Amruthadhaare Serial: ಭಾಗ್ಯಮ್ಮಳ ಸ್ಥಿತಿಗೆ ಕಾರಣ ಯಾರು ಅನ್ನೋದನ್ನು ಕಂಡು ಹಿಡಿಯುತ್ತಾಳಾ ಭೂಮಿಕಾ?

ಭೂಮಿಕಾಗೆ ತನ್ನ ಅತ್ತೆ ಎಂದರೆ ಬಹಳಷ್ಟು ಪ್ರೀತಿ. ಗೌತಮ್ ತಾಯಿ ಭಾಗ್ಯಮ್ಮ ಸಿಕ್ಕಿರುವುದೇ ಬಹಳ ದೊಡ್ಡ ಪವಾಡ. ಗೌತಮ್ ತನ್ನ ತಾಯಿ ಬದುಕಿಲ್ಲ ಎಂದುಕೊಂಡಿರುತ್ತಾನೆ. ಆದರೆ, ಭಾಗ್ಯಮ್ಮ ಯಾವಾಗ ತನ್ನೆದುರಿಗೆ ಬಂದು ನಿಂತರೋ ಆ ದಿನದಿಂದ ಗೌತಮ್ ಕಣ್ಣೆ ನಂಬದಾಗಿದ್ದವು. ಶಕುಂತಲಾ ದೇವಿಗೆ ಭಾಗ್ಯಾ ಬದುಕಿರುವಷ್ಟು ದಿನ ಭಯ ಇದ್ದೆ ಇರುತ್ತದೆ. ಭಾಗ್ಯಾ ಇಂದಿನ ಸ್ಥಿತಿಗೆ ಶಕುಂತಲಾ ದೇವಿ ಕಾರಣ. ತನ್ನ ಗಂಡನ ಆಸ್ತಿಯೆಲ್ಲ ತನ್ನ ಪಾಲಾಗಬೇಕು ಎಂದುಕೊಂಡಿದ್ದ ಶಕುಂತಲಾ ದೇವಿ ಭಾಗ್ಯಾಗೆ ಅನ್ಯಾಯ ಮಾಡುತ್ತಾಳೆ.

ಹೀಗಾಗಿ ಜೊತೆಗೆ ಇದ್ದ ತನ್ನ ಮಗನನ್ನು ಕರೆದುಕೊಂಡು ಹೋದ ಶಕುಂತಲಾ ದೇವಿ ಮೇಲೆ ಕೋಪ ಇರುತ್ತದೆ. ಅದಕ್ಕಿಂತ ಹೆಚ್ಚಾಗಿ ಭಯವಿರುತ್ತೆ. ಗೌತಮ್ ದಿವಾನ್ ತನ್ನ ತಾಯಿ ಬದುಕಿಲ್ಲ ಎಂದೇ ಬಹಳಷ್ಟು ವರ್ಷ ಬದುಕಿರುತ್ತಾನೆ. ಆದರೆ ತನ್ನ ಹೆಂಡತಿಯ ಸಹಾಯದಿಂದಲೇ ತಾನು ಅಮ್ಮನನ್ನು ಮತ್ತೆ ನೋಡುತ್ತೇನೆ ಎಂದುಕೊಂಡಿರಲಿಲ್ಲ ಗೌತಮ್. ಭೂಮಿಕಾ ತವರು ಮನೆಗೆ ಗೌತಮ್ ಮನೆಯಿಂದ ಎಲ್ಲರೂ ಹೋಗುತ್ತಾರೆ. ಆದರೆ ಭಾಗ್ಯಾಗೆ ಹೋಮ ಕುಂಡದಲ್ಲಿರುವ ಬೆಂಕಿಯನ್ನು ನೋಡಿ ಬಹಳಷ್ಟು ಭಯ ಪಡುತ್ತಾಳೆ. ಈ ರೀತಿ ಹಲವು ಸಲ ಆಗಿದೆ ಎಂದು ಸುಧಾ ಎಲ್ಲರ ಬಳಿಯೂ ಹೇಳಿ ಸಮಾಧಾನ ಮಾಡುತ್ತಾಳೆ. ಗೃಹ ಪ್ರವೇಶ ಮುಗಿಸಿಕೊಂಡು ಮನೆಗೆ ಬಂದ ಭಾಗ್ಯಮ್ಮಳನ್ನು ಮಗಳು ಸುಧಾ ರೆಸ್ಟ್ ಮಾಡಲು ಕರೆದುಕೊಂಡು ಹೋಗುತ್ತಾಳೆ.

