'ಭೈರತಿ ರಣಗಲ್' ಅವತಾರವತ್ತಿದ 'ಅಣ್ಣಯ್ಯ'; ನುಗ್ಗಿ ಹೊಡೀತಿನಿ ಎಂದು ಅವಾಜ್ ಹಾಕಿದ ಸುಧಾರಾಣಿ
ಶಿವಣ್ಣನ ಸಿನಿಮಾ 'ಭೈರತಿ ರಣಗಲ್' ಸ್ಯಾಂಡಲ್‌ವುಡ್ ಜೋರಾಗಿ ಸದ್ದು ಮಾಡುತ್ತಿದೆ. ಬಾಕ್ಸಾಫೀಸ್‌ಲ್ಲಿ ಮೋಡಿ ಮಾಡುತ್ತಿದೆ. ಈ ಗ್ಯಾಪ್‌ನಲ್ಲಿ ಕಿರುತೆರೆಯಲ್ಲೂ 'ಭೈರತಿ ರಣಗಲ್'ನದ್ದೇ ಸದ್ದು. ಜೀ ಕನ್ನಡ ವೀಕೆಂಡ್‌ನಲ್ಲಿ ಫ್ಯಾಮಿಲಿಗಾಗಿ ಬಿಗ್ಗೆಸ್ಟ್ ಎಂಟರ್‌ಟೈನರ್ ಶೋ ಅನ್ನು ಆರಂಭಿಸಿದೆ. ಈಗಾಗಲೇ ಕೆಲವು ಸೀಸನ್‌ಗಳು ಯಶಸ್ವಿಯಾಗಿ ನಡೆದಿವೆ.
ಈ ವಾರ ಜೀ ಕುಟುಂಬದ ಎರಡು ಜನಪ್ರಿಯ ಧಾರಾವಾಹಿಗಳ ತಂಡಗಳು 'ಜೀ ಎಂಟರ್‌ಟೈನರ್ಸ್' ಶೋನಲ್ಲಿ ಭಾಗವಹಿಸುತ್ತಿವೆ. ಸುಧಾರಾಣಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ 'ಶ್ರೀರಸ್ತು ಶುಭಮಸ್ತು' ಹಾಗೂ ಪ್ರಮೋದ್ ಶೆಟ್ಟಿ ನಿರ್ಮಿಸುತ್ತಿರುವ 'ಅಣ್ಣಯ್ಯ'. ಈ ಎರಡೂ ಸೀರಿಯಲ್‌ಗಳ ನಟ-ನಟಿಯರು ಈ ಎಂಟರ್‌ಟೈನರ್ ಶೋನಲ್ಲಿ ಭಾಗವಹಿಸುತ್ತಿದ್ದಾರೆ.

