ಬಿಗ್ ಬಾಸ್ ಕನ್ನಡ 12ನೇ ಸೀಸನ್‌ನಲ್ಲಿ ಹೊಸ ಇತಿಹಾಸ ಬರೆದ ರಕ್ಷಿತಾ ಶೆಟ್ಟಿ; ಇಲ್ಲಿವರೆಗೂ ರನ್ನರ್ ಆದವರ ಲಿಸ್ಟ್ ಇಲ್ಲಿದೆ
ಬಿಗ್ ಬಾಸ್ ಕನ್ನಡ ಸೀನಸ್ 12ರ ಗ್ರ್ಯಾಂಡ್ ಫಿನಾಲೆ ನಿನ್ನೆಗೆ ಮುಗಿದಿದೆ. 112 ದಿನಗಳ ಕಾಲ ಕಿರುತೆರೆ ವೀಕ್ಷಕರ ಅಚ್ಚು ಮೆಚ್ಚಿನ ರಿಯಾಲಿಟಿಗೆ ತೆರೆಬಿದ್ದಿದ್ದೆ. 12ನೇ ಸೀಸನ್‌ನ ವಿನ್ನರ್ ಆಗಿ ಗಿಲ್ಲಿ ನಟ ಗೆದ್ದು ಬೀಗಿದ್ದಾರೆ. ಇನ್ನೊಂದು ಕಡೆ ಮಂಗಳೂರು ಮೂಲದ ರಕ್ಷಿತಾ ಶೆಟ್ಟಿ ರನ್ನರ್‌ಅಪ್ ಆಗಿ ಹೊರ ಹೊಮ್ಮಿದ್ದಾರೆ. ಗೆದ್ದವರಿಗೆ ಮೆರವಣಿಗೆ, ಸನ್ಮಾನಗಳು ಜೋರಾಗಿಯೇ ನಡೆಯುತ್ತಿವೆ.
ಬಿಗ್ ಬಾಸ್ ಕನ್ನಡದ ಸೀಸನ್ 12ಗಳೂ ಏನಾದರೂ ಒಂದು ಚರಿತ್ರೆಗೆ ಸಾಕ್ಷಿಯಾದ ಉದಾಹರಣೆಗಳಿವೆ. ಈ ಬಾರಿ ಕೂಡ ಅಂತಹದ್ದೇ ಒಂದು ಚರಿತ್ರೆಯನ್ನು ಸೃಷ್ಟಿಸಿದೆ. ಕನ್ನಡ ಬಿಗ್ ಬಾಸ್‌ನಲ್ಲಿ ಇಲ್ಲಿವರೆಗೂ ಹಿರಿಯ ನಟಿ ಶ್ರುತಿಯವರನ್ನು ಬಿಟ್ಟರೆ ಗೆದ್ದವರೆಲ್ಲವೂ ಪುರುಷರೇ. ಹೀಗಾಗಿ ಈ ಬಾರಿ ಅಶ್ವಿನಿ ಗೌಡ ಗೆಲ್ಲಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ, ಆ ನಿರೀಕ್ಷೆಗಳು ಸುಳ್ಳಾದವು.

ಆದರೆ, ಈ ಬಾರಿ ಬಿಗ್ ಬಾಸ್ ಫಿನಾಲೆಯಲ್ಲಿ ಟಾಪ್ 3 ಸ್ಥಾನದಲ್ಲಿ ಇಬ್ಬರು ಮಹಿಳಾ ಅಭ್ಯರ್ಥಿಗಳು ಇದ್ದಿದ್ದು ವಿಶೇಷ. ಅದರಲ್ಲಿ ಒಬ್ಬರು ಅಶ್ವಿನಿ ಗೌಡ ಹಾಗೂ ಇನ್ನೊಬ್ಬರು ರಕ್ಷಿತಾ ಶೆಟ್ಟಿ. ಮೊದಲ ಸ್ಥಾನವನ್ನು ಬಿಟ್ಟು ಉಳಿದ ಎರಡರಲ್ಲೂ ಮಹಿಳಾ ಸ್ಫರ್ಧಿಗಳೇ ಇದ್ದಿದ್ದು ವಿಶೇಷ. ಅದರಲ್ಲೂ 12 ಸೀಸನ್‌ಗಳ ಇತಿಹಾಸದಲ್ಲಿ ಒಬ್ಬ ಮಹಿಳಾ ಸ್ಪರ್ಧಿ ಕೂಡ ರನ್ನರ್ ಅಪ್ ಪಟ್ಟಿ ಗಿಟ್ಟಿಸಿಕೊಂಡಿರಲಿಲ್ಲ. ಅದನ್ನು ರಕ್ಷಿತಾ ಶೆಟ್ಟಿ ಮಾಡಿದ್ದಾರೆ.
