ಆರ್ಯವರ್ಧನ್, ಅನು ಸಿರಿಮನೆ ಸ್ಟೋರಿಯಲ್ಲಿ ಭಯಂಕರ ಟ್ವಿಸ್ಟ್: 600 ಸಂಚಿಕೆ ಮುಗಿಸಿದ 'ಜೊತೆಜೊತೆಯಲಿ'

ಸಿನಿಮಾಗಳಷ್ಟೇ ಕಿರುತೆರೆಯಲ್ಲಿ ಧಾರಾವಾಹಿಗಳೂ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಸಂಜೆ ಆಯ್ತು ಅಂದರೆ, ಕರ್ನಾಟಕದ ಮನೆಮನೆಗಳಲ್ಲೂ ಯಾವುದಾದರೂ ಒಂದು ಧಾರಾವಾಹಿಗಳ ಪ್ರಸಾರ ಆಗುತ್ತಲೇ ಇರುತ್ತದೆ. ಕನ್ನಡಿಗರ ಮನೆ ಮನಗೆದ್ದ ಸಾಕಷ್ಟು ಧಾರಾವಾಹಿಗಳಿವೆ. ಅಂತಹದ್ರಲ್ಲಿ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿ 'ಜೊತೆ ಜೊತೆಯಲಿ' ಸಹ ಒಂದು. ಅನಿರುದ್ಧ್ ಹಾಗೂ ಮೇಘಾ ಶೆಟ್ಟಿ ನಟಿಸುತ್ತಿರುವ ಈ ಧಾರಾವಾಹಿ ಹೊಸ ಸಾಧನೆಯನ್ನು ಮಾಡಿದೆ.

ಯಾವುದೇ ಸೀರಿಯಲ್ ಜನ ಮೆಚ್ಚಿಕೊಂಡಿದ್ದಾರೆ ಅಂದರೆ ಅದು ಕನ್ನಡಿಗರ ಮನೆಯಲ್ಲಿ ಮ್ಯಾರಥಾನ್ ಮಾಡಬೇಕು. ಸಿನಿಮಾಗಳು ಥಿಯೇಟರ್‌ಗಳಲ್ಲಿ ನೂರು ದಿನಗಳನ್ನು ಪೂರೈಸುವ ಹಾಗೇ ಧಾರಾವಾಹಿಗಳು 500 ಸಂಚಿಕೆಗಳನ್ನು ಕಂಪ್ಲೀಟ್ ಮಾಡಬೇಕು. ಆಗ ಆ ಧಾರಾವಾಹಿಗೊಂದು ಗತ್ತು ಗೈರತ್ತು. ಈಗ ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಜೊತೆ ಜೊತೆಯಲಿ' ಇಂತಹದ್ದೇ ಒಂದು ವಿಶಿಷ್ಟ ಸಾಧನೆಯನ್ನು ಮಾಡಿದೆ.

