ಥಿಯೇಟರ್ ಆಯ್ತು, ಓಟಿಟಿ ಆಯ್ತು, ಟಿವಿಯಲ್ಲಿ ಅಬ್ಬರಿಸಲು ಸಜ್ಜಾದ 'ಭಜರಂಗಿ 2': ಪ್ರಸಾರ ಯಾವಾಗ?

ಶಿವರಾಜ್‌ಕುಮಾರ್ ಅಭಿನಯದ 'ಭಜರಂಗಿ 2' ಮತ್ತೆ ಸದ್ದು ಮಾಡುತ್ತಿದೆ. ಥಿಯೇಟರ್, ಓಟಿಟಿ ಬಳಿಕ ಟಿವಿಯಲ್ಲೂ ಪ್ರದರ್ಶನ ಕಾಣುವುದಕ್ಕೆ ಸಜ್ಜಾಗಿ ನಿಂತಿದೆ. ಶಿವಣ್ಣ ಹಾಗೂ ಹರ್ಷ ಕಾಂಬಿನೇಷನ್‌ ಈ ಸಿನಿಮಾ ನೋಡಿ ಸಿನಿಮಾ ಪ್ರೇಮಿಗಳು ಮೆಚ್ಚುಗೆ ಸೂಚಿಸಿದ್ದರು. ಥಿಯೇಟರ್‌ನಲ್ಲಿಯೇ ಸಿನಿಮಾದ 100 ದಿನದ ಸಂಭ್ರಮಾಚರಣೆ ಮಾಡಬೇಕು ಎಂದುಕೊಂಡಿದ್ದ ಅಭಿಮಾನಿ ನಿರಾಸೆಯಾಗಿದ್ದರೂ, ಪ್ರದರ್ಶನ ಕಂಡ ಕಡೆಯಲ್ಲೆಲ್ಲಾ 'ಭಜರಂಗಿ 2' ಮೆಚ್ಚುಗೆ ಗಳಿಸುತ್ತಲೇ ಇದೆ.

ಶಿವಣ್ಣ ಹಾಗೂ ಮಲಯಾಳಂ ನಟಿ ಭಾವನಾ ನಟಿಸಿರುವ 'ಭಜರಂಗಿ 2' ಅಕ್ಟೋಬರ್ 29ರಂದು ಅದ್ಧೂರಿಯಾಗಿ ರಾಜ್ಯದಾದ್ಯಂತ ಬಿಡುಗಡೆಯಾಗಿತ್ತು. ಆದರೆ, ಅದೇ ದಿನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನ ಸುದ್ದಿ ಅಭಿಮಾನಿಗಳಿಗೆ ಬರಸಿಡಿಲಿನಂತೆ ಬಂದು ಅಪ್ಪಳಿಸಿತ್ತು. ಸಂಭ್ರಮದಲ್ಲಿದ್ದ ಅಭಿಮಾನಿಗಳು ಒಂದೇ ಕ್ಷಣಕ್ಕೆ ಶೋಕ ಸಾಗರದಲ್ಲಿ ಮುಳುಗಿದ್ದರು. ಒಂದು ವಾರದ ಬಳಿಕ ಮತ್ತೆ ಚಿತ್ರಮಂದಿರದಲ್ಲಿ ಪ್ರದರ್ಶನ ಆರಂಭ ಆಗಿತ್ತು. ಆದರೂ, ನೋವಿನಲ್ಲಿದ್ದ ಅಭಿಮಾನಿಗಳು ಸಿನಿಮಾ ನೋಡುವ ಮೂಡ್‌ನಲ್ಲಿ ಇರಲಿಲ್ಲ. ಹೀಗಾಗಿ ಓಟಿಟಿ ಹಾಗೂ ಟಿವಿಯಲ್ಲಿ ಪ್ರದರ್ಶನ ಕಾಣುತ್ತಿದೆ.

ಜನವರಿ 23ಕ್ಕೆ 'ಭಜರಂಗಿ 2' ಪ್ರಸಾರ

ಜನವರಿ 23ಕ್ಕೆ 'ಭಜರಂಗಿ 2' ಪ್ರಸಾರ

ಶಿವಣ್ಣನ 'ಭಜರಂಗಿ 2' ಈಗಾಗಲೇ ಜೀ 5 ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಓಟಿಟಿಯಲ್ಲಿ ಜನರು ಸುಮಾರು 10 ಕೋಟಿಗೂ ಅಧಿಕ ನಿಮಿಷಗಳಲ್ಲಿ ಸಿನಿಮಾ ನೋಡಿದ್ದಾರೆ. ಈ ಯಶಸ್ಸಿನ ಹಿಂದೆನೇ 'ಭಜರಂಗಿ 2' ಜೀ ಕನ್ನಡದಲ್ಲೂ ಪ್ರಸಾರ ಆಗಲಿದೆ. ಈಗಾಗಲೇ ಈ ಸಿನಿಮಾದ ಪ್ರೋಮೊಗಳನ್ನು ಬಿಡುಗಡೆ ಮಾಡಲಾಗಿದೆ. ಟಿವಿಯಲ್ಲೂ ದಾಖಲೆ ನಿರ್ಮಿಸಲು ಶಿವಣ್ಣನ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಜನವರಿ 23ರಂದು ಜೀ ಕನ್ನಡದಲ್ಲಿ ಸಂಜೆ 7.30ಕ್ಕೆ ಪ್ರಸಾರ ಆಗಲಿದೆ.

