ಕಾಫಿ ನಾಡಿನಲ್ಲೊಂದು ನಿಗೂಢ ಕೊಲೆ, ಕಂಪ್ಯೂಟರ್, ಪೋಸ್ಟ್ ಮ್ಯಾನ್, ಇಂಟರ್ನೆಟ್.. ಕೊಲೆಗಾರ ಯಾರು?
ಈ ವರ್ಷ ಕನ್ನಡದಲ್ಲಿ ಕೆಲವು ಸಿನಿಮಾಗಳು ಗಮನ ಸೆಳೆದಿವೆ. ಕೆಲವು ಸಿನಿಮಾಗಳು ಚಿತ್ರಮಂದಿರಗಳಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡದೇ ಹೋದರೂ, ಓಟಿಟಿಯಲ್ಲಿ ಗದ್ದಲ ಎಬ್ಬಿಸಿವೆ. ವೀಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಅಂತಹ ಸಿನಿಮಾಗಳಲ್ಲಿ ಒಂದು ಹೇಮಂತ್ ರಾವ್ ನಿರ್ಮಾಣ ಮಾಡಿದ ಮಿಸ್ಟರಿ- ಥ್ರಿಲ್ಲರ್ ಸಿನಿಮಾ 'ಅಜ್ಞಾತವಾಸಿ'.
'ಅಜ್ಞಾತವಾಸಿ' ಪಕ್ಕಾ ಕಂಟೆಂಟ್ ಓರಿಯೆಂಟೆಡ್ ಸಿನಿಮಾ. ಅದರಲ್ಲೂ ಥ್ರಿಲ್ಲರ್, ಸಸ್ಪೆನ್ಸ್ ಅನ್ನು ಇಷ್ಟ ಪಡುವವರಿಗೆ ಈ ಸಿನಿಮಾ ಇಷ್ಟ ಆಗಿತ್ತು. ಕನ್ನಡ ಸಿನಿಪ್ರೇಮಿಗಳಿಗೂ ವಿಭಿನ್ನ ಪ್ರಕಾರದ ಸಿನಿಮಾಗಳು ಬೇಕಿದೆ. ರೆಗ್ಯೂಲರ್ ಹೊಡಿ, ಬಡಿ, ಕಡಿ ಸಿನಿಮಾಗಳನ್ನು ನೋಡುವುದನ್ನು ಬಹುತೇಕ ಕಡಿಮೆ ಮಾಡಿದ್ದಾರೆ. ಅದಕ್ಕೆ ಈ ಸಿನಿಮಾ ತೆರೆಕಂಡಾಗಲೂ ಜನರಿಂದ ಒಳ್ಳೆಯ ಅಭಿಪ್ರಾಯವೇ ಸಿಕ್ಕಿತ್ತು. ಆದರೆ, ಥಿಯೇಟರ್‌ನಲ್ಲಿ ಹೆಚ್ಚು ದಿನ ಸದ್ದು ಮಾಡುವುದಕ್ಕೆ ಸಾಧ್ಯವಾಗಲಿಲ್ಲ.

ಆದರೆ, 'ಅಜ್ಞಾತವಾಸಿ' ಓಟಿಟಿಯಲ್ಲಿ ವೀಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿ ಆಯ್ತು. ಓಟಿಟಿಯಲ್ಲಿ ವೀಕ್ಷಕರ ಮೆಚ್ಚುಗೆ ಗಳಿಸಿದ ಬಳಿಕ ಈಗ ಕಿರುತೆರೆಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ. ಜೀ ಕನ್ನಡದಲ್ಲಿ 'ಅಜ್ಞಾತವಾಸಿ' ಸಿನಿಮಾ ಇದೇ ಮೊದಲ ಬಾರಿಗೆ ಪ್ರಸಾರವಾಗಿತ್ತಿದೆ. ಯಾರೆಲ್ಲ ಈ ಸಿನಿಮಾವನ್ನು ನೋಡುವುದನ್ನು ಮಿಸ್ ಮಾಡಿಕೊಂಡಿದ್ದಿರೋ ಅಂತಹವರಿಗೆ ಮತ್ತೊಂದು ಅವಕಾಶ ಸಿಗಲಿದೆ.
