KBC 15: 'ಕೌನ್ ಬನೇಗಾ ಕರೋಡ್ಪತಿ' ಮತ್ತೆ ಶುರು.. ನನ್ನ ಪ್ರಶ್ನೆಗೆ ಉತ್ತರ ಕೊಡಿ ಎಂದ ಅಮಿತಾಬ್!
ಭಾರತೀಯ ಕಿರುತೆರೆಯ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋಡ್ಪತಿ'. ಬುದ್ಧಿವಂತರ ರಿಯಾಲಿಟಿ ಶೋ ಅಂತಲೇ ಜನಪ್ರಿಯರಾಗಿರೋ ಕೆಬಿಸಿ 15ನೇ ಸೀಸನ್ ಶೀಘ್ರವೇ ಆರಂಭ ಆಗಲಿದೆ. ಈ ಬಗ್ಗೆ ಈಗಾಗಲೇ ಸೋನಿ ಎಂಟರ್‌ಟೈನ್ಮೆಂಟ್ ಪೋಮೊ ರಿಲೀಸ್ ಮಾಡಿ, ಅನೌನ್ಸ್ ಮಾಡಿದೆ.
ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತೊಮ್ಮೆ ಹಾಟ್ ಸೀಟ್‌ನಲ್ಲಿ ಕೂತವರಿಗೆ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಪ್ರಶ್ನೆಗಳನ್ನು ಕೇಳುವ ತರಾತುರಿಯಲ್ಲಿದ್ದಾರೆ. 15ನೇ ಸೀಸನ್ ವಿಶಿಷ್ಟವಾಗಿದ್ದು, ಬಿಗ್ ಬಿ ಕೂಡ ಶೋ ನಡೆಸಿಕೊಡುವ ಉತ್ಸಾಹದಲ್ಲಿ ಇರೋದು ಪ್ರೋಮೊದಲ್ಲಿ ಗೊತ್ತಾಗುತ್ತಿದೆ.

'ಕೌನ್ ಬನೇಗಾ ಕರೋಡ್ಪತಿ' ಸೀಸನ್ 15ರ ಪ್ರೋಮೊ ಈಗಾಗಲೇ ರಿಲೀಸ್ ಆಗಿದೆ. ಚಿಕ್ಕ ಪ್ರೋಮೊದಲ್ಲಿ ಅಮಿತಾಬ್ ಬಚ್ಚನ್ ಕಂಡು ವೀಕ್ಷಕರು ಥ್ರಿಲ್ ಆಗಿದ್ದಾರೆ. ಅಲ್ಲದೆ ಪ್ರೋಮೊ ಕೂಡ ಇಂಟ್ರೆಸ್ಟಿಂಗ್ ಆಗಿದ್ದು, " ಹಾಟ್ ಸೀಟ್ ತನಕ ಬರೋಕೆ ಗಿಮಿಕ್‌ಗಳನ್ನು ಮಾಡಬೇಡಿ" ಎಂದು ಅಮಿತಾಬ್ ಬಚ್ಚನ್ ಹೇಳುವ ಡೈಲಾಗ್ ಫ್ಯಾನ್ಸ್‌ಗೆ ಕಿಕ್ ಕೊಡುತ್ತಿದೆ.
ಹಾಗೇ 'ಕೌನ್ ಬನೇಗಾ ಕರೋಡ್ಪತಿ' ಸೀಸನ್ 15ರಲ್ಲಿ ಭಾಗವಹಿಸಲು ಏನು ಮಾಡಬೇಕು ಅನ್ನೋದನ್ನು ಅಮಿತಾಬ್ ಬಚ್ಚನ್ ಹೇಳಿದ್ದಾರೆ. "ಫೋನ್ ಹಿಡಿದುಕೊಳ್ಳಿ.. ನೀವು ರಿಜಿಸ್ಟ್ರೇಷನ್ ಮಾಡಿಕೊಳ್ಳುವುದಕ್ಕೆ ಇದೊಂದೇ ದಾರಿ.. ಏಪ್ರಿಲ್ 29ರಂದು ಬೆಳಗ್ಗೆ 9ರಿಂದ ನೋಂದಣಿ ಶುರುವಾಗುತ್ತೆ. ನಾನು ಕೇಳುವ ಪ್ರಶ್ನೆಗೆ ಉತ್ತರ ಕೊಡಿ ನಿಮ್ಮ ನೋಂದಣಿ ಪ್ರಕ್ರಿಯೆ ಮುಂದುವರೆಯುತ್ತೆ." ಎಂದು ಬಿಗ್ ಬಿ ಹೇಳಿದ್ದಾರೆ.