ಅಪ್ಪು ಅಭಿಮಾನಿಗಳಿಗೆ ವಿಶೇಷ ಸಿನಿಮಾ

ಅಪ್ಪು ಅಭಿಮಾನಿಗಳಿಗೆ ವಿಶೇಷ ಸಿನಿಮಾ

ಸಿನಿಮಾ ಓಟಿಟಿಗೆ ಬಿಡುಗಡೆಯಾಗುವ ವೇಳೆ ಶಿವರಾಜ್‌ ಕುಮಾರ್ 'ಭಜರಂಗಿ 2' ಅನ್ನು ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಅರ್ಪಿಸಿದ್ದರು. ಅಪ್ಪು ಎಡಿಟಿಂಗ್ ರೂಮಿನಲ್ಲಿಯೇ ಸಿನಿಮಾವನ್ನು ಎಡಿಟಿಂಗ್ ಮಾಡಿದ್ದೆವು. ಚಿತ್ರದ ಹಲವು ದೃಶ್ಯಗಳನ್ನು ಅಪ್ಪು ವೀಕ್ಷಿಸಿದ್ದಾರೆ. ಹೀಗಾಗಿ ಈ ಸಿನಿಮಾವನ್ನು ಅಪ್ಪುಗೆ ಅರ್ಪಿಸುತ್ತೇವೆ ಎಂದು ಹೇಳಿದ್ದರು. ಹೀಗಾಗಿ ಅಪ್ಪುಗೂ 'ಭಜರಂಗಿ 2' ಚಿತ್ರಕ್ಕೂ ವಿಶೇಷವಾದ ನಂಟಿದೆ. ಹೀಗಾಗಿ ಅಪ್ಪು ಅಭಿಮಾನಿಗಳಿಗೂ ಇದು ವಿಶೇಷ ಸಿನಿಮಾ.

'ಗೋಲ್ಡನ್ ಗ್ಯಾಂಗ್' ಬದಲು 'ಭಜರಂಗಿ 2'

ಸಾಮಾನ್ಯವಾಗಿ ಶನಿವಾರ ಹಾಗೂ ಭಾನುವಾರ ಈ ಎರಡೂ ದಿನ ಜೀ ಕನ್ನಡದ ಹೊಚ್ಚ ಹೊಸ ಟಾಕ್ ಶೋ 'ಗೋಲ್ಡನ್ ಗ್ಯಾಂಗ್' ಪ್ರಸಾರವಾಗುತ್ತಿತ್ತು. ಈ ಭಾನುವಾರ ಗಣೇಶ್ ನಿರೂಪಣೆಯ 'ಗೋಲ್ಡನ್ ಗ್ಯಾಂಗ್' ಪ್ರಸಾರ ಆಗಬೇಕಿದ್ದ ಸಮಯದಲ್ಲೇ ಶಿವಣ್ಣ ನಟನೆಯ 'ಭಜರಂಗಿ 2' ಪ್ರಸಾರವಾಗುತ್ತಿದೆ. ಆದರೆ 'ಗೋಲ್ಡನ್ ಗ್ಯಾಂಗ್' ಯಾಕೆ ಪ್ರಸಾರ ಆಗುತ್ತಿಲ್ಲ ಎಂಬ ಬಗ್ಗೆ ಜೀ ಕನ್ನಡ ಇನ್ನೂ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಟೀಸರ್, ಟ್ರೈಲರ್‌ನಿಂದಲೇ 'ಭಜರಂಗಿ 2' ಸದ್ದು

ಟೀಸರ್, ಟ್ರೈಲರ್‌ನಿಂದಲೇ 'ಭಜರಂಗಿ 2' ಸದ್ದು

ಶಿವಣ್ಣ ಹಾಗೂ ಎ. ಹರ್ಷ ಕಾಂಬಿನೇಷನ್ ಸಿನಿಮಾ 'ಭಜರಂಗಿ 2' ಟೀಸರ್ ಹಾಗೂ ಟ್ರೈಲರ್‌ನಿಂದಲೇ ಸದ್ದು ಮಾಡಿತ್ತು. ಸಿನಿಮಾದಲ್ಲಿ ಬಳಸಲಾಗಿದ್ದ ಅದ್ಭುತ ದೃಶ್ಯಗಳು ಸಿನಿಪ್ರಿಯರ ಮನಗೆದ್ದಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರದಲ್ಲಿ ಬಳಸಿದ ಗ್ರಾಫಿಕ್ಸ್ ಬಗ್ಗೆ ಪ್ರೇಕ್ಷಕರು ಹೊಗಳಿದ್ದರು. ಶಿವಣ್ಣನ ಜೊತೆ ಹಿರಿಯ ನಟಿ ಶೃತಿ ಸೇರಿದಂತೆ ಹಿರಿಯ ಕಲಾವಿದರು ನಟಿಸಿದ್ದು, ಸಿನಿಮಾದ ಹೈಲೈಟ್‌ಗಳಲ್ಲೊಂದು. ಜನವರಿ 23ರಂದು ಸಂಜೆ 7.30ಕ್ಕೆ ಪ್ರಸಾರ ಆಗುತ್ತಿದೆ.

More from Filmibeat

English summary
After Theatrical and OTT release Shivarajkumar starrer Bhajarangi 2 will telecast in Zee Kannada. Sunday 7.30pm Bhajarangi 2 will be telecast.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X