ಕಿರುತೆರೆಯಲ್ಲಿ ಪಾತ್ರಕ್ಕಾಗಿ ಪಲ್ಲಂಗ ಏರುವುದಿಲ್ಲವೇ?: ಟೆಲಿವಿಷನ್ ನಟಿಯರಿಗೆ ಸೇಫ್? ಈ ನಟಿಯ ವಾದವೇನು?
ಮಲಯಾಳಂ ಚಿತ್ರರಂಗ ಹೇಮಾ ಕಮಿಟಿ ವರದಿಯಿಂದ ತಲೆ ತಗ್ಗಿಸುವಂತೆ ಆಗಿದೆ. ಮಲಯಾಳಂ ಚಿತ್ರರಂಗದ ದಿಗ್ಗಜರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಲಾಗಿದೆ. ಇನ್ನು ಈ ಆರೋಪಗಳ ಸರಮಾಲೆ ನಡೆಯುತ್ತಲೇ ಇದೆ. ಇತ್ತೀಚೆಗಷ್ಟೇ ಮಲಯಾಳಂನ ಸ್ಟಾರ್ ನಟ ನಿವಿನ್ ಪೌಲಿ ವಿರುದ್ಧವೂ ಲೈಂಗಿಕ ಕಿರುಕುಳದ ಆರೋಪ ಮಾಡಲಾಗಿತ್ತು. ಆದರೆ, ಇಲ್ಲೊಬ್ಬ ನಟಿ ಕಿರುತೆರೆಯಲ್ಲಿ ಇಂತಹ ಸಂಸ್ಕೃತಿನೇ ಇಲ್ಲವೆಂದು ಹೇಳಿಕೊಂಡಿದ್ದಾರೆ.
ಹಿಂದಿ ಕಿರುತೆರೆಯ ಜನಪ್ರಿಯ ನಟಿ ಕಾಮ್ಯ ಪಂಜಾಬಿ ಹಿಂದಿ ಟೆಲಿವಿಷನ್ ಇಂಡಸ್ಟ್ರಿಯ ಬೆಂಬಲಕ್ಕೆ ನಿಂತಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಕಾಮ್ಯ ಪಂಜಾಬಿ ಹಿಂದಿ ಕಿರುತೆರೆಯಲ್ಲಿ 'ಸೇಫ್ ಇಂಡಸ್ಟ್ರಿ' ಎಂದು ಹೇಳಿಕೊಂಡಿದ್ದಾರೆ. ಇಲ್ಲಿ ಲೈಂಗಿಕ ಕಿರುಕುಳ ಹಾಗೂ ಕಾಸ್ಟಿಂಗ್ ಕೌಚ್ ಎಲ್ಲವೂ ನಡೆಯುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಹಿಂದಿ ಟೆಲಿವಿಷನ್ ಇಂಡಸ್ಟ್ರಿ ಬಹಳ ದಿನಗಳ ಹಿಂದೇನೆ ಕ್ಲೀನ್ ಆಗಿದೆ. ಈ ಕಾರಣಕ್ಕೆ ಇಲ್ಲಿ ಬ್ಲ್ಯಾಕ್ ಮೇಲ್ ಮಾಡುವುದು, ಲೈಂಗಿಕ ಕಿರುಕುಳ, ಪಾತ್ರಕ್ಕಾಗಿ ಪಲ್ಲಂಗ ಏರುವ ಸನ್ನಿವೇಶಗಳು ಎದುರಾಗುವುದಿಲ್ಲ ಎಂದಿದ್ದಾರೆ. ಹಿಂದಿ ಕಿರುತೆರೆಯ ಜನಪ್ರಿಯ ನಟಿ ಕಾಮ್ಯ ಪಂಜಾಬಿ ನ್ಯೂಸ್ 18ಗೆ ಪ್ರತಿಕ್ರಿಯೆ ನೀಡಿದ್ದರು. ಈ ವೇಳೆ "ಕಿರುತೆರೆ ಈಗ ಸಿಕ್ಕಾಪಟ್ಟೆ ಕ್ಲೀನ್ ಆಗಿದೆ. ಈ ಹಿಂದೆ ಏನಾಗಿತ್ತು ಅನ್ನೋದು ನನಗೆ ಗೊತ್ತಿಲ್ಲ. ಆದರೆ, ಈಗ ಮಾತ್ರ ಕಿರುತೆರೆ ತುಂಬಾನೇ ಕ್ಲೀನ್ ಆಗಿದೆ. ಇಲ್ಲಿ ಅಂತಹ ಕೊಳಕು ಸಂಸ್ಕೃತಿ ಇಲ್ಲ. ನೀವು ಆ ಪಾತ್ರಕ್ಕೆ ಸರಿ ಹೊಂದಿದರೆ, ನಿಮ್ಮ ಬಳಿ ಪ್ರತಿಭೆ ಇದ್ದರೆ, ನಿಮ್ಮನ್ನು ಶೋಗೆ ಆಯ್ಕೆ ಮಾಡುತ್ತಾರೆ. " ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಹಾಗೇ ಹಿಂದಿ ಕಿರುತೆರೆ ಸಿಕ್ಕಾಪಟ್ಟೆ ಸೇಫ್ ಎಂದೂ ಹೇಳಿದ್ದಾರೆ. " ಇಲ್ಲಿ ಕೆಲಸ ಮಾಡುವ ಜನರು ಒತ್ತಡ ಹಾಕುವುದಿಲ್ಲ. ಇಲ್ಲವೇ ಬ್ಲ್ಯಾಕ್‌ಮೇಲ್ ಮಾಡುವುದಿಲ್ಲ. ಇಲ್ಲಿ ಕಾಸ್ಟಿಂಗ್ ಕೌಚ್ ಅನ್ನುವುದು ಇಲ್ಲ. ಎಂಟರ್‌ಟೈನ್ಮೆಂಟ್ ಇಂಡಸ್ಟ್ರಿಯಲ್ಲಿ ಕಿರುತೆರೆ ನನಗೆ ಸೇಫ್ ಜಾಗ ಅಂತ ಅನಿಸುತ್ತೆ. ಇಲ್ಲಿ ಲೈಂಗಿಕ ಕಿರುಕುಳ ನಡೆಯುವುದಿಲ್ಲ. ಇಲ್ಲಿ ಏನೇ ನಡೆದರೂ ಪರಸ್ಪರ ಒಪ್ಪಿಗೆಯಿಂದಲೇ ನಡೆದಿರುತ್ತೆ. ಇಲ್ಲಿ ಯಾರೂ ಪಾತ್ರಕ್ಕಾಗಿ ಪಲ್ಲಂಗವನ್ನು ಹಂಚಿಕೊಳ್ಳಲು ಯಾರೂ ಹೇಳುವುದಿಲ್ಲ" ಎಂದು ಕಾವ್ಯ ಪಂಜಾಬಿ ಹೇಳಿದ್ದಾರೆ.

ಇದೇ ವೇಳೆ ಹಿಂದಿ ಕಿರುತೆರೆಯಲ್ಲಿ ಕೆಲವು ನಟರು ಹೆಣ್ಣು ಬಾಕರು ಎಂದೂ ಒಪ್ಪಿಕೊಂಡಿದ್ದಾರೆ. ಆದರೆ, ಕಿರುತೆರೆಯಲ್ಲಿ ಏನೇ ನಡೆದರೂ ಅದೂ ಪರಸ್ಪರ ಒಪ್ಪಿಗೆ ಮೇರೆಗೆ ನಡೆದಿರುತ್ತೆ ಎಂದು ಒತ್ತಿ ಹೇಳಿರೋದು ವಿಶೇಷ. ಹಾಗೇ ಯಾರಾದರೂ ಏನಕ್ಕಾದರೂ ಒತ್ತಡ ಹಾಕಿದರೆ, ಇಲ್ಲವೇ ಅನುಚಿತವಾಗಿ ವರ್ತಿಸಿದರೆ, ಅದನ್ನು ಸರಾಸಗಟಾಗಿ ತಿರಸ್ಕರಿಸಬೇಕು ಎಂದೂ ಹೇಳಿಕೊಂಡಿದ್ದಾರೆ.
"ಕೆಲವು ಹೆಣ್ಣು ಬಾಕ ನಟರು ಇದ್ದಾರೆ. ನೀವು ಅವರ ವರ್ತನೆಯನ್ನು ತಡೆದರೆ, ನೀವು ಅದರನ್ನು ಅವರಿಗೆ ಸ್ಪಷ್ಟಪಡಿಸಿದರೆ, ಅಂತ ಸಂಗತಿಗಳು ಮತ್ತೆ ಮರುಕಳಿಸುವುದಿಲ್ಲ. ಹೆಲೋ ನನಗೆ ಇದು ಇಷ್ಟ ಆಗಲ್ಲ ಎಂದು ಹೇಳಿದರೆ ಸಾಕು ಅವರು ನಿಮ್ಮನ್ನು ಸ್ಪರ್ಷಿಸುವುದಕ್ಕೂ ಬರುವುದಿಲ್ಲ. ನಾವು ಹುಡುಗಿಯರು ಎಂದರೆ ಮುಗಿಬೀಳುವ ಕೆಲವು ನಟರ ನೋಡಿದ್ದೇವೆ. ಆದರೆ, ಯಾರೂ ಬಲವಂತ ಮಾಡಿದ್ದನ್ನು ನೋಡಿಲ್ಲ" ಎಂದು ಕಾವ್ಯ ಪಂಜಾಬಿ ಹೇಳಿದ್ದಾರೆ.


Click it and Unblock the Notifications