ಜೀ ಕನ್ನಡ 'ಅಜ್ಞಾತವಾಸಿ' ಸಿನಿಮಾವನ್ನು ಖರೀದಿ ಮಾಡಿತ್ತು. ಈಗಾಗಲೇ ತನ್ನ ವಾಹಿನಿಯಲ್ಲಿ ಹಲವು ಹಿಟ್ ಸಿನಿಮಾಗಳನ್ನು ಪ್ರಸಾರ ಮಾಡಿ ವೀಕ್ಷಕರ ಮೆಚ್ಚುಗೆ ಗಳಿಸಿದೆ. ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂಲಕ ವೀಕ್ಷಕರನ್ನು ವೀಕೆಂಡ್ ಹಾಗೂ ವಿಶೇಷ ಸಂದರ್ಭಗಳಲ್ಲಿ ಮನರಂಜನೆಯನ್ನು ದುಪ್ಪಟ್ಟು ಮಾಡಿದೆ. ಈಗ ಮತ್ತೊಂದು ಸಿನಿಮಾ ಮೂಲಕ ವೀಕ್ಷಕರನ್ನು ರಂಜಿಸುವುದಕ್ಕೆ ಮುಂದಾಗಿದೆ.
ಕಿರುತೆರೆಯಲ್ಲೇ ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡದ ಹಿರಿಯ ನಟ ರಂಗಾಯಣ ರಘು ನಟಿಸಿರುವ ಮಿಸ್ಟರಿ-ಥ್ರಿಲ್ಲರ್ ಸಿನೆಮಾ 'ಅಜ್ಞಾತವಾಸಿ' ಪ್ರಸಾರವಾಗಿತ್ತಿದೆ. ಜೀ಼ ಕನ್ನಡ ಈ ಮರ್ಡರ್ ಮಿಸ್ಟರಿಯನ್ನು ವೀಕೆಂಡ್‌ನಲ್ಲಿ ಪ್ರಸಾರ ಮಾಡುವ ಮೂಲಕ ಜನರಿಗೆ ಮನರಂಜನೆ ನೀಡುವುದಕ್ಕೆ ಸಜ್ಜಾಗಿದೆ. 'ಅಜ್ಞಾತವಾಸಿ' ಪಾತ್ರಧಾರಿಗಳ ಅತ್ಯುತ್ತಮ ಅಭಿನಯ, ಅಮೋಘವಾದ ಕ್ಯಾಮರಾ ವರ್ಕ್ ಜನರ ಮನ ಸೆಳೆಯುವುದರಲ್ಲಿ ಎರಡು ಮಾತಿಲ್ಲ.
ಇನ್ನು 'ಅಜ್ಞಾತವಾಸಿ'ಯ ಕಥೆ ಕಡೆಗೆ ಬರೋದಾರೆ, ಕಾಫಿ ನಾಡಿನ ದಟ್ಟವಾದ ಕಾಡಿಗೊಂದು ಪೊಲೀಸ್ ಸ್ಟೇಷನ್. ಆ ಊರಿಗೆ ಪೊಲೀಸ್ ಸ್ಟೇಷನ್ ಬಂದು 25 ವರ್ಷ ಆಗಿದ್ದರೂ, ಒಂದೇ ಒಂದು ಕೇಸ್ ಕೂಡ ಈ ಪೊಲೀಸ್ ಠಾಣೆಯ ಮೆಟ್ಟಿಲು ಏರಿಲ್ಲ. ಕೊಲೆ ಸುಲಿಗೆ ಇರಲಿ, ಚಿಕ್ಕ ಪುಟ್ಟ ಕೇಸ್ ಕೂಡ ಬಂದಿಲ್ಲ. ಹೀಗಾಗಿರುವಾಗ ಒಂದು ದಿನ ಆ ಎಸ್ಟೇಟ್ ಮಾಲೀಕನ ಕೊಲೆ ನಡೆದು ಹೋಗುತ್ತೆ. ಅವನ ಮಗ ಮನೆ ಬಿಟ್ಟು ಹೋಗಿರುತ್ತಾನೆ. ಮಾಲೀಕನಿಗೆ ಸಾಯುವ ವಯಸ್ಸಾಗಿದ್ದರೂ, ಇದು ಸಹಜ ಸಾವು ಅಲ್ಲ ಎಂದು ಪೊಲೀಸರಿಗೆ ತಿಳಿಯುತ್ತೆ. ಇಲ್ಲಿಂದ ತನಿಖೆ ಆರಂಭ ಕೊಲೆ ಮಾಡಿದವರು ಯಾರು? ಕಂಪ್ಯೂಟರ್, ಪೋಸ್ಟ್ ಮ್ಯಾನ್, ಇಂಟರ್ನೆಟ್ ಈ ಕಥೆಯಲ್ಲಿ ಹೇಗೆ ಹೊಂದಿಕೊಂಡಿವೆ? ಅನ್ನೋದೇ ಕಥೆ.
