SSLC Result 2026; 'ಅಣ್ಣಯ್ಯ' ಧಾರಾವಾಹಿ ನಟಿ ಅಂಕಿತಾ ಎಸ್‌ಎಸ್‌ಎಲ್‌ಸಿಯಲ್ಲಿ ಡಿಸ್ಟಿಂಕ್ಷನ್; ಭೇಷ್ ಎಂದ ಕನ್ನಡಿಗರು
ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಅಣ್ಣಯ್ಯ' ಧಾರಾವಾಹಿ ನೋಡುತ್ತಿರುವವರಿಗೆ ರಮ್ಯಾ ಪಾತ್ರಧಾರಿ ಪರಿಚಯ ಚೆನ್ನಾಗಿ ಇತ್ತು. ಶಿವಣ್ಣನ ನಾಲ್ಕು ಮಂದಿ ತಂಗಿಯಂದಿರಲ್ಲಿ ರಮ್ಯಾ ಕೂಡ ಒಬ್ಬರು. ಅಸಲಿಗೆ ಇದು ಸೀರಿಯಲ್‌ನಲ್ಲಿ ಇಟ್ಟಿರುವ ಹೆಸರು. ಅವರ ರಿಯಲ್ ನೇಮ್ ಅಂಕಿತಾ ಗೌಡ. ಶಿವಣ್ಣನ ಪುಟ್ಟ ತಂಗಿಯಾಗಿ ಈಗಾಗಲೇ ಕನ್ನಡಿಗರ ಮನ ಗೆದ್ದಿದ್ದಾರೆ.
ಅಂಕಿತಾ ಗೌಡ 2026ರ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯನ್ನು ಬರೆದಿದ್ದರು. ಧಾರಾವಾಹಿಯಲ್ಲಿ ನಟಿಸುತ್ತಲೇ ಶಿಕ್ಷಣವನ್ನು ಮುಂದುವರೆಸಿದ್ದರು. ನಟನೆಯಲ್ಲಿ ಕನ್ನಡಿಗರ ಮನ ಗೆದ್ದಂತೆ, ಓದಿನಲ್ಲೂ ಬುದ್ದಿವಂತೆ ಅನ್ನೋದನ್ನು ಸಾಬೀತು ಮಾಡಿದ್ದಾರೆ. ಅದಕ್ಕೆ ಇಂದು (ಏಪ್ರಿಲ್ 23) ಶಿಕ್ಷಣ ಇಲಾಖೆ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಪ್ರಕಟಿಸಿತ್ತು. ಈ ಬಾರಿ ರಾಜ್ಯದಲ್ಲಿ ಅತೀ ಹೆಚ್ಚು ಮಂದಿ ಉತ್ತೀರ್ಣ ಹೊಂದಿದ್ದಾರೆ. ಅದರಲ್ಲಿ ಅಂಕಿತಾ ಗೌಡ ಕೂಡ ಒಬ್ಬರು.

ಅಂಕಿತಾ ಗೌಡ ಧಾರಾವಾಹಿಯಲ್ಲಿ ನಟಿಸುತ್ತಲೇ ಶಿಕ್ಷಣವನ್ನು ಮುಂದುವರೆಸಿದ್ದರು. ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲೂ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದಾರೆ. ಹಾಗಂತ ಕೇವಲ ಪಾಸ್ ಅಷ್ಟೇ ಆಗಿಲ್ಲ. ಡಿಸ್ಟಿಂಕ್ಷನ್ ಅಲ್ಲಿ ಉತ್ತೀರ್ಣ ಹೊಂದಿದ್ದಾರೆ. ಹಾಗಿದ್ದರೆ, ಅವರಿಗೆ ಎಸ್‌ಎಸ್‌ಎಲ್‌ಸಿಯಲ್ಲಿ ಸಿಕ್ಕ ಅಂಕಗಳು ಎಷ್ಟು? ಅವರು ಎಲ್ಲಿಯವರು ಅನ್ನೋದನ್ನು ನೋಡೋಣ.
