TRP Report:ಕಿರುತೆರೆ ಟಿಆರ್‌ಪಿ ಯುದ್ಧ: ಜೂನ್ 4ರ ರಿಪೋರ್ಟ್‌ನಲ್ಲಿ ಗೆದ್ದವರು ಯಾರು? 4 ವಾಹಿನಿಗಳ ಟಾಪ್ 5 ಶೋಗಳಿವು

ಕನ್ನಡ ಕಿರುತೆರೆಯಲ್ಲಿ ನಾಲ್ಕು ಪ್ರಮುಖ ವಾಹಿನಿಗಳ ಮಧ್ಯೆ ಪ್ರತಿವಾರ ಧಾರಾವಾಹಿಗಳು, ರಿಯಾಲಿಟಿ ಶೋಗಳ ನಡುವೆ ಟಿಆರ್‌ಪಿಗಾಗಿ ಪೈಪೋಟಿ ನಡೆಯುತ್ತಲೇ ಇರುತ್ತೆ. ಪ್ರತಿವಾರವೂ ಈ ಸ್ಪರ್ಧೆ ಹೆಚ್ಚಾಗುತ್ತಲೇ ಇದೆ. ಪ್ರೇಕ್ಷಕರನ್ನು ತಮ್ಮತ್ತ ಸೆಳೆಯಲು ಜೀ ಕನ್ನಡ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ ಹಾಗೂ ಸನ್ ಉದಯ ಜೋರಾಗಿಯೇ ಕಾಂಪಿಟೇಷನ್‌ಗೆ ಬಿದ್ದಿವೆ.

ಇಂದು (ಜೂನ್ 4) ಕನ್ನಡದ ನಾಲ್ಕು ಮನರಂಜನಾ ವಾಹಿನಿಗಳ ಟಿಆರ್‌ಪಿ (TRP) ರಿಪೋರ್ಟ್ ಹೊರಬಿದ್ದಿದೆ. ಈ ವಾರ ಕಿರುತೆರೆಯ ಸುಲ್ತಾನ್ ಯಾರು ಎಂಬುದು ಮತ್ತೊಮ್ಮೆ ಹೊರ ಬಿದ್ದಿದೆ. ಕಳೆದ ವಾರದಂತೆಯೇ ಈ ಬಾರಿಯೂ ಜೀ ಕನ್ನಡ ತನ್ನ ನಂಬರ್ ಒನ್ ಸಿಂಹಾಸನವನ್ನು ಕಾಯ್ದುಕೊಂಡರೆ, ಸ್ಟಾರ್ ಸುವರ್ಣ ದ್ವಿತೀಯ ಸ್ಥಾನದಲ್ಲೇ ಮುಂದುವರಿದಿದೆ. ಕಲರ್ಸ್ ಕನ್ನಡ 3ನೇ ಸ್ಥಾನದಲ್ಲಿ ಹಾಗೂ 4ನೇ ಸ್ಥಾನದಲ್ಲಿ ಸನ್ ಉದಯ ಇದೆ. ಹಾಗಿದ್ದರೆ, ಈ ನಾಲ್ಕು ವಾಹಿನಿಗಳ ಟಿಆರ್‌ಪಿ ರೇಟಿಂಗ್ ಹೀಗಿದೆ.

Annayya Karna to Sri Gandada Gudi June 4th Kannada serial and reality show TRP report

ಜೀ ಕನ್ನಡ (ಮೊದಲ ಸ್ಥಾನ - 450 ಅಂಕಗಳು)

ಕಿರುತೆರೆಯಲ್ಲಿ ಜೀ ಕನ್ನಡ ವಾಹಿನಿಯ ಅಧಿಪತ್ಯ ಮುಂದುವರಿದಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಈ ಬಾರಿ ಬರೋಬ್ಬರಿ 14 ಅಂಕ ಕಡಿಮೆಯಾಗಿದೆ. ಆದರೂ ಒಟ್ಟು 450 ಅಂಕಗಳೊಂದಿಗೆ ಟಾಪ್‌ನಲ್ಲಿದೆ. 'ಅಣ್ಣಯ್ಯ' ಹಾಗೂ 'ಕರ್ಣ' ಧಾರಾವಾಹಿಗಳು ಹಿಂದಿನ ವಾರದಂತೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ.

ಧಾರಾವಾಹಿ ಹೆಸರು - ಟಿಆರ್‌ಪಿ (TRP)
ಅಣ್ಣಯ್ಯ - 5.1
ಕರ್ಣ - 5.1
ಸರಿಗಮಪ ಲಿಟಲ್ ಚಾಂಪ್ಸ್ - 4.7
ಲಕ್ಷ್ಮಿ ನಿವಾಸ - 4.4
ಅಮೃತಧಾರೆ 4.3

ಸ್ಟಾರ್ ಸುವರ್ಣ (ಎರಡನೇ ಸ್ಥಾನ - 312 ಅಂಕಗಳು)

