ಥಿಯೇಟರ್‌ನಲ್ಲಿ ರಿಲೀಸ್ ಆದ 6 ವರ್ಷಗಳ ಬಳಿಕ ರಾಮ ರಾಮ ರೇ ಟಿವಿಯಲ್ಲಿ ಪ್ರಸಾರ!

ಸ್ಯಾಂಡಲ್‌ವುಡ್‌ನ ವಿಶಿಷ್ಟ ಸಿನಿಮಾಗಳಲ್ಲಿ 'ರಾಮ ರಾಮ ರೇ' ಕೂಡ ಒಂದು. ಈ ಸಿನಿಮಾ ತನ್ನ ವಿಶಿಷ್ಟ ಕಂಟೆಂಟ್‌ನಿಂದ ಪ್ರೇಕ್ಷಕರ ಮನಗೆದ್ದಿತ್ತು. ಹೊಸಬರ ತಂಡ ಸೇರಿಕೊಂಡು ನಿರ್ಮಿಸಿದ್ದ ಈ ಸಿನಿಮಾ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು.

'ರಾಮಾ ರಾಮಾ ರೇ' ಸ್ಯಾಂಡಲ್‌ವುಡ್‌ನ ಸೂಪರ್ ಹಿಟ್ ಸಿನಿಮಾಗಳಲ್ಲೊಂದು. ಸ್ಮಾಲ್ ಬಜೆಟ್, ಸ್ಟಾರ್ ಕಾಸ್ಟ್ ಇಲ್ಲದ ಈ ಸಿನಿಮಾ ಥಿಯೇಟರ್‌ನಲ್ಲಿ ಬರೋಬ್ಬರಿ‌ 100 ದಿನಗಳನ್ನು ಪೂರೈಸಿತ್ತು. ಈ ಸಿನಿಮಾ ಎಲ್ಲಾ ಸಿದ್ಧಸೂತ್ರಗಳನ್ನು ಪಕ್ಕಕ್ಕಿಟ್ಟು ನಿರ್ಮಾಣ ಮಾಡಲಾಗಿತ್ತು. ಹೊಸ ಸ್ಟಾರ್ ಕಾಸ್ಟ್, ಹೊಸ ಕಥೆ, ಹೊಸ ನಿರ್ದೇಶಕ. ಹೀಗಿದ್ದರೂ, ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು.

After Six Years Of Release Rama Ram Re Telecasting In Television Zee Pictures

ನಿರ್ದೇಶಕ ಸತ್ಯಪ್ರಕಾಶ್ ನಿರ್ದೇಶಿಸಿದ ಈ ಸಿನಿಮಾ ಸಿನಿ ಪ್ರಿಯರ ನಿದ್ದೆ ಕೆಡಿಸಿತ್ತು. ಟ್ರಾವೆಲ್ ಜೊತೆಗೆ ಪಾತ್ರಗಳು ಕಥೆಯನ್ನು ಕೊಂಡೊಯ್ಯುವ ಕಥೆಯೇ ಸಿನಿಮಾದ ಹೈಲೈಟ್. ಸತ್ಯಪ್ರಕಾಶ್ ಈ ಸಿನಿಮಾದಲ್ಲಿ ವಿಭಿನ್ನ ಪ್ರಯೋಗವನ್ನು ಮಾಡಿದ್ದರು.

ಪೊಲೀಸರನ್ನು ಕೊಂದು ನೇಣು ಶಿಕ್ಷೆಗೆ ಒಳಗಾಗಿರುವ ಖೈದಿಯೊಬ್ಬ ಜೈಲಿನಿಂದ ತಪ್ಪಿಸಿಕೊಳ್ಳುವುದರಿಂದ ಸಿನಿಮಾ ಶುರುವಾಗುತ್ತೆ. ಬಳಿಕ ಆ ಖೈದಿ ತಾನಾಗಿಯೇ ಬಂದು ಶರಣಾಗುವ ದೃಶ್ಯದೊಂದಿಗೆ ಸಿನಿಮಾ ಮುಗಿಯುತ್ತದೆ. ಈ ಮಧ್ಯೆ ಆ ಖೈದಿ ಬದುಕಲು ನಡೆಸುವ ಹೋರಾಟ. ಜೊತೆಗೆ ಬರುವ ಪ್ರೇಮಿಗಳ ಕಷ್ಟ. ಸೈನಿಕನ ಪತ್ನಿಯ ಪ್ರಸವ ವೇದನೆ. ಈ ಎಲ್ಲವನ್ನೂ ನಿರ್ದೇಶಕ ಸತ್ಯ ಪ್ರಕಾಶ್‌ ಮನಕಲುಕುವಂತೆ ಕಟ್ಟಿಕೊಟ್ಟಿದ್ದಾರೆ.

'ರಾಮಾ ರಾಮಾ ರೇ' ಅಕ್ಟೋಬರ್ 21 2016ರಂದು ರಿಲೀಸ್ ಆಗಿತ್ತು. ಈಗ ಬರೊಬ್ಬರಿ ಆರು ವರ್ಷಗಳ ಬಳಿಕ ಟಿವಿಯಲ್ಲಿ ಪ್ರದರ್ಶನವಾಗಲಿದೆ. ದಸರಾ ಹಬ್ಬದ ಪ್ರಯುಕ್ತ 'ರಾಮಾ ರಾಮಾ ರೇ' ಸಿನಿಮಾ ಜೀ ಪಿಕ್ಚರ್ಸ್ ನಲ್ಲಿ ಸಂಜೆ 6 ಕ್ಕೆ ಪ್ರಸಾರವಾಗಲಿದೆ.

After Six Years Of Release Rama Ram Re Telecasting In Television Zee Pictures

ಸತ್ಯಪ್ರಕಾಶ್ ಚಿತ್ರಕಥೆ ಬರೆದು ನಿರ್ದೇಶಿಸಿದ 'ರಾಮಾ ರಾಮಾ ರೇ' ಸಿನಿಮಾದಲ್ಲಿ ನಟರಾಜ್, ಧರ್ಮಣ್ಣ ಕಡೂರ್, ಎಂ.ಕೆ.ಮಠ, ಶ್ರೀಧರ್, ರಾಧಾ ರಾಮಚಂದ್ರ, ಶ್ರೀಧರ್‌ ಸೇರಿದಂತೆ ಎಲ್ಲ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದರು. 'ರಾಮಾ ರಾಮಾ ರೇ ಕನ್ನಡದ ಪ್ರಯೋಗಾತ್ಮಕ ಸಿನಿಮಾವಾಗಿದ್ದು, ಈ ಚಿತ್ರವನ್ನು ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡವರು ಟಿವಿಯಲ್ಲಿ ನೋಡಬಹುದು.

More from Filmibeat

English summary
After Six Years Of Release Rama Ram Re Telecasting In Television Zee Pictures, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X