ಮೊದಲ ರನ್ನರ್ ಅಪ್
ಹೌದು, ಬಿಗ್ ಬಾಸ್ ಕನ್ನಡದ ಇತಿಹಾಸವನ್ನು ನೋಡಿದರೆ, ಕಳೆದ 12 ಸೀಸನ್‌ಗಳಲ್ಲಿಯೂ ಒಬ್ಬ ಮಹಿಳಾ ಸ್ಪರ್ಧಿಯೂ ರನ್ನರ್ ಅಪ್ ಆಗಿರಲಿಲ್ಲ. ಹಿರಿಯ ನಟಿ ಶ್ರುತಿ ಬಿಗ್ ಬಾಸ್ ಗೆದ್ದಿದ್ದೂ ಬಿಟ್ಟರೆ, ಮತ್ಯಾರೂ ಟಾಪ್ 3ವರೆಗೂ ಬರುವುದಕ್ಕೆ ಹರ ಸಾಹಸ ಮಾಡಿದ್ದರು. ಈ ಬಾರಿ ಬಿಗ್ ಬಾಸ್ ಕಿರೀಟ ಗೆಲ್ಲದೇ ಹೋದರೂ ರಕ್ಷಿತಾ ಈ ರಿಯಾಲಿಟಿ ಶೋ ಇತಿಹಾಸದಲ್ಲಿಯೇ ರನ್ನರ್ ಆದ ಮೊದಲ ಮಹಿಳಾ ಅಭ್ಯರ್ಥಿ ಎನಿಸಿಕೊಂಡಿದ್ದಾರೆ.
ಬಿಗ್ ಬಾಸ್ ಗೆಲ್ಲಬಹುದಿತ್ತಾ ರಕ್ಷಿತಾ?
ಬಿಗ್ ಬಾಸ್ ರಿಯಾಲಿಟಿ ಶೋ ಆರಂಭ ಆದಾಗ ರಕ್ಷಿತಾ ಶೆಟ್ಟಿ ಬಗ್ಗೆನೇ ವೀಕ್ಷಕರು ಮಾತಾಡುತ್ತಿದ್ದರು. ಆದರಲ್ಲೂ ಮೊದಲ ದಿನವೇ ಎಲಿಮಿನೇಟ್ ಆದ ಮೊದಲ ಸ್ಪರ್ಧಿ ಅನ್ನೋ ಚರಿತ್ರೆಯನ್ನು ಸೃಷ್ಟಿಸಿದ್ದರು. ಆದರೆ, ರಕ್ಷಿತಾ ಶೆಟ್ಟಿ ಎಲಿಮಿನೇಷನ್ ಆಗುತ್ತಿದ್ದಂತೆ ಮತ್ತೆ ಅವರನ್ನು ಬಿಗ್ ಬಾಸ್ ಮನೆಯೊಳಗೆ ಕಳಿಸಬೇಕು ಅಂತ ವೀಕ್ಷಕರು ಪಟ್ಟು ಹಿಡಿದು ಕೂತಿದ್ದರು. ಅಲ್ಲಿಂದ ರಕ್ಷಿತಾ ಹವಾ ಜೋರಾಗಿಯೇ ಇತ್ತು. ಆದರೆ, ರಕ್ಷಿತಾ ತನ್ನ ಮೇಲಿದ್ದ ಕ್ರೇಜ್ ಅನ್ನು ಅಷ್ಟೇ ಎಫೆಕ್ಟಿವ್ ಆಗಿ ಮುಂದುವರೆಸಿಕೊಂಡು ಹೋಗುವಲ್ಲಿ ವಿಫಲರಾದರು. ಇಲ್ಲದೇ ಹೋಗಿದ್ದಲ್ಲಿ ಗಿಲ್ಲಿಗೆ ರಕ್ಷಿತಾ ಪ್ರಬಲ ಪೈಪೋಟಿಯನ್ನೇ ನೀಡುತ್ತಿದ್ದರು. ರನ್ನರ್ ಅಪ್ ಆಗಿದ್ದವು ವಿನ್ನರ್ ಆಗುತ್ತಿದ್ದರೇನೋ.. ಆದರೆ, ರನ್ನರ್ ಅಪ್ ಆಗಿಯೂ ಚರಿತ್ರೆ ಸೃಷ್ಟಿಸಿರೋದು ವಿಶೇಷ.
