ಶಿವನ ಕಾಣಲು ಕಾಶಿಗೆ ಹೋದ ಅನುಪಮಾ ಗೌಡ ಸಿಕ್ಕಿದ್ದು ಮೌನ.. ಸಾವಿನ ಮನೆ

ನಟಿಯರಿಗೆ ಸ್ವಲ್ಪ ಫ್ರೀ ಸಿಕ್ಕರೆ ಸಾಕು ಏನಾದರೂ ಒಂದು ಪ್ಲಾನ್ ಮಾಡಿಕೊಳ್ತಾರೆ. ತಮ್ಮ ಬಹುದಿನಗಳ ಆಸೆಯನ್ನು ಈಡೇರಿಸಿಕೊಳ್ಳುತ್ತಾರೆ. ಬ್ಯುಸಿ ಶೆಡ್ಯೂಲ್‌ಗೆ ಸಿಕ್ಕರೂ ಸಾಕು ಬೆಂಗಳೂರಿನಿಂದ ಎಸ್ಕೇಪ್ ಆಗಿ ಬಿಡ್ತಾರೆ. ನಟಿ-ನಿರೂಪಕಿ ಅನುಪಮಾ ಗೌಡ ಕೂಡ ಇದರಿಂದ ಹೊರತಾಗಿ ಏನೂ ಇಲ್ಲ. ಅವರು ತಮ್ಮ ಶೋಗಳಿಗೆ ಬ್ರೇಕ್ ಸಿಕ್ಕರೂ ಸಾಕು ಎಸ್ಕೇಪ್ ಆಗುತ್ತಾರೆ. ಈ ಬಾರಿ ಆಧ್ಯಾತ್ಮದ ಮೂಡ್ನಲ್ಲಿ ಇದ್ದು, ಕಾಶಿ ವಿಶ್ವನಾಥ ದರ್ಶನ ಮಾಡಿ ಬಂದಿದ್ದಾರೆ.

ಅನುಪಮಾ ಗೌಡ ಬಿಡುವಿನ ವೇಳೆಯಲ್ಲಿ ತಮ್ಮಿಷ್ಟದ ತಾಣಗಳಿಗೆ ಭೇಟಿ ಕೊಡುತ್ತಲೇ ಇರುತ್ತಾರೆ. ಅದನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಬಾರಿ ಕಾಶಿಗೆ ಪಯಣ ಬೆಳೆಸಿದ್ದು, ಅಲ್ಲಿಗೆ ಭೇಟಿ ನೀಡುತ್ತಿದ್ದಂತೆ ಆಧ್ಯಾತ್ಮಿದ ಮೂಡ್‌ಗೆ ಜಾರಿದ್ದಾರೆ. ಒಂದು ವಿಡಿಯೋವನ್ನು ಶೇರ್ ಮಾಡಿದ್ದಷ್ಟೇ ಅಲ್ಲದೆ, ಸ್ಪಿರಿಚ್ಯುವಲ್ ಆಗಿ ಇಷ್ಟುದ್ದ ಬರೆದುಕೊಂಡಿದ್ದಾರೆ.

Anchor Anupama Gowda wrote about her Kashi experience mentioned silence and death house

ಹೌದು, ನಿರೂಪಕಿ ಅನುಪಮಾ ಗೌಡ ಒಂದಿಷ್ಟು ದಿನ ಬಿಡುವು ತೆಗೆದುಕೊಂಡು ಕಾಶಿಯಲ್ಲಿ ಇದ್ದು ಬಂದಿದ್ದಾರೆ. ಅಲ್ಲಿನ ಸ್ಪಿರಿಚ್ಯೂವಲ್ ವೈಬ್ಸ್ ಅನ್ನು ಅನುಭವಿಸಿ ಬಂದಿದ್ದಾರೆ. ಅಲ್ಲಿನ ಅನುಭವಗಳನ್ನು ವಿಡಿಯೋ ಮಾಡಿ ತಮ್ಮ ಫಾಲೋವರ್ಸ್‌ಗಾಗಿ ಹಂಚಿಕೊಂಡಿದ್ದಾರೆ. ಆದರೆ, ಆ ವಿಡಿಯೋ ಜೊತೆಗೆ ಅವರು ಬರೆದುಕೊಂಡಿರುವ ಸಾಲುಗಳು ನೆಟ್ಟಿಗರ ಗಮನ ಸೆಳೆದಿದೆ.