'ಶಾಖಾಹಾರಿ' ಬಳಿಕ ರಂಗಾಯಣ ರಘು ಮತ್ತೊಂದು ಅದ್ಭುತ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಈ ಸಿನಿಮಾದಲ್ಲಿ ರಂಗಾಯಣ ರಘು ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಕಥೆಯಲ್ಲಿ ರಂಗಾಯಣ ರಘು ಅವರ ಪಾತ್ರವೇ ಹೈಲೈಟ್. ಸಿದ್ದು ಮೂಲಿಮನಿ ಅವರು ಊರಿನ ಎಲ್ಲರ ಪಾತ್ರವನ್ನು ಇಮೇಲ್ ಮಾಡುವ ರೋಹಿತ್ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೇ ಪಾವನ ಗೌಡ ಬಹಳ ದಿನಗಳ ಬಳಿಕ ಗಮನ ಸೆಳೆಯುವ ಪಾತ್ರದಲ್ಲಿ ನಟಿಸಿದ್ದಾರೆ. ಪಂಕಜಾ ಪಾತ್ರದಲ್ಲಿ ಎಲ್ಲರಿಗೂ ಇಷ್ಟ ಆಗುತ್ತಾರೆ. ಇವುಗಳೊಂದಿಗೆ ಗುರುಮೂರ್ತಿ ಅವರ ಅದ್ಭುತ ಕ್ಯಾಮರಾ ವರ್ಕ್ ವೀಕ್ಷಕರಿಗೆ ಇಷ್ಟ ಆಗುತ್ತೆ. ಈ ಸಿನಿಮಾ ಇನ್ನೂ ಸಿನಿಮಾ ನೋಡಿದವರಿಗೆ ಕೆಲವು ಪ್ರಶ್ನೆಗಳನ್ನು ಹುಟ್ಟಾಕುತ್ತೆ. ಅವುಗಳೆಂದರೆ, ಕೊಲೆ ಮಾಡಿದವರು ಯಾರು? ಅರುಣನ ಪ್ರೇಮ ಯಶಸ್ಸು ಕಾಣುತ್ತಾ? ಕಂಪ್ಯೂಟರ್, ಪೋಸ್ಟ್ ಮ್ಯಾನ್, ಇಂಟರ್ನೆಟ್‌ಗಳ ಪಾತ್ರವೇನು? ರಂಗಾಯಣ ರಘು ಮತ್ತೆ ಟ್ವಿಸ್ಟ್ ಕೊಡುತ್ತಾರಾ? ಇವೆಲ್ಲದಕ್ಕೂ ಇದೇ ಭಾನುವಾರ ಸಂಜೆ 3:30 ಕ್ಕೆ ಜೀ಼ ಕನ್ನಡದಲ್ಲಿ ಉತ್ತರ ದೊರಕಲಿದೆ.


Click it and Unblock the Notifications











