ಕ್ಯಾನ್ಸರ್ ರೋಗಿಗಳಿಗಾಗಿ ತಮ್ಮ ಕೂದಲನ್ನು ದಾನ ಮಾಡಿದ ಕನ್ನಡ ನಟಿ ಕಾವ್ಯಾ ಶಾಸ್ತ್ರಿ
ನಟಿ, ನಿರೂಪಕಿ ಕಾವ್ಯಾ ಶಾಸ್ತ್ರ ಸೋಶಿಯಲ್ ಮೀಡಿಯಾದಲ್ಲಂತೂ ಬಹಳ ಆ್ಯಕ್ಟೀವ್. ಸದಾ ಸಾಮಾಜಿಕ ವಿಚಾರಗಳು ಸೇರಿದಂತೆ ಹಲವಾರು ಪೌರಾಣಿಕ ಹಾಗೂ ಹಿಂದೂ ಧರ್ಮದ ಕುರಿತಾದ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ನಟಿ ಕಾವ್ಯಾ ಶಾಸ್ತ್ರಿ ಬರೋಬ್ಬರಿ 378ಕ್ಕೂ ಅಧಿಕ ಫಾಲೋವರ್ಸ್ ಅನ್ನು ಹೊಂದಿದ್ದಾರೆ.
ಇತ್ತೀಚೆಗೆ ಕ್ಯಾನ್ಸರ್ ಪೇಷಂಟ್‌ಗೆ ತಮ್ಮ ಕೂದಲನ್ನು ದಾನ ಮಾಡಿರುವ ನಟಿ ಕಾವ್ಯಾ ಶಾಸ್ತ್ರಿ ಈ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ. ಇತ್ತೀಚೆಗಂತೂ ಹಲವಾರು ಜನ ತಮ್ಮ ಕೂದಲನ್ನು ಕಟ್ ಮಾಡಿಸುವಾಗ ಕ್ಯಾನ್ಸರ್ ಪೇಷಂಟ್ ಗೆ ದಾನ ಮಾಡುವ ಹೊಸ ಟ್ರೆಂಡ್ ಅನ್ನು ಸೃಷ್ಟಿಸಿದ್ದಾರೆ. ಇದು ಬರೀ ಟ್ರೆಂಡ್ ಆಗಿ ಉಳಿಯದೆ ಹಲವಾರು ಕ್ಯಾನ್ಸರ್ ಪೇಶಂಟ್‌ಗಳಿಗೆ ಸಹಾಯವಾಗುವುದು ಅಷ್ಟೇ ಅಲ್ಲದೆ ಈ ಮೂಲಕ ಜನಜಾಗೃತಿಯು ಮೂಡುತ್ತಿದೆ. ಇದೀಗ ನಟಿ ಕಾವ್ಯಾ ಶಾಸ್ತ್ರಿ ಕೂಡ ಈ ಸಾಲಿನಲ್ಲಿ ಒಬ್ಬರಾಗಿ ತಮ್ಮ ಕೂದಲನ್ನು ಕ್ಯಾನ್ಸರ್ ಪೇಶಂಟ್ ಒಬ್ಬರಿಗೆ ದಾನ ಮಾಡಿದ್ದಾರೆ.