Also Read
ನನ್ನ ನಿಶ್ಚಿತಾರ್ಥ ಆಯ್ತು, ಆದರೆ ನನಗೆ ಹೋಗೋಕೆ ಆಗಲಿಲ್ಲ ; ಮದುವೆ ವದಂತಿಗೆ ಅನುಪಮಾ ಗೌಡ ಖಡಕ್ ಉತ್ತರ
ನನ್ನ ನಿಶ್ಚಿತಾರ್ಥ ಆಯ್ತು, ಆದರೆ ನನಗೆ ಹೋಗೋಕೆ ಆಗಲಿಲ್ಲ ; ಮದುವೆ ವದಂತಿಗೆ ಅನುಪಮಾ ಗೌಡ ಖಡಕ್ ಉತ್ತರ

ಅನುಪಮಾ ಗೌಡ ಒಂದಿಷ್ಟು ದಿನ ಕಾಶಿಯಲ್ಲಿ ಇದ್ದಿದ್ದಕ್ಕೆ ಅವರ ಆಧ್ಯಾತ್ಮಿಕ ಚಿಂತನೆಗಳು ಬದಲಾದಂತೆ ಕಂಡಿವೆ. ಶಿವನನ್ನು ಕಾಣಲು ಕಾಶಿಗೆ ಹೋದ ಅವರಿಗೆ ಸಾಕಷ್ಟು ಅನುಭವಗಳು ಆಗಿವೆ. ಆ ಅನುಭವಗಳನ್ನು ವಿಡಿಯೋ ಜೊತೆಗೆ ಬರೆದು ಹಂಚಿಕೊಂಡಿದ್ದಾರೆ. ಅದೇನು ಅನ್ನೋದನ್ನು ಅವರು ಹೀಗೆ ಬರೆದುಕೊಂಡಿದ್ದಾರೆ.

ಶಿವನ ಕಾಣಲು ಹೋದ ನನಗೆ ಸಿಕ್ಕಿದ್ದು ಸಾಕಷ್ಟು ,
ಆ ಸಾಕಷ್ಟುಗಳ ಮಧ್ಯೆ ಇದ್ದದು ಮೌನ,
ಆ ಮೌನದ ಮಧ್ಯೆ ಇದ್ದದು ಯೋಚನೆಗಳು,
ಆ ಯೋಚನೆಗಳ ನಡುವಲ್ಲೆ ಕಂಡಿದ್ದು ಸಾವುಗಳ ಮನೆ,
ಆ ಸಾವಿನ ಮನೆಯಲ್ಲೆ ಹುಟ್ಟಿ, ಬದುಕಿ, ಸಾಯುವ ಸಮುದಾಯ,
ಆ ಸಮುದಾಯಕ್ಕೆ ಇಲ್ಲದ ನಮ್ಮ ದೇವರ ಸ್ಥಾನ,
ಪ್ರಾಣವಿಲ್ಲದ ನಮ್ಮ ದೇಹಕ್ಕೆ ಅವರ ಜಾಗವೇ ಕೊನೆಯ ಸ್ಥಾನ..

ನಾ ಕಂಡ ಕಾಶಿ ಆದೆಷ್ಟೋ.....

ಸದ್ಯ ಕಾಶಿ ಪ್ರವಾಸವನ್ನು ಮುಗಿಸಿ ಹಿಂತಿರುಗಿದ್ದಾರೆ. ಸಾಕಷ್ಟು ಮಂದಿಗೆ ಲೈಫ್‌ನಲ್ಲಿ ಒಮ್ಮೆಯಾದರೂ ಕಾಶಿ ಪ್ರವಾಸ ಮಾಡಬೇಕು ಅನ್ನೋ ಆಸೆ ಇರುತ್ತೆ. ಆ ಆಸೆಯನ್ನು ಅನುಪಮಾ ಗೌಡ ಈಡೇರಿಸಿಕೊಂಡಿದ್ದಾರೆ. ಕಾಶಿಯಿಂದ ಬೆಂಗಳೂರಿಗೆ ಮರಳಿದ್ದು, ಹೊಸ ಹುರುಪಿನೊಂದಿಗೆ ಕೆಲಸಕ್ಕೆ ಮರಳಿದ್ದಾರೆ. ಕಾಶಿ ಪ್ರವಾಸದಿಂದ ಅನುಪಮಾ ಗೌಡ ಬದುಕನ್ನು ಹೇಗೆ ಬದಲಾಯಿಸುತ್ತೋ ಮುಂದೆ ಅವರೇ ಹೇಳಬೇಕು.

ಅನುಪಮಾ ರಿಯಾಲಿಟಿ ಶೋಗಳ ನಿರೂಪಣೆ ಮಾಡುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ 'ಗಿಚ್ಚಿಗಿಲಿಗಿಲಿ ಜ್ಯೂನಿಯರ್' ಆಂಕರಿಂಗ್ ಮಾಡುತ್ತಿದ್ದಾರೆ. ನಿರೂಪಣೆಯಲ್ಲಿ ಯಶಸ್ಸು ಕಂಡಿರೋ ಅನುಪಮಾ, ನಟನೆಯಲ್ಲಿಯೂ ಮಿಂಚಿದ್ದಾರೆ. 'ಆ ಕರಾಳ ರಾತ್ರಿ', 'ತ್ರ್ಯಯಂಬಕಂ' ಅನ್ನೋ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮೂಲಕವೂ ಕಿರುತೆರೆ ವೀಕ್ಷಕರಿಗೆ ಹತ್ತಿರ ಆಗಿದ್ದರು.

English summary
Anchor Anupama Gowda wrote about her Kashi experience mentioned silence and death house.
Read more about: anupama gowda kashi anchor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X