ನಟಿ ವೈಷ್ಣವಿ ಗೌಡ ಭಾವಿ ಪತಿ ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡ್ತಿಲ್ಲ; ಫ್ಯಾನ್ಸ್ ಮುಂದೆ ಗುಟ್ಟು ಬಿಚ್ಚಿಟ್ಟ ನಟಿ

ಕನ್ನಡ ಕಿರುತೆರೆಯ ಸ್ಟಾರ್ ನಟಿ ವೈಷ್ಣವಿ ಗೌಡ ವೈವಾಹಿಕ ಜೀವನಕ್ಕೆ ಇಡುತ್ತಿದ್ದಾರೆ. ಸದ್ದಿಲ್ಲದೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಭಾವಿ ಪತಿಯ ಜೊತೆಗೆ ಇರುವ ಫೋಟೊ ಹಾಗೂ ವಿಡಿಯೋಗಳು ವೈರಲ್ ಆಗುತ್ತಿವೆ. ಅಭಿಮಾನಿಗಳು ವೈಷ್ಣವಿ ಗೌಡ ಭಾವಿ ಪತಿ ಯಾರೆಂದು ಹುಡುಕಾಡುವುದಕ್ಕೆ ಶುರು ಮಾಡಿದ್ದರು. ಕೆಲವು ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಅನ್ನೋ ಸುದ್ದಿಯನ್ನು ಹಬ್ಬಿಸಿದ್ದರು.

ವೈಷ್ಣವಿ ಗೌಡಗೆ ಈ ಹಿಂದೆ ನಿಶ್ವಿತಾರ್ಥದ ದಿನವೇ ಕಹಿ ಘಟನೆ ನಡೆದಿತ್ತು. ಹೀಗಾಗಿ ಈ ಬಾರಿ ತುಂಬಾನೇ ಯೋಚಿಸಿ, ಕುಲಂಕುಶವಾಗಿ ವಿಚಾರಿಸಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಬಾವಿ ಪತಿ ಅನುಕೂಲ್ ಮಿಶ್ರ ಅವರೊಂದಿಗೆ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಅದ್ಧೂರಿಯಾಗಿ ನಿಶ್ವಿತಾರ್ಥವನ್ನು ಮಾಡಿಕೊಂಡಿದ್ದಾರೆ.

Actress Vaishnavi Gowda says her fianc works in the air force not at the airport

ಇನ್ನು ವೈಷ್ಣವಿ ಗೌಡ ಕೈ ಹಿಡಿಯುತ್ತಿರುವ ಅನುಕೂಲ್ ಮಿಶ್ರಾ ಯಾರು? ಈಗಾಗಲೇ ಹರಿದಾಡುತ್ತಿರುವ ಸುದ್ದಿ ಸುಳ್ಳಾ? ವೈಷ್ಣವಿ ಗೌಡ ಭಾವಿ ಪತಿ ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿಲ್ಲವೇ? ಮತ್ತೆ ಎಲ್ಲಿ ಕೆಲಸ ಮಾಡುತ್ತಿದ್ದಾರೆ? ಇಂತಹ ಎಲ್ಲ ಕುತೂಹಲಗಳಿಗೆ ಸ್ವತ: ವೈಷ್ಣವಿ ಗೌಡ ಅವರೇ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರದ್ದೇ ಯೂಟ್ಯೂಬ್ ಚಾನೆಲ್‌ನಲ್ಲಿ ಭಾವಿ ಪತಿಯನ್ನು ಪರಿಚಯಿಸಿದ್ದಾರೆ.