Amruthadhaare serial January 23rd episode of Bhoomika worried about Bhagyamma

ಭಾಗ್ಯಮ್ಮಗೆ ಬಹಳಷ್ಟು ಸುಸ್ತಾಗಿರುತ್ತದೆ. ಹಳೆಯ ದಿನಗಳ ಮೆಲುಕು ಒಮ್ಮಿಂದೊಮ್ಮೇಲೆ ಆಗುತ್ತೆ. ಆದರೆ ಕೊಂಚ ಮಟ್ಟಿಗೆ ಭಯ ಆದರೂ ತದ ನಂತರ ನಾರ್ಮಲ್ ಆಗುತ್ತಾರೆ. ಇತ್ತ ಭೂಮಿಕಾ ತನ್ನ ರೂಮಿಗೆ ಹೋಗಿ ಫ್ರೆಶ್ ಅಪ್ ಆಗಿ ಮೆತ್ತಗೆ ಅತ್ತೆಯ ರೂಮ್‌ಗೆ ಹೆಜ್ಜೆ ಹಾಕುತ್ತಾಳೆ. ಅತ್ತೆಯನ್ನು ನೋಡಿ ಸುಧಾಗೆ ಖುಷಿ ಆಗುತ್ತದೆ. ಆದರೆ ಭಾಗ್ಯಮ್ಮಗೆ ಏನು ತಿಳಿಯದೇ ಸುಮ್ಮನೆ ಇರುತ್ತಾರೆ. ಸುಧಾ ಬಳಿ ಭೂಮಿಕಾ ತನ್ನ ಅತ್ತೆಯ ಬಗ್ಗೆ ವಿಚಾರಣೆ ಮಾಡುತ್ತಾಳೆ.

ಅತ್ತೆ ಯಾಕೆ ಬೆಂಕಿ ನೋಡಿ ಭಯ ಪಡುತ್ತಾರೆ? ಇಷ್ಟರವರೆಗೆ ಆ ರೀತಿ ಅತ್ತೆ ಭಯ ಪಟ್ಟುಕೊಂಡಿದ್ದಾರ? ಅತ್ತೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡವರು ಅಥವಾ ಅತ್ತೆಗೆ ಯಾರಾದರೂ ಪರಿಚಯ ಇದ್ದಾರ ಎಂದೆಲ್ಲ ಪ್ರಶ್ನೆಯ ಮೇಲೆ ಪ್ರಶ್ನೆಯನ್ನು ಕೇಳುತ್ತಾಳೆ. ಸುಧಾ ತನ್ನ ಅತ್ತಿಗೆಯ ಬಳಿ ತನ್ನ ಅಮ್ಮ ಒಬ್ಬರ ಹೆಸರನ್ನು ಆಗಾಗ ಹೇಳುತ್ತಿರುತ್ತಾರೆ ಎನ್ನುವ ಸುಳಿವನ್ನು ಭೂಮಿಕಾ ಬಳಿ ಬಿಚ್ಚಿಡುತ್ತಾಳೆ. ಕೂಡಲೇ ಭೂಮಿಕಾಗೆ ಬಹಳ ಖುಷಿಯಾಗುತ್ತದೆ. ಭೂಮಿಕಾ ಗುರಿ ಒಂದೇ. ಅತ್ತೆ ಮೊದಲಿನ ರೀತಿ ಆಗಬೇಕು ಎನ್ನುವ ಆಸೆ. ಇತ್ತ ಜೈ ದೇವ್ ಕುತಂತ್ರ ಬುದ್ಧಿ ಮಲ್ಲಿಗೆ ತಿಳಿದಿದೆ.

ಮಲ್ಲಿಗೆ ಬಹಳ ಬೇಸರ. ತನ್ನ ಗಂಡ ನಾನಿದ್ದರು ಬೇರೆ ಹುಡುಗಿಯ ಸಹವಾಸ ಮಾತ್ರ ಬಿಡಲಿಲ್ಲ ಎಂದು ನೊಂದುಕೊಳ್ಳುತ್ತಾಳೆ. ದೇವರ ಮೇಲೆ ಎಲ್ಲಾ ಆಣೆ ಮಾಡಿ ಸುಳ್ಳು ಹೇಳಿ ಮೋಸ ಮಾಡಿದ್ದಾರೆಂದು ಅಳುತ್ತಿದ್ದಾಳೆ. ಇತ್ತ ಅಪ್ಪಿಗೆ ಅಕ್ಕನ ನಡೆಯ ಬಗ್ಗೆ ಅರಿವಾಗಿ ದ್ವೇಷದ ಜೀವನ ಬಿಟ್ಟು ಖುಷಿಯಾಗಿ ಇರುತ್ತಾರಾ?ಅಕ್ಕ ಮಾಡಿದ ಸಹಾಯಕ್ಕೆ ಅಪ್ಪಿ ಅದೆಷ್ಟೇ ಧನ್ಯವಾದ ಹೇಳಿದರು ಸಾಲದು. ಜೀವನದಲ್ಲಿ ಬಹಳ ಕಷ್ಟ ಇದ್ದರೂ ಅಪ್ಪಿ ಕಷ್ಟಕ್ಕೆ ಆಗಮಿಸಿದ್ದು ಭೂಮಿಕಾ, ಆದ್ರೆ ಅಪ್ಪಿಗೆ ಶಕುಂತಲಾ ದೇವಿ ಬಹಳ ಹತ್ತಿರ ಆಗಿದ್ದು, ತನ್ನ ತಪ್ಪನ್ನು ಒಪ್ಪಿಕೊಂಡು ದ್ವೇಷ ಬಿಡುತ್ತಾಳಾ? ನೋಡಬೇಕಿದೆ.

More from Filmibeat

English summary
Amruthadhaare serial January 23rd episode of Bhoomika worried about Bhagyamma.
Read more about: tv serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X