ಅಂದಿನ ಶಾಲಾ ಬಾಲಕಿ ಇಂದಿನ ಶಿಲಾಬಾಲಿಕೆ; ಯಾರಿವರು ಗುರುತಿಸಬಲ್ಲಿರೇನು?

ಈ ನಟಿ ಇಂದು ಕನ್ನಡ ಕಿರುತೆರೆಯ ಸ್ಟಾರ್ ನಟಿ. ಕನ್ನಡದ ಅತ್ಯಂತ ಜನಪ್ರಿಯ ಸೀರಿಯಲ್‌ನಲ್ಲಿ ಈ ನಟಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಈಗಾಗಲೇ ಒಂದು ಮೆಗಾ ಸೀರಿಯಲ್‌ನಲ್ಲೂ ನಟಿಸಿದ್ದಾರೆ. ಕನ್ನಡಿಗರ ಮನೆ ಮನೆಗೂ ಈ ನಟಿಯ ಪರಿಚಯವಿದೆ. ಇವರ ಸೀರಿಯಲ್ ನೋಡುವುದಕ್ಕೆ ಹೆಣ್ಣು ಮಕ್ಕಳು ಕಾದು ಕೂತಿರುತ್ತಿದ್ದಾರೆ. ಆ ಮಟ್ಟಿಗೆ ಹೆಂಗಳೆಯರ ಮೇಲೆ ಪ್ರಭಾವ ಬೀರಿದ್ದಾರೆ.

ಆದರೆ, ಈ ನಟಿ ವೃತ್ತಿ ಜೀವನದ ಹಿನ್ನೆಲೆ ಬಹಳ ಹಳೆಯದ್ದು. ಈ ನಟಿ ಕೆಲವೇ ವರ್ಷಗಳ ಹಿಂದೆ ಕಿರುತೆರೆಗೆ ಪ್ರವೇಶ ಮಾಡಿರಬಹುದು ಅಂತ ಕೆಲವರು ಅಂದುಕೊಂಡಿರಬಹುದು. ಆದರೆ, ಈಕೆ ಬಾಲ್ಯದಿಂದಲೇ ಕ್ಯಾಮರಾ ಫೇಸ್ ಮಾಡಿದವರು. ಬಾಲಕಿಯಾಗಿದ್ದಾಗಿನಿಂದಲೇ ಕ್ಯಾಮರಾ ಮುಂದೆ ನಿಂತು ಗಂಟೆಗಟ್ಟಲೇ ಮಾತಾಡುತ್ತಿದ್ದ ನಟಿಯೀಕೆ. ಈಗ ಕನ್ನಡ ಕಿರುತೆರೆಯ ಜನಪ್ರಿಯ ನಟಿಯಾಗಿ ಹೊರ ಹೊಮ್ಮಿದ್ದಾರೆ.

Annayya Gattimela Actress Nisha Ravikrishnan Started Career as Anchor in Chintu TV here is viral video

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಕಿರುತೆರೆ ನಟಿ ಬಾಲ್ಯದಲ್ಲಿ ನಿರೂಪಣೆ ಮಾಡಿದ್ದ ವಿಡಿಯೋ ಒಂದು ಹರಿದಾಡುತ್ತಿದೆ. ನೆಟ್ಟಿಗರು ಆ ವಿಡಿಯೋ ನೋಡಿ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಕೆಲವರು ಎಲ್ಲೋ ನೋಡಿರುವಂತೆ ಅನುಭವ ಆಯ್ತು ಎಂದೂ ಹೇಳಿಕೊಂಡಿದ್ದಾರೆ. ಹಾಗಿದ್ದರೆ, ನೀವು ಈ ನಟಿ ಯಾರು ಅಂತ ಕಂಡು ಹಿಡಿದರೇ? ಈಗ ಈಕೆ ನಟಿಸುತ್ತಿರುವ ಜನಪ್ರಿಯ ಧಾರಾವಾಹಿ ಯಾವುದು? ನಟಿ ಯಾರು? ಅಂತ ಕಂಡು ಹಿಡಿಯಬಹುದೇ?

ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಧಾರಾವಾಹಿಗಳನ್ನು ನೋಡುವ ಬಹುತೇಕ ಮಂದಿ ಇವರಿಗೆ ಅಭಿಮಾನಿಗಳು. ಇವರದ್ದೇ ಆದ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ. ಈ ಹಿಂದೆ ನಟಿಸಿದ ಸೀರಿಯಲ್ ಕೂಡ ಭಾರೀ ಜನಮನ್ನಣೆಯನ್ನು ಪಡೆದುಕೊಂಡಿತ್ತು. ಈಗ ಮತ್ತೊಂದು ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅದೂ ಕೂಡ ಕಿರುತೆರೆ ವೀಕ್ಷಕರ ಗಮನ ಸೆಳೆದಿದೆ.

ಈಗಾಗಲೇ ನಿಮಗೆ ಈ ನಟಿ ಯಾರು ಅನ್ನೋದು ಅರಿವಿಗೆ ಬಂದಿರುತ್ತೆ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಅಣ್ಣಯ್ಯ' ಧಾರಾವಾಹಿಯ ನಟಿ ನಿಶಾ ರವಿಕೃಷ್ಣನ್. ಇದೇ ಜೀ ಕನ್ನಡದಲ್ಲಿ ಈ ಹಿಂದೆ ಜನಪ್ರಿಯ ಧಾರಾವಾಹಿ 'ಗಟ್ಟಿಮೇಳ'ದಲ್ಲೂ ನಾಯಕಿಯಾಗಿ ನಟಿಸಿದ್ದರು. ಆ ಧಾರಾವಾಹಿ ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಈ ಎರಡು ಧಾರಾವಾಹಿಗಳು ಕಿರುತೆರೆಯಲ್ಲಿ ನಿಶಾ ರವಿಕೃಷ್ಣನ್ ಅವರನ್ನು ಉತ್ತುಂಗಕ್ಕೆ ಕರೆದುಕೊಂಡು ಹೋಗಿದೆ.

ಆದರೆ, ಬಾಲಕಿಯಾಗಿದ್ದಾಗಲೇ ನಿಶಾ ರವಿಕೃಷ್ಣನ್ ಕ್ಯಾಮರಾ ಮುಂದೆ ಪ್ರತ್ಯಕ್ಷ ಆಗಿದ್ದರು. ಮಕ್ಕಳನ್ನು ರಂಜಿಸುವುದಕ್ಕಂತಲೇ ಇದ್ದ ಚಿಂಟೂ ಟಿವಿಯಲ್ಲಿ ನಿರೂಪಕಿಯಾಗಿದ್ದರು. ಸಾಕಷ್ಟು ಎಪಿಸೋಡ್‌ಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಇದೇ ಹಳೆ ವಿಡಿಯೋವನ್ನು ನೆಟ್ಟಿಗರೊಬ್ಬರು ತಮ್ಮ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿದ್ದರು. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಅಚ್ಚರಿಯಿಂದ ಕಮೆಂಟ್‌ಗಳ ಮೇಲೆ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಇಲ್ಲಿಂದ ನಿಶಾ ರವಿಕೃಷ್ಣನ್ ನಾಟಕಗಳ ಕಡೆಗೆ ಮುಖ ಮಾಡಿದ್ದರು. ಮಂಡ್ಯ ರಮೇಶ್ ಅವರ ತಂಡವನ್ನು ಸೇರಿಕೊಂಡು ನಾಟಕಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಇದಾದ್ಮೇಲೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ 'ಇಷ್ಟಕಾಮ್ಯ' ಸಿನಿಮಾದಲ್ಲಿ ಬ್ಯಾಕ್ ಡ್ಯಾನ್ಸರ್ ಆಗಿ ಸಿನಿಮಾರಂಗ ಎಂಟ್ರಿ ಕೊಟ್ಟಿದ್ದರು. ನಟನೆ ಜೊತೆಗೆ ಭರತನಾಟ್ಯ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲೂ ಪರಿಣಿತರಾಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿಯಲ್ಲಿ ನಾಯಕಿಯ ತಂಗಿಯ ಪಾತ್ರದ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಅಲ್ಲಿಂದ ಮತ್ತೆ ತಿರುಗಿ ನೋಡಲೇ ಇಲ್ಲ.

More from Filmibeat

English summary
Popular Annayya serial actress Nisha Ravikrishnan began her career as an anchor on Chintu TV during her early days. Before becoming a household name in Kannada television, she showcased her talent as a kids’ show host.
Read more about: actress serial tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X