"ಈ ಇಂಡಸ್ಟ್ರಿಯಲ್ಲಿ ತುಳಿದು ಮೇಲೆ ಬರೋದೆಲ್ಲ ಇದೆ, ಅದಕ್ಕೆ ಹೆಚ್ಚು ಸ್ನೇಹಿತರಿಲ್ಲ"; ನಮ್ರತಾ ಗೌಡ

ಕನ್ನಡ ಕಿರುತೆರೆ ಕೂಡ ಸಿನಿಮಾದಷ್ಟೇ ಪವರ್‌ಫುಲ್ ಆಗುತ್ತಿದೆ. ಕಿರುತೆರೆಯಲ್ಲಿ ಧಾರಾವಾಹಿಗಳನ್ನು, ರಿಯಾಲಿಟಿ ಶೋಗಳನ್ನು ವೀಕ್ಷಿಸುವವರ ಸಂಖ್ಯೆ ದೊಡ್ಡದಿದೆ. ಹೀಗಾಗಿ ಈಗ ಕಿರುತೆರೆ ಕಲಾವಿದರಿಗೂ ಸಿಕ್ಕಾಪಟ್ಟೆ ಬೇಡಿಕೆ ಇದೆ. ಆದರೆ, ಒಂದು ದಶಕದ ಹಿಂದೆ ಇದ್ದ ಪರಿಸ್ಥಿತಿಯೇ ಬೇರೆ ಆಗಿತ್ತು. ಇಂತಹ ಸಮಯದಲ್ಲಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ನಟಿ ನಮ್ರತಾ ಗೌಡ.

ಪುಟ್ಟಗೌರಿ, ನಾಗಿಣಿ ಅಂತ ಧಾರಾವಾಹಿಗಳ ಮೂಲಕ ಕಿರುತೆರೆಯಲ್ಲಿ ನಮ್ರತಾ ಗೌಡರನ್ನು ಗುರುತಿಸುತ್ತಿದ್ದರು. ಆದರೆ, ಬಿಗ್‌ಬಾಸ್ ಮನೆಗೆ ಪ್ರವೇಶ ಕೊಟ್ಟು ಬಂದ ಬಳಿಕ ನಟಿಯ ಲೈಫ್ ಬದಲಾಗಿದೆ. ಈ ಬಗ್ಗೆ ನಿರೂಪಕಿ ರ್‍ಯಾಪಿಡ್ ರಶ್ಮಿ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಓಪನ್ ಆಗಿ ಮಾತಾಡಿದ್ದಾರೆ. ಮೊದಲು ಸಿಕ್ಕ ಸಂಭಾವನೆ, ಇಂಡಸ್ಟ್ರಿಯಲ್ಲಿರೋ ಸ್ನೇಹಿತರು ಹೀಗೆ ಹಲವು ವಿಷಯಗಳ ಬಗ್ಗೆ ಮಾತಾಡಿದ್ದಾರೆ.

Actress Namratha Gowda revealed about her first pay cheque and why she didn t make more friends

ನಿರೂಪಕಿ ರ್‍ಯಾಪಿಡ್ ರಶ್ಮಿ ನಡೆಸಿ ಕೊಡುವ ಜಸ್ಟ್ ಕ್ಯೂರಿಯಸ್ ಕಾರ್ಯಕ್ರಮದಲ್ಲಿ ನಮ್ರತಾ ಆರಂಭದಲ್ಲಿ ತನಗೆ ಒಳ್ಳೆಯ ಸಂಭಾವನೆ ಸಿಗಲಿಲ್ಲ. ಕೇವಲ ಹೆಸರಿಗೋಸ್ಕರ ಕಿರುತೆರೆಯಲ್ಲಿ ನಟಿಸಿದ್ದು ಇದೆ ಎಂದಿದ್ದಾರೆ. "ಆರಂಭದ ದಿನಗಳಲ್ಲಿ ನನಗೆ ಸಾಮರ್ಥ್ಯಕ್ಕೆ ಕೊಡಬೇಕಾದ ಸಂಭಾವನೆ ಕೊಡಲಿಲ್ಲ. ಟೆಲಿವಿಷನ್‌ನಲ್ಲಿ ಲೀಡ್ ಆಕ್ಟರ್‌ ಆಗಿ ಯಶಸ್ವಿಯಾಗಿರುವ ಸೀರಿಯಲ್ ಮಾಡುತ್ತಿದ್ದರೂ, ನಾನು ಹಾಕುತ್ತಿದ್ದ ಶ್ರಮಕ್ಕೆ ಸಿಗಬೇಕಾದ ಸಂಭಾವನೆ ಸಿಕ್ಕಿಲ್ಲ. ನಾನು ಪ್ಯಾಷನ್‌ಗೋಸ್ಕರನೇ ಮಾಡುತ್ತಿದ್ದೆ. ಹೆಸರು ಮಾಡಬೇಕು ಅಂತಾನೇ ಮಾಡುತ್ತಿದ್ದೆ. ಗುರುತಿಸಿಕೊಳ್ಳುವುದಕ್ಕೆ ಮಾಡುತ್ತಿದ್ದೆ. ಅದಕ್ಕೆ ಕಡಿಮೆ ಸಂಭಾವನೆ ಕೊಟ್ಟರೂ ಓಕೆ ಅನ್ನುತ್ತಿದ್ದೆ." ಎಂದಿದ್ದಾರೆ.

