ಇಂಥಾ 'ಕರ್ಣ ಡಾಕ್ಟರ್' ರಿಯಲ್ ಲೈಫ್‌ನಲ್ಲಿ ಇರಬಾರದೇ..? ಬಿಲ್ಡಪ್ ಜಾಸ್ತಿ ಆದ್ರೂ ವೀಕ್ಷಕರು ಕಳೆದು ಹೋಗ್ಬಿಟ್ರು
'ಕರ್ಣ' ಧಾರಾವಾಹಿ ಕಳೆದ ವಾರದಿಂದ ಪ್ರಸಾರ ಆಗುತ್ತಿದೆ. ಅದ್ದೂರಿತನದಲ್ಲಿ ಈ ಸೀರಿಯಲ್ ಕಡಿಮೆ ಏನು ಇಲ್ಲ. ಜೊತೆಗೆ ಜನ ಮೆಚ್ಚುವ ಕಂಟೆಂಟ್ ಇರೋದು ಪಕ್ಕಾ ಆಗಿದೆ. ಆದರೆ, ಸಮಸ್ಯೆ ಏನು ಗೊತ್ತಾ ಕರ್ಣ ಡಾಕ್ಟರ್ ಬಿಲ್ಡ್ ಅಪ್ ಜಾಸ್ತಿ ಆಯ್ತು ಅನ್ನಿಸ್ತಾ ಇಲ್ವಾ? ಈಗ ಇಂತಹದ್ದೊಂದು ಮಾತು ಹೇಳಿದರೆ, ವೀಕ್ಷಕರು ಕಿಡಿಕಾರಬಹುದು. ಕರ್ಣನ ಬಗ್ಗೆ ಬಿಲ್ಡಪ್ ಬಗ್ಗೆ ಮುಂದೆ ನೋಡೋಣ. ಆದರೆ, ಅದಕ್ಕೂ ಮುನ್ನ ಈಗಿನ ಜನರ ಮೈಂಡ್ ಸೆಟ್ ಹೇಗಿದೆ ಅನ್ನೋದನ್ನ ಹೇಳ್ತೀನಿ.
ಈಗೇನಿದ್ದರೂ ರೀಲ್ಸ್ ಕಾಲ. ಅಂದ್ರೆ ಸೆಕೆಂಡ್ಸ್‌ನಲ್ಲಿ ಇರೋದನ್ನಷ್ಟೇ ಜನ ನೋಡೋದು. ಆದರೆ, ಅರ್ಧ ಗಂಟೆ ಕೂತು ಸೀರಿಯಲ್ ನೋಡ್ತಾರೆ ಅಂದರೆ, ಅವರ ಅಭಿರುಚಿ ಸೀರಿಯಲ್ ಕಡೆಗೆ ಇದೆ ಅಂತಾನೆ ಅರ್ಥ. ಅಲ್ಲೂ ಕೂಡ ನೀವೂ ಅದ್ಭುತವಾದದ್ದೇನನ್ನೋ ಕೊಡಲೇಬೇಕು. ಇಲ್ಲವಾದಲ್ಲಿ ಅಲ್ಲಿಂದಾನೂ ಜನ ಚೇಂಜ್ ಆಗ್ತಾರೆ. ಸೀರಿಯಲ್ ಯುಗ ಆದರೂ ಎಲ್ಲಾ ಸೀರಿಯಲ್‌ಗಳು ಟಾಪ್ ಸೀರಿಯಲ್ ಯಾಕ್ ಆಗ್ತಾ ಇಲ್ಲ ಅಂದರೆ ಇದೆ ಕಾರಣಕ್ಕೆ ಅಲ್ವೆ.

