»   » ತಾಳ್ಮೆ ಪರೀಕ್ಷಿಸುತ್ತಿರುವ 'ಅಗ್ನಿಸಾಕ್ಷಿ' ನೋಡಿ ನೋಡಿ ರೋಸಿ ಹೋದ ವೀಕ್ಷಕರು.!

ತಾಳ್ಮೆ ಪರೀಕ್ಷಿಸುತ್ತಿರುವ 'ಅಗ್ನಿಸಾಕ್ಷಿ' ನೋಡಿ ನೋಡಿ ರೋಸಿ ಹೋದ ವೀಕ್ಷಕರು.!

Posted By:
Subscribe to Filmibeat Kannada
ತಾಳ್ಮೆ ಪರೀಕ್ಷಿಸುತ್ತಿರುವ ಅಗ್ನಿಸಾಕ್ಷಿ | agnisakshi is checking audiences patience |Filmibeat Kannada

ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಅಗ್ನಿಸಾಕ್ಷಿ' ಧಾರಾವಾಹಿ ಶುರುವಾಗಿ ವರ್ಷಗಳೇ ಉರುಳಿವೆ. ಐದು ವರ್ಷಗಳಿಂದ ಸಿದ್ಧಾರ್ಥ್-ಸನ್ನಿಧಿ ರೋಮ್ಯಾನ್ಸ್ ಹಾಗೂ ಚಂದ್ರಿಕಾ ಕುತಂತ್ರವನ್ನ ನೋಡುತ್ತ ಬಂದಿರುವ ವೀಕ್ಷಕರಿಗೆ ಇತ್ತೀಚಿನ ದಿನಗಳಲ್ಲಿ 'ಅಗ್ನಿಸಾಕ್ಷಿ' ಕಂಡ್ರೆ ಕಿರಿಕಿರಿ ಆಗುತ್ತಿದೆ.

ಸೀರಿಯಲ್ ನ ಬೇಗ ಮುಗಿಸುವುದು ಬಿಟ್ಟು, ರಬ್ಬರ್ ಎಳೆದಂತೆ ಎಳೆಯುತ್ತಿರುವ 'ಅಗ್ನಿಸಾಕ್ಷಿ' ಕಥೆ ವೀಕ್ಷಕರ ತಾಳ್ಮೆ ಪರೀಕ್ಷಿಸುತ್ತಿದೆ. ವಾಸ್ತವಕ್ಕೆ ತೀರಾ ದೂರವಾಗಿರುವ ತಿರುವುಗಳು, ಸಿಲ್ಲಿ ಟ್ವಿಸ್ಟ್ ಗಳು, ಬೇಡದ ಸನ್ನಿವೇಶಗಳನ್ನು ನೋಡಿ ನೋಡಿ ವೀಕ್ಷಕರು ರೋಸಿ ಹೋಗಿದ್ದಾರೆ.

'ಅಗ್ನಿಸಾಕ್ಷಿ' ಧಾರಾವಾಹಿ ಮುಗಿಸಿದ್ರೆ ಸಾಕು ಎಂದು ಕಲರ್ಸ್ ಕನ್ನಡ ವಾಹಿನಿ ಹಾಗೂ ಸೀರಿಯಲ್ ನಿರ್ದೇಶಕರ ಬಳಿ ವೀಕ್ಷಕರು ಫೇಸ್ ಬುಕ್ ನಲ್ಲಿ ಮನವಿ ಮಾಡ್ತಿದ್ದಾರೆ. ಅಂತಹ ಕೆಲವು ಕಾಮೆಂಟ್ ಗಳು ಇಲ್ಲಿವೆ, ನೋಡಿರಿ....

ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಧಾರಾವಾಹಿ

''ಸತ್ವವಿಲ್ಲದ ಹಾಗೂ ತೀರಾ ಎಳೆದಂತೆ ಭಾಸವಾಗುವ ಸಂಚಿಕೆಗಳಿಂದ 'ಅಗ್ನಿಸಾಕ್ಷಿ' ಧಾರಾವಾಹಿ ದಿನೇ ದಿನೇ ಜನಪ್ರಿಯತೆ ಕಳೆದುಕೊಳ್ಳುತ್ತಿದೆ'' ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

'ಅಗ್ನಿಸಾಕ್ಷಿ'ಯಲ್ಲಿ ರೋಚಕ ಟ್ವಿಸ್ಟ್: ತಾಯಿಯ ಕೈ ಸೇರಿದ ಆಯುಷಿ.!

ಕಾಮನ್ ಸೆನ್ಸ್ ಇಲ್ಲ!