ಪುಟ್ಟಗೌರಿ, ನಾಗಿಣಿ ಧಾರಾವಾಹಿ ಬಗ್ಗೆನೂ ಮಾತಾಡಿದ್ದಾರೆ. ಇದರಲ್ಲಿ ಕಡಿಮೆ ಸಂಭಾವನೆ ಸಿಕ್ಕರೂ ಮೋಸ ಆಗಿಲ್ಲ ಎಂದು ಹೇಳಿದ್ದಾರೆ. "ನಮ್ರತಾ ಅಂದ ಕೂಡಲೇ ಪುಟ್ಟಗೌರಿ, ನಾಗಿಣಿ ಆ ಎರಡು ಪಾಜೆಕ್ಟ್‌ಗಳು ಬರುತ್ತೆ. ನನಗೆ ಕಡಿಮೆ ಸಂಭಾವನೆ ಕೊಡುತ್ತಿದ್ದರೂ ಪರ್ವಾಗಿಲ್ಲ. ಮೋಸ ಅಂತ ಹೇಳುವುದಕ್ಕೆ ಆಗಲ್ಲ. ಆದರೆ, ನನ್ನ ಕೆಲಸಕ್ಕೆ ತಕ್ಕಂತೆ ಸಂಭಾವನೆ ಸಿಗುತ್ತಿರಲಿಲ್ಲ. ಈಗ ನಾನು ಇಷ್ಟೇ ತೆಗೆದುಕೊಳ್ಳುವುದು. ಇಷ್ಟು ಕೊಟ್ಟರೆ ಮಾತ್ರ ಮಾಡುತ್ತೇನೆ ಅಂತ ಹೇಳುತ್ತೇನೆ. ನೀವೇ ಬೇಕು ಅನ್ನೋರು, ನೀವು ಎಷ್ಟೇ ಕೇಳಿದರೂ ನಿಮ್ಮನ್ನು ಕರೆದುಕೊಳ್ಳುತ್ತಾರೆ." ಎಂದು ನಟಿ ನಮ್ರತಾ ಹೇಳಿದ್ದಾರೆ.

Actress Namratha Gowda revealed about her first pay cheque and why she didn t make more friends

ನಮ್ರತಾ ಬಾಲ ನಟಿಯಾಗಿ ನಟನೆ ಆರಂಭಿಸಿದ್ದರು. ಹೀಗಾಗಿ ಬಾಲನಟಿಯಾಗಿ ಇವರಿಗೆ ಸಿಕ್ಕಿದ್ದ ಮೊದಲ ಸಂಭಾವನೆಯನ್ನು ರಿವೀಲ್ ಮಾಡಿದ್ದಾರೆ. "ನನಗೆ ಮೊದಲು ಒಂದು ದಿನಕ್ಕೆ 400 ರೂಪಾಯಿ ಸಿಕ್ಕಿತ್ತು. ಚೈಲ್ಡ್ ಆರ್ಟಿಸ್ಟ್ ಆಗಿ ಇಷ್ಟು ಹಣ ಸಿಕ್ಕಿತ್ತು. ಪುಟ್ಟಗೌರಿಯಲ್ಲಿ ಕೊನೆ ಕೊನೆಗೆ ನನಗೆ 9-10 ಸಾವಿರ ಸಿಗುತ್ತಿತ್ತು. ಮೊದ ಮೊದಲು ತಿಂಗಳಿಗೆ 20 ದಿನ ಇರುತ್ತಿತ್ತು. ಅದಾದ್ಮೇಲೆ ಕಮ್ಮಿ ಮಾಡಿಬಿಡ್ತಾರೆ. ಆರು ತಿಂಗಳು ನನ್ನ ಟ್ರ್ಯಾಕ್ ಕಡಿಮೆ ಆಗಿತ್ತು. ತಿಂಗಳಿಗೆ ಒಂದು ದಿನ ಬರುತ್ತಿತ್ತು. ಆಗ ತುಂಬಾ ಕಷ್ಟ ಆಗ್ತಿತ್ತು. ಡಿಪ್ರೆಷನ್‌ಗೆ ಹೋಗಿದ್ದೆ." ಎಂದಿದ್ದಾರೆ.

ಚಿತ್ರರಂಗದಲ್ಲಿ ತನಗ್ಯಾಕೆ ಹೆಚ್ಚು ಸ್ನೇಹಿತರು ಇಲ್ಲ ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಈ ಇಂಡಸ್ಟ್ರಿ ಫ್ರೆಂಡ್ಸ್ ಮಾಡಿಕೊಳ್ಳುವ ಜಾಗ ಅಲ್ಲ. ಆ ಇನ್‌ಸೆಕ್ಯೂರಿಟಿ ಅನ್ನೋದು ಇದ್ದೇ ಇರುತ್ತೆ. ಈ ಇಂಡಸ್ಟ್ರಿಯಲ್ಲಿ ತುಳಿದು ಮೇಲೆ ಬರೋದು ಇದೆಲ್ಲ ಇದೆ. ಇದನ್ನು ನಾನು ಅನುಭವಿಸಿದ್ದೇನೆ. ನೀನು ಬೆಳೆಯುತ್ತಿರೋದು ಸಹಿಸಿಕೊಳ್ಳುವುದಕ್ಕೆ ಆಗಲ್ಲ. ಅದಕ್ಕೆ ನಾನು ಮನಸ್ಸಿಗೆ ಹತ್ತಿರವಾಗಿರುವವರು, ನಿಜವಾಗಿಯೂ ನನಗೆ ವಿಶ್ ಮಾಡುವವರನ್ನು ಮಾತ್ರ ಲೈಫ್‌ನಲ್ಲಿ ಇಟ್ಟುಕೊಂಡಿದ್ದೇನೆ ಅಷ್ಟೇ." ಎಂದು ನಮ್ರತಾ ಹೇಳಿದ್ದಾರೆ.

More from Filmibeat

English summary
Bigg Boss fame Namratha Gowda revealed about her life
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X