ಬಿಗ್‌ಬಾಸ್‌ನಿಂದ ಹೊರಬರುತ್ತಿದ್ದಂತೆ 'ಚಾರ್ಲಿ 777' ಯನ್ನು ಭೇಟಿಯಾದ ನಟಿ ಸಂಗೀತಾ ಶೃಂಗೇರಿ!
'ಚಾರ್ಲಿ 777' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಸಂಗೀತಾ ಶೃಂಗೇರಿ ಬಿಗ್ ಬಾಸ್ ಸ್ಪರ್ಧಿಯಾಗಿ ಫೇಮಸ್ಸು. ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿ ಭಾಗವಹಿಸಿದ್ದ ಸಂಗೀತಾ ಕಿರುತೆರೆ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾದರು. ನಡೆ, ನುಡಿಯ ಮೂಲಕ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದ ಈಕೆ ಆರಂಭದಿಂದ ಕೊನೆಯವರೆಗೂ ಅದ್ಭುತವಾಗಿ ಆಡಿ ಸೈ ಎನಿಸಿಕೊಂಡರು.
ಎರಡನೇ ರನ್ನರ್ ಅಪ್ ಸ್ಥಾನಕ್ಕೆ ಆಯ್ಕೆಯಾದ ಸಂಗೀತಾ ಬಹಳಷ್ಟು ಫ್ಯಾನ್ಸ್ ಪ್ರೀತಿಯನ್ನು ಗಳಿಸಿದ್ದಾರೆ. ಮಾತ್ರವಲ್ಲದೇ ಇನ್‌ಸ್ಟಾಗ್ರಾಂನಲ್ಲಿ ಆಕೆಯ ಫಾಲೋವರ್ಸ್ ಸಂಖ್ಯೆಯೂ ಕೂಡಾ ಜಾಸ್ತಿಯಾಗಿದೆ. ಹೀಗಿರುವಾಗ ಈಕೆ ಇದೀಗ ತಮ್ಮ ವಿಶೇಷ ಸ್ನೇಹಿತರೊಬ್ಬರನ್ನು ಭೇಟಿಯಾಗಿದ್ದಾರೆ.

ಹೌದು! ಬಿಗ್ ಬಾಸ್‌ನಿಂದ ಹೊರಬಂದ ನಂತರ ಹಲವಾರು ಕಾರ್ಯಕ್ರಮಗಳಲ್ಲಿ ಹಾಗೂ ಪ್ರೆಸ್ ಮೀಟ್‌ಗಳಲ್ಲಿ ಬ್ಯುಸಿಯಾಗಿರುವ ನಟಿ ಸಂಗೀತಾ ಶೃಂಗೇರಿ ಅವರು ಬಿಡುವು ಮಾಡಿಕೊಂಡು ತಮ್ಮ ಸ್ನೇಹಿತ, 'ಚಾರ್ಲಿ777' ಸಿನಿಮಾ ಖ್ಯಾತಿಯ, ಎಲ್ಲ ವೀಕ್ಷಕರ ಮನ ಗೆದ್ದ ನಾಯಿ ಚಾರ್ಲಿಯನ್ನು ಭೇಟಿಯಾಗಿದ್ದಾರೆ.
ಸಂಗೀತಾ ಶೃಂಗೇರಿ '777 ಚಾರ್ಲಿ' ಸಿನಿಮಾದಲ್ಲಿ ನಟಿಸಿದ್ದ ಲ್ಯಾಬ್ರೇಡರ್ ನಾಯಿ ಚಾರ್ಲಿಯೊಂದಿಗೆ ತಮ್ಮ ಒಡನಾಟ ಇರುವ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಇದೀಗ ಅವರ ಫಾಲೋವರ್ಸ್‌ಗೆ ಬಹಳಷ್ಟು ಸಂತಸ ತಂದಿದೆ. ವಿಡಿಯೋದಲ್ಲಿ ಸಂಗೀತಾ ಶೃಂಗೇರಿ ಹಾಗೂ ಚಾರ್ಲಿ ನಾಯಿ ನಡುವಿನ ಪ್ರೀತಿ ಬಾಂಧವ್ಯ ಮುದ್ದಾಗಿ ಕಂಡಿದ್ದು ನೆಟ್ಟಿಗರಂತೂ ಖುಷಿಪಟ್ಟಿದ್ದಾರೆ.
