Amruthdhaare Serial:ಆನಂದ್ ಏನಾದ್ರು ಮತ್ತೆ ಕೋಮಾಗೆ ಹೋದ್ರೆ ಅಂತ ನೆಟ್ಟಿಗರಿಗೆ ಚಿಂತೆ; ಅಸಲಿಗೆ ಏನಾಗ್ತಿದೆ?

'ಅಮೃತಧಾರೆ' ಧಾರಾವಾಹಿಯಲ್ಲಿ ಮತ್ತೆ ಟ್ವಿಸ್ಟ್ ಅಂಡ್ ಟರ್ನ್‌ಗಳು ಶುರುವಾಗಿವೆ. ಗೌತಮ್, ಭೂಮಿಕಾ, ಶಕುಂತಲಾ ಹಾಗೂ ಆನಂದ್ ಪಾತ್ರಗಳ ಮಧ್ಯೆ ಕಥೆ ನಡೆಯುತ್ತಿದೆ. ಸದ್ಯ ನಡೆಯುತ್ತಿರುವುದು ನೋಡಿದರೆ, 'ಅಮೃತಧಾರೆ' ಮುಗಿಸುವುದಕ್ಕೆ ಮುಂದಾಗಿದ್ದಾರಾ? ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಕಳೆದ ಕೆಲವು ದಿನಗಳಿಂದ ಈ ಧಾರಾವಾಹಿಯಲ್ಲಿ ಇಂತಹದ್ದೇ ಘಟನೆಗಳು ನಡೆಯುತ್ತಿವೆ.

ಶಕುಂತಲಾದೇವಿ ಬಣ್ಣ ಬಯಲು ಮಾಡುವುದಕ್ಕೆ ಭೂಮಿಕಾ ಪಣ ತೊಟ್ಟು ನಿಂತಿದ್ದಾಳೆ. ಅದಕ್ಕಾಗಿ ಗಂಡ ಗೌತಮ್ ದಿವಾನ್ ಜೊತೆ ಕನಕದುರ್ಗಕ್ಕೆ ಹೋಗಿದ್ದಳು. ಇವರೊಂದಿಗೆ ಆನಂದ್ ಹಾಗೂ ಅಪರ್ಣಾ ಕೂಡ ಭೂಮಿಕಾ ತನಿಖೆಗೆ ಸಹಕರಿಸಲು ತೆರಳಿದ್ದರು. ಶಕುಂತಲಾ ದೇವಿಗೆ ಈ ವಿಚಾರ ಈಗ ತಿಳಿದು ಹೋಗಿದೆ. ಅದರಲ್ಲೂ ಆನಂದ್‌ಗೆ ಎಲ್ಲಾ ವಿಷಯ ಗೊತ್ತಾಗಿದೆ ಎನ್ನುವುದು ಅರಿವಿಗೆ ಬರುತ್ತಿದ್ದಂತೆ ರೌಡಿಗಳನ್ನು ಕಳುಹಿಸಿದ್ದಳು.

Amruthadhaare Kannada Serial May 27th episode what happened to Gowtham friend Anand

ಒಂದು ಕಡೆ ನಂಜಮ್ಮ, ಇನ್ನೊಂದು ಕಡೆ ಶಕುಂತಲಾದೇವಿ ಕಳಿಸಿದ ರೌಡಿಗಳು. ಹಿಂದಿನ ಎಪಿಸೋಡ್‌ಗಳಲ್ಲಿ ಆನಂದ್ ಸಂಕಷ್ಟಕ್ಕೆ ಸಿಲುಕಿದ್ದು ರಿವೀಲ್ ಆಗಿತ್ತು. ಆದ್ರೀಗ ರೌಡಿಗಳು ಆನಂದ್‌ ಮೇಲೆ ಹಲ್ಲೆ ಮಾಡಿದ್ದಾರೆ. ಹೀಗಾಗಿ ಆನಂದ್ ಪ್ರಜ್ಞೆ ತಪ್ಪಿಬಿದ್ದಿದ್ದಾರೆ. ಇತ್ತ ಆನಂದ್ ಹುಡುಕಿಕೊಂಡು ಗೌತಮ್ ಬಂದಿದ್ದಾಗಿದೆ. ಈಗ ವೀಕ್ಷಕರು ಗೊಂದಲಕ್ಕೆ ಬಿದ್ದಿದ್ದಾರೆ. ಆನಂದ್ ಮತ್ತೆ ಗೊಂದಲಕ್ಕೆ ಹೋಗುತ್ತಾರಾ? ಇಲ್ಲಾ ಶಕುಂತಲಾದೇವಿಯ ರಹಸ್ಯ ಗೌತಮ್‌ಗೆ ಗೊತ್ತಾಗುತ್ತಾ? ಇಂದಿನ ಎಪಿಸೋಡ್‌ನಲ್ಲಿ ಇದು ರಿವೀಲ್ ಆಗುವ ಸಾಧ್ಯತೆಯಿದೆ.

