15 ವರ್ಷಗಳ ಬಳಿಕ 'ಅನಿಸುತಿದೆ' ಹಾಡಿನ ರಹಸ್ಯ ಬಿಚ್ಚಿಟ್ಟ 'ಮುಂಗಾರು ಮಳೆ' ಚಿತ್ರದ 'ಗೋಲ್ಡನ್ ಗ್ಯಾಂಗ್'

ಸಿನಿಮಾಗಳು ಸೋಲುತ್ತಿದ್ದವು. ರಿಲೀಸ್ ಆದ ಬಹುತೇಕ ಚಿತ್ರಗಳು ನಷ್ಟ ಆಗುತ್ತಿದ್ದ ಕಾಲ. ಇನ್ನೇನು ಸ್ಯಾಂಡಲ್‌ವುಡ್ ಕಥೆ ಮುಗಿದೇ ಹೋಯ್ತು ಅನ್ನುವಾಗಲೇ ಕನ್ನಡ ಚಿತ್ರರಂಗಕ್ಕೆ ಹೊಸ ತಿರುವು ಕೊಟ್ಟ ಸಿನಿಮಾ 'ಮುಂಗಾರು ಮಳೆ'. ಅಲ್ಲಿವರೆಗೂ ಇದ್ದ ಕನ್ನಡ ಚಿತ್ರರಂಗದ ಎಲ್ಲಾ ದಾಖಲೆಗಳನ್ನೂ ಹಿಂದಿಕ್ಕಿ ಹೊಸ ಇತಿಹಾಸ ಸೃಷ್ಟಿಸಿದ ಸಿನಿಮಾವಿದು. ಗೆಳೆಯರೇ ಸೇರಿ ನಿರ್ಮಿಸಿದ ಚಿತ್ರ ಹಲವರ ಬದುಕಿಗೆ ದಾರಿ ದೀಪವಾಗಿದೆ.

ಗಣೇಶ್ ಗೋಲ್ಡನ್ ಸ್ಟಾರ್ ಆಗಿದ್ದು, ಯೋಗರಾಜ್ ಭಟ್ ವಿಕಟಕವಿ ಆಗಿದ್ದು, ಕ್ಯಾಮರಾಮ್ಯಾನ್ ಕೃಷ್ಣ ಜೋಗ ತೋರಿಸಿದ್ದು, ಮನೋಮೂರ್ತಿ ಸಂಗೀತ ನೀಡಿದ್ದು, ಜಯಂತ್ ಕಾಯ್ಕಿಣಿ ಸಾಹಿತ್ಯ ಕಿಕ್ ಕೊಟ್ಟಿದ್ದು ಇವೆಲ್ಲವೂ ಹೊಸತೆನಿಸಿತ್ತು. ಇವರೆಲ್ಲರಿಗೂ ಹೊಸ ಬದುಕು ಕಟ್ಟಿ ಕೊಟ್ಟಿದ್ದು ಇದೇ ಮುಂಗಾರು ಮಳೆ. ಸುಮಾರು 15 ವರ್ಷಗಳ ಬಳಿಕ ಈ ಮತ್ತೆ ಒಂದಾಗಿದೆ. ಆದರೆ, ಸಿನಿಮಾಗಾಗಿ ಅಲ್ಲ. ಗೋಲ್ಡನ್ ವೇದಿಕೆ ಮೇಲೆ ಇವೆಲ್ಲರೂ ಮತ್ತೆ ಸೇರಿದ್ದಾರೆ. ಒಂದೊಂದು ರಹಸ್ಯ ರಿವೀಲ್ ಮಾಡುತ್ತಿದ್ದಾರೆ. ಈ ವೇಳೆ 'ಅನಿಸುತಿದೆ ಯಾಕೋ' ಇಂದು ಹಾಡಿನ ಗುಟ್ಟನ್ನು ರಟ್ಟು ಮಾಡಿದ್ದಾರೆ.