'ಕೌನ್ ಬನೇಗಾ ಕರೋಡ್ಪತಿ' ಸೀಸನ್ 14, ಕಳೆದ ವರ್ಷ ಆಗಸ್ಟ್ 7ರಂದು ಆರಂಭ ಆಗಿತ್ತು. ಆ ವೇಳೆ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವಿಶೇಷ ಸಂಚಿಕೆಯಾಗಿತ್ತು. ಈ ಕಾರ್ಯಕ್ರಮ ಸಿನಿಮಾ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಆಗಮಿಸಿದ್ದರು.
ಬಾಲಿವುಡ್ ನಟ ಆಮಿರ್ ಖಾನ್, ಬಾಕ್ಸರ್ ಮೆರಿ ಕೊಮ್, ಪುಟ್‌ಬಾಲ್ ಆಟಗಾರ ಸುನೀಲ್ ಚೆಟ್ರಿ ಹಾಗೇ ಮಿಥಾಲಿ ಮಧುಮಿತಾ ಆಗಮಿಸಿದ್ದರು. ಹಾಗೇ ಶೌರ್ಯ ಪ್ರಶಸ್ತಿ ಪಡೆದ ಭಾರತದ ಮೊದಲ ಮಹಿಳಾ ಅಧಿಕಾರಿ ಮತ್ತು ಮೇಜರ್ ಡಿಪಿ ಸಿಂಗ್ ಮೊದಲ ಬ್ಲೇಡ್ ರನ್ನರ್ ಕೆಬಿಸಿಗೆ ಬಂದಿದ್ದರು.
ಡಿಸೆಂಬರ್ 30, 2022ರಂದು 'ಕೌನ್ ಬನೇಗಾ ಕರೋಡ್ಪತಿ' ಸೀಸನ್ 14ಗೆ ಅಂತ್ಯ ಹಾಡಲಾಗಿತ್ತು. ಸೋನಿ ಎಂಟರ್‌ಟೈನ್ಮೆಂಟ್‌ನಲ್ಲಿ ಈ ರಿಯಾಲಿಟಿ ಶೋ ಪ್ರಸಾರ ಆಗಿದ್ದು, ಅಕ್ಷಯ್ ಕುಮಾರ್, ಪದ್ಮಶ್ರೀ ಡಿ ಜಿ ಪ್ರಕಾಶ್ ಸಿಂಗ್, ವಿಕ್ಕಿ ಕೌಶಾಲ್, ಕಿಯಾರಾ ಅಡ್ವಾಣಿ ಹಾಗೂ ಗಾಯಕಿ ಶಿಲ್ಪಾ ರಾವ್ ಸೇರಿದಂತೆ ಹಲವರು ಈ ಶೋಗನಲ್ಲಿ ಭಾಗವಹಿಸಿದ್ದರು.
ಇತ್ತೀಚೆಗೆ ಅಮಿತಾಬ್ ಬಚ್ಚನ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ನಟಿಸುತ್ತಿರುವ 'ಪ್ರಾಜೆಕ್ಟ್ ಕೆ'ನಲ್ಲಿ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಈ ವೇಳೆ ಬಿಗ್ ಬಿ ಪೆಟ್ಟು ಮಾಡಿಕೊಂಡಿದ್ದರು. ಅವರ ಪಕ್ಕೆಲುಬಿಗೆ ಬಲವಾದ ಪೆಟ್ಟು ಬಿದ್ದಿದ್ದು, ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದರು. ಈಗ ಗುಣಮುಖರಾಗಿ ಅಮಿತಾಬ್ 'ಕೌನ್ ಬನೇಗಾ ಕರೋಡ್ಪತಿ' ಸೀಸನ್ 15 ನಿರೂಪಣೆಗೆ ಮರಳುತ್ತಿದ್ದು, ಫ್ಯಾನ್ಸ್ ಖುಷಿಯಾಗಿದ್ದಾರೆ.


Click it and Unblock the Notifications











