'ಅಣ್ಣಯ್ಯ' ಸೀರಿಯಲ್ ಸೀನನ ಪಿಂಕಿ ಹಾರೋಗಿದೆ;"ಈ ಸೀನ್‌ನ ಸೀನ ನೋಡಿದ್ರೆ ಸತ್ತೋಗ್ತಾನೆ" ನೆಟ್ಟಿಗರ ಕಮೆಂಟ್ ನೋಡಿ

oಅಣ್ಣಯ್ಯ ಸೀರಿಯಲ್‌ನಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಾ ಇದೆ. ಅಣ್ಣಯ್ಯನಿಗೆ ತಂಗಿಯಂದರೆಂದರೆ ಪಂಚ ಪ್ರಾಣ. ಈಗ ನೋಡಿದ್ರೆ ತಂಗಿಯಂದಿರ ಬಾಳಲ್ಲಿಯೇ ಅಡೆತಡೆಗಳು ಬರುತ್ತಾ ಇದಾವೆ. ಅದರಲ್ಲೂ ಗುಂಡಮ್ಮ ಬಾಳಲ್ಲಿ ಬಿರುಗಾಳಿಯೇ ಬೀಸಿತ್ತು. ಪಿಂಕಿ ಎಂಬ ಬಂಡೆ ಕಲ್ಲನ್ನ ತಡೆದು ನಿಲ್ಲಿಸಿದ್ದಾಳೆ ಅಣ್ಣಯ್ಯ ತಂಗಿ ಗುಂಡಮ್ಮ.

ಸೀನ ಮತ್ತೆ ಪಿಂಕಿ ವಿಚಾರ ರಶ್ಮಿಗೂ ಗೊತ್ತಿತ್ತು. ಆದರೆ, ಮನೆಯವರ ಮುಂದೆ ಏನು ಗೊತ್ತಿಲ್ಲ ಎಂಬಂತೆ ನಾಟಕವಾಡ್ತಾ ಇದ್ದಳು. ಪಿಂಕಿಗೆ ಬುದ್ದಿ ಕಲಿ, ಸೀನನನ್ನ ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳುವ ಕೆಲಸವು ನಡೆಯುತ್ತಿತ್ತು. ಅದ್ಯಾಕೋ ಏನೋ ಇದ್ದಕ್ಕಿದ್ದ ಹಾಗೇ ಗುಂಡಮ್ಮ ಸೋತವಳಂತೆ ಬದಲಾಗಿ ಬಿಟ್ಟಳು. ಸೀನನನ್ನೇ ಬಿಟ್ಟುಕೊಡುವ ಹಂತಕ್ಕೆ ಬಂದಳು. ಪಿಂಕಿನ ಮದುವೆ ಮಾಡಿಸ್ತೀನಿ, ಸೀನ ಚೆನ್ನಾಗಿರ್ಬೇಕು ಅಂದುಕೊಂಡಳು. ಇಲ್ಲಿನೆ ಇರೋದು ನೋಡಿ ಟ್ವಿಸ್ಟ್. ಸೀನನಿಗೆ ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾಳೆ. ಇದೆಲ್ಲಾ ಸೀರಿಯಲ್ ಕಥೆ ನಾವೇಳೋಕೆ ಹೊರಟಿರೋದು ಸೀನನ ಹುಡುಗಿ ಪಿಂಕಿ ಕಥೆ.

Annayya Kannada serial Pinky name Sahana Shetty marriage and other details

ಪಿಂಕಿಗಾಗಿ ಸೀನನ ಜಪ

ಸೀನನಿಗೆ ಪಿಂಕಿ ಅಂದ್ರೆ ಭಲೇ ಇಷ್ಟ. ಯಾಕಂದ್ರೆ, ಅದೊಂದು ಹಳ್ಳಿ.. ಆ ಹಳ್ಳಿಯಲ್ಲೂ ಸಖತ್ತಾಗಿ ಕಾಣಿಸ್ತಾ ಇರೋದು ಅಂದ್ರೆ ಅದು ಪಿಂಕಿ. ಸ್ವಲ್ಪ ಸ್ಟೈಲಿಶ್ ಆಗಿಯೂ ಕಾಣಿಸ್ತಾಳೆ. ಸೀನನಿಗೋ ಜಿಮ್ ಮಾಲೀಕನಾಗಬೇಕೆಂಬ ಆಸೆ. ಇಬ್ಬರ ನಡುವೆ ಲವ್ ಆಗಿತ್ತು. ಪಾಪ ಮದುವೆ ಆಗ್ಬೇಕು ಅನ್ನೋ ಅಷ್ಟರಲ್ಲಿ ವಿಧಿ ರಶ್ಮಿನ ಗಂಟಾಕಿದೆ. ಮದುವೆ ಆದ್ರೂ ಸೀನ ಮಾತ್ರ ಪಿಂಕಿ ಹಿಂದೆನೇ ಓಡ್ತಾ ಇದ್ದಾನೆ.