ಅನಿಸುತಿದೆ ಯಾಕೋ ಇಂದು ಎವರ್‌ಗ್ರೀನ್ ಸಾಂಗ್

ಅನಿಸುತಿದೆ ಯಾಕೋ ಇಂದು ಎವರ್‌ಗ್ರೀನ್ ಸಾಂಗ್

'ಮುಂಗಾರು ಮಳೆ' ಗೆಲುವಿನ ಬಹುಪಾಲು ಈ ಚಿತ್ರಗಳಿಗೂ ಸಲ್ಲುತ್ತೆ. ಸಂಗೀತ ನಿರ್ದೇಶಕ ಮನೋಮೂರ್ತಿ ಟ್ಯೂನ್ ಹಾಕಿದ ಎಲ್ಲಾ ಹಾಡುಗಳೂ ಸೂಪರ್‌ ಹಿಟ್ ಆಗಿತ್ತು. ಅದರಲ್ಲೂ ಸೋನು ನಿಗಂ ಹಾಡಿದ 'ಅನಿಸುತಿದೆ ಯಾಕೋ ಇಂದು' ಹಾಡು 5 ವರ್ಷಗಳ ಬಳಿಕವೂ ಸಿನಿಪ್ರಿಯರ ಅಚ್ಚು ಮೆಚ್ಚಿನ ಸಾಂಗ್. ಈ ಹಾಡನ್ನು ಶೂಟ್ ಮಾಡುವಾಗ ನಡೆದ ಘಟನೆಯನ್ನು 'ಮುಂಗಾರು ಮಳೆ' ತಂಡ 'ಗೋಲ್ಡನ್ ಗ್ಯಾಂಗ್' ವೇದಿಕೆಯಲ್ಲಿ ರಿವೀಲ್ ಮಾಡಿದೆ. ಸ್ವತ: ಗಣೇಶ್‌ಗೆ ಗೋಲ್ಡನ್ ವೇದಿಕೆಯಲ್ಲೇ ಸಂಗತಿ ಗೊತ್ತಾಗಿದೆ.

ಮೊಸಳೆ ಕಂಡರೂ ಗಣೇಶ್ ಹೇಳಿಲ್ಲ ತಂಡ

ಮೊಸಳೆ ಕಂಡರೂ ಗಣೇಶ್ ಹೇಳಿಲ್ಲ ತಂಡ

ಗಣೇಶ್ ಅನಿಸುತಿದೆ ಯಾಕೋ ಇಂದು ಹಾಡಿನ ಚಿತ್ರೀಕರಣ ಮಗ್ನರಾಗಿದ್ದರು. ಮೊದಲೇ ರೊಮ್ಯಾಂಟಿಕ್ ಸಾಂಗ್ ಆಗಿತ್ತು. ಹೀಗಾಗಿ ನಾಲ್ಕೈದು ಲೊಕೇಶನ್‌ಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿತ್ತು. ಹಾಡಿನ ಚಿತ್ರೀಕರಣದ ವೇಳೆ ಮೊಸಳೆ ಇದ್ದರೂ ತಂಡ ಗಣೇಶ್‌ಗೆ ಹೇಳಿರಲಿಲ್ಲ. "ಈ ಸಾಂಗ್‌ನಲ್ಲಿ ನನಗೆ ಹೀಗೆ ಮಲಗುವುದಕ್ಕೆ ಹೇಳಿದ್ದರು. ಐದಾರು ಅಡಿ ಅಂತ ಹೋದರೆ, 10 ರಿಂದ 11 ಅಡಿ ಇದೆ." ಅಂತ ಗಣೇಶ್ ಹೇಳುತ್ತಿದ್ದಂತೆ, ಕ್ಯಾಮರಾಮ್ಯಾನ್ ಕೃಷ್ಣ" ಅದು 300 ಅಡಿ ಇದೆ" ಎನ್ನುತ್ತಾರೆ. ಕಥೆಗಾರ ಪ್ರೀತಂ ಗುಬ್ಬಿ ಮೊಸಳೆ ಕಥೆ ಹೇಳಲು ಆರಂಭಿಸುತ್ತಾರೆ. ಅಲ್ಲೇ ಓಡಾಡುತ್ತಿದ್ದ ಮೊಸಳೆ ಬಗ್ಗೆ ಕ್ಯಾಮರಾಮ್ಯಾನ್‌ ಆಗಿದ್ದ ಕೃಷ್ಣಗೆ ಎಚ್ಚರಿಸಿದ್ದರು. ಆಗ ಶಾಟ್ ಆಗಲ್ಲ ಸುಮ್ಮನಿರು ಅಂತ ಹೇಳಿದ್ದರಂತೆ. ಆ ವಿಷಯವನ್ನೇ 15 ವರ್ಷಗಳ ಬಳಿಕ ಗಣೇಶ್‌ಗೆ ಗೋಲ್ಡನ್‌ ಗ್ಯಾಂಗ್‌ನಲ್ಲಿ ಹೇಳಿ ಶಾಕ್ ಕೊಟ್ಟಿದ್ದಾರೆ. ಈ ಪ್ರೋಮೊವನ್ನು ಜೀ ಕನ್ನಡ ಹೊರಬಿಟ್ಟಿದೆ.

ವೀಕೆಂಡ್‌ನಲ್ಲಿ ಮುಂಗಾರು ಮಳೆ ಕಿಕ್

ಮುಂಗಾರು ಮಳೆ ತಂಡ ಜೀ ಕನ್ನಡದ ಹೊಸ ಶೋ 'ಗೋಲ್ಡನ್ ಗ್ಯಾಂಗ್' ತಂಡದ ಈ ವಾರದ ಅತಿಥಿಗಳು. ಸ್ವತ: ಗಣೇಶ್ ಈ ಸಿನಿಮಾದ ಭಾಗವಾಗಿರುವುದರಿಂದ ಈ ಬಾರಿ ವೀಕೆಂಡ್‌ನಲ್ಲಿ ಮತ್ತಷ್ಟು ಮಜಾ ನೀಡಲಿದೆ. ಯೋಗರಾಜ್‌ ಭಟ್, ಮನೋಮೂರ್ತಿ, ಜಯಂತ್ ಕಾಯ್ಕಿಣಿ, ಪ್ರೀತಂ ಗುಬ್ಬಿ ಸೇರಿದಂತೆ ಸ್ವತ: ಗಣೇಶ್ ನಿರೂಪಣೆ ಜೊತೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ. ಹೀಗಾಗಿ ಈ ವಾರ ವೀಕೆಂಡ್ ಮಸ್ತಾಗಿರುತ್ತೆ.

ಮೊದಲ ವಾರ ಶರಣ್ ಗ್ಯಾಂಗ್ ಮಸ್ತಿ

ಮೊದಲ ವಾರ ಶರಣ್ ಗ್ಯಾಂಗ್ ಮಸ್ತಿ

ವೀಕೆಂಡ್‌ ಕರ್ಫ್ಯೂ ಶುರುವಾಗುವುದಕ್ಕೂ, ವೀಕೆಂಡ್ ನಲ್ಲಿ ಗೋಲ್ಡನ್ ಗ್ಯಾಂಗ್ ಆರಂಭ ಆಗುವುದಕ್ಕೂ ಸರಿಯಾಗಿದೆ. ಹೀಗಾಗಿ ಮನೆಯಲ್ಲೇ ಇರುವ ಜನರಿಗೆ ಈ 'ಗೋಲ್ಡನ್ ಗ್ಯಾಂಗ್' ಸಿಕ್ಕಾಪಟ್ಟೆ ಮನರಂಜನೆ ನೀಡುವುದು ಗ್ಯಾರಂಟಿ. ಮೊದಲ ವಾರದಲ್ಲಿಯೇ ಕಾಮಿಡಿ ಕಿಂಗ್ ಶರಣ್, ನಿರ್ದೇಶಕ ತರುಣ್ ಹಾಗೂ ನಟ ನೆನಪಿರಲಿ ಪ್ರೇಮ್ ಭಾಗವಹಿಸಿದ್ದರು. ಮೊದಲ ಎಪಿಸೋಡ್ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

More from Filmibeat

English summary
After 15 years of releasing Mungaru male team revealed the secret in Golden Gang. Mungaru Male team came for Zee Kannada new show golden gang revealed many secret.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X