 'ಜೊತೆ ಜೊತೆಯಲಿ' ಧಾರಾವಾಹಿಗೆ 600ರ ಸಂಭ್ರಮ

'ಜೊತೆ ಜೊತೆಯಲಿ' ಧಾರಾವಾಹಿಗೆ 600ರ ಸಂಭ್ರಮ

'ಜೊತೆ ಜೊತೆಯಲಿ' ಧಾರಾವಾಹಿ ಜೀ ಕನ್ನಡದಲ್ಲಿ ಯಶಸ್ವಿಯಾಗಿ ಪ್ರಸಾರ ಆಗುತ್ತಿದೆ. ಜನರು ಈ ಧಾರಾವಾಹಿಯಲ್ಲಿ ಬರುವ ಟ್ವಿಸ್ಟ್ ಅಂಡ್ ಟರ್ನ್‌ಗೆ ಮನಸೋತಿದ್ದಾರೆ. ಕರ್ನಾಟಕ ಮೂಲೆ ಮೂಲೆಯಲ್ಲಿರುವ ಕುಟುಂಬದ ಮಹಿಳೆಯರಿಗೆ 'ಜೊತೆ ಜೊತೆಯಲಿ' ಧಾರಾವಾಹಿ ಬಗ್ಗೆ ಪರಿಚಯವಿದೆ. ಆರ್ಯವರ್ಧನ್ ಹಾಗೂ ಅನುಸಿರಿಮನೆ ಪ್ರೀತಿ, ಪ್ರೇಮ, ಮದುವೆ ಎಪಿಸೋಡ್‌ಗಳು ನೆನಪಿವೆ. ಈ ಎರಡೂ ಪಾತ್ರಗಳೂ ತಮ್ಮ ಪರಿಚಯವಿರುವ ಪಾತ್ರಗಳೇ ಎಂದು ಕೊಡಿದ್ದಾರೆ. ಇಷ್ಟು ಜನ ಮನ್ನಣೆ ಗಳಿಸಿರುವ ಈ ಧಾರಾವಾಹಿ ಈಗ 600 ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಈ ಖುಷಿಯನ್ನು ಜೀ ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ.

 ಕಿರುತೆರೆಯಲ್ಲಿ ಟ್ರಂಡ್ ಸೃಷ್ಟಿಸಿದ ಲವ್‌ಸ್ಟೋರಿ

ಕಿರುತೆರೆಯಲ್ಲಿ ಟ್ರಂಡ್ ಸೃಷ್ಟಿಸಿದ ಲವ್‌ಸ್ಟೋರಿ

ಸಿನಿಮಾಗಿಂತಲೂ ಧಾರಾವಾಹಿ ಸೂಕ್ಷ್ಮ. ಒಂದು ಪಾತ್ರ, ಕಥೆಯ ಎಳೆ ಏನಾದರೂ ಯಡವಟ್ಟಾದರೆ ಅಲ್ಲಿಗೆ ಆ ಧಾರಾವಾಹಿ ಕಥೆ ಮುಗೀತು. ಒಂದೊಂದೇ ಎಪಿಸೋಡ್‌ಗಳ ಟಿಆರ್‌ಪಿ ಕುಸಿಯಲು ಆರಂಭಿಸುತ್ತೆ. ಆದರೆ, ಈ ಧಾರಾವಾಹಿ ಆರಂಭದಲ್ಲೇ ಹೊಸ ಸಾಹಸಕ್ಕೆ ಕೈ ಹಾಕಿತ್ತು. 20ರ ಹರೆಯದ ಹುಡುಗಿ, 45ರ ಆಸುಪಾಸಿನ ಮಧ್ಯವಯಸ್ಸಿನ ವ್ಯಕ್ತಿ ಪ್ರೀತಿಯಲ್ಲಿ ಬೀಳುವ ಕಥೆಯನ್ನು ಆಯ್ಕೆ ಮಾಡಿಕೊಂಡಿತ್ತು. ಆರ್ಯವರ್ಧನ್ ಹಾಗೂ ಅನು ಸಿರಿಮನೆ ಎಂಬ ಎರಡು ಪಾತ್ರಗಳು ಪ್ರೀತಿಯನ್ನು ಜನರು ಹೇಗೆ ಒಪ್ಪಿಕೊಳ್ಳುತ್ತಾರೆ ಎನ್ನುವ ಆತಂಕದಲ್ಲೇ ಆರಂಭ ಆಗಿತ್ತು. ಮೊದಲ ಸಂಚಿಕೆಯಿಂದಲೇ ಧಾರಾವಾಹಿಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಜೊತೆಜೊತೆಯಲಿ ಈ ವಿಚಾರದಲ್ಲಿ ಹೊಸ ಟ್ರೆಂಡ್ ಅನ್ನೇ ಸೃಷ್ಟಿಸಿತ್ತು.