ರಶ್ಮಿಯನ್ನೇ ಕಾಡಿಸಿದ್ದ ಪಿಂಕಿ

ರಶ್ಮಿ ಹೇಳೋ ಅಷ್ಟು ಹೇಳಿದ್ಲು. ನೋಡೋ ಅಷ್ಟು ನೋಡಿದ್ಲು. ಪಿಂಕಿಗೆ ಸೀನನಿಗೆ ಬೆಟ್ಟದಷ್ಟು ಆಸೆ ಹುಟ್ಟಿಸಿ, ಡಿವೋರ್ಸ್ ಕೊಡ್ತೀನಿ, ಇವತ್ತೇ ನಿಮ್ಮ ಮದುವೆ ಮಾಡಿಸ್ತೀನಿ ಅಂತ ಸಬ್ ರಿಜಿಸ್ಟರ್ ಕಚೇರಿಗೆ ಕರೆಸಿ, ಗೋಳೋ ಅಂತ ಕಣ್ಣೀರಾಕ್ತಾ ನಾಟಕ ಶುರು ಮಾಡಿದ್ಲು. ಅಲ್ಲಿಗೆ ಸೀನ - ಪಿಂಕಿ ಕನಸಿಗೆ ಕೊಳ್ಳಿ ಬಿತ್ತು.

Annayya Kannada serial Pinky name Sahana Shetty marriage and other details

ಪಿಂಕಿಯ ರಿಯಲ್ ಸೀನ ಯಾರ್ ಗೊತ್ತಾ?

ಇದೆಲ್ಲದರ ನಡುವೆ ಸೀನನ ಅಭಿಮಾನಿಗಳಿಗೆ ದಿಗಿಲು ಬಡಿಯೋ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಿದೆ. ಪಿಂಕಿ ಮೇಲೆ ಸೀನಂಗೆ ಮಾತ್ರವಲ್ಲ ಅದೆಷ್ಟೋ ಪಡ್ಡೆ ಹೈಕ್ಳಿಗೂ ರಿಯಲ್ ಆಗಿನೂ ಕ್ರಶ್ ಗಿಶ್ ಅಂತ ಆಗಿತ್ತು. ಈಗ ನೋಡಿದ್ರೆ ಪಿಂಕಿಗೆ ರಿಯಲ್ ಲೈಫ್‌ನಲ್ಲಿ ಮದುವೆ ಆಗಿದೆ. ಅವರ ಪತಿರಾಯ ಒಂದು ಬ್ಯೂಟಿಫುಲ್ ವಿಡಿಯೋ ಹಂಚಿಕೊಂಡಿದ್ದಾರೆ. ಅವರಿಬ್ಬರ ನಡುವಿನ ಪ್ರೀತಿ, ಬಾಂಡಿಂಗ್, ಸೆಲೆಬ್ರೇಷನ್ ಎಲ್ಲವೂ ಸೇರಿರುವ ವಿಡಿಯೋ ಅದು. ಅದಕ್ಕೆ ಅಭಿಮಾನಿಗಳು ಮಸ್ತ್ ಆಗಿ ಕಮೆಂಟ್ ಹಾಕುತ್ತಿದ್ದಾರೆ.

ವೀಕ್ಷಕರಿಗೆ ಸೀನನದ್ದೇ ಚಿಂತೆ

ಈ ವಿಡಿಯೋ ನೋಡಿದಾಗ ಸೀನನ ಫ್ಯಾನ್ಸ್ ಗೆ ಅನ್ಸಿದ್ದು ಒಂದೇ, ಸೀನನಿಗೇನಾದ್ರೂ ಈ ವಿಡಿಯೋ ಕಂಡರೆ ಎದೆ ಬಡಿದುಕೊಂಡು ಸತ್ತೋಗ್ತಾನೆ ಅಂತ. ಯಾಕಂದ್ರೆ ಪಿಂಕಿ ಮೇಲೆ ಪ್ರಾಣನೇ ಇಟ್ಟುಕೊಂಡವನೆ. ಇದೆಲ್ಲಾ ಸೀರಿಯಲ್ ಕಥೆ ಅಷ್ಟೇ. ಅವರ ಫ್ಯಾನ್ಸ್ ಕೂಡ ಹಾಗೇ ರೇಗಿಸಿದ್ದಾರೆ. ಬಟ್ ಇನ್ನು ಒಂದಷ್ಟು‌ ಮಂದಿ ಈ ಸುಂದರ ಜೋಡಿಗೆ ಶುಭ ಹಾರೈಕೆಗಳನ್ನು ತಲುಪಿಸಿದ್ದಾರೆ. ಇನ್ನು ಹಲವರು ಅಯ್ಯಯ್ಯೋ ಪಿಂಕಿಗೆ ಮದುವೆ ಆಗೋಗಿದ್ಯಾ ಅನ್ನೋ ಪ್ರಶ್ನೆಗಳನ್ನು ಕಮೆಂಟ್ ನಲ್ಲಿಯೇ ಹಾಕಿದ್ದಾರೆ. ಒಂದೊಂದು ಕಮೆಂಟ್ ಸೀರಿಯಲ್‌ನಲ್ಲಿ ಈ ಜೋಡಿಯ ಸೀನ್‌ಗಳಿದ್ದಂತೆ ಮಜವಾಗಿದೆ.

More from Filmibeat

English summary
Annayya Kannada serial Pinky name Sahana Shetty marriage and other details.
Read more about: actress tv show serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X