'ಕರ್ಣ' ಕಿರುತೆರೆಯಲ್ಲಿ ಶುಭಾರಂಭ ಮಾಡಿದೆ. ಮೊದಲ ವಾರದಲ್ಲಿಯೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಜೀ ಕನ್ನಡದಲ್ಲಿ ಕಳೆದ ಎರಡೂ ಮೂರು ವರ್ಷಗಳಲ್ಲಿ ಧಾರಾವಾಹಿಯೊಂದು ಇಷ್ಟು ದೊಡ್ಡ ಸಕ್ಸಸ್ ಕಂಡಿರಲಿಲ್ಲ. 'ಕರ್ಣ'ನಿಗೆ ಮೊದಲ ವಾರವೇ ಸುಮಾರು 11.0 ಟಿವಿಆರ್ ಪಡೆದುಕೊಂಡಿದೆ. ಅಂದರೆ, ಕರ್ನಾಟಕದಲ್ಲಿ 'ಕರ್ಣ' ಸೀರಿಯಲ್ ಅನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ ಎಂದೇ ಅರ್ಥ. ಅಷ್ಟಕ್ಕೂ ವೀಕ್ಷಕರಿಗೆ 'ಕರ್ಣ' ಯಾಕಷ್ಟು ಇಷ್ಟ ಆದ?
ಈಗ 'ಕರ್ಣ' ಸೀರಿಯಲ್‌ನ ಪ್ರಮುಖ ಪಾತ್ರಧಾರಿ ಕರ್ಣನ ವಿಚಾರಕ್ಕೆ ಬರೋಣ. 'ಕರ್ಣ' ಒಬ್ಬ ಪ್ರಸೂತಿ ಡಾಕ್ಟರ್ ಅನ್ನೋದು ಈಗಾಗಲೇ ಗೊತ್ತಾಗಿದೆ. ನಗು ಮುಖದ ಚೆಲುವ ಕೂಡ. ಕರ್ಣ ಡೆಲಿವರಿ ಮಾಡ್ತಾನೆ ಅಂದ್ರೆ ಅಲ್ಲಿ ಸೂಸುತ್ರವಾಗಿ ಹೆರಿಗೆ ಆಗುತ್ತೆ. ಭೂಮಿಕಾಗೆ ಅಷ್ಟು ಕಷ್ಟದ ಹೆರಿಗೆಯನ್ನೇ ಸುಲಭವಾಗಿ ಮಾಡಿಸಿದ ಅಂದರೆ ಅಲ್ಲಿಗೆ ಕರ್ಣನ ಅನುಭವ ಎಷ್ಟು ಅನ್ನೋದು ಅರ್ಥ ಆಗಿರುತ್ತೆ. ಇದು ಖುಷಿ. ಆದರೆ, ಸಿಹಿಯನ್ನೇ ಅತಿಯಾಗಿ ಕೊಟ್ಟರೆ ವಾಕರಿಕೆ ಬರುತ್ತಲ್ವಾ. ಆ ರೀತಿ ಆಗಬಾರದು ಅಂತ. ಅಂದರೆ, ಸೀರಿಯಲ್ ಶುರುವಾಗಿ ಇಷ್ಟು ದಿನ ಆಗಿದೆ. ಬರೀ ಡೆಲಿವರಿ ಕೇಸ್‌ಗಳನ್ನು ನೋಡಿದ್ದೇ ಹೆಚ್ಚಾಯ್ತು ಅನ್ನೋದು ವೀಕ್ಷಕರ ಅಭಿಪ್ರಾಯ.
ಇದರ ಜೊತೆ ಜೊತೆಗೆ ಇಲ್ಲೊಂದು ಬ್ಯೂಟಿಫುಲ್ ಒನ್ ವೇ ಲವ್ ಸ್ಟೋರಿ ಶುರುವಾಗಿದೆ. ಅಜ್ಜಿ ಮೊಮ್ಮಕ್ಕಳ ಬಾಂಧವ್ಯವಿದೆ, ಅಪ್ಪ ಅಮ್ಮನಿಲ್ಲದೆ ಬೆಳೆದ ಮೊಮ್ಮಕ್ಕಳನ್ನ ಸಾಕಿ ಸಲಹಿದ ಕಷ್ಟಗಳಿವೆ, ಬಹಳ ಮುಖ್ಯವಾಗಿ ಕರ್ಣನ ರಹಸ್ಯವಿದೆ. ಹೌದು, ಇದೆಲ್ಲ ಈಗಲೇ ತೋರಿಸಿದರೆ ಆಗುತ್ತಾ? ಕಾಯಬೇಕು ಅಂತ ನಿರ್ದೇಶಕರು ಹೇಳಬಹುದು. ಬಟ್ ವೀಕ್ಷಕರು ಒಮ್ಮೆ ರಿಮೋಟ್ ಬದಲಾಯಿಸಿದರೆ ಮತ್ತೆ ಕರ್ಣನ ಮೇಲೆ ಆಸಕ್ತಿ ಬರೋದು ಕಷ್ಟ ಸಾಧ್ಯವಾಗಬಹುದು. ಒಂದೊಳ್ಳೆ ಗಟ್ಟಿ ಕಥೆಯ ಎಳೆಯನ್ನ ವೀಕ್ಷಕರು ಬಯಸುತ್ತಿದ್ದಾರೆ.

