'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ದೊಡ್ಡ ತಿರುವು: ಚಂದ್ರಿಕಾ ಮುಖವಾಡ ಬಯಲು.!
ಕಡೆಗೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ದೊಡ್ಡ ತಿರುವು ಸಿಕ್ಕಿದೆ. ವರ್ಷಗಳಿಂದ ನಿಂತ ನೀರಾಗಿದ್ದ ಸೀರಿಯಲ್ ಕಥೆಗೆ ಇದೀಗ ರೋಚಕ ಟ್ವಿಸ್ಟ್ ಲಭಿಸಿದೆ.
ಮನೆಯಲ್ಲೇ ಇದ್ದುಕೊಂಡು ಮನೆಯವರ ವಿರುದ್ಧವೇ ಸ್ಕೆಚ್ ಹಾಕುತ್ತಿದ್ದ ಖತರ್ನಾಕ್ ಕೇಡಿ ಚಂದ್ರಿಕಾ ಬಂಡವಾಳ ಬಯಲಾಗಿದೆ. ಸಿದ್ದಾರ್ಥ್ ಸೇರಿದಂತೆ ಇಡೀ ಫ್ಯಾಮಿಲಿ ಮುಂದೆ ಚಂದ್ರಿಕಾ ಮುಖವಾಡ ಕಳಚಿ ಬಿದ್ದಿದೆ.
ಎಲ್ಲಾ ಕ್ರಿಮಿನಲ್ ಕೆಲಸಗಳ ಮಾಸ್ಟರ್ ಮೈಂಡ್ ಚಂದ್ರಕಾ ಅಂತ ಕೌಶಿಕ್ ಎಲ್ಲರ ಮುಂದೆ ಬಾಯ್ಬಿಟ್ಟಿದ್ದಾನೆ. ಅಲ್ಲಿಗೆ 'ಚಂದ್ರಿಕಾ ಗರ್ವಭಂಗ' ಆದ ಹಾಗೆ ತಾನೇ ಲೆಕ್ಕ.! ಮುಂದೆ ಓದಿರಿ...

ಕೌಶಿಕ್ ಬಣ್ಣ ಬಯಲು
ಸುಳ್ಳು ಹೇಳಿ ಅಂಜಲಿಯನ್ನ ಪ್ರೀತಿಸಿ, ಆಕೆಗೆ ಮೋಸ ಮಾಡಿ ಮದುವೆಯಾಗಲು ಮುಂದಾಗಿದ್ದ ಕೌಶಿಕ್ ಬಣ್ಣ ಮದುವೆ ಮಂಟಪದಲ್ಲಿ ಬಯಲಾಯಿತು. ಕೌಶಿಕ್ ಹಿನ್ನಲೆಯನ್ನು ತೇಜಸ್ ಎಳೆಎಳೆಯಾಗಿ ಬಹಿರಂಗಪಡಿಸಿದನು. ಹೀಗಾಗಿ ಅಂಜಲಿ ಮದುವೆ ಮುರಿದುಬಿತ್ತು.

ಚಂದ್ರಿಕಾಗೆ ಶಾಕ್
ಇಷ್ಟು ದಿನ ಎಲ್ಲರನ್ನೂ ಬುಗುರಿಯ ಹಾಗೆ ಆಡಿಸುತ್ತಿದ್ದ ಚಂದ್ರಿಕಾ ಬುಡಕ್ಕೆ ಈಗ ಬೆಂಕಿ ಬಿದ್ದಿದೆ. ತೇಜಸ್ ಮತ್ತು ಕೌಶಿಕ್ ಸತ್ಯ ಕಕ್ಕಿದ ಮೇಲೆ ಎಲ್ಲಿ ಜೈಲು ಪಾಲಾಗುತ್ತೇನೋ ಎಂದು ಹೆದರಿ ಚಂದ್ರಿಕಾ ಗೊಳೋ ಎಂದು ಕಣ್ಣೀರಿಟ್ಟಳು.

ಆಘಾತಗೊಂಡ ಕುಟುಂಬ
ಚಂದ್ರಿಕಾಳ ಕೆಟ್ಟ ಬುದ್ಧಿ ಮತ್ತು ಕ್ರಿಮಿನಲ್ ಮೈಂಡ್ ಬಗ್ಗೆ ಗೊತ್ತಾದ್ಮೇಲೆ ಇಡೀ ಕುಟುಂಬಕ್ಕೆ ಆಘಾತವಾಯಿತು. ಮದುವೆಯನ್ನ ಅರ್ಧಕ್ಕೆ ಮೊಟಕುಗೊಳಿಸಿ ಫ್ಯಾಮಿಲಿ ಮನೆಗೆ ಹಿಂದಿರುಗಿದರೆ, ಸಿದ್ದಾರ್ಥ್ ಮಾತ್ರ ಚಂದ್ರಿಕಾಳನ್ನು ಹುಡುಕಿಕೊಂಡು ಹೊರಟನು.
ತಾಳ್ಮೆ ಪರೀಕ್ಷಿಸುತ್ತಿರುವ 'ಅಗ್ನಿಸಾಕ್ಷಿ' ನೋಡಿ ನೋಡಿ ರೋಸಿ ಹೋದ ವೀಕ್ಷಕರು.!

ತಪ್ಪೊಪ್ಪಿಕೊಳ್ಳುತ್ತಾಳಾ ಚಂದ್ರಿಕಾ.?
ಈಗಲಾದರೂ ಚಂದಿಕಾ ತಪ್ಪೊಪ್ಪಿಕೊಳ್ಳುತ್ತಾಳಾ..? ಅಥವಾ ಬೇರೆ ಏನಾದರೂ ಪ್ಲಾನ್ ಮಾಡಿ ತಪ್ಪಿಸಿಕೊಳ್ಳುತ್ತಾಳಾ.? ಅಂತ ಇಂದಿನ ಸಂಚಿಕೆಯಲ್ಲಿ ಕಾದು ನೋಡಬೇಕು. ಒಟ್ನಲ್ಲಿ ಇಷ್ಟು ದಿನಗಳ ನಂತರ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಇಂತಹ ತಿರುವು ಸಿಕ್ಕಿರುವುದಕ್ಕೆ ವೀಕ್ಷಕರಂತೂ ಫುಲ್ ಖುಷಿಯಾಗಿದ್ದಾರೆ.


Click it and Unblock the Notifications











