ಹತ್ತು ವರ್ಷದ ಕನಸು ನನಸಾದ ದಿನವದು ಎಂದ ಅಶ್ವಿನ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರಿಮಣಿ ಧಾರಾವಾಹಿಯಲ್ಲಿ ನಾಯಕ ಕರ್ಣ ಆಗಿ ನಟಿಸುತ್ತಿರುವ ಅಶ್ವಿನ್ ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದ ಹುಡುಗ. ಚಿಕ್ಕಂದಿನಿಂದಲೂ ಅಶ್ವಿನ್ ಅವರಿಗೆ ನಟನೆಯಲ್ಲಿ ಬಹಳ ಆಸಕ್ತಿ ಇತ್ತು. ಅದಕ್ಕೆ ಅವರ ತಾಯಿಯೂ ಬಹಳ ಪ್ರೋತ್ಸಾಹ ನೀಡುತ್ತಿದ್ದರು.

ಅಶ್ವಿನ್ ಅವರ ಅಮ್ಮ ಅಶ್ವಿನ್ ಅವರನ್ನು ಹಲವಾರು ನಾಟಕಗಳಲ್ಲಿ ಪಾಲ್ಗೊಳ್ಳುವಂತೆ ಹುರಿದುಂಬಿಸುತ್ತಿದ್ದರು. ಕ್ರಮೇಣ ಕಿರು ಚಿತ್ರಗಳಲ್ಲಿ ನಟಿಸುತ್ತಾ ಮುಂದೆ ಬಂದರು. ಒಂದು ಹಂತದಲ್ಲಿ ಅಭಿನಯ ಅಶ್ವಿನ್ ಅವರಿಗೆ ಒಲಿಯುವುದಿಲ್ಲ ಎಂದು ಅವರಿಗೆ ಅನಿಸಿತ್ತು. ಆದರೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡರು.

Ashwin said that it was the day when a ten year dream came true

ರಾಗ ಮತ್ತು ತಾಳ ಎಂಬ ಕಿರುಚಿತ್ರದಲ್ಲಿ ಅಶ್ವಿನ್ ಅವರು ಅಭಿನಯಿಸಿದ್ದರು. ಅದು ಚೆನ್ನಾಗಿ ಮೂಡಿ ಬಂದಿತ್ತು. ಅದಕ್ಕೆ ಸರಿಯಾಗಿ ಅದೇ ಸಮಯಕ್ಕೆ ಕರಿಮಣಿ ಧಾರಾವಾಹಿಯಿಂದ ಕರ್ಣ ಪಾತ್ರದಲ್ಲಿ ಅಭಿನಯಿಸಲು ಆಫರ್ ಬಂದಿತು. ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿರುವ ಅಶ್ವಿನ್ ಅನುಬಂಧ ಅವಾರ್ಡ್ಸ್ ನಲ್ಲಿ ಪ್ರಶಸ್ತಿಯನ್ನು ಕೂಡಾ ಪಡೆದುಕೊಂಡಿದ್ದರು.

ಅವತ್ತು ಚಾನೆಲ್ ಮುಖ್ಯಸ್ಥರಿದ್ದರು, ಜೊತೆಗೆ ಚಾನಲ್‌ನ ನಿರ್ಮಾಪಕರು ಸೇರಿದಂತೆ ಆಡಳಿತ ವರ್ಗದಿಂದ ಬಹಳಷ್ಟು ಜನ ಸೇರಿದ್ದರು. ಅವರೆಲ್ಲರೆದುರು ಇದ್ದರೂ ಒಮ್ಮೆ ಬಹಳ ಭಯವಾಗಿತ್ತು. ಆ ಅನುಭವ ಬಹಳ ವಿಭಿನ್ನವಾಗಿತ್ತು ‌.10 ವರ್ಷಗಳ ಕನಸು ನನಸಾದ ದಿನವದು ಎಂದು ಮೊದಲ ದಿನದ ಶೂಟಿಂಗ್ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದರು ಅಶ್ವಿನ್.

ನಟನೆಯನ್ನು ವೃತ್ತಿ ಬದುಕಾಗಿಸಿಕೊಂಡಿರುವ ಅಶ್ವಿನ್ ಅವರಿಗೆ ಮೊದಲಿನಿಂದಲೂ ನಟನೆಯಲ್ಲಿ ಮುಂದುವರೆಯಬೇಕೆಂಬ ಆಸೆ ಬಹಳ ಇತ್ತು. ಈ ದಿನಗಳನ್ನು ತಳ್ಳುತ್ತಿರುವಾಗ ಒಂದಷ್ಟು ಕಿರು ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಕಿರುಚಿತ್ರಗಳನ್ನು ಮಾಡುವ ಸಮಯದಲ್ಲಿ ಬಹಳಷ್ಟು ಅನುಭವಗಳಾಗಿವೆ. ನಿರ್ಮಾಣದ ಪ್ರತಿ ಹಂತದಲ್ಲೂ ಇವರು ಕೆಲಸ ಮಾಡಿದ್ದೇನೆ ಆದರೆ ನಿರ್ದೇಶನದ ಬಗ್ಗೆ ಹೆಚ್ಚಿನ ಒಲವು ಇಲ್ಲ. ಸದ್ಯಕ್ಕೆ ನಟನಾಗಿಯೇ ಅವರ ವೃತ್ತಿ ಬದುಕು ಅನ್ನು ಮುಂದುವರಿಸುವ ಯೋಚನೆ ಇದೆ

ಕರಿಮಣಿ ಎಂಬುದೇ