ಇತ್ತೀಚೆಗೆ ಸ್ಟಾರ್‌ ಸುವರ್ಣ ಅವರ ಟಾಪ್‌ ಲಿಸ್ಟ್‌ನಲ್ಲಿದ್ದ ಭಕ್ತಿ ಪ್ರಧಾನ ಧಾರಾವಾಹಿಗಳಿಗೆ ಬ್ರೇಕ್ ಹಾಕಿದೆ. ರೆಗ್ಯುಲರ್ ಕೌಟುಂಬಿಕ ಕಥೆಗಳತ್ತ ಮುಖ ಮಾಡಿರುವ ವಾಹಿನಿ 312 ಅಂಕಗಳೊಂದಿಗೆ 2ನೇ ಸ್ಥಾನವನ್ನು ಗಟ್ಟಿಯಾಗಿಸಿಕೊಂಡಿದೆ. 'ನಿನ್ನ ಜೊತೆ ನನ್ನ ಕಥೆ' ಸ್ಟಾರ್ ಸುವರ್ಣದ ಟಾಪ್ ಧಾರಾವಾಹಿಯಾಗಿ ಹೊರ ಹೊಮ್ಮಿದೆ.

Also Read
Bigg Boss Kannada 13: ಅಂದ್ಕೊಂಡಿದ್ದಕ್ಕಿಂತ ಬೇಗನೇ ಶುರು ಬಿಗ್ ಬಾಸ್; ಈ ಬಾರಿಯ ಥೀಮ್ ಏನು?
Bigg Boss Kannada 13: ಅಂದ್ಕೊಂಡಿದ್ದಕ್ಕಿಂತ ಬೇಗನೇ ಶುರು ಬಿಗ್ ಬಾಸ್; ಈ ಬಾರಿಯ ಥೀಮ್ ಏನು?

ಧಾರಾವಾಹಿ ಹೆಸರು - ಟಿಆರ್‌ಪಿ (TRP)
ನಿನ್ನ ಜೊತೆ ನನ್ನ ಕಥೆ - 3.4
ಶಾರದೆ - 3.3
ಆಸೆ - 3.3
ಜೈ ಲಲಿತಾ - 2.9
ಉದೋ ಉದೋ ಶ್ರೀರೇಣುಕಾ ಯಲ್ಲಮ್ಮ- 2.6

Annayya Karna to Sri Gandada Gudi June 4th Kannada serial and reality show TRP report

ಕಲರ್ಸ್ ಕನ್ನಡ (ಮೂರನೇ ಸ್ಥಾನ - 299 ಅಂಕಗಳು)

ಕಲರ್ಸ್ ಕನ್ನಡ 7 ಅಂಕಗಳನ್ನು ಹೆಚ್ಚಿಸಿಕೊಂಡಿದ್ದರೂ, 299 ಅಂಕಗಳೊಂದಿಗೆ ಕಲರ್ಸ್ ಕನ್ನಡ ಮೂರನೇ ಸ್ಥಾನದಲ್ಲಿದೆ. ವಾಹಿನಿಯ ಹಳೆಯ ಹಾಗೂ ಹೊಸ ಸೀರಿಯಲ್‌ಗಳ ನಡುವೆ ಭರ್ಜರಿ ಪೈಪೋಟಿ ಇದ್ದು 'ಶ್ರೀಗಂಧದ ಗುಡಿ', 'ನಂದಗೋಕುಲ' ಹಾಗೂ 'ಮುದ್ದು ಸೊಸೆ' ಧಾರಾವಾಹಿಗಳು ವಾಹಿನಿಗೆ ಹೆಚ್ಚಿನ ಬಲ ತಂದುಕೊಟ್ಟಿವೆ.

ಧಾರಾವಾಹಿ ಹೆಸರು ಟಿಆರ್‌ಪಿ (TRP)
ಶ್ರೀಗಂಧದ ಗುಡಿ- 4.6
ನಂದಗೋಕುಲ - 4.2
ಮುದ್ದು ಸೊಸೆ - 3.9
ಗೌರಿ ಕಲ್ಯಾಣ - 3.9
ಪವಿತ್ರ ಬಂಧನ - 3.5

ಸನ್ ಉದಯ (ನಾಲ್ಕನೇ ಸ್ಥಾನ - 199 ಅಂಕಗಳು)

ಉದಯ ಟಿವಿಯ ಒಟ್ಟಾರೆ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ ಈ ವಾರ ಏರಿಕೆ ಕಂಡುಬಂದಿದ್ದು, 199 ಅಂಕಗಳನ್ನು ಪಡೆದಿದೆ. 'ಮೈನಾ' ಧಾರಾವಾಹಿ ಟಾಪ್ ಲಿಸ್ಟ್‌ನಲ್ಲಿದೆ. 'ಶಾಂಭವಿ' ಟಿಆರ್‌ಪಿಯಲ್ಲಿ ಯತಾಸ್ಥಿತಿ ಕಾಯ್ತುಕೊಂಡಿದೆ.

ಮೈನಾ - 2.2
ಶಾಂಭವಿ 2.2
ಸೂರ್ಯವಂಶ 2.0
ಶಾಂತಿ ನಿವಾಸ- 1.9
ಮುಗೂತಿ ಮಲ್ಲಿ-1.9

English summary
Annayya, Karna to Sri Gandada Gudi June 4th Kannada serial and reality show TRP report. Zee Kannada, Colors Kannada, Star Suvaran and Uday TV's top 5 shows TRP list.
Read more about: tv show serial trp
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X