For Quick Alerts
  ALLOW NOTIFICATIONS  
  For Daily Alerts

  ನಟಿ ರಾಗಿಣಿ ದ್ವಿವೇದಿ 'ಸ್ಪೆಷಲ್ ಫ್ರೆಂಡ್' ಗುಟ್ಟು-ರಟ್ಟು

  By Suneel
  |

  ಸೆಲೆಬ್ರಿಟಿಗಳ ಪರ್ಸನಲ್ ಲೈಫ್ ಹೇಗಿರುತ್ತೇ ಅನ್ನೋ ಕುತೂಹಲ ಎಲ್ಲರಿಗೂ ಕಾಡುತ್ತೆ. ಸಿನಿಮಾದಲ್ಲಿ ಪಟ ಪಟ ಅಂತ ಮಾತಾಡೋ ತಾರೆಯರು ಕಾಮನ್ ಆಗಿ ಯಾವುದೇ ಫಿಲ್ಟರ್ ಇಲ್ಲದೇ ಹೇಗ್ ಮಾತ್ನಾಡ್‌ತಾರೆ ಎಂಬುದನ್ನು ತಿಳಿಯುವ ಆಸೆ ಎಲ್ಲರಿಗೂ ಖಂಡಿತ ಇದ್ದೇ ಇರುತ್ತೆ.

  ಸೆಲೆಬ್ರಿಟಿಗಳು ಸ್ಕ್ರಿಪ್ಟ್ ಇಲ್ಲದೇ ಹೇಗೆಲ್ಲಾ ಕ್ರೇಜಿಯಾಗಿ ಮಾತ್ನಾಡ್‌ತಾರೆ ಅನ್ನೋದನ್ನ ನೋಡ್ ಬೇಕು ಅಂದ್ರೆ... ಕೂಲ್ ಕೂಲ್ ಅಕುಲ್ ಬಾಲಾಜಿ ನಡೆಸಿಕೊಡುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮ ನೋಡಲೇಬೇಕು. ಅಂದಹಾಗೆ ಈ ಕಾರ್ಯಕ್ರಮದ ಮೊದಲ ಎಪಿಸೋಡ್ ಗೆ ಅತಿಥಿಯಾಗಿ ಬಂದಿದ್ದ ನಟಿ ರಾಗಿಣಿ ದ್ವಿವೇದಿ ಅವರ ಕುರಿತು ಇಂದು ಒಂದು ಸುದ್ದಿಯನ್ನು ನಿಮಗಾಗಿ ಹೊತ್ತುತಂದಿದ್ದೀವಿ.[ಗೋವಾ ಬೀಚಲ್ಲಿ ಬಿಕಿನಿ ತೊಟ್ಟ ನಟಿ ರಾಗಿಣಿಯ ವಯ್ಯಾರ ನೋಡಿರಣ್ಣೋ..]

  ಅದೇನಂದ್ರೆ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಇದುವರೆಗೂ ಎಲ್ಲೂ ಸಹ ತಮ್ಮ ಜೀವನದ ಸ್ಪೆಷಲ್ ಫ್ರೆಂಡ್ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಆದರೀಗ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ತಮ್ಮ ಲೈಫ್ ನ ವಿಶೇಷ ಗೆಳೆಯನ ಬಗ್ಗೆ ಮಾತನಾಡಿದ್ದಾರೆ. ತುಪ್ಪದ ಬೆಡಗಿ ತಮ್ಮ ಆ ಸೂಪರ್ ಬಾಯ್ ಫ್ರೆಂಡ್ ಬಗ್ಗೆ ಏನು ಹೇಳಿದರು ಇಲ್ಲಿದೆ ನೋಡಿ..

  ಸ್ಪೆಷಲ್ ಫ್ರೆಂಡ್ ಬಗ್ಗೆ ಹೇಳಿ?

  ಸ್ಪೆಷಲ್ ಫ್ರೆಂಡ್ ಬಗ್ಗೆ ಹೇಳಿ?

  'ಸೂಪರ್ ಟಾಕ್ ಟೈಮ್' ಹೋಸ್ಟ್ ಅಕುಲ್ ಬಾಲಾಜಿ ನಟಿ ರಾಗಿಣಿಗೆ ನಿಮ್ಮ ಸ್ಪೆಷಲ್ ಫ್ರೆಂಡ್ ಬಗ್ಗೆ ಹೇಳಿ. ಅವರನ್ನು ಹೇಗೆ ಆಯ್ಕೆ ಮಾಡುದ್ರಿ. ಅವರು ಹೇಗಿರುತ್ತಾರೆ ಎಂಬ ಬಗ್ಗೆ ಕಾರ್ಯಕ್ರಮದಲ್ಲಿ ಪ್ರಶ್ನೆ ಹಾಕಿದ್ದರು. ಇದಕ್ಕೆ ಉತ್ತರಿಸಿದ ನಟಿ ಹೇಳಿದ್ದೇನು ಗೊತ್ತಾ...

  ನನಗೆ ಸ್ಪೆಷಲ್ ಫ್ರೆಂಡ್ ಯಾರು ಇಲ್ಲ?

