"ಬೀಡಿ ಸೇದಿ ಬಾಡಿ ಹಾಳು ಮಾಡಿಕೊಳ್ಳಬೇಡಿ" ಅಂತಿರೋ ನಟಿ ಸಂಗೀತ ಭಟ್; ಈ ನಟಿ ಹಿನ್ನೆಲೆಯೇನು?

ಕನ್ನಡದ ಟಿವಿ ಸಂಗೀತ ಭಟ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಪಾಪ್ಯುಲರ್ ಆಗಿದ್ದಾರೆ. ಸಿನಿಮಾಗಳಲ್ಲಿ ಹೆಚ್ಚಾಗಿ ಮೋಡಿ ಮಾಡಿದ್ದ ಈ ನಟಿ ಈಗ ಸೋಶಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ಅದರಲ್ಲೂ ಇತ್ತೀಚೆಗೆ ಬೋಲ್ಡ್ ಫೋಟೋ ಶೂಟ್‌ಗಳನ್ನು ಪೋಸ್ಟ್ ಮಾಡಿ ಗಮನ ಸೆಳೆಯುತ್ತಿದ್ದಾರೆ. ಈಗೊಂದು ಹೊಸ ಫೋಟೊ ಶೂಟ್ ಅನ್ನು ಪೋಸ್ಟ್ ಮಾಡಿದ್ದು ಬಹಳ ವೈರಲ್ ಆಗುತ್ತಿದೆ.

ನಟಿ ಸಂಗೀತಾ ಭಟ್‌ಗೂ ಕಿರುತೆರೆಗೂ ಸಂಬಂಧವಿದೆ. ಅತೀ ಹತ್ತಿರದ ನಂಟು. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಯಲ್ಲಿ ತಾಂಡವ್ ಪಾತ್ರದಲ್ಲಿ ನಟಿಸುತ್ತಿರುವ ನಟ ಸುದರ್ಶನ್ ರಂಗಪ್ರಸಾದ್ ಪತ್ನಿಯೇ ಈ ನಟಿ ಸಂಗೀತ ಭಟ್. ಇವರೂ ಕೂಡ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿ, ಜನ ಮೆಚ್ಚುಗೆ ಪಡೆದಿದ್ದಾರೆ. ಹಾಗಂತ ಕೇವಲ ಪತಿಯಿಂದಷ್ಟೇ ಅಲ್ಲ. ಧಾರಾವಾಹಿಗಳಲ್ಲೂ ನಟಿಸಿದ್ದಾರೆ.

Actress Sangeetha Bhat new photoshoot went viral do you know about her

ಸಂಗೀತಾ ಭಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದಕ್ಕೂ ಮುನ್ನ 'ಪಂಜರದ ಗಿಳಿ', 'ಭಾಗ್ಯವಂತರು', 'ಚಂದ್ರ ಚಕೋರಿ', 'ನೀಲಿ', ಚಂದ್ರಮುಖಿ' ಅಂತಹ ಧಾರವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ರಿಯಾಲಿಟೋ ಶೋ 'ಲೈಫ್ ಸೂಪರ್ ಗುರು'ನಲ್ಲೂ ಭಾಗವಹಿಸಿದ್ದಾರೆ. ಹಾಗೇ 'ಪ್ರೀತಿ ಗೀತಿ ಇತ್ಯಾದಿ', 'ಎರಡನೇ ಸಲ', 'ದಯವಿಟ್ಟು ಗಮನಿಸಿ', 'ಅಳಿದು ಉಳಿದವರು', 'ಕಪಟ ನಾಟಕ ಪಾತ್ರಧಾರಿ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಂಗೀತಾ ಭಟ್ ಮದುವೆಯ ಬಳಿಕ ನಟನೆಯಿಂದ ದೂರ ಉಳಿದಿದ್ದರು. ಆದರೆ, ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಆಗಾಗ ಅಭಿಮಾನಿಗಳಿಗೆ ಹೊಸ ಝಲಕ್ ನೀಡುತ್ತಿರುತ್ತಾರೆ. ಇತ್ತೀಚೆಗೆ ಕೈಯಲ್ಲಿ ಬೀಡಿ ಹಿಡಿದು ಬೋಲ್ಡ್ ಪೋಸ್‌ಗಳನ್ನು ನೀಡಿರುವ ನಟಿ ಸಂಗೀತಾ ಭಟ್ ಅವರು "ಬೀಡಿ ಸೇದಿ ಬಾಡಿ ಹಾಳು ಮಾಡಿಕೊಳ್ಳಬೇಡಿ" ಎಂಬ ಕ್ಯಾಪ್ಷನ್ ಅನ್ನು ಕೊಟ್ಟಿದ್ದಾರೆ.

ಬಿಳಿ ಬಣ್ಣದ ಕ್ರಾಪ್ ಟಾಪ್ ಸ್ಕರ್ಟ್ ಹಾಕಿಕೊಂಡು ಸಂಗೀತಾ ಭಟ್ ಅವರು ಬಲಗೈಲೊಂದು ಬಿಡಿ ಹಿಡಿದು ಅದಕ್ಕೆ ಬೆಂಕಿಕಡ್ಡಿಗಿರುವಂತೆ ಪೋಸ್‌ಗಳನ್ನು ನೀಡಿದ್ದಾರೆ. ನಟಿಯ ಈ ಬೋರ್ಡ್ ಪೋಸ್‌ಗೆ ನೆಟ್ಟಿಗರು ಸಖತ್ ಹುಷಾರಾಗಿದ್ದು, ಕಾಮೆಂಟ್ ಹಾಗೂ ಕಾಂಪ್ಲಿಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

"ಬಿಡಿ ಆರೋಗ್ಯಕ್ಕೆ ಹಾನಿಕಾರಕ ಆದರೆ, ನೀವು ಸಖತ್ ಹಾಟ್ ಆಗಿ ಕಾಣುತ್ತೀರಿ" ಎಂದು ಕೆಲವರು ಕಾಮೆಂಟ್ ಮಾಡಿದರೆ. "ಹಾಟ್ ಹಾಟ್ ಸಖತ್ ಹಾಟ್ ಮಗಾ", "ಗಂಗೂ ಬಾಯಿ ಪೋಸ್ ಸಖತ್ ಪೋಸ್" ಎಂದು ಇನ್ನು ಕೆಲವರು ಕಾಂಪ್ಲಿಮೆಂಟ್ ನೀಡಿದ್ದಾರೆ. ಒಟ್ಟಿನಲ್ಲಿ ಸದ್ಯಕ್ಕೆ ಈ ರೀತಿ ಪೋಸ್ಟ್ ಗಳನ್ನು ಮಾಡುವ ಮೂಲಕ ನಟಿ ಸಂಗೀತ ಭಟ್ಟಂತೂ ಸಖತ್ ವೈರಲ್ ಆಗಿದ್ದಾರೆ.

ನಟಿ ಸಂಗೀತಾ ಭಟ್ ಅವರು ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಧಾರಾವಾಹಿಯಲ್ಲಿ ಕೊನೆಯದಾಗಿ ನಟಿಸಿದ್ದರು. ಅದಾದ ಮೇಲೆ ನಟನೆಯಿಂದ ದೂರವೇ ಉಳಿದಿರುವವರು ಅದಕ್ಕೂ ಮೊದಲು 'ಕ್ಲಾನ್ತ' ಹಾಗೂ 'ರೂಪಾಂತರ' ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ.

More from Filmibeat

English summary
Actress Sangeetha Bhat photoshoot went viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X