ಮೇಘನಾ ರಾಜ್ ಬಾಯ್‌ ಫ್ರೆಂಡ್ ಬಗ್ಗೆ ನಿಮಗೆ ತಿಳಿದಿರದ ವಿಷಯ ಇದು..

By Suneel

ಸ್ಯಾಂಡಲ್ ವುಡ್ ನಟ-ನಟಿಯರ ಬಾಯ್ ಫ್ರೆಂಡ್ ಮತ್ತು ಗರ್ಲ್ ಫ್ರೆಂಡ್ ಯಾರು ಎಂದು ತಿಳಿದುಕೊಳ್ಳುವ ಕುತೂಹಲದಲ್ಲಿಯೇ ಒಂದು ರೀತಿಯ ಮಜಾ ಇರುತ್ತೆ. ಇಂತಹ ವಿಷಯಗಳ ಬಗ್ಗೆ ಯಾರಾದ್ರು ಮಾತ್ನಾಡ್‌ತಿದ್ರೆ ಅಲ್ಲಿರುವ ಎಲ್ಲರ ಕಿವಿ ನೆಟ್ಟಗಾಗಿರುತ್ತವೆ. ಅಂತಹದೊಂದು ವಿಷಯವನ್ನು ಇಂದು ನಿಮಗೆ ತಿಳಿಸುತ್ತಿದ್ದೇವೆ.[ನಟಿ ರಾಗಿಣಿ ದ್ವಿವೇದಿ 'ಸ್ಪೆಷಲ್ ಫ್ರೆಂಡ್' ಗುಟ್ಟು-ರಟ್ಟು]

ಅಂದಹಾಗೆ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಅಕುಲ್ ಬಾಲಾಜಿ, ನಟಿ ಮೇಘನಾ ರಾಜ್ ರವರ ಬಾಯ್ ಫ್ರೆಂಡ್ ಬಗ್ಗೆ ರಿವೀಲ್ ಮಾಡಿದ್ದಾರೆ. ಮೇಘನಾ ರಾಜ್ ರವರ ದಿನ ಶುರುವಾಗುವುದೇ ಈ ಬಾಯ್ ಫ್ರೆಂಡ್ ಇಂದ ಅಂತೇ..! ಅಲ್ಲದೇ ಈ ಬಾಯ್ ಫ್ರೆಂಡ್ ಅನ್ನು ಅವರು ಒಂದು ದಿನವು ಸಹ ಬಿಟ್ಟಿರುವುದಿಲ್ಲವಂತೆ. ಆ ಬಾಯ್ ಫ್ರೆಂಡ್ ಯಾರು ತಿಳಿದುಕೊಳ್ಳೋ ಕೂತೂಹಲ ಇರುವವರು ಹೆಚ್ಚು ಸರ್‌ಪ್ರೈಸ್ ಆಗುವ ಮೊದಲು ಮುಂದೆ ಓದಿ..

ಅಕುಲ್ ರಿವೀಲ್ ಮಾಡಿದ ಆ ಬಾಯ್ ಫ್ರೆಂಡ್ ಯಾರು?

ಅಕುಲ್ ರಿವೀಲ್ ಮಾಡಿದ ಆ ಬಾಯ್ ಫ್ರೆಂಡ್ ಯಾರು?

ಮೇಘನಾ ರಾಜ್ ಬಾಯ್ ಫ್ರೆಂಡ್ ಎಂದ ತಕ್ಷಣ ನೀವೆಲ್ಲಾ ಯಾರಾದರೂ ನಟರಿರಬಹುದು ಅಂದುಕೊಳ್ಳಬೇಡಿ. ಯಾಕಂದ್ರೆ ಅಕುಲ್ ಬಾಲಾಜಿ 'ಸೂಪರ್ ಟಾಕ್ ಟೈಮ್' ನಲ್ಲಿ ಮೇಘನಾ ರಾಜ್ ಬಾಯ್ ಫ್ರೆಂಡ್ ಎಂದು ರಿವೀಲ್ ಮಾಡಿರುವುದು ನಟಿ ಸಾಕಿರುವ ಮಿಸ್ಟರ್ ಬ್ರುನೋ ಎಂಬ ನಾಯಿಯನ್ನು.

ಮೇಘನಾ ರಾಜ್ ಶ್ವಾನ ಪ್ರೇಮಿ

ಮೇಘನಾ ರಾಜ್ ಶ್ವಾನ ಪ್ರೇಮಿ

ಮೇಘನಾ ರಾಜ್ ಅವರಿಗೆ ಡಾಗ್ ಎಂದರೇ ತುಂಬಾ ಪ್ರೀತಿ. ಅವರು ಸಾಕಿರುವ ಬ್ರುನೋ ಎಂಬ ಶ್ವಾನವನ್ನು ಪ್ರೀತಿಯಿಂದ ಬ್ರೂಂಜಿ ಎಂತಲು ಕರೆಯುತ್ತಾರೆ. ಅವರು ಸಾಕಿರುವ ಮುದ್ದಿನ ಬ್ರೂನೋ 80 ಕೆ.ಜಿ ತೂಕವಿದ್ದು, ಅದಕ್ಕೆ ಐದೂವರೆ ವರ್ಷ ತುಂಬಿದೆಯಂತೆ.

ಅಕುಲ್ ಗೆ ಕಿಸ್ ಮಾಡಿದ ಬ್ರೂನೋ

ಅಕುಲ್ ಗೆ ಕಿಸ್ ಮಾಡಿದ ಬ್ರೂನೋ

ನಟಿ ಮೇಘನಾ ರಾಜ್ ಪ್ರೀತಿಯ ಬಾಯ್ ಫ್ರೆಂಡ್ ಬ್ರುನೋ ಡಾಗ್ ಅನ್ನು 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮಕ್ಕೆ ಕರೆತರಲಾಗಿತ್ತು. ಆ ವೇಳೆ ಬ್ರೂನೋ ಅಕುಲ್ ಬಾಲಾಜಿಗೂ ಕಿಸ್ ಮಾಡಿತು.

ಮೇಘನಾ ರಾಜ್ ಮನೆಗೆ ಬ್ರೂನೋ ಬಂದ ಕತೆ

ಮೇಘನಾ ರಾಜ್ ಮನೆಗೆ ಬ್ರೂನೋ ಬಂದ ಕತೆ

"ನಮ್ಮ ಮನೇಲಿ ಆಶಾ ಎಂಬ ಡಾಗ್ ಇತ್ತು. ಅದು ಮರಿಹಾಕಿದ ಮೇಲೆ ಹೆಚ್ಚು ದಿನ ಉಳಿಯಲಿಲ್ಲ. ನಂತರ ಅದರ ಒಂದು ಮರಿ ಇತ್ತು. ಅದು ಒಂಟಿಯಾದ ಮೇಲೆ ಸರಿಯಾಗಿ ಊಟ ತಿನ್ನುತ್ತಿರಲಿಲ್ಲ. ಬೇಜಾರಿನಲ್ಲಿತ್ತು. ಸೋ ಆಗ ಬ್ರೂನೋ ತಂದ್ವಿ" ಮೇಘನಾ ರಾಜ್, ನಟಿ

More from Filmibeat

English summary
Akul Balaji revealed Meghana raj pet dog Brono as her boy friend in Colors Super channel 'Super Talk Time' Program.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X