ಮೂಲತ: ಮಂಡ್ಯ ಕಡೆಯವರಾದ ಅಂಕಿತಾ ಗೌಡ ಕನ್ನಡಿಗರ ಮನೆ ಮಾತಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯಾಗಿರುವ ಅಂಕಿತಾ ಗೌಡ ನಟನೆಯಲ್ಲಿ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಅದಕ್ಕೆ ತಕ್ಕಂತೆ ಅವರಿಗೆ 'ಅಣ್ಣಯ್ಯ' ಅಂತಹ ಒಂದೊಳ್ಳೆ ವೇದಿಕೆ ಸಿಕ್ಕಿತ್ತು. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿರುವ ಅಂಕಿತಾ ಕನ್ನಡಿಗರ ಮನೆ ಮಗಳಾಗಿದ್ದಾರೆ.
2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಅಂಕಿತಾ ಗೌಡ ಶೇ.86 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಆರೂ ವಿಷಯದಲ್ಲಿಯೂ ಉತ್ತಮ ಅಂಕಗಳನ್ನು ಗಳಿಸಿದ್ದಾರೆ. 537 ಅಂಕಗಳೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದಾರೆ. 625 ಗರಿಷ್ಠ ಅಂಕಗಳಿದ್ದು, ಅದರಲ್ಲಿ ಅಂಕಿತಾ ಗೌಡ 537 ಅಂಕಗಳನ್ನು ಗಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಅಂಕ ಪಟ್ಟಿಯನ್ನು ನೋಡಿದಾಗ,
ಇಂಟರ್‌ನಲ್ ಹಾಗೂ ಎಕ್ಸ್‌ಟರ್ನಲ್ ಮಾರ್ಕ್ ಸೇರಿ ಅಂಕಿತಾ ಪಡೆದ ಅಂಕಗಳು ಹೀಗಿವೆ. ಇಂಗ್ಲಿಷ್ ಭಾಷೆಯಲ್ಲಿ 119, ಕನ್ನಡ ಭಾಷೆಯಲ್ಲಿ 81, ಹಿಂದಿ ಭಾಷೆಯಲ್ಲಿ 100, ಗಣಿತ ಭಾಷೆಯಲ್ಲಿ 69, ವಿಜ್ಞಾನ ಭಾಷೆಯಲ್ಲಿ 83, ಸಮಾಜ ವಿಜ್ಞಾನದಲ್ಲಿ 85 ಅಂಕಗಳನ್ನು ಪಡೆದುಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಅಂಕಿತಾ ಅವರ ಡಬಲ್ ಟಾಸ್ಕ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ರಾಜ್ಯಾದ್ಯಂತೆ ಅಂಕಿತಾಗೆ ಶುಭಾಶಗಳ ಸುರಿಮಳೆಯೇ ಬರುತ್ತಿದೆ. ಅದಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಇನ್ನು ಧಾರಾವಾಹಿ ಅಷ್ಟೇ ಅಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಅವರ ಬಾಲ್ಯದ ಪಾತ್ರದಲ್ಲಿ ಅಂಕಿತಾ ಕಾಣಿಸಿಕೊಂಡಿದ್ದರು. ಇವರು ದರ್ಶನ್ ಅವರ ಅಭಿಮಾನಿ ಎಂದು ಹೇಳಲಾಗುತ್ತಿದೆ. ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ದರ್ಶನ್ ಅವರೊಂದಿಗೆ ತೆಗೆಸಿಕೊಂಡಿರೋ ಫೋಟೊ ಶೇರ್ ಮಾಡಿದ್ದಾರೆ. ಒಟ್ನಲ್ಲಿ ಎಸ್‌ಎಸ್‌ಎಲ್‌ಸಿ ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗಿದ್ದಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.


Click it and Unblock the Notifications