ಹೌದು, ಕೆಲವು ತಿಂಗಳುಗಳ ಹಿಂದೆ ವೈಷ್ಣನಿ ಗೌಡ ನಿಶ್ವಿತಾರ್ಥ ಮುರಿಬಿದ್ದಿದ್ದಾಗ ತುಂಬಾನೇ ಅಪ್‌ಸೆಟ್ ಆಗಿದ್ದರು. ಆ ಬಳಿಕ ಚೇತರಿಸಿಕೊಂಡು ಮತ್ತೆ ನಟನೆಯತ್ತ ಮರಳಿದ್ದರು. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಸೀತಾರಾಮ' ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮಧ್ಯೆ ಇವರು ಎಲ್ಲಿಯೇ ಹೋದರೂ ಮದುವೆ ಯಾವಾಗ? ಅಂತ ಅವರು ಅಭಿಮಾನಿಗಳು ಹಾಗೂ ಆತ್ಮೀಯರು ಕೇಳುತ್ತಲೇ ಇದ್ದರಂತೆ. ಅದಕ್ಕೆ ಈಗ ಉತ್ತರ ಕೊಟ್ಟಿದ್ದಾರೆ.

Actress Vaishnavi Gowda says her fianc works in the air force not at the airport

"ನಾನು ಎಲ್ಲೇ ಹೋದರೂ ನೀವು ಹೇಗಿದ್ದೀರ ಅಂತ ಕೇಳುತ್ತಿರಲಿಲ್ಲ. ಮೊದಲು ಪ್ರಶ್ನೆ ಬರುತ್ತಿದ್ದಿದ್ದೇ ಮದುವೆ ಯಾವಾಗ ಅಂತ ಕೇಳುತ್ತಿದ್ರಿ. ಎಲ್ಲರೂ ಹುಡುಗ ಯಾರು? ಇಂಡಸ್ಟ್ರಿಯವರಾ? ಯಾವಾಗ ಹೇಗೆ ಪರಿಚಯ ಆಯ್ತು? ಅದೆಲ್ಲವನ್ನೂ ಹೇಳುವುದಕ್ಕೆ ಖುಷಿಯಾಗುತ್ತೆ. ನನಗೂ ನಿಮ್ಮಷ್ಟೇ ಕುತೂಹಲವಿತ್ತು. ನಾನು ಯಾರನ್ನು ಮದುವೆ ಆಗುತ್ತೇನೆ ಅಂತ. ಇದಕ್ಕೆ ಉತ್ತರ ನನಗೆ ಸಿಕ್ಕಿದೆ." ಎಂದು ವೈಷ್ಣವಿ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಅವರ ಭಾವಿ ಪತಿ ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆಂಬ ಸುದ್ದಿ ಹಬ್ಬಿತ್ತು. ಅದಕ್ಕೂ ಈ ವಿಡಿಯೋದಲ್ಲಿ ಕ್ಲಾರಿಟಿ ಕೊಟ್ಟಿದ್ದಾರೆ. "ವಿಡಿಯೋದಲ್ಲಿ ಎಲ್ಲಾ ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುತ್ತಾರೆ ಅಂತ ಹಾಕಿದ್ದರು. ಅವರಿಗೆ ಸ್ವಲ್ಪ ಫನ್ನಿ ಅಂತ ಅನಿಸಿತು. ಅವರ ಏರ್‌ಪೋರ್ಟ್‌ನಲ್ಲಿ ಅಲ್ಲ. ಏರ್‌ಪೋರ್ಸ್‌ನಲ್ಲಿ ಕೆಲಸ ಮಾಡುತ್ತಾರೆ. ಇವರೇ ನನ್ನ ಭಾವಿ ಪತಿ" ಎಂದು ಅನುಕೂಲ್ ಮಿಶ್ರ ಅವರನ್ನು ಪರಿಚಯ ಮಾಡಿಕೊಟ್ಟಿದ್ದಾರೆ.