ಅಂದ ಹಾಗೆ ನಟಿ ಕಾವ್ಯಾ ಶಾಸ್ತ್ರಿ, ಹಲವು ವರ್ಷಗಳಿಂದಲೂ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಉದಯ ಮ್ಯೂಸಿಕ್ ವಾಹಿನಿಯಲ್ಲಿ ನಿರೂಪಕಿಯಾಗಿ ಕಿರುತೆರೆ ವೃತ್ತಿ ಜೀವನವನ್ನು ಆರಂಭಿಸಿದರು ನಟಿ ಕಾವ್ಯಾ ಶಾಸ್ತ್ರಿ. 'ಶುಭವಿವಾಹ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾದ ಈ ನಟಿ ಕನ್ನಡ ಅಲ್ಲದೆ ತಮಿಳು ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. 'ಮಹಾಲಕ್ಷ್ಮಿ' ಎಂಬ ತಮಿಳು ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ತಮಿಳು ಕಿರುತೆರೆ ಪ್ರೇಕ್ಷಕರಿಗೂ ಹೀಗೆ ಚೆನ್ನಾಗಿ ಪರಿಚಯವಿದ್ದಾರೆ.
ಧಾರಾವಾಹಿಗಳಷ್ಟೇ ಅಲ್ಲದೆ ಸಿನಿಮಾಗಳಾದ 'ಲವ್ 360', 'ಚೆಲುವೆಯೇ ನಿನ್ನ ನೋಡಲು', 'ಯುಗ' ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಇಂಟರ್ನೆಟ್ ಪರ್ಸನಾಲಿಟಿಯಾಗಿ ಮಿಂಚುತ್ತಿರುವ ಈ ನಟಿ ತಮ್ಮ ಸ್ವಚ್ಛ ಕನ್ನಡ ನಿರೂಪಣೆಯಿಂದಲೇ ಸೋಶಿಯಲ್ ಮೀಡಿಯಾ ವೀಕ್ಷಕರ ಫೇವರೆಟ್ ಆಗಿದ್ದಾರೆ. ಜೊತೆಗೆ ಈಶ, ಮನಾಲಿ, ಹಿಮಾಚಲ್ ಪ್ರದೇಶ್, ಮೇಘಾಲಯ, ಕೊಲ್ಲಾಪುರ, ಉತ್ತರ ಖಂಡ್, ಕನ್ಯಾಕುಮಾರಿ, ಈಗ ನಾನಾ ಜಾಗಗಳಿಗೆ ಹೋಗಿರುವ ಇವರು ಅಲ್ಲಿಯ ಫೋಟೋಗಳನ್ನು ಕೂಡ ಪೋಸ್ಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೆ ತಮ್ಮದೇ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಹೊಂದಿರುವ ನಟಿ ಕಾವ್ಯಾ ಶಾಸ್ತ್ರಿ ಬರೋಬ್ಬರಿ 6,000ಕ್ಕೂ ಹೆಚ್ಚಿನ ಚಂದಾದಾರನ್ನು ಹೊಂದಿದ್ದಾರೆ. ಕೇದಾರನಾಥ್‌ಗೆ ಹೋಗೋದು ಹೇಗೆ ಎಂಬ ಯೂಟ್ಯೂಬ್ ವಿಡಿಯೋ ಬಹಳ ವೈರಲ್ ಆಗಿತ್ತು. ವರಮಹಾಲಕ್ಷ್ಮಿ ದಿನದಂದು ವರಮಹಾಲಕ್ಷ್ಮಿಯ ರೀತಿಯೇ ರೆಡಿಯಾಗಿದ್ದ ಈ ನಟಿ ತಮ್ಮ ಕಾಸ್ಟ್ಯೂಮ್ ಮೂಲಕ ಜನ ಗಮನ ಸೆಳೆದಿದ್ದರು.

ಸಾಮಾಜಿಕ ಕಾರ್ಯಗಳಷ್ಟೇ ಅಲ್ಲದೆ ಮಾನಸಿಕ ಒತ್ತಡಗಳಿಂದ ಹೇಗೆ ಹೊರಬರುವುದು ಎಂಬ ವಿಚಾರಗಳ ಬಗ್ಗೆ ಹಲವಾರು ವಿಡಿಯೋಗಳನ್ನು ಮಾಡುವ ನಟಿ ಕಾವ್ಯಾ ಶಾಸ್ತ್ರಿ, ಒಂದು ಕಾಲದಲ್ಲಿ ಡಿಪ್ರೆಶನ್‌ನಿಂದ ಬಳಲುತ್ತಿದ್ದರಂತೆ. ಡಿಪ್ರೆಶನ್ ಇಂದ ಹೊರಬರಲು ಟ್ರಾವೆಲಿಂಗ್ ಶುರು ಮಾಡಿದ್ದ ಈಕೆ ಇಂದು ಹಲವಾರು ಯುವಕ ಯುವತಿಯರಿಗೆ ಪ್ರೇರಣೆಯಾಗಿದ್ದಾರೆ. ಬಹಳ ಇಂಟರೆಸ್ಟಿಂಗ್ ಕಂಟೆಂಟ್ ಕೊಡುವ ಇವರು ಸೈಮಾ ಅವಾರ್ಡ್ ಸೇರಿದಂತೆ ಹಲವಾರು ಫಿಲಂ ಅವಾರ್ಡ್ ಶೋ ಗಳಲ್ಲಿ ನಿರೂಪಿಸಿ ಸೈ ಎನಿಸಿಕೊಂಡಿದ್ದಾರೆ.


Click it and Unblock the Notifications











