Shwetha Changappa: ಫೋಟೋಶೂಟ್ ಮೂಲಕ ಮೋಡಿ ಮಾಡಿದ ಶ್ವೇತಾ ಚೆಂಗಪ್ಪ; ಏನಂದ್ರು ನೆಟ್ಟಿಗರು?

ಎಸ್. ನಾರಾಯಣ ನಿರ್ದೇಶನದ 'ಸುಮತಿ' ಧಾರಾವಾಹಿಯ ಮೂಲಕ ಕಿರುತೆರೆ ಶ್ವೇತಾ ಚೆಂಗಪ್ಪ ಕಾಲಿಟ್ಟರು. ಮತ್ತು 2006 ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾದಂಬರಿ' ಸೀರಿಯಲ್ ಮೂಲಕ ಜನಮನ್ನಣೆ ಗಳಿಸಿದರು. ಈ ಕಾದಂಬರಿ ಧಾರಾವಾಹಿಯು ಒಂದೇ ಕುಟುಂಬದ 5 ಹೆಣ್ಣು ಮಕ್ಕಳ ಕಥೆ. ಈ 5 ಹೆಣ್ಣು ಮಕ್ಕಳು ಒಬ್ಬರಿಗೊಬ್ಬರು ಕಷ್ಟ ಸುಖಗಳಲ್ಲಿ ಭಾಗಿಯಾಗಿ ಜೀವನವನ್ನು ನಡೆಸುವ ಕಥೆ ಇದಾಗಿದೆ. 2005 ರಿಂದ 2009 ರವರೆಗೆ ಬಾರಿ ಉತ್ತಮ ಟಿಆರ್‌ಪಿ ಗಿಟ್ಟಿಸಿಕೊಂಡಿದ್ದ ಧಾರಾವಾಹಿಗಳಲ್ಲಿ ಇದು ಒಂದಾಗಿತ್ತು.

ಈ ಧಾರಾವಾಹಿಯ ಮೂಲಕ ತೆರಿಗೆ ಕಾಲಿಟ್ಟ ಶ್ವೇತಾ ಚಂಗಪ್ಪ ಮುಂದಿನ ದಿನಗಳಲ್ಲಿ ಕಿರುತೆರೆಯಲ್ಲೂ ಹಿರಿತೆರೆಯಲ್ಲೂ ಅವರದ್ದೇ ಆದ ಐಡೆಂಟಿಟಿ ಯನ್ನು ಗಳಿಸಿದರು. ಈಗಿನ ಕಲರ್ಸ್ ಕನ್ನಡ ವಾಹಿನಿಯು ಈ ಟಿವಿಯಾಗಿ ಮೂಡಿಬರುತ್ತಿದ್ದ ಸಮಯದಲ್ಲಿ 'ಸುಕನ್ಯ' ಮತ್ತು 'ಅರುಂಧತಿ' ಧಾರಾವಾಹಿಯಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು.

Actress Shwetha Changappa new Photo shoot is trending in social media

ಶ್ವೇತಾ ಚಂಗಪ್ಪರವರ 'ಅರುಂಧತಿ' ಧಾರಾವಾಹಿಯಲ್ಲಿ ಇವರು ಅರುಂಧತಿ ಎಂಬ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. 'ಅರುಂಧತಿ' ಧಾರಾವಾಹಿಯಲ್ಲಿ ಅಭಿನಯಿಸಿದ ನಂತರ ಶ್ವೇತಾ ಚಂಗಪ್ಪರವರು ಬಹಳಷ್ಟು ಜನಪ್ರಿಯರಾದರು. ಈ ಧಾರಾವಾಹಿ ಒಂದು ಗ್ರೇ ಶೇಡ್ ಧಾರಾವಾಹಿಯಾಗಿದ್ದು ಏಕ್ತಾ ಕಪೂರ್ ಪ್ರೊಡಕ್ಷನ್ ಹೌಸ್‌ನಿಂದ ನಿರ್ಮಾಣಗೊಂಡಿದೆ.

ನಟನೆ ಮಾತ್ರವಲ್ಲದೇ ನಿರೂಪಣೆಗೂ ಇಳಿದ ಶ್ವೇತಾ ಚೆಂಗಪ್ಪ ಕಿರುತೆರೆಯಲ್ಲಿ 'ಯಾರಿಗುಂಟು ಯಾರಿಗಿಲ್ಲಾ' ಎಂಬ ಕಾರ್ಯಕ್ರಮ ಕೈಗೊಂಡು ಶಭಾಷ್‌ಗಿರಿ ಪಡೆದುಕೊಂಡಿದ್ದರು. ಇದಾದ ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಣಿಯೋಣ ಬಾರಾ' ಎಂಬ ಚಿಕ್ಕ ಮಕ್ಕಳ ನೃತ್ಯದ ಶೋದಲ್ಲಿ ಅದ್ಭುತವಾಗಿ ನಿರೂಪಿಸುತ್ತಿದ್ದರು. 'ಡ್ಯಾನ್ಸ್ ಜ್ಯೂನಿಯರ್ಸ್ ಡ್ಯಾನ್ಸ್' ಮುಂತಾದ ರಿಯಾಲಿಟಿ ಶೋಗಳ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಹೀಗೆ ಇವರು ನಿಧಾನಗತಿಯಲ್ಲಿ ಇಡೀ ಕನ್ನಡಿಗರ ಮನಸ್ಸನ್ನು ಗೆಲ್ಲುತ್ತಾ ಬಂದಿದ್ದಾರೆ.

