ಜನ್ಮದಿನ ಆಚರಿಸಿಕೊಂಡ ಎರಡೇ ದಿನಕ್ಕೆ ಹೃದಯಾಘಾತಕ್ಕೆ ಬಲಿಯಾದ ಯುವ ನಟ
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಸಂಬಂಧಿ, ಹಿಂದಿ ಕಿರುತೆರೆ ನಟ ಸಚಿನ್ ಕುಮಾರ್ ಶುಕ್ರವಾರ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
Recommended Video
ಏಕ್ತಾ ಕಪೂರ್ ನಿರ್ಮಾಣದ ಜನಪ್ರಿಯ ಧಾರಾವಾಹಿ 'ಕಹಾನಿ ಘರ್ ಘರ್ ಕಿ' ಧಾರಾವಾಹಿಯಿಂದ ಅವರು ಹೆಚ್ಚು ಖ್ಯಾತಿ ಗಳಿಸಿದ್ದರು. ಈ ಧಾರಾವಾಹಿಯ ಬಳಿಕ ಅವರು ಕಿರುತೆರೆಯಿಂದ ದೂರವುಳಿದಿದ್ದರು. ಬಳಿಕ ಛಾಯಾಗ್ರಾಹಕರ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ನಟ ಅಕ್ಷಯ್ ಕುಮಾರ್ ಅವರಿಗೆ ಹತ್ತಿರದ ಸಂಬಂಧಿಯಾಗಿದ್ದ ಸಚಿನ್, ಅಕ್ಷಯ್ ಆಪ್ತ ವಲಯದಲ್ಲಿದ್ದರು. ಸಚಿನ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಅಕ್ಷಯ್ ಕುಮಾರ್ ಮತ್ತು ಅವರ ತಾಯಿ ಸಚಿನ್ ನಿವಾಸಕ್ಕೆ ದೌಡಾಯಿಸಿದ್ದರು.
ಕಿರುತೆರೆ ಮತ್ತು ಚಿತ್ರರಂಗದ ಅನೇಕ ಆತ್ಮೀಯರು ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಮುಂದೆ ಓದಿ...

ಬುಧವಾರವಷ್ಟೇ ಹುಟ್ಟುಹಬ್ಬ
ಇನ್ನೂ ದುರಂತವೆಂದರೆ ಸಚಿನ್ ಕುಮಾರ್ ಅವರು ಸಾಯುವ ಎರಡು ದಿನಗಳ ಮುಂದೆಯಷ್ಟೇ, ಅಂದರೆ ಮೇ 13ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ಸಂಭ್ರಮದಲ್ಲಿ ಇರುವಾಗಲೇ ಹೃದಯಾಘಾತಕ್ಕೆ ಅವರು ಬಲಿಯಾಗಿದ್ದಾರೆ. ಅವರ ಸಾವಿನ ಕುರಿತು ಹೆಚ್ಚಿನ ಮಾಹಿತಿ ದೊರಕಿಲ್ಲ.

ಸೀಲ್ ಡೌನ್ ಮಾಡಲಾಗಿತ್ತು
ಸಚಿನ್ ಮುಂಬೈನ ಒಬೆರಾಯ್ ಸ್ಪಿಂಗ್ಸ್‌ನಲ್ಲಿ ವಾಸವಿದ್ದರು. ಬಾಲಿವುಡ್ ಸ್ಟಾರ್‌ಗಳಾದ ವಿಕ್ಕಿ ಕೌಶಾಲ್, ರಾಜಕುಮಾರ್ ರಾವ್, ಪತ್ರಲೇಖ, ಚಿತ್ರಾಂಗದಾ ಸೇನ್ ಹಾಗೂ ಇನ್ನೂ ಅನೇಕರು ಕೂಡ ನೆಲೆಸಿದ್ದಾರೆ. ಕಳೆದ ತಿಂಗಳು ಇಲ್ಲಿನ ಬಾಲಕಿಯೊಬ್ಬಳಿಗೆ ಕೊರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ಸೊಸೈಟಿಯನ್ನು ಸೀಲ್ ಡೌನ್ ಮಾಡಲಾಗಿತ್ತು. ವೈರಸ್‌ನಿಂದ ಚೇತರಿಸಿಕೊಂಡಿದ್ದ ಬಾಲಕಿ ಕಳೆದ ವಾರ ಹಿಂದಿರುಗಿದ್ದಳು.

ಪಕೋಡಾ ನೋಡಿದಾಗ ನೆನಪಾಗುತ್ತಾರೆ
ಸಚಿನ್ ಅವರ ಸ್ನೇಹಿತ, ಕಿರುತೆರೆ ನಟ ರಾಕೇಶ್ ಪೌಲ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ನಾವು ಒಂದೇ ಪ್ರದೇಶದಲ್ಲಿದ್ದವರು. ಸಹೋದರರಂತೆ ಇದ್ದೆವು. ನಾವು ಭೇಟಿಯಾದಾಗಲೆಲ್ಲಾ ನಮಗೆ ಪಕೋಡಾ ಮಾಡಿಕೊಡುತ್ತಿದ್ದರು. ಜೀವನ ನಿಜಕ್ಕೂ ಊಹಿಸಲಾಗದ್ದು. ಮುಂದೆ ಸ್ನ್ಯಾಕ್ಸ್ ತಿನ್ನುವಾಗ, ಅದರಲ್ಲಿಯೂ ಪಕೋಡಾ ತಿನ್ನುವಾಗ ನನ್ನ ಆತ್ಮೀಯ ಸ್ನೇಹಿತ ಮತ್ತೆ ನೆನಪಾಗದೆ ಇರಲಾರ ಎಂದು ದುಃಖ ವ್ಯಕ್ತಪಡಿಸಿದ್ದಾರೆ.


Click it and Unblock the Notifications