ಪಂಕಜಾ ರಹಸ್ಯ ಬರಯಲಾಗುತ್ತಾ?

'ಅಮೃತಾಧಾರೆ' ಧಾರಾವಾಹಿಯಲ್ಲಿ ಪಂಕಜಾ ರಹಸ್ಯ ಬಯಲು ಮಾಡುವುದಕ್ಕೆ ಭೂಮಿಕಾ ಮುಂದಾಗಿದ್ದಾಳೆ. ಇದಕ್ಕೆ ಆನಂದ್ ಕೂಡ ಬೆಂಬಲ ನೀಡಿದ್ದ. ತನಿಖೆ ಮಾಡುತ್ತಾ ಹೋದಂತೆ ನಂಜಮ್ಮನ ಕುಡುಕ ಗಂಡ ಆನಂದ್ ಕೈಗೆ ಸಿಗುತ್ತಾನೆ. ನಂಜಮ್ಮ ಹಾಗೂ ಆಕೆಯ ಕುಡುಕ ಗಂಡನಿಗೆ ಪಂಕಜಾಳ ರಹಸ್ಯ ಗೊತ್ತಿದೆ. ಹೀಗಾಗಿ ಆನಂದ್ ಆತನಿಗೆ ಮಧ್ಯಪಾನ ಮಾಡಿಸಿ, ಪಂಕಜಾ ರಹಸ್ಯವನ್ನು ಹೊರತೆಗೆಸಿದ್ದನು. ಇದು ನಂಜಮ್ಮನಿಗೆ ಗೊತ್ತಾಗುತ್ತಿದ್ದಂತೆ ಶಾಕುಂತಲಾಗೆ ವಿಷಯ ಮುಟ್ಟಿಸುತ್ತಾಳೆ. ಅಲ್ಲಿಂದ ಅಸಲಿ ಆಟ ಶುರುವಾಗಿದೆ. ಈ ರಹಸ್ಯ ಹೊರ ಬಾರದೇ ಇರುವಂತೆ ಆನಂದ್ ಮೇಲೆ ಹಲ್ಲೆ ಮಾಡಿಸಿದ್ದಾಳೆ.

Amruthadhaare Kannada Serial May 27th episode what happened to Gowtham friend Anand

ರೌಡಿಗಳಿಂದ ಆನಂದ್‌ಗೆ ಹಲ್ಲೆ

ಆನಂದ್‌ಗೆ ರಹಸ್ಯ ಗೊತ್ತಾಗಿದೆ ಎಂದು ತಿಳಿಯುತ್ತಿದ್ದಂತೆ ಶಾಕುಂತಲಾ ದೇವಿ ರೌಡಿ ಕಳಿಸಿ ಹಲ್ಲೆ ಮಾಡಿಸಿದ್ದಾಳೆ. ಅದೇ ವೇಳೆ ಆನಂದ್‌ಗೆ ಗೌತಮ್ ಫೋನ್ ಬಂದಿದ್ದಕ್ಕೆ ಗೆಳೆಯ ತೊಂದರೆಯಲ್ಲಿ ಇದ್ದಾನೆಂದು ಓಡೋಡಿ ಬಂದಿದ್ದಾನೆ. ಇವತ್ತಿನ ಪ್ರೋಮೊದಲ್ಲಿ ಅದನ್ನೇ ತೋರಿಸಲಾಗಿದೆ. ಆನಂದ್ ಮೇಲೆ ರೌಡಿಗಳು ಹಲ್ಲೆ ಮಾಡಿದ್ದರಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಗೌತಮ್ ಗೆಳೆಯನನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿದ್ದಾನೆ. ಹೀಗಾಗಿ ಶಕುಂತಲಾ ದೇವಿ ರಹಸ್ಯ ಬದಲಾಗತ್ತಾ? ಎನ್ನುವ ಪ್ರಶ್ನೆ ಕೂಡ ಎದ್ದಿದೆ.

