ಉಪೇಂದ್ರ-ಶಿವಣ್ಣ ಮುಂದೆ ಕೋರಿಕೆಯಿಟ್ಟ 'ಅಮೃತಧಾರೆ' ಛಾಯಾ ಸಿಂಗ್; ಗ್ರೀನ್ ಸಿಗ್ನಲ್ ಕೊಟ್ರಾ ಉಪ್ಪಿ?
ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿ 'ಅಮೃತಧಾರೆ. ಇದರಲ್ಲಿ ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ನಡುವಿನ ಕೆಮಿಸ್ಟ್ರಿ ವೀಕ್ಷಕರ ಮೆಚ್ಚಿಗೆ ಗಳಿಸಿದೆ. ರಾಜೇಶ್ ನಟರಂಗ ಸಾಫ್ಟ್ ನೇಚರ್. ಛಾಯಾ ಸಿಂಗ್ ಅವರ ಖಡಕ್ ಲುಕ್ ವೀಕ್ಷಕರ ಮನಗೆದ್ದಿದೆ. ಈ ಕಾರಣಕ್ಕೆ ಇತ್ತೀಚೆಗೆ ನಡೆದ ಜೀ ಕನ್ನಡದ ಕುಟುಂಬ ಅವಾರ್ಡ್ ಸಮಾರಂಭದಲ್ಲಿ ಛಾಯಾ ಸಿಂಗ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಛಾಯಾ ಸಿಂಗ್ ಕನ್ನಡ ಚಿತ್ರರಂಗಕ್ಕೆ ಹೊಸಬರೇನು ಅಲ್ಲ. ಹಾಗಂತ ಕಿರುತೆರೆಗೂ ಹೊಸಬರಲ್ಲ. ಈಗಾಗಲೇ ಬೇರೆ ಬೇರೆ ಭಾಷೆಯ ಸೀರಿಯಲ್‌ಗಳಲ್ಲಿ ಛಾಯಾ ಸಿಂಗ್ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಕನ್ನಡ, ತಮಿಳು ಭಾಷೆಯ ಧಾರಾವಾಹಿಗಳಲ್ಲೂ ನಟಿಸುತ್ತಿರುವ ಛಾಯಾ ಸಿಂಗ್ ಎಲ್ಲಾ ಕಡೆಗಳಲ್ಲೂ ವೀಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಕಳೆದ ವೀಕೆಂಡ್‌ನಲ್ಲಿ ನಡೆದ ಜೀ ಕುಟುಂಬ ಅವಾರ್ಡ್ಸ್ ಸಮಾರಂಭದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಛಾಯಾ ಸಿಂಗ್ ಅವರಿಗೆ ಬೆಸ್ಟ್ ಆಕ್ಟರ್ ಪ್ರಶಸ್ತಿಯನ್ನು ನೀಡಲು ಉಪೇಂದ್ರ ವೇದಿಕೆ ಮೇಲೆ ಬಂದಿದ್ದರು. ಆ ವೇಳೆ ಛಾಯಾ ಸಿಂಗ್ ವಿಶೇಷವಾದ ಒಂದು ಮನವಿಯನ್ನು ಮಾಡಿಕೊಂಡಿದ್ದರು. ಆ ಮನವಿ ಏನು? ಛಾಯಾ ಸಿಂಗ್ ಕೋರಿಕೆಯನ್ನು ಉಪೇಂದ್ರ ಒಪ್ಪಿಕೊಂಡರೇ? ತಿಳಿಯುವುದಕ್ಕೆ ಮುಂದೆ ಓದಿ.