12 ಸೀಸನ್‌ಗಳಲ್ಲಿ ರನ್ನರ್‌ಅಪ್ ಆದವರಾರು?
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಆರಂಭ ಆದ ದಿನದಿಂದಲೂ ವಿನ್ನರ್ ಹಾಗೂ ರನ್ನರ್ ಅಪ್ ವಿಚಾರಕ್ಕೆ ಸಾಕಷ್ಟು ಚರ್ಚೆಗಳಾಗಿವೆ. 12ನೇ ಸೀಸನ್ ಅನ್ನು ಹೊರತು ಪಡಿಸಿದರೆ, ಬಹುತೇಕ ಎಲ್ಲಾ ಸೀಸನ್‌ಗಳಲ್ಲೂ ರನ್ನರ್‌ಅಪ್ ವಿಚಾರವಾಗಿ ಚರ್ಚೆ ಆಗಿದ್ದೇ ಹೆಚ್ಚು. ಮೊದಲನೇ ಸೀಸನ್‌ನಿಂದ ರನ್ನರ್‌ಅಪ್ ಆದವರ ಲಿಸ್ಟ್ ಹೀಗಾಗಿದೆ. ಅರುಣ್ ಸಾಗರ್, ಸೃಜನ್ ಲೋಕೇಶ್, ಚಂದನ್ ಕುಮಾರ್, ಕಿರಿಕ್ ಕೀರ್ತಿ, ದಿವಾಕರ್, ನವೀನ್ ಸಜ್ಜು, ಕುರಿ ಪ್ರತಾಪ್, ಅರವಿಂದ್ ಕೆಪಿ, ರಾಕೇಶ್ ಅಡಿಗ, ಡ್ರೋನ್ ಪ್ರತಾಪ್, ತ್ರಿವಿಕ್ರಮ್ ಹಾಗೂ 12ನೇ ಸೀಸನ್‌ನ ರಕ್ಷಿತಾ ಶೆಟ್ಟಿ.
ಗಿಲ್ಲಿ ವರ್ಸಸ್ ರಕ್ಷಿತಾ ಶೆಟ್ಟಿ
ಬಿಗ್ ಬಾಸ್ ಸೀಸನ್ 12ರಲ್ಲಿ ರಕ್ಷಿತಾ ಶೆಟ್ಟಿ ಅಗ್ರೆಸಿವ್ ಆಗಿ ಆಟ ಆಡಿದ್ದರು. ಒಂದು ಕಾಲದಲ್ಲಿ ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಮನೆಯವರೆಲ್ಲರೂ ವಿರೋಧ ವ್ಯಕ್ತಪಡಿಸಿದರೂ ಅದನ್ನು ಲೆಕ್ಕಿಸದೇ ತಿರುಗೇಟು ರಕ್ಷಿತಾ ತಿರುಗೇಟು ಕೊಡುತ್ತಿದ್ದರು. ಇದು ವೀಕ್ಷಕರನ್ನು ಸೆಳೆದಿತ್ತು. ಹೀಗಾಗಿ ಬಿಗ್ ಬಾಸ್ ಕೊನೆಯ ಹಂತದವರೆಗೂ ರಕ್ಷಿತಾ ವೀಕ್ಷಕರ ಫೇವರಿಟ್ ಆಗಿದ್ದರು.


Click it and Unblock the Notifications