ಈಗಾಗಲೇ ಜೀ ಕನ್ನಡ ವೀಕೆಂಡ್ ಮನರಂಜನೆಯ ಶೋದ ಪ್ರೋಮೊಗಳನ್ನು ರಿಲೀಸ್ ಮಾಡಿದೆ. ಇದರಲ್ಲಿ ಕೆಲವು ಕಂಟೆಂಟ್ ಇಂಟ್ರೆಸ್ಟಿಂಗ್ ಆಗಿವೆ. ಅದರಲ್ಲೂ 'ಅಣ್ಣಯ್ಯ' ಧಾರಾವಾಹಿಯ ಹೀರೋ 'ಭೈರತಿ ರಣಗಲ್' ಅವತಾರ ಎತ್ತಿದ್ದು ಗಮನ ಸೆಳೆಯುತ್ತಿದೆ. ಹಾಗೇ 'ಭೈರತಿ ರಣಗಲ್' ಅವತಾರದಲ್ಲಿರುವ ಅಣ್ಣಯ್ಯನಿಗೆ ಸುಧಾರಾಣಿ ಸವಾಲು ಎಸೆಯುವ ದೃಶ್ಯ ಈ ವೀಕೆಂಡ್‌ನ ಹೈಲೈಟ್.
ಈ 'ಜೀ ಎಂಟರ್‌ಟೈನರ್ಸ್' ಶೋನ ಹೈಲೈಟ್ ಅಂದರೆ, ಜೀ ಕನ್ನಡದ ಧಾರಾವಾಹಿಗಳಲ್ಲಿ ನಟಿಸುತ್ತಿರುವ ನೆಚ್ಚಿನ ಕಲಾವಿದರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಕ್ಯಾಮರಾ ಮುಂದೆ ನಟಿಸುತ್ತಿದ್ದ ಇದೇ ಕಲಾವಿದರು ಟಾಸ್ಕ್‌ನಲ್ಲಿ ಭಾಗವಹಿಸುತ್ತಾರೆ. ಸ್ಮಾರ್ಟರ್, ಸ್ಟ್ರಾಂಗರ್, ಫಾಸ್ಟರ್, ಫ್ಯಾಮಿಲಿಯರ್, ಲಕ್ಕಿಯರ್ ಎಂಬ 5 ಸುತ್ತುಗಳ ಗೇಮ್ ಶೋನಲ್ಲಿ ಎರಡು ತಂಡಗಳ ಪೈಪೋಟಿ ನೋಡುವುದಕ್ಕೆ ಚಂದ.
ಈ ವೀಕೆಂಡ್‌ನಲ್ಲಿ ಎರಡು ತಂಡಗಳು ಭಾಗವಹಿಸುತ್ತಿದೆ. ಜೀ ಕನ್ನಡದ ಎರಡು ಜನಪ್ರಿಯ ಧಾರಾವಾಹಿಗಳಾದ 'ಅಣ್ಣಯ್ಯ' ಹಾಗೂ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಗಳು ಕಲಾವಿದರು ಈ ಗೇಮ್ ಶೋನಲ್ಲಿ ಪರಸ್ಪರ ಪೈಪೋಟಿಗೆ ಬಿದ್ದು ಆಡಲಿದ್ದಾರೆ. ಈ ಬಾರಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ನಟಿಸುತ್ತಿರುವ ಸುಧಾರಾಣಿ, ಅಜಿತ್ ಹಂದೆ ಹಾಗೂ ಪ್ರಮುಖ ಪಾತ್ರಧಾರಿಗಳು ಭಾಗವಹಿಸಿದ್ದಾರೆ.

ಈ ಶೋನಲ್ಲಿ ಭಾಗವಹಿಸುತ್ತಿರುವ ಇನ್ನೊಂದು ತಂಡ 'ಅಣ್ಣಯ್ಯ'. ಈ ಸೀರಿಯಲ್‌ನ ಪ್ರಮುಖ ಪಾತ್ರಧಾರಿ ವಿಕಾಸ್ ಉತ್ತಯ್ಯ ಹಾಗೂ ಅವರ ತಂಗಿಯಂದಿರ ಪಾತ್ರದಲ್ಲಿ ನಟಿಸುತ್ತಿರುವ ಕಲಾವಿದರು ಭಾಗವಹಿಸಿದ್ದಾರೆ. ಈ ಎರಡೂ ತಂಡಗಳ ನಡುವಿನ ಪೈಪೋಟಿ ಈ ವಾರದ 'ಜೀ ಎಂಟರ್‌ಟೈನರ್ಸ್' ಶೋನ ಪ್ರಮುಖ ಆಕರ್ಷಣೆಯಾಗಿದೆ. ಸದ್ಯ ಪ್ರೋಮೊಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಕಿಕ್ ಕೊಡುತ್ತಿವೆ.
"ಸವಾಲಿಗೆ ಇನ್ನೊಂದು ಹೆಸರು ಅಂತ ಬಂದಿರೋ 'ಅಣ್ಣಯ್ಯ'ನಿಗೆ ಸೈಲೆಂಟಾಗೇ ಚಾಲೆಂಜ್ ಮಾಡ್ತಿದೆ 'ಶ್ರೀರಸ್ತು ಶುಭಮಸ್ತು' ಕುಟುಂಬ. ಎರಡು ಟೀಮ್‌ಗಳ ನಡುವೆ ಸಕತ್ ಫೈಟ್; ಗೆಲ್ಲೋದ್ಯಾರು?" ಅಂತ ವೀಕ್ಷಕರನ್ನು ಜೀ ಕನ್ನಡ ರೊಚ್ಚಿಗೆಬ್ಬಿಸಿದೆ. ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಕಿರುತೆರೆ ವೀಕ್ಷಕರಿಗೆ ಸಖತ್ ಮನರಂಜನೆ ಸಿಗಲಿದೆ. ಎರಡು ಟೀಮ್‌ಗಳು ಪೈಪೋಟಿ ಜೊತೆಗೆ ಮನರಂಜನೆ ಸಿಗುವುದಂತೂ ಗ್ಯಾರಂಟಿ.


Click it and Unblock the Notifications











