ಪತಿ ಮುರುಗ ಮಾಸ್ಟರ್ ಜೊತೆ ಯಾಕೆ ಫೋಟೋ ಹಾಕಲ್ಲ? ನೆಟ್ಟಿಗರ ಪ್ರಶ್ನೆಗೆ 'ಅಮೃತಧಾರೆ' ನಟಿ ಏನಂದ್ರು?

ಕನ್ನಡದ ಕಿರುತೆರೆ ನಟಿಯರು ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಕೆಲವರು ನಿಶ್ಚಿತಾರ್ಥ, ಮದುವೆ ಅಂತ ಸುದ್ದಿಯಲ್ಲಿದ್ದರೆ. ಇನ್ನು ಕೆಲವರು ವಿಚ್ಛೇದನಕ್ಕೆ ಮುಂದಾಗಿ ಅವರ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಈ ಎರಡು ಸನ್ನಿವೇಶಗಳು ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿವೆ. ಯಾರಾದರೂ ನಟಿ ತಮ್ಮ ಪತಿಯೊಂದಿಗೆ ಫೋಟೋ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡದೇ ಹೋದರೂ ಅನುಮಾನ ಪಡುವಂತಹ ಸ್ಥಿತಿ ಬಂದುಬಿಟ್ಟಿದೆ.

ಕಳೆದ ಕೆಲವು ದಿನಗಳಿಂದ ಅಭಿಮಾನಿಗಳು ಇದೊಂದು ವಿಷಯಕ್ಕೆ ಕಿರುತೆರೆ ನಟಿಯ ಹಿಂದೆ ಬಿದ್ದಿದ್ದಾರೆ. ನಿಮ್ಮ ಪತಿಯೊಂದಿಗೆ ಯಾಕೆ ಫೋಟೋವನ್ನು ಹಂಚಿಕೊಳ್ಳುವುದಿಲ್ಲ ಎಂದು ಪದೇ ಪದೆ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದಾರೆ. ಆ ನಟಿ ಮತ್ಯಾರೂ ಅಲ್ಲ, 'ಅಮೃತಧಾರೆ' ಧಾರಾವಾಹಿಯಲ್ಲಿ ನಟಿಸುತ್ತಿರುವ ಇಶಿತಾ ವರ್ಷಾ. ಈ ನಟಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಯಾವುದೇ ಫೋಟೊ ಶೇರ್ ಮಾಡಿದ್ದರೂ, ಪತಿಯ ಜೊತೆ ಯಾಕಿಲ್ಲ ಅಂತ ಒಬ್ಬರಲ್ಲ ಒಬ್ಬರು ಪ್ರಶ್ನೆ ಮಾಡುತ್ತಲೇ ಇರುತ್ತಾರೆ.

Amruthadhare serial actress Ishita Varsha clarity about her husband Muruga Master

ಇಶಿತಾ ವರ್ಷಾ ಕಳೆದ ಹಲವು ವರ್ಷಗಳಿಂದ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ'ಯಲ್ಲಿ ನಟಿಸಿದ್ದರು. ಮಾಯಾ ಎಂಬ ಪಾತ್ರದ ಮೂಲಕ ಕಿರಿತೆರೆ ವೀಕ್ಷಕರನ್ನು ರಂಜಿಸಿದ್ದರು. ಈಗ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಅಮೃತಧಾರೆ' ಧಾರಾವಾಹಿಯಲ್ಲಿಯೂ ಇಶಿತಾ ವರ್ಷಾ ನಟಿಸುತ್ತಿದ್ದಾರೆ. ಕಿರುತೆರೆಯ ಈ ಜನಪ್ರಿಯ ನಟಿ 2019ರಲ್ಲಿ ಡ್ಯಾನ್ಸ್ ಮಾಸ್ಟರ್ ಮುರುಗಾನಂದ ಎಂಬುವವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

'ಅಮೃತಧಾರೆ' ನಟಿ ಇಶಿತಾ ವರ್ಷಾ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಕೆಲವು ಫೋಟೊಗಳನ್ನು ಶೇರ್ ಮಾಡಿದ್ದರು. ಆ ಫೋಟೊಗಳಿಗೆ ಲೈಕ್ ಕೊಟ್ಟು, ಪತಿಯೊಂದಿಗೆ ಫೋಟೊಗಳನ್ನು ಯಾಕೆ ಹಂಚಿಕೊಳ್ಳುತ್ತಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಇದೇ ಪ್ರಶ್ನೆಗಳನ್ನು ಕೇಳಿ ಸಾಕಿದ್ದ ನಟಿ ಇಶಿತಾ ಖಡಕ್ ಆಗಿ ಒಂದು ಪ್ರತಿಕ್ರಿಯೆಯನ್ನೂ ಕೊಟ್ಟಿದ್ದಾರೆ.