ವೈಷ್ಣವಿ ಗೌಡ ಮಾಡಿದ ವಿಡಿಯೋದಲ್ಲಿ ಅವರ ಅಮ್ಮ ಕೂಡ ಮಾತಾಡಿದ್ದು, ಯೂಟ್ಯೂಬರ್‌ಗಳಿಗೆ ತಪ್ಪು ಮಾಹಿತಿ ನೀಡಿದಂತೆ ಮನವಿ ಮಾಡಿಕೊಂಡಿದ್ದಾರೆ. "ತುಂಬಾ ಖುಷಿ ಆಗುತ್ತಿದೆ. ಇವತ್ತಉ ಏಪ್ರಿಲ್ 14 ತುಂಬಾ ವಿಶೇಷವಾದ ದಿನ. ಒಳ್ಳೆಯ ಆರೋಗ್ಯ, ಆಯಸ್ಸು, ಐಶ್ವರ್ಯಾ ಎಲ್ಲವನ್ನೂ ಕೊಟ್ಟು ದೇವರು ಕಾಪಾಡಲಿ. ನಾನು ತುಂಬಾ ದಿನದಿಂದ ಕಾಯುತ್ತಿದ್ದೆ. ನಮಗೆ ಒಳ್ಳೆಯ ಅಳಿಯ ಸಿಕ್ಕಿದ್ದಾರೆ. ಹಿಂದಿನ ತರ ಅಲ್ಲ ಇದು. ಇದು ನಿಶ್ಚಿತಾರ್ಥ. ನಾನು ಫುಲ್ ಡಿಟೈಲ್ಸ್ ಕೊಡುತ್ತೇನೆ. ಯೂಟ್ಯೂಬರ್ಸ್ ಏನು ವಿಡಿಯೋ ಮಾಡುತ್ತಿರೋ ಅವರಿಗೆ ನಾನು ಮಾಹಿತಿ ಕೊಡುತ್ತೇನೆ. ಅದಕ್ಕೆ ತಕ್ಕಂತೆ ವಿಡಿಯೋ ಮಾಡಿ. ಸುಳ್ಳು ಅಪಪ್ರಚಾರ ಮಾಡುವುದು ಬೇಡ. ನೀಟ್ ಆಗಿ ವಿಡಿಯೋ ಮಾಡಿ. ನನಗೆ ತುಂಬಾ ಟೆನ್ಷನ್ ಆಗುತ್ತೆ. ನಾನು ಹೇಳುತ್ತೇನೆ. ಅದಕ್ಕೆ ತಕ್ಕಂತೆ ವಿಡಿಯೋ ಮಾಡಿ" ಮನವಿ ಮಾಡಿಕೊಂಡಿದ್ದಾರೆ.

ವೈಷ್ಣವಿ ಸಹೋದರ ಕೂಡ ತಂಗಿಗೆ ಶುಭ ಹಾರೈಸಿದ್ದಾರೆ. "ಜೀವನದ ಪ್ರತಿಯೊಂದು ಹಂತದಲ್ಲಿ ಚೆನ್ನಾಗಿಯೇ ಹೆಜ್ಜೆ ಇಟ್ಟುಕೊಂಡು ಬಂದಿದ್ದೀಯ. ಇದು ತುಂಬಾನೇ ಜೀವನದ ಕ್ರಿಟಿಕಲ್ ಸ್ಟೇಜ್‌ ಅಂತ ನಾನು ಹೇಳುತ್ತೇನೆ. ಕಷ್ಟ ಅಂತೂ ಇಲ್ಲ. ಚೆನ್ನಾಗಿ ಇರುತ್ತೆ. ಬೇರೆ ಮನೆಗೆ ಅಂತ ಹೋಗುತ್ತೀಯ. ಚೆನ್ನಾಗಿ ಇರುತ್ತೀಯ. ಒಳ್ಳೆಯ ವೈಫ್ ಆಗಿರುತ್ತೀಯ ಅದಂತೂ ನನಗೆ ಖಂಡಿತಾ ಗೊತ್ತು." ಎಂದಿದ್ದಾರೆ.

ಇನ್ನು ವೈಷ್ಣವಿ ಗೌಡ ನಿಶ್ಚಿತಾರ್ಥಕ್ಕೆ ಕನ್ನಡ ಚಿತ್ರರಂಗದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಬಿಗ್‌ಬಾಸ್ ಖ್ಯಾತಿಯ ಪ್ರಶಾಂತ್ ಸಂಬರ್ಗಿ ಉಪಸ್ಥಿತಿ ಇತ್ತು. ಕೊನೆಯಲ್ಲಿ ಸೆಲೆಬ್ರೆಷನ್ ಕೂಡ ಅಷ್ಟೇ ಜೋರಾಗಿತ್ತು.

More from Filmibeat

English summary
Actress Vaishnavi Gowda introduced her future husband to her fans after engagement;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X