ನೆಟ್ಟಿಗರಿಗೆ ಕೋಮಾಗೆ ಹೋದ್ರೆ ಎನ್ನುವ ಚಿಂತೆ

ಆನಂದ್ ಮೇಲೆ ಹಲ್ಲೆಯ ಯತ್ನ ಆಗಿದ್ದು ಇದೇ ಮೊದಲೇನು ಅಲ್ಲ. ಈ ಹಿಂದೆ ಕೂಡ ಆನಂದ್ ಜೀವ ತೆಗೆಯುವ ಪ್ರಯತ್ನ ಮಾಡಲಾಗಿತ್ತು. ಈ ಮತ್ತೆ ಪ್ರಜ್ಞೆ ತಪ್ಪಿಬಿದ್ದಿದ್ದರಿಂದ ಎಲ್ಲೆ ಕೋಮಾಗೆ ಹೋಗಿಬಿಡುತ್ತಾರೋ? ಎಲ್ಲಿ ಗೆಳೆಯರ ಹಾಸ್ಯ ಸನ್ನಿವೇಶಗಳನ್ನು ನೋಡುವುದಕ್ಕೆ ಸಾಧ್ಯವಾಗುವುದಿಲ್ಲವೋ ಎನ್ನುವ ಚಿಂತೆಗೆ ಬಿದ್ದಿದ್ದಾರೆ. ಹೀಗಾಗಿ ನೆಟ್ಟಿಗರು ತಲೆಕೆಡಿಸಿಕೊಂಡು ಕಮೆಂಟ್‌ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ.

ಏನಂತಾರೆ ನೆಟ್ಟಿಗರು?

"ಆನಂದ ಸರ್‌ಗೆ ಏನು ಆಗಬಾರದು. ಬ್ರೋ ಡುಮ್ಮ ಸರ್‌ಗೆ ಪಂಕಜ ಬಗ್ಗೆ ಹೇಳಿಬಿಡು" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಶಾಕುಂತಲಾ ನಿಮಗೆ ಮೋಸ ಮಾಡುತ್ತಿದಾರೆ ಗೌತಮ್" ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ. ಮತ್ತೊಬ್ಬರು "ಗೌತಮ್ ಸರ್ ಅಂತ ಫ್ರೆಂಡ್ ಇರೋವರೆಗೂ ಅನಂದ್ ಸರ್‌ಗೆ ಏನು ಆಗಲ್ಲ" ಎಂದಿದ್ದಾರೆ. "ಯಾರು ಅಂದರೆ ಏನ್ ಹೇಳೋದು. ನಿಮ್ಮಮ್ಮ ಶಕುಂತಲಾ ಅಲಿಯಾಸ್ ಪಂಕಜನೇ" ಎಂದು ಸೀಕ್ರೆಟ್ ಮಾಡಿದ್ದಾರೆ. ಇನ್ನೊಬ್ಬರು "ಆನಂದ್ ಏನಾದ್ರು ಮತ್ತೆ ಕೋಮಾಗೆ ಹೋದ್ರೆ" ಎಂದು ತಲೆ ಮೇಲೆ ಕೈ ಹೊತ್ತುಕೊಂಡು ಕೂತಿದ್ದಾರೆ.

More from Filmibeat

English summary
Amruthadhaare Kannada Serial May 27th episode what happened to Gowtham friend Anand;
Read more about: tv show serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X