ಇದರ ಜೊತೆಗೆ ಸೃಜನ್ ಲೋಕೇಶ್ ನಿರೂಪಣೆಯ 'ಮಜಾಟಾಕೀಸ್' ಕಾಮಿಡಿ ಶೋನಲ್ಲಿ ರಾಣಿ ಪಾತ್ರಧಾರಿಯಾಗಿ ಸೃಜನ್ ಲೋಕೇಶ್ ಜೊತೆ ಸೇರಿ ಎಲ್ಲರನ್ನು ಹೊಟ್ಟೆ ನೋವು ಬರಿಸುವಷ್ಟು ನಗಿಸುವ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಕನ್ನಡದ ಬಿಗ್ ಬಾಸ್ ಸೀಸನ್ 2ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ಫಿನಾಲೆಯ ತನಕ ತಲುಪಿ ನಾಲ್ಕನೇ ಸ್ಥಾನವನ್ನು ಗಳಿಸಿದರು.

ಶ್ವೇತಾ ಚಂಗಪ್ಪ ರವರು ಸುರಸುಂದರಿ, ಅದ್ಭುತ ನಟಿ, ಪ್ರತಿಭಾನ್ವಿತ ನಿರೂಪಕಿ ಇವರಿಗೆ ಇಂದಿಗೂ ಜನಮನ್ನಣೆ ಬಹಳಷ್ಟು ಇದೆ. ಬಹಳಷ್ಟು ಬೇಡಿಕೆಯಲ್ಲಿರುವ ಶ್ವೇತಾ ಚೆಂಗಪ್ಪರವರು ಇಂದಿನ ಸೋಶಿಯಲ್ ಮೀಡಿಯಾಗಳಾದಂತಹ ಇನ್ಸ್ಟಾಗ್ರಾಮ್‌ನಲ್ಲಿ ಬಹಳ ಆ್ಯಕ್ಟೀವ್.

ಟ್ರಾವೆಲ್ ಬಗ್ಗೆ ಆಸಕ್ತಿ ಹೊಂದಿದ್ದಾಗಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಬಯೋನಲ್ಲಿ ಬರೆದುಕೊಂಡ ಶ್ವೇತಾ ಚೆಂಗಪ್ಪ ತಾವು ಸೇರಿದಂತೆ ತಮ್ಮ ಗಂಡ ಮತ್ತು ಮಗುವಿನ ಜೊತೆಗೆ ಸುತ್ತಾಡುವುದರ ಫೋಟೋಗಳನ್ನು ಆಗಾಗ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ಇತ್ತೀಚಿಗಷ್ಟೇ ಇವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಬ್ಯೂಟಿ ಫಿಟ್ ಬೈ ಚೈ ರವರ ಔಟ್ ಫಿಟ್, ಹೇರ್ ಸ್ಟೈಲ್ ಬೈ ಶಶಿರವರ ಹೇರ್ ಸ್ಟೈಲ್, ಕೀರ್ತಿ ರಾಮ್‌ರವರ ಮೇಕಪ್ ಮತ್ತು ಚೈತ್ರಾ ಸಂತೋಷ್‌ರವರ ಜ್ಯುವೆಲರಿಯೊಂದಿಗೆ ಬಹಳ ಮುದ್ದಾಗಿ ಕಾಣುತಿದ್ದಾರೆ. ಫೋಟೋಗಳಿಗೆ ಸುಂದರವಾದ ನಗುಮುಖದಿಂದ ಪೋಸ್ ನೀಡಿ ಶ್ವೇತಾ ಚಂಗಪ್ಪ ರವರ ಫೋಟೋಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇವರಿಗೆ ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ ಒಂದು ಮಿಲಿಯನ್ ಎಂದರೆ ಹತ್ತು ಲಕ್ಷ ಫಾಲೋವರ್ಸ್ ಇದ್ದಾರೆ. ಇವರ ಈ ಪೋಸ್ಟ್‌ಗೆ ಹಲವಾರು ಲೈಕ್ ಮತ್ತು ಕಮೆಂಟ್‌ಗಳ ಸುರಿಮಳೆಯೇ ಬಂದಿದೆ. ಹಲವರು ಕಮೆಂಟ್ ಸೆಕ್ಷನ್‌ನಲ್ಲಿ "ನಮ್ಮ ಶ್ವೇತಾ ಮೇಡಂ ಯಾವ ಹಾಲಿವುಡ್, ಬಾಲಿವುಡ್ ಹೀರೋಯಿನ್‌ಗಳಿಗೂ ಕಮ್ಮಿ ಇಲ್ಲ. ನಿಮಗೆ ಎಷ್ಟೇ ವಯಸ್ಸಾದರೂ ನೀವು ಇನ್ನೂ ನಮ್ಮ ಪಾಲಿಗೆ ತರುಣಿ" ಎಂದು ನೆಟ್ಟಿಗರು ಹೇಳಿದ್ದಾರೆ.

More from Filmibeat

English summary
Actress Shwetha Changappa new Photo shoot is trending in social media;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X