''ಕಥೆಯನ್ನ ಮುಂದಕ್ಕೆ ತೆಗೆದುಕೊಂಡು ಹೋಗುವುದರ ಬಗ್ಗೆ 'ಅಗ್ನಿಸಾಕ್ಷಿ' ನಿರ್ದೇಶಕರಿಗೆ ಕಾಮನ್ ಸೆನ್ಸ್ ಇಲ್ಲ. ತುಂಬಾ ಸಿಲ್ಲಿ ಆಗಿದೆ. ಸಿದ್ಧಾರ್ಥ್ ದೊಡ್ಡ ಬಿಸಿನೆಸ್ ಮ್ಯಾನ್ ಅಂತಾರೆ. ಆದ್ರೆ, ಅವರ ಮನೆಯಲ್ಲಿ ಸಿಸಿಟಿವಿ ಇಲ್ಲ. ಹೊರಗೆ ಸೆಕ್ಯೂರಿಟಿ ಇಲ್ಲ. ಈ ನಾನ್ ಸೆನ್ಸ್ ನ ದಯವಿಟ್ಟು ನಿಲ್ಲಿಸಿ'' ಅಂತಿದ್ದಾರೆ ವೀಕ್ಷಕರು.

ವೀಕ್ಷಕರ ಕೋರಿಕೆ ಕೇಳಿ...

''ಅಂಜಲಿ ಗೂ ಕೌಶಿಕ್ ಗೂ ಮದುವೆ ಮಾಡಿಸಿ... ಸಿದ್ಧಾರ್ಥ ಬಟ್ಟೆ ಹರ್ಕೊಳ್ಳಿ... ನಾವೆಲ್ಲ ಬೇರೆ ಚಾನೆಲ್ ನೋಡ್ತೀವಿ'' ಅಂತಾವ್ರೆ ವೀಕ್ಷಕರು.

ಹುಚ್ಚು ಹಿಡಿಯುವ ಮುಂಚೆ

''ಅಗ್ನಿಸಾಕ್ಷಿ' ಸೀರಿಯಲ್ ನೋಡಿ ಹುಚ್ಚು ಹಿಡಿಯುವ ಮುಂಚೆ ಬೇರೆ ಚಾನೆಲ್ ನೋಡ್ತೀವಿ'' ಎಂದಿದ್ದಾರೆ ವೀಕ್ಷಕರೊಬ್ಬರು.

ಯಾವಾಗ ಮುಗಿಯುತ್ತೆ.?

'ಅಗ್ನಿಸಾಕ್ಷಿ' ಸೀರಿಯಲ್ ನೋಡ್ತಿರೋರು ಸದ್ಯ ಕೇಳ್ತಿರೋ ಪ್ರಶ್ನೆ ಒಂದೇ - ಸೀರಿಯಲ್ ಯಾವಾಗ ಮುಗಿಯುತ್ತೆ.?

ವರ್ಸ್ಟ್ ಸೀರಿಯಲ್

'ಅಗ್ನಿಸಾಕ್ಷಿ' ದಿನೇ ದಿನೇ ವರ್ಸ್ಟ್ ಸೀರಿಯಲ್ ಆಗ್ತಿದ್ಯಂತೆ. ಹಾಗಂತ ಸೋಷಿಯಲ್ ಮೀಡಿಯಾದಲ್ಲಿ ಜನ ಕಾಮೆಂಟ್ಸ್ ಮಾಡ್ತಿದ್ದಾರೆ.

ದೇವರೇ ಕಾಪಾಡಬೇಕು!

''ಸೀರಿಯಲ್ ಶುರು ಆದಾಗ ಅಂಜಲಿ ಚೈಲ್ಡ್ ಆರ್ಟಿಸ್ಟ್ ಆಗಿದ್ಲು. ಈಗ ಮದುವೆ ವಯಸ್ಸು ಆಗಿದೆ. ಆದ್ರೆ, ಧಾರಾವಾಹಿ ಮಾತ್ರ ಇನ್ನೂ ಮುಗಿದಿಲ್ಲವಲ್ಲ. ದೇವರೇ ಕಾಪಾಡಬೇಕು'' - ಲೋಕೇಶ್

ಅಣು ಬಾಂಬ್ ಹಾಕಿ

''ಅಗ್ನಿಸಾಕ್ಷಿ' ಸೀರಿಯಲ್ ಶೂಟಿಂಗ್ ನಡೆಯುವ ಕಡೆ ಅಣು ಬಾಂಬ್ ಹಾಕ್ರಪ್ಪ ಯಾರಾದರೂ'' ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಚೂಯಿಂಗ್ ಗಮ್ ತರಹ ಎಳೆಯಬೇಡಿ

''ಚೂಯಿಂಗ್ ಗಮ್ ತರಹ ಎಳೆಯದೆ, ಸೀರಿಯಲ್ ನ ಬೇಗ ಮುಗಿಸಿ'' ಎಂಬುದೇ ವೀಕ್ಷಕರ ಕೋರಿಕೆ ಆಗಿದೆ

ನಿಮ್ಮ ಅಭಿಪ್ರಾಯ ಏನು.?

ನೀವು 'ಅಗ್ನಿಸಾಕ್ಷಿ' ಸೀರಿಯಲ್ ನೋಡ್ತೀರಾ.? ಸೀರಿಯಲ್ ಕಥೆ ಸಾಗುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

English summary
Colors Kannada Channel viewers have taken their Facebook account to express their displeasure against 'Agnisakshi' serial.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X