For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಕೋಟ್ಯಾಧಿಪತಿಗೆ ಗೋಲ್ಡನ್ ಗರ್ಲ್ ರಮ್ಯಾ

  By Rajendra
  |

  ಗೋಲ್ಡನ್ ಗರ್ಲ್ ರಮ್ಯಾ ಮತ್ತೊಮ್ಮೆ ಕನ್ನಡದ ಕೋಟ್ಯಾಧಿಪತಿ ಹಾಟ್ ಸೀಟ್ ಗೆ ಮರಳುತ್ತಿದ್ದಾರೆ. ಈ ಬಗ್ಗೆ ಸ್ವತಃ ಅವರು ಟ್ವೀಟಿಸಿದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗಿನ ಫೋಟೋವನ್ನೂ ಹಂಚಿಕೊಂಡಿದ್ದಾರೆ.

  ಶೀಘ್ರದಲ್ಲೇ ಈ ಕಾರ್ಯಕ್ರಮ ಸುವರ್ಣ ವಾಹಿನಿಯಲ್ಲಿ ಮೂಡಿಬರಲಿದೆ ಎಂದಿದ್ದಾರೆ. ಯಾವಾಗ ಎಂಬುದು ಗೊತ್ತಾಗಬೇಕಾದರೆ ಸ್ವಲ್ಪ ದಿನ ಕಾಯಲೇಬೇಕು. ಮೂಲಗಳ ಪ್ರಕಾರ ಸೋಮವಾರ (ಜೂ.18) ರಮ್ಯಾ ಅವರ ಎಪಿಸೋಡ್ ಚಿತ್ರೀಕರಣಗೊಂಡಿದೆಯಂತೆ.

  ಕಳೆದ ವರ್ಷವೂ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲಿ ರಮ್ಯಾ ಪಾಲ್ಗೊಂಡಿದ್ದರು. ಆಗ ಅವರು ಗೆದ್ದದ್ದು ಕೇವಲ ರು.3,20,000. ಈ ಬಾರಿ ಎಷ್ಟು ಹಣ ಗೆಲ್ಲಲಿದ್ದಾರೆ ಎಂಬುದನ್ನು ಕಾದುನೋಡಬೇಕು. (ಕೋಟ್ಯಾಧಿಪತಿಯಲ್ಲಿ ರಮ್ಯಾ ಆಟ ಹೇಗಿತ್ತು, ಓದಿ...)

  ಈ ಬಾರಿಯ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಆಸಕ್ತಿದಾಯವಾಗಿದು, ಸಿಕ್ಕಾಪಟ್ಟೆ ತಮಾಷೆ ಇದೆ. ದಯವಿಟ್ಟು ಶೋ ಮಿಸ್ ಮಾಡಿಕೊಳ್ಳಬೇಡಿ ಎಂದು ತಮ್ಮ ಫಾಲೋವರ್ಸ್ ಗೆ ಟ್ವಿಟ್ಟರ್ ಮೂಲಕ ಸಂದೇಶ ರವಾನಿಸಿದ್ದಾರೆ ರಮ್ಯಾ.

  ಕನ್ನಡದ ಕೋಟ್ಯಾಧಿಪತಿ ಸೀಸನ್ 1ರಲ್ಲಿ ಭಾಗವಹಿದ್ದಾಗ ರಮ್ಯಾ ಸರಿ ಉತ್ತರ ಕೊಟ್ಟಿದ್ದದ್ದು ಹತ್ತು ಪ್ರಶ್ನೆಗಳಿಗೆ. "ಮಾವಳ್ಳಿ ಟಿಫನ್ ರೂಮ್ (ಎಂಟಿಆರ್) ಪ್ರಕಾರ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಇವರು ಕಂಡುಹಿಡಿದ ತಿಂಡಿ ಯಾವುದು?" ಎಂಬ ಪ್ರಶ್ನೆಗೆ ಮಸಾಲೆ ದೋಸೆ ಎಂದು ರಮ್ಯಾ ತಪ್ಪಾಗಿ ಉತ್ತರಿಸಿದ್ದರು. (ಒನ್ಇಂಡಿಯಾ ಕನ್ನಡ)

  <blockquote class="twitter-tweet blockquote"><p>guess who went for Kannadadha kotiyadhipathi again? :o) the episode will be aired soon..</p>— Divya Spandana/Ramya (@divyaspandana) <a href="https://twitter.com/divyaspandana/statuses/346934742714822656">June 18, 2013</a></blockquote> <script async src="//platform.twitter.com/widgets.js" charset="utf-8"></script>

  <blockquote class="twitter-tweet blockquote"><p>A lot of interesting and funny things happened on the show, don't miss it!</p>— Divya Spandana/Ramya (@divyaspandana) <a href="https://twitter.com/divyaspandana/statuses/346935006163259392">June 18, 2013</a></blockquote> <script async src="//platform.twitter.com/widgets.js" charset="utf-8"></script>

  English summary
  Kannada films Lucky Star Ramya will be seen in Suvarna channels game show 'Kannadada Kotyadhipati' season 2 hot seat. She tweets, "A lot of interesting and funny things happened on the show, don't miss it! and the episode will be aired soon.."

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X