ನಟಿ ಛಾಯಾ ಸಿಂಗ್ ಅವರಿಗೆ ಬಹಳ ದಿನಗಳಿಂದ ಒಂದು ಆಸೆಯಿತ್ತು. ಆ ಆಸೆಯನ್ನು ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉಪೇಂದ್ರ ಮುಂದೆ ಹೇಳಿಕೊಂಡಿದ್ದರು. ಹಾಗಂತ ಛಾಯಾ ಸಿಂಗ್ ಏನೂ ಉಪ್ಪಿ ಜೊತೆ ನಟಿಸಬೇಕು ಅಂತೇನು ಕೇಳಿಕೊಂಡಿರಲಿಲ್ಲ. ಅವರಿಗಿದ್ದ ಆಸೆಯೇ ಬೇರೆ. ಅದನ್ನು ವೇದಿಕೆ ಮೇಲೆ ಪ್ರಸ್ತಾಪ ಮಾಡಿದ್ದರು. ಅದಕ್ಕೆ ಉಪೇಂದ್ರ ಕೊನೆಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಹಾಗಂತ ಈ ಕೋರಿಕೆ ಕೇವಲ ಉಪೇಂದ್ರ ಅವರ ಬಳಿ ಅಷ್ಟೇ ಅಲ್ಲ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರಲ್ಲಿಯೂ ಇದೇ ಮನವಿಯನ್ನು ಮಾಡಿಕೊಂಡಿದ್ದರು. ಅಷ್ಟಕ್ಕೂ ಛಾಯಾ ಸಿಂಗ್ ಅವರ ಆಸೆ, ಕನಸು ಏನಪ್ಪಾ ಅಂದ್ರೆ, ಉಪೇಂದ್ರ ಹಾಗೂ ಶಿವಣ್ಣ ನಿರ್ದೇಶಿಸುವ ಸಿನಿಮಾದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಬೇಕು ಎಂಬ ಆಸೆ. ಅದನ್ನೇ ವೇದಿಕೆ ಮೇಲೆ ಪ್ರಸ್ತಾಪ ಮಾಡಿದ್ದರು.
ನಿಮ್ಮ ನಿರ್ದೇಶನದಲ್ಲಿ ಸಹಾಯಕ ನಿರ್ದೇಶಕಿಯಾಗಿ ನನ್ನನ್ನು ತೆಗೆದುಕೊಳ್ಳಿ ಎಂದು ಛಾಯಾ ಸಿಂಗ್ ಹೇಳಿದ್ದಾರೆ. ಉಪೇಂದ್ರ ಹಾಗೂ ಶಿವಣ್ಣ ಇಬ್ಬರೂ ಸಿನಿಮಾ ವಿಶ್ವವಿದ್ಯಾಲಯವಿದ್ದಂತೆ ಎಂದೂ ಹೇಳಿಕೊಂಡಿದ್ದಾರೆ. ಈಗಾಗೇ ಈ ಬೇಡಿಕೆಯನ್ನು ಪ್ರಿಯಾಂಕಾ ಉಪೇಂದ್ರ ಅವರ ಬಳಿ ಇಟ್ಟಿದರಂತೆ. ಆದರೆ, ಅವರು ಒಪ್ಪಿರಲಿಲ್ಲ. ಹೀಗಾಗಿ ಮತ್ತೊಂದು ಉಪೇಂದ್ರ ಬಳಿ ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ. ನೀವು ಡೈರೆಕ್ಷನ್ ಮಾಡಿದಾಗ ನನ್ನನ್ನು ಹಾಕಿಕೊಳ್ಳಿ ಎಂದು ಹೇಳಿದ್ದಾರೆ.
ಛಾಯಾ ಸಿಂಗ್ ವೇದಿಕೆ ಮೇಲೆ ಈ ಕೋರಿಕೆಯನ್ನು ಇಡುತ್ತಿದ್ದಂತೆ ಉಪೇಂದ್ರ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಸಿಸ್ಟೆಂಟ್ ಡೈರೆಕ್ಟರ್ ಆದರೆ, ಹೀರೋಯಿನ್ ಕಥೆಯೇನು? ಎಂದು ತಮಾಷೆ ಮಾಡಿದ್ದಾರೆ. ಕೊನೆಗೂ ಛಾಯಾ ಸಿಂಗ್ ಅವರ ಆಸೆಯನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಉಪ್ಪಿ ಭರವಸೆ ನೀಡಿದ್ದಕ್ಕೆ ಛಾಯಾ ಸಿಂಗ್ ಕೂಡ ಖುಷಿಯಾಗಿದ್ದಾರೆ.


Click it and Unblock the Notifications