Amruthadhare serial actress Ishita Varsha clarity about her husband Muruga Master

ಇತ್ತೀಚೆಗೆ 'ಅಮೃತಧಾರೆ' ನಟಿಯ ಧಾರಾವಾಹಿಗಳಿಗಿಂತ ಹೆಚ್ಚಾಗಿ ಅವರ ದಾಂಪತ್ಯ ಜೀವನವೇ ಚರ್ಚೆಯಲ್ಲಿದೆ. ಇಶಿತಾಗೆ ನೆಟ್ಟಿಗರೊಬ್ಬರು " ಮುರುಗ ಸರ್ ಎಲ್ಲಿದ್ದಾರೆ? ನಿಮ್ಮ ಯಾವುದೇ ವಿಡಿಯೋದಲ್ಲಿ ಅವರು ಕಾಣಿಸಿಕೊಳ್ಳುತ್ತಿಲ್ಲ ಯಾಕೆ? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಇಶಿತಾ ವರ್ಷಾ ಕೊಟ್ಟ ಉತ್ತರ ಹೀಗಿದೆ. "ಅವರು ಎಲ್ಲಿದ್ದಾರೆ ಎಂಬುವುದನ್ನು ತಿಳಿದುಕೊಳ್ಳುವುದಕ್ಕೆ ಅವರ ಅಕೌಂಟ್‌ ಅನ್ನು ಫಾಲೋ ಮಾಡಿ." ಎಂದು ಇಶಿತಾ ತಿರುಗಿ ಕಮೆಂಟ್ ಮಾಡಿದ್ದಾರೆ.

ಇಶಿತಾ ವರ್ಷಾ ಹಾಗೂ ಮುರುಗ ಇಬ್ಬರೂ ಸುಮಾರು 8 ವರ್ಷಗಳ ಕಾಲ ಪ್ರೀತಿ ಮಾಡಿದ್ದರು. ಬಳಿಕ 'ಅಗ್ನಿಸಾಕ್ಷಿ' ಧಾರಾವಾಹಿ ಮುಗಿಯುತ್ತಿದ್ದಂತೆ ಇಶಿತಾ ಹಾಗೂ ಮುರುಗ ಅವರು ವಿವಾಹವಾಗಿದ್ದರು. ಇಶಿತಾ ಪತಿ ಮುರುಗ ಕೂಡ ಡ್ಯಾನ್ಸ್ ಮಾಸ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ವಿವಾಹದ ಬಳಿಕವೂ ಇವರಿಬ್ಬರೂ ಒಟ್ಟಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದ್ರೀಗ ಈಗ ಕೇವಲ ಇಶಿತಾ ತಮ್ಮ ಫೋಟೊ ಹಾಗೂ ವಿಡಿಯೋಗಳನ್ನು ಮಾತ್ರ ಹಂಚಿಕೊಳ್ಳುತ್ತಿದ್ದಾರೆ. ಇದು ನೆಟ್ಟಿಗರ ಅನುಮಾನವಕ್ಕೆ ಕಾರಣವಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ನೀವಿಬ್ಬರು ಒಟ್ಟಿಗೆ ಯಾಕೆ ವಿಡಿಯೋ ಮಾಡುತ್ತಿಲ್ಲ? ಮುರುಗ ಅವರ ಫೋಟೊಗಳನ್ನು ಯಾಕೆ ಶೇರ್ ಮಾಡುತ್ತಿಲ್ಲ? ಇಬ್ಬರೂ ದೂರ ಆಗಿದ್ದೀರಾ? ಎಂಬ ಕಮೆಂಟ್‌ಗಳನ್ನು ನೋಡಿ ಸಾಕಾಗಿದ್ದ ಇಶಿತಾ ವರ್ಷಾ ಕಮೆಂಟ್‌ಗಳಿಗೆ ತಿರುಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಂದ್ಹಾಗೆ, ಇತ್ತಿಚೀಗೆ ವೈಷ್ಣವಿಗೌಡ ಅವರ ವಿವಾಹ ಸಮಾರಂಭದಲ್ಲಿ ಪತಿಯೊಂದಿಗೆ ಕಾಣಿಸಿಕೊಂಡಿದ್ದರು ಎನ್ನಲಾಗಿದೆ. ಏನಕ್ಕೂ ಬರೀ ವಿಚ್ಛೇದನ ಸುದ್ದಿಗಳನ್ನೇ ಕೇಳುತ್ತಿದ್ದ ಅಭಿಮಾನಿಗಳು ಆತಂಕಗೊಂಡು ಇಂತಹ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ಇಶಿತಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

More from Filmibeat

English summary
Amruthadhare serial actress Ishita Varsha clarity about her husband Muruga Master;
Read more about: actress serial husband
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X