'ಚಾರ್ಲಿ 777' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಧರ್ಮ ಎಂಬ ಪಾತ್ರದ ಮೂಲಕ ನಾಯಕನಾಗಿ ನಟಿಸಿದರೆ, ಸಂಗೀತಾ ಶೃಂಗೇರಿ ಅವರು ದೇವಿಕಾ ಎಂಬ ಪಾತ್ರವನ್ನು ನಟಿಸಿದ್ದರು. ಅನಿಮಲ್ ವೆಲ್ಫೇರ್ ಬೋರ್ಡ್ ನ ಸದಸ್ಯರಾಗಿ ಸಿನಿಮಾದಲ್ಲಿ ಕಾಣಿಸಿಕೊಂಡ ಈಕೆಗೆ ಚಾರ್ಲಿಯೊಂದಿಗೆ ಒಳ್ಳೆ ಸಂಬಂಧವಿತ್ತು. ಅದು ನಿಜ ಜೀವನದಲ್ಲೂ ಇರುವುದನ್ನು ಕಂಡು ಅಭಿಮಾನಿಗಳು ಪ್ರೇಕ್ಷಕರು ಸೋಶಿಯಲ್ ಮೀಡಿಯಾ ಫಾಲೋಗಳು ಹಾಗೂ ನೆಟ್ಟಿದರು ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋಗೆ ಬಹಳಷ್ಟು ಕಾಂಪ್ಲಿಮೆಂಟ್‌ಗಳು ಬಂದಿದ್ದು, "ಅದ್ಭುತ ಸ್ನೇಹ..", "ಎಂತಹ ಬಾಂಧವ್ಯ.." ಎಂಬಿತ್ಯಾದಿ ಕಮೆಂಟ್‌ಗಳ ಮೂಲಕ ಅಭಿಮಾನಿಗಳು ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
ಅಂದ ಹಾಗೇ 'ಹರಹರ ಮಹಾದೇವ' ಧಾರಾವಾಹಿಯ ಸತಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆ ಮುಂದೆ ನಟಿಸಿದ್ದೆಲ್ಲಾ ಹಿರಿತೆರೆಯಲ್ಲಿ. ಮುಂದೆ ತೆಲುಗು ಧಾರಾವಾಹಿಯಲ್ಲಿ ನಟಿಸಿದ ಸಂಗೀತಾ ಸೂಪರ್ ಜೋಡಿ ಸೀಸನ್ 2 ಸ್ಪರ್ಧಿಯಾಗಿ ಗಮನ ಸೆಳೆದಿದ್ದರು. 'ಕರ್ಮ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಹಾರಿದ ಈಕೆ 'ಎ+', 'ಸಾಲಗಾರರ ಸಹಕಾರ ಸಂಘ', 'ಲಕ್ಕಿಮ್ಯಾನ್' , 'ಚಾರ್ಲಿ 777', 'ಶಿವಾಜಿ ಸುರತ್ಕಲ್ 2' ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಸಂಗೀತಾ ಶೃಂಗೇರಿ ಹಿಂದಿ ಶಾರ್ಟ್ ಫಿಲಂ ಒಂದರಲ್ಲಿ ನಟಿಸಿದರು.
ಇದೀಗ 'ಮಾರಿಗೋಲ್ಡ್' ಸಿನಿಮಾದಲ್ಲಿಯೂ ಈಕೆ ನಟಿಸಲಿದ್ದು ದಿಗಂತ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಸಿನಿಮಾದ ಪ್ರೋಮೋಶನ್ಸ್ ನಡೀತಿದ್ದು, ಸಿನಿಮಾ ಶೀಘ್ರದಲ್ಲಿ ತೆರೆಕಾಣಲಿದೆ. ಬಿಗ್‌ಬಾಸ್ ಕನ್ನಡ ಸೀಸನ್ 10 ಬಳಿಕ ಸಂಗೀತಾ ಶೃಂಗೇರಿ 'ಚಾರ್ಲಿ'ಯನ್ನು ಭೇಟಿಯಾಗಿದ್ದನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications











