ಅಪ್ಪನ ವಿರೋಧದ ನಡುವೆ ಮದುವೆಯಾಗಿದ್ದ ಸರಿಗಮಪ ಗಾಯಕಿ ಪೃಥ್ವಿ ಭಟ್-ಅಭಿಷೇಕ್ ಆರತಕ್ಷತೆ: ಇಲ್ಲಿದೆ ಗೆಸ್ಟ್ ಲಿಸ್ಟ್!

ಸುಮಾರು ಎರಡೂವರೆ ತಿಂಗಳ ಹಿಂದಷ್ಟೇ ಜೀ ಕನ್ನಡದ ಸರಿಗಮಪ ಗಾಯಕಿ ಪೃಥ್ವಿ ಭಟ್ ಮದುವೆ ಸುದ್ದಿಯಲ್ಲಿತ್ತು. ಪೋಷಕರ ವಿರೋಧ ಕಟ್ಟಿಕೊಂಡು ಗಾಯಕಿ ಪೃಥ್ವಿ ಭಟ್ ತಾವು ಪ್ರೀತಿಸಿದ್ದ ಅಭಿಷೇಕ್ ಎಂಬುವವರನ್ನು ವಿವಾಹವಾಗಿದ್ದರು. ಪೃಥ್ವಿ ಭಟ್ ತಂದೆ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಬಳಿಕ ಬೀದಿ ರಂಪಾಟವಾಗಿತ್ತು. ಪೃಥ್ವಿ ಭಟ್ ತಂದೆ ಹಿರಿಯ ಗಾಯಕ ನರಹರಿ ದೀಕ್ಷಿತ್ ಅವರ ವಿರುದ್ಧವೂ ಆರೋಪ ಮಾಡಿದ್ದರು.

ತನ್ನ ಮಗಳ ಮೇಲೆ ವಶೀಕರಣ ಮಾಡಿಸಿ, ಈ ಮದುವೆ ಮಾಡಿಸಿದ್ದಾರೆಂದು ಗಾಯಕಿ ಪೃಥ್ವಿ ಭಟ್ ತಂದೆ ಆರೋಪಿಸಿದ್ದರು. ಬಳಿಕ ಖುದ್ದಾಗಿ ಗಾಯಕಿನೇ ಇದರಲ್ಲಿ ನರಹರಿ ದೀಕ್ಷಿತ್ ಅವರದ್ದು ಯಾವುದೇ ತಪ್ಪಿಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿದ್ದರು. ಹಾಗೇ ಫಿಲ್ಮಿಬೀಟ್ ಕನ್ನಡದಕ್ಕೆ ಹಿರಿಯ ಗಾಯಕರಾದ ನರಹರಿ ದೀಕ್ಷಿತ್ ಕೂಡ ಕ್ಲಾರಿಟಿ ಕೊಟ್ಟಿದ್ದರು. ಮದುವೆ ಕರೆದಿದ್ದರು ಹೋಗಿ ಅಕ್ಷತೆ ಹಾಕಿ ಬಂದಿದ್ದೆ ಅಷ್ಟೇ. ಕನ್ಯಾದಾನ ಮಾಡಿ ಕೊಟ್ಟಿಲ್ಲ ಎಂದಿದ್ದರು.

After marriage controversy saregamapa singer Prithwi Bhat and Abhishek arranged reception guest list

ಈ ವಾದ-ವಿವಾದ ತಣ್ಣಗಾಗುತ್ತಿದ್ದಂತೆ ಗಾಯಕಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ಇಬ್ಬರೂ ಅದ್ಧೂರಿಯಾಗಿ ಆರತಕ್ಷತೆಯನ್ನು ಹಮ್ಮಿಕೊಂಡಿದ್ದರು. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಸರಿಗಮಪದ ಗಾಯಕರು, ಜಡ್ಜ್‌ಗಳು, ಹಾಗೂ ಜೀ ಕನ್ನಡದ ಸಿಬ್ಬಂದಿಗಳು ಭಾಗಿಯಾಗಿದ್ದರು. ಹಾಗಿದ್ದರೆ, ಯಾರೆಲ್ಲ ಬಂದು ಈ ನವ ಜೋಡಿಗೆ ಶುಭ ಹಾರೈಸಿದ್ದರು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಗಾಯಕಿ ಪೃಥ್ವಿ ಭಟ್ ತಮ್ಮ ಆರತಕ್ಷತೆಯ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮದುವೆ ಬಳಿಕ ಎದ್ದಿದ್ದ ವಿವಾದದ ಬಳಿಕ ರಿಲ್ಯಾಕ್ಸ್ ಆಗಿರುವ ಜೋಡಿ ಸಿಕ್ಕಾಪಟ್ಟೆ ಖುಷಿಯಲ್ಲಿದೆ. ಆರತಕ್ಷತೆಯ ಕೆಲವು ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಪತಿ ಅಭಿಷೇಕ್ ಅವರಿಗೆ ಮೇಕಪ್ ಮಾಡುತ್ತಿರುವ ವಿಡಿಯೋ ಕೂಡ ಇದೆ. ಈ ವಿಡಿಯೋ ಹಾಗೂ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ಕೂಡ ಶುಭ ಹಾರೈಸಿದ್ದಾರೆ.

After marriage controversy saregamapa singer Prithwi Bhat and Abhishek arranged reception guest list

ಇನ್ನು ಸರಿಗಮಪ ಗಾಯಕಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ಆರತಕ್ಷತೆಯಲ್ಲಿ ಗಾಯಕ ವಿಜಯ್ ಪ್ರಕಾಶ್, ಪತ್ನಿ ಮಹತಿ ಹಾಗೂ ಪುತ್ರಿ ಭಾಗಿಯಾಗಿದ್ದರು. ನವ ಜೋಡಿಗೆ ಶುಭ ಕೋರಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಡ್ಯಾನ್ಸ್, ಮ್ಯೂಸಿಕ್ ಈ ಆರತಕ್ಷತೆಯ ಪ್ರಮುಖ ಆಕರ್ಷಣೆಯಾಗಿತ್ತು.

ಇನ್ನು ಸರಿಗಮಪ ಹಾಗೂ ಬಿಗ್ ಬಾಸ್ ಕನ್ನಡದ ವಿನ್ನರ್ ಹನುಮಂತ ಈ ಆರಕ್ಷತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ, ಸಂಗೀತ ಕಾರ್ಯಕ್ರಮವನ್ನೂ ನೀಡಿದ್ದಾರೆ ಎಂದು ಹೇಳಲಾಗಿದೆ. ಇವರೊಂದಿಗೆ ಸರಿಗಮಪ ರಿಯಾಲಿಟಿ ಶೋ ನಿರೂಪಕಿ ಅನುಶ್ರೀ ಕೂಡ ಆಗಮಿಸಿ ನವ ಜೋಡಿಗೆ ಶುಭವನ್ನು ಕೋರಿದ್ದಾರೆ. ನಾದ ಬ್ರಹ್ಮ ಹಂಸಲೇಖ ಅವರ ಪತ್ನಿ ಕೂಡ ಭಾಗವಹಿಸಿದ್ದಾರೆ. ನಟ ಒಳ್ಳೆ ಹುಡುಗ ಪ್ರಥಮ್, ಗಾಯಕ ಸುನೀಲ್ ಕೂಡ ಬಂದು ಶುಭ ಹಾರೈಸಿದ್ದಾರೆ.

ಸರಿಗಮಪ ಗಾಯಕಿ ಪೃಥ್ವಿ ಭಟ್ ಮಾರ್ಚ್ 27ರಂದು ಮನೆಯವರ ವಿರೋಧದ ನಡುವೆ ಜೀ ಕನ್ನಡದಲ್ಲಿ ಎಕ್ಸಿಕ್ಯೂಟಿವ್ ಪ್ರಡ್ಯೂಸರ್ ಆಗಿ ಕೆಲಸ ಮಾಡುತ್ತಿರುವ ಅಭಿಷೇಕ್ ಜೊತೆ ವಿವಾಹವಾಗಿದ್ದರು. ಪೃಥ್ವಿ ಭಟ್ ಹಾಗೂ ಅಭಿಷೇಕ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ವಿಷಯವನ್ನು ಗಾಯಕಿಯ ಪೋಷಕರಿಗೆ ಮೊದಲ ತಿಳಿಸಿದ್ದಾಗಿ ಹಿರಿಯ ಗಾಯಕ ನರಹರಿ ದೀಕ್ಷಿತ್ ಹೇಳಿಕೊಂಡಿದ್ದಾರೆ. ಆದರೂ, ಪೃಥ್ವಿ ಭಟ್ ಪೋಷಕರು ಇವರ ಮೇಲೆ ಆರೋಪ ಮಾಡಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.

More from Filmibeat

English summary
After marriage controversy saregamapa singer Prithwi Bhat and Abhishek arranged reception. Here is the guest list:
Read more about: singer wedding controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X