ಅಂದ ಹಾಗೇ ಕೋಳಿ ಎಸ್ರು, ಪಿಂಕಿ ಎಲ್ಲಿ?, ಎಂಬ ಸಿನಿಮಾಗಳಲ್ಲಿ ನಟಿ ಅಕ್ಷತಾ ಪಾಂಡವಪುರ ನಟಿಸಿದ್ದಾರೆ.


Click it and Unblock the Notifications











