ಬಿಗ್ ಬಾಸ್‌ನಲ್ಲಿ ತಟ್ಟೆ ತೊಳೆಯೂ ಹಿಂದೇಟು ಹಾಕ್ತಿದ್ದ ಗಿಲ್ಲಿ.. ಜಿಮ್‌ನಲ್ಲಿ ಭಾರೀ ಕಸರತ್ತು
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟ ಹೊರ ಬರತ್ತಿದ್ದಂತೆ ಬದಲಾಗಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಗಿಲ್ಲಿ ವರಸೆ ಬೇರೆನೇ ಇತ್ತು. ಅದೇ ಬಿಗ್ ಬಾಸ್ ಟೈಟಲ್ ಗೆದ್ದು ಬರುತ್ತಿದ್ದಂತೆ ಅವರ ದಾಟಿಯೇ ಬದಲಾಗಿ ಹೋಗಿದೆ. ಇಲ್ಲಿವರೆಗೂ ತಮ್ಮ ಗೆಲುವಿನ ಸಂಭ್ರಮದಲ್ಲಿಯೇ ಇದ್ದ ಗಿಲ್ಲಿ ಈಗ ಕರಿಯರ್ ಅನ್ನು ಸೀರಿಯಸ್ ಆಗಿ ತೆಗೆದುಕೊಂಡಂತೆ ಇದೆ.
ಬಿಗ್ ಬಾಸ್‌ನಿಂದ ಹೊರ ಬಂದ ಬಳಿಕ ಗಿಲ್ಲಿ ನಟ ಹಾಸ್ಯ ಪಾತ್ರಗಳಲ್ಲಿ ನಟಿಸಿದ ಕೆಲವು ಸಿನಿಮಾ ರಿಲೀಸ್ ಆಗಿದ್ದವು. ಆ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಬಿಗ್ ಬಾಸ್‌ನಲ್ಲಿದ್ದ ಗಿಲ್ಲಿಯ ವರ್ಚಸ್ಸು ಇಲ್ಲಿ ವರ್ಕ್ಔಟ್ ಆಗಲಿಲ್ಲ. ಈ ಸಿನಿಮಾಗಳ ಪ್ರಚಾರದ ಜೊತೆ ಜೊತೆಗೆ ಸಂದರ್ಶನಗಳನ್ನು ನೀಡುವುದರಲ್ಲಿ ಬ್ಯುಸಿಯಾಗಿದ್ದರು.

ಬಿಗ್ ಬಾಸ್ ಮುಗಿದು ಮೂರು ತಿಂಗಳಾಗುತ್ತಿದ್ದಂತೆ ಗಿಲ್ಲಿ ನಟ ನಟನೆಯನ್ನು ಗಂಭೀರವಾಗಿ ತೆಗೆದುಕೊಂಡಂತೆ ಇದೆ. ಹೀಗಾಗಿ ಜಿಮ್ ಅಂದ್ರೆ ದೂರ ಇರುತ್ತಿದ್ದ ಗಿಲ್ಲಿ ಗಂಟೆಗಟ್ಟಲೆ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಅಷ್ಟಕ್ಕೂ ಗಿಲ್ಲಿ ನಟ ಜಿಮ್‌ನಲ್ಲಿ ಕಸರತ್ತು ಮಾಡುತ್ತಿರುವ ವಿಡಿಯೋ ವೈರಲ್ ಆಗುವುದಕ್ಕೆ ಕಾರಣವಿದೆ. ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಸೋಮಾರಿ ಸಿದ್ಧನಂತೆ ಗುರುತಿಸಿಕೊಂಡಿದ್ದರು. ಮನೆಯಲ್ಲಿ ಸರಿಯಾಗಿ ಒಂದು ಕೆಲಸವನ್ನೂ ಸರಿಯಾರಿ ಮಾಡಿದ ಉದಾಹರಣೆಗಳು ಇಲ್ಲ. ತಮ್ಮ ಹಾಸ್ಯ ಪ್ರಜ್ಷೆಯಿಂದಲೇ ಅಪಾರ ಪ್ರಮಾಣದಲ್ಲಿ ಜನರ ಮನಸ್ಸನ್ನು ಗೆದ್ದಿದ್ದಾರೆ. ಹೀಗಾಗಿ ಗಿಲ್ಲಿ ಜಿಮ್‌ನಲ್ಲಿ ಕಸರತ್ತು ಮಾಡುತ್ತಿರೋದು ಅಚ್ಚರಿಯನ್ನು ಮೂಡಿಸಿದೆ.
ಬಿಗ್ ಬಾಸ್‌ನ ಒಂದು ಎಪಿಸೋಡ್‌ನಲ್ಲಿ ಸ್ವತ: ಗಿಲ್ಲಿ ವರ್ಕ್‌ಔಟ್ ಬಗ್ಗೆ ಮಾತಾಡಿದ್ದರು. ಜಿಮ್‌ಗೆ ಹೋದಾಗ ಆದ ಅನುಭವವನ್ನು ಹಂಚಿಕೊಂಡಿದ್ದರು. ಜಿಮ್ ಹೋದಾಗ ಅಲ್ಲಿ ಆದ ಅನುಭವಗಳನ್ನು ಹಂಚಿಕೊಂಡಿದ್ದರು. ಈಗ ನೋಡಿದರೆ, ಜಿಮ್‌ನಲ್ಲಿ ಭಾರೀ ಕಸರತ್ತು ಮಾಡುತ್ತಿದ್ದಾರೆ. ಈ ಬದಲಾವಣೆ ಯಾಕೆ? ಯಾವುದಾದರೀ ಹೊಸ ಪ್ರಾಜೆಕ್ಟ್‌ಗೆ ಈ ನಿರ್ಧಾರ ತೆಗೆದುಕೊಂಡಿರಬಹುದೇ? ಎಂಬ ಅನುಮಾನ ಅವರ ಅಭಿಮಾನಿಗಳಲ್ಲಿ ಮೂಡಿದೆ. ಸದ್ಯಕ್ಕೆ ಈ ಬಗ್ಗೆ ಖಚಿತ ಮಾಹಿತಿ ಇರದೇ ಹೋದರೂ, ಹೊಸ ಸಿನಿಮಾಗಾಗಿ ತಯಾರಿ ನಡೆಸಿದ್ದಾರೆಂದು ಅವರ ಬೆಂಬಲಿಗರು ನಂಬಿಸಿದ್ದಾರೆ.
ಕೆಲವು ಮಾಧ್ಯಮಗಳಲ್ಲಿ ಗಿಲ್ಲಿ ನಟ ಹೀರೋ ಆಗಿ ನಟಿಸುವುದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆಂಬ ಮಾತು ಕೂಡ ಕೇಳಿ ಬರುತ್ತಿದೆ. ಸದ್ಯ ಗಿಲ್ಲಿ ನಟ ಬಿಗ್‌ನಲ್ಲಿ ಕಸರತ್ತು ಮಾಡುತ್ತಿರುವ ವಿಡಿಯೋ ನೋಡಿ ಅಭಿಮಾನಿಗು ಒಂದೊಂದು ರೀತಿ ಅಂದಾಜು ಮಾಡುತ್ತಿದ್ದಾರೆ. ಏನೇ ಇದ್ದರೂ ಜಿಮ್‌ನ ಸಹವಾಸಕ್ಕೆ ಹೋಗದ ಗಿಲ್ಲಿ ವರ್ಕ್ ಔಟ್ ಶುರು ಮಾಡಿದ್ದಾರೆ. ತಮ್ಮ ಫ್ಯಾನ್ಸ್‌ಗಾಗಿ ಹೊಸದೇನೋ ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡುತ್ತಿದ್ದಾರೆಂದು ಅಂದಾಜಿಸಲಾಗಿದೆ.
ಗಿಲ್ಲಿ ನಟ ಹೀರೋ ಆಗುವುದಕ್ಕೆ ತಯಾರಿ ನಡೆಸುತ್ತಿದ್ದಾರೆಂಬ ಸುದ್ದಿ ಓಡಾಡುತ್ತಿದೆ. ಈ ಬಗ್ಗೆ ಗಿಲ್ಲಿ ಅಧಿಕೃತವಾಗಿ ಎಲ್ಲೂ ಹೇಳಿಲ್ಲ. ಬಿಗ್ ಬಾಸ್ ಹೆಸರು ತಂದು ಕೊಟ್ಟ ಬಳಿಕ ಗಿಲ್ಲಿ ಹೊಸ ಪ್ರಾಜೆಕ್ಟ್ ಅನ್ನು ಅನೌನ್ಸ್ ಮಾಡಿಲ್ಲ. ಹೀಗಾಗಿ ಗಿಲ್ಲಿ ಮುಂದಿನ ನಡೆ ಏನು ಅನ್ನೋದನ್ನು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.


Click it and Unblock the Notifications