  ನನಗೆ ಸ್ಪೆಷಲ್ ಫ್ರೆಂಡ್ ಯಾರು ಇಲ್ಲ?

  "ನನ್ನ ಲೈಫ್ ನಲ್ಲಿ ಸ್ಪೆಷಲ್ ಫ್ರೆಂಡ್ ಇಲ್ಲ. ಆದರೆ ಯಾರೋ ಒಬ್ಬರು ಅಂತಹವರು ನನ್ನ ಲೈಫ್ ನಲ್ಲಿ ಇದ್ದಾರೆ" ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ.

  ನನ್ನ ಜೀವನಕ್ಕೆ ಸ್ಟೆಬಿಲಿಟಿ ತಂದಿದ್ದಾರೆ

  ನನ್ನ ಜೀವನಕ್ಕೆ ಸ್ಟೆಬಿಲಿಟಿ ತಂದಿದ್ದಾರೆ

  ಸ್ಪೆಷಲ್ ಫ್ರೆಂಡ್ ಇಲ್ಲ ಎಂದು ಹೇಳುವ ನಟಿ ರಾಗಿಣಿ ಅಂತಹವರು ಯಾರೋ ಒಬ್ಬರು ನನ್ನ ಜೀವನದಲ್ಲಿ ಇದ್ದಾರೆ ಅಂತಲೂ ಹೇಳಿದ್ದಾರೆ. ಅವರ ಬಗ್ಗೆ ಮಾತು ಮುಂದುವರೆಸಿ, "ನನ್ನಲ್ಲಿ ತುಂಬಾ ಮೆಚ್ಯುರಿಟಿ ತಂದಿದ್ದಾರೆ, ನನ್ನ ಲೈಫ್ ನಲ್ಲಿ ತುಂಬಾ ಸ್ಥಿರತೆ(ಸ್ಟೆಬಿಲಿಟಿ) ಕಂಡುಕೊಳ್ಳಲು ಅವರೇ ಕಾರಣ" ಎಂದು ಸಹ ಹೇಳಿದ್ದಾರೆ.

  ಪ್ರತಿಯೊಬ್ಬರ ಲೈಫ್ ನಲ್ಲಿ ಅಂತಹ ಒಬ್ಬರು ಇರಲೇಬೇಕು

  ಪ್ರತಿಯೊಬ್ಬರ ಲೈಫ್ ನಲ್ಲಿ ಅಂತಹ ಒಬ್ಬರು ಇರಲೇಬೇಕು

  "ಒಬ್ಬ ಗೈಡ್ ಆಗಿ, ಫ್ರೆಂಡ್ ಆಗಿ, ಸಪೋರ್ಟ್ ಆಗಿ ನನಗೆ ಇರುವ ಗೆಳೆಯನ ರೀತಿ ಎಲ್ಲರ ವೈಯಕ್ತಿಕ ಜೀವನದಲ್ಲೂ ಯಾರಾದರು ಒಬ್ಬರು ಇರಲೇಬೇಕು. ಜೀವನದಲ್ಲಿ ಸುಖ-ದುಃಖ ಸಾಮಾನ್ಯವಾಗಿ ಇದ್ದೇ ಇರುತ್ತೆ. ಅಂತಹ ಸಮಯಗಳಲ್ಲಿ ಅವುಗಳನ್ನು ಶೇರ್ ಮಾಡಿಕೊಳ್ಳಲು ಯಾರಾದರು ಒಬ್ಬರು ಇರಲೇಕಲ್ಲ" - ರಾಗಿಣಿ ದ್ವಿವೇದಿ, ನಟಿ

  ರಾಗಿಣಿಯವರು ಹೇಳಿದ ಆ ಫ್ರೆಂಡ್ ಹೆಸರೇನು?

  ರಾಗಿಣಿಯವರು ಹೇಳಿದ ಆ ಫ್ರೆಂಡ್ ಹೆಸರೇನು?

  ರಾಗಿಣಿ ದ್ವಿವೇದಿ ತಮಗೆ ಗೈಡ್ ಆಗಿ, ಸಪೋರ್ಟ್ ಆಗಿ ಇರುವ ಆ ಗೆಳೆಯನ ಹೆಸರು ಹೇಳಿಲ್ಲ. 'ಅದ್ ಬಿಟ್ರೆ ನನ್ನ ಇನ್ನೊಬ್ಬ ಬಾಯ್ ಫ್ರೆಂಡ್ ಥರ ನೆಚ್ಚಿನ ರಕ್ಷಿತಾ ಇದ್ದಾರೆ' ಎಂದು ಅವರ ಮೇಲಿನ ಪ್ರೀತಿಯಿಂದ ಕಾರ್ಯಕ್ರಮದಲ್ಲಿ ಹೇಳಿದರು.[ತೂಕ ಇಳಿಸಿದ ರಾಗಿಣಿಗೆ ಫುಲ್ ಡಿಮ್ಯಾಂಡ್: ಒಂದೇ ದಿನಕ್ಕೆ ಸಿಕ್ಕಿದೆ 3 ಚಿತ್ರಗಳು!]

  English summary
  Sandalwood Actress Ragini Dwivedi speaks about her special friend in Colors Super channel 'Super Talk Time' Program.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X