ಕರ್ಣ, ಆ ನಗುಮುಖ, ಕ್ರಿಟಿಕಲ್ ಕಂಡಿಷನ್‌ನಲ್ಲಿ ಮಾಡುವ ಡೆಲಿವರಿ ಇದೆಲ್ಲವೂ ಹೀರೋಗೆ ಬಿಲ್ಡಪ್ ಕೊಡುವುದಕ್ಕೆ ಮಾಡಿದಂತೆ ಇದೆ. ಸದಾ ನಗುವ ಕರ್ಣನನ್ನ ನಾವೂ ಕೂಡ ಸ್ಪೂರ್ತಿಯಾಗಿ ಪಡೆಯಬಹುದು. ಆಗ ಒಂದಷ್ಟು ಸಕ್ಸಸ್ ಸಿಗುವ ಸೂಚನೆ ಇದೆ. ಯಾರೂ ಏನೇ ಅನ್ನಲಿ ತಾಳ್ಮೆ, ಆ ಒಂದು ಸಣ್ಣ ನಗು ಎಲ್ಲರ ಲೈಫ್‌ಗೂ ಬಹಳ ಮುಖ್ಯ. ವೀಕ್ಷಕರು ಅದನ್ನೇ ಈಗ ಕರ್ಣನಲ್ಲಿ ನೋಡುತ್ತಿದ್ದಾರೆ. ರಿಯಲ್ ಲೈಫ್‌ನಲ್ಲೂ ಇಂತಹ ಒಬ್ಬ ಡಾಕ್ಟರ್ ಸಿಗಬಾರದೇ ಎಂದು ಆಸೆ ಪಡುತ್ತಿದ್ದಾರೆ. ಅದು ಖಂಡಿತಾ ತಪ್ಪಲ್ಲ ಅಲ್ಲವೇ.
ಅಂದ್ಹಾಗೆ, ಈಗ 'ಕರ್ಣ' ಬಾಳಲ್ಲಿ ಪ್ರೀತಿ ಎಂಬ ಬಿರುಗಾಳಿ ಬೀಸಿದೆ. ನಿಧಿಗೆ ಡಾಕ್ಟರ್ ಮೇಲೆ ಲವ್ ಆಗಿದೆ. ಅದನ್ನು ಕರ್ಣನಿಗೆ ಹೇಳಿದ್ದೂ ಆಗಿದೆ. ಹೀಗಿರುವಾಗ 'ಕರ್ಣ' ಒಪ್ಪಿಕೊಳ್ತಾನಾ? ಅಪ್ಪ ಮುಂದೆ ಹಾಕಿದ ಅಗ್ರಿಮೆಂಟ್ ಮರೆತು ಲವ್‌ನಲ್ಲಿ ಬೀಳುತ್ತಾನಾ? ಇಲ್ಲಾ ಪ್ರೀತಿಯ ರಿಜೆಕ್ಟ್ ಮಾಡುತ್ತಾನಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸದ್ಯಕ್ಕೆ ವೀಕ್ಷಕರಂತೂ 'ಕರ್ಣ' ಧಾರಾವಾಹಿಯನ್ನು ಎಂಜಾಯ್ ಮಾಡುತ್ತಿರೋದಂತೂ ಅಷ್ಟೇ ಸತ್ಯ.


Click it and Unblock the Notifications