 ಆರ್ಯ-ಮನು ಮದುವೆ ಬಳಿಕವೂ ಟ್ವಿಸ್ಟ್

ಆರ್ಯ-ಮನು ಮದುವೆ ಬಳಿಕವೂ ಟ್ವಿಸ್ಟ್

ಒಂದಿಷ್ಟು ಸಂಚಿಕೆಗಳು ಆರ್ಯವರ್ಧನ್ ಹಾಗೂ ಅನುಸಿರಿ ಮನೆ ಪ್ರೀತಿ ಮೇಲೆ ಸಾಗಿತ್ತು. ಇವರಿಬ್ಬರೂ ಮದುವೆ ಆಗುತ್ತಾರಾ, ಅನ್ನುವುದೇ ಕರುನಾಡಿನ ಕಿರುತೆರೆ ಜನರಿಗೆ ದೊಡ್ಡ ಯಕ್ಷ ಪ್ರಶ್ನೆಯಾಗಿ ಕಾಡಿತ್ತು. ಟ್ವಿಸ್ಟ್ ಅಂಡ್ ಟರ್ನ್ ಕೊಟ್ಟು ಕಥೆ ಮುಂದುವರೆಯುತ್ತಿತ್ತು. ಕೊನೆಗೆ ಇಬ್ಬರ ಮದುವೆನೂ ಆಯ್ತು. ಇಲ್ಲಿಗೆ ಜೊತೆ ಜೊತೆಯಲಿ ಧಾರಾವಾಹಿ ಕಥೆ ಮುಗೀತು. ಮುಂದೇನು ಅನ್ನುವ ಮಾತುಗಳು ಕೇಳಿಬಂದಿತ್ತು. ಆದರೆ, 'ಜೊತೆ ಜೊತೆಯಲಿ' ಕನ್ನಡಿಗೆ ಹೊಸ ಟ್ವಿಸ್ಟ್ ಕೊಟ್ಟಿತ್ತು. ಲವ್‌ಸ್ಟೋರಿ, ಫ್ಯಾಮಿಲಿ ಸ್ಟೋರಿಯಾಗಿ ಹಾರರ್‌ ಕಡೆ ವಾಲಿತ್ತು. ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

 ಆರ್ಯವರ್ಧನ್ ಈಗ ವಿಲನ್

ಆರ್ಯವರ್ಧನ್ ಈಗ ವಿಲನ್

ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ್ ಹಾಗೂ ಅನುಸಿರಿ ಮನೆ ಪಾತ್ರದಲ್ಲಿ ಮೇಘಾ ಶೆಟ್ಟಿ ನಟಿಸುತ್ತಿದ್ದಾರೆ. ಇಲ್ಲಿವರೆಗೂ ಆರ್ಯವರ್ಧನ್ ಕನ್ನಡಿಗರ ನೆಚ್ಚಿನ ಪಾತ್ರವಾಗಿತ್ತು. ಆದ್ರೀಗ ಈ ಪಾತ್ರ ನಿಧಾನವಾಗಿ ಖಳನಾಯಕ ರೂಪ ಪಡೆದುಕೊಳ್ಳುತ್ತಿದೆ. ಧಾರಾವಾಹಿಗಳಲ್ಲಿ ಒಂದು ಪಾತ್ರದ ಸ್ವರೂಪ ಬದಲಾದರೆ, ವೀಕ್ಷಕರು ಒಪ್ಪುವುದಿಲ್ಲ. ಆದರೆ, ಅನಿರುದ್ಧ್ ಪಾತ್ರ ಟ್ವಿಸ್ಟ್ ಕೊಟ್ಟಿರುವುದರಿಂದ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಹೊಸತರಹದ ಬದಲಾವಣೆಗಳು ಗೋಚರವಾಗುತ್ತಿವೆ.

More from Filmibeat

English summary
Anirudh Megha Shetty Starrer Kannada serial Jothe Jotheyali Completed 600 episodes in Zee Kannada. Jothe Jotheyali is well known serial in Karnataka has huge fan following.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X