"ನಕಲಿ ಅಶ್ಲೀಲ ವಿಡಿಯೋ, ಫೋಟೊ ಹಾಕಿ ಕಿರುಕುಳ ನೀಡುತ್ತಿದ್ದಾರೆ"; ಕಿರುತೆರೆ ನಟಿ ಜ್ಯೋತಿ ರೈ
ದಕ್ಷಿಣ ಭಾರತದ ಕಿರುತೆರೆಯ ಫೇಮಸ್ ನಟಿ ಜ್ಯೋತಿ ರೈ ಅವರದ್ದೇ ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೋ ಸಂಚಲನ ಸೃಷ್ಟಿಸುತ್ತಿದೆ. ಒಂದು ಕಡೆ ಪ್ರಜ್ವಲ್ ರೇವಣ್ಣ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿರುವಾಗಲೇ, ಈಗ ಜ್ಯೋತಿ ರೈ ಅಶ್ಲೀಲ ವಿಡಿಯೋಗಳ ಬಗ್ಗೆ ಸೋಶಿಯಲ್ ಮೀಡಿಯಾ ಚರ್ಚೆಗಳಾಗುತ್ತಿವೆ.
ಸೋಶಿಯಲ್ ಮೀಡಿಯಾಗಳಲ್ಲಿ ಕೆಲವು ಖಾತೆಗಳಿಂದ ಇವರ ಫೋಟೊಗಳು ಹಾಗೂ ವಿಡಿಯೋಗಳನ್ನು ಶೇರ್ ಮಾಡಲಾಗಿದೆ. ಕಳೆದೆರಡು ದಿನಗಳಿಂದ ಜ್ಯೋತಿ ರೈ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಟ್ರೆಂಡಿಂಗ್‌ನಲ್ಲಿದ್ದಾರೆ. ಎಡಿಟ್ ಬೈ ಅಭಿ ಎನ್ನುವ ಎಕ್ಸ್ ಖಾತೆಯಲ್ಲಿ ವ್ಯಕ್ತಿಯೊಬ್ಬ ಈ ವಿಡಿಯೋವನ್ನು ಶೇರ್ ಮಾಡುವುದಾಗಿ ಬಹಿರಂಗವಾಹಿಯೇ ಹೇಳಿಕೊಂಡಿದ್ದಾನೆ.

ಈ ವಿಷಯ ಬಹಿರಂಗವಾಗುತ್ತಿದ್ದಂತೆ ಕಿರುತೆರೆ ನಟಿ ಜ್ಯೋತಿ ರೈ ಪ್ರತಿಕ್ರಿಯೆ ನೀಡಿದ್ದಾರೆ. ತಮಗೆ ಕಿರುಕುಳ ನೀಡುತ್ತಿದ್ದಾರೆಂದು ಬಹುಭಾಷಾ ಕಿರುತೆರೆ ನಟಿ ಜ್ಯೋತಿ ರೈ ಅಳಲು ತೋಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರದ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಅಸಲಿಗೆ ಅಶ್ಲೀಲ ವಿಡಿಯೋ ವಿಚಾರವೇನು? ಏನು ಹೇಳಿಕೊಂಡಿದ್ದಾರೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.
ನಟಿ ಜ್ಯೋತಿ ರೈ ಕನ್ನಡ ಹಾಗೂ ತೆಲುಗು ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಹೆಚ್ಚಾಗಿ ತೆಲುಗು ಧಾರಾವಾಹಿಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದು, ಕಳೆದೆರಡು ದಿನಗಳಿಂದ ಇವರದ್ದೇ ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೋ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಈ ನಟಿಯದ್ದೇ ಎನ್ನಲಾಗುತ್ತಿರುವ ಮೂರು ಅಶ್ಲೀಲ ವಿಡಿಯೋ ಹಾಗು ಕೆಲವು ಫೋಟೊಗಳು ವೈರಲ್ ಆಗಿದ್ದವು.
ಈ ವಿಡಿಯೋಗಳ ಬಗ್ಗೆ ನಟಿ ಜ್ಯೋತಿ ಸುದೀರ್ಘವಾದ ಪತ್ರವನ್ನು ಬರೆದಿದ್ದಾರೆ. ನಕಲಿ ಹಾಗೂ ಅಶ್ಲೀಲ ವಿಡಿಯೋಗಳನ್ನು ಹಾಕಿ ಕಿರುಕುಳ ನೀಡುತ್ತಿದ್ದಾರೆಂದು ಹೇಳಿಕೊಂಡಿದ್ದಾರೆ. ಈ ವಿಡಿಯೋ ಬಗ್ಗೆ ಜ್ಯೋತಿ ರೈ ನೇರವಾಗಿ ಪ್ರತಿಕ್ರಿಯೆ ನೀಡಿಲ್ಲ. ಆದರೆ, ತನಗೆ ಕೆಲವರು ಕಿರುಕುಳ ನೀಡುತ್ತಿದ್ದಾರೆಂದು ಸೈಬರ್ ಕ್ರೈಂ ವಿಭಾಗಕ್ಕೆ ದೂರನ್ನು ಸಲ್ಲಿಸಿದ್ದಾರೆ.
"ನಾನು ಅಪರಿಚಿತ ವ್ಯಕ್ತಿಗಳಿಂದ ಕೆಲವು ಸಂದೇಶಗಳನ್ನು ಸ್ವೀಕರಿಸಿ ಆಘಾತಕ್ಕೆ ಒಳಗಾಗಿದ್ದೇನೆ. ಇಂತಹ ವ್ಯಕ್ತಿಗಳ ಬಗ್ಗೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ನನ್ನ ಕುಟುಂಬದ ಪ್ರತಿಷ್ಠೆ ಅಪಾಯದಲ್ಲಿದೆ. ಇಂತಹ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದರೆ, ಸರಿ ಮಾಡಲು ಸಾಧ್ಯವಾದಂತಹ ಡ್ಯಾಮೇಜ್ ಆಗಲಿದೆ. ನಿಮ್ಮ ತನಿಖೆಗೆ ಅನುಕೂಲವಾಗುವಂತೆ ಯೂಸರ್ ಐಡಿಗಳನ್ನು ಲಗತ್ತಿಸಿದ್ದೇನೆ." ಎಂದು ಹೇಳಿಕೊಂಡಿದ್ದರು.

ಹಾಸನದ ಎಂಪಿ ಪ್ರಜ್ವಲ್ ರೇವಣ್ಣ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಜ್ಯೋತಿ ರೈ ಅವರದ್ದೇ ಎನ್ನಲಾದ ಅಶ್ಲೀಲ ವಿಡಿಯೋಗಳ ಬಗ್ಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಬಗ್ಗೆ ಚರ್ಚೆ ತೆಲಂಗಾಣ, ಆಂಧ್ರ ಹಾಗೂ ಕರ್ನಾಟಕದ ಸಿನಿಪ್ರಿಯರು ಸೋಶಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಜ್ಯೋತಿ ರೈ ಕಳೆದ ಕೆಲವು ವರ್ಷಗಳಿಂದ ತೆಲುಗಿನ ಯುವ ನಿರ್ದೇಶಕ ಸುಕು ಪೂರ್ವಜ್ ಜೊತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಕೆಲವು ದಿನಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದರು. ಇತ್ತೀಚೆಗಷ್ಟೇ ಜ್ಯೋತಿ ತನ್ನ ಬಹುದಿನಗಳ ಗೆಳೆಯ ಸುಕು ಪೂರ್ವಜ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಗಿ ಹೇಳಿಕೊಂಡಿದ್ದರು.


Click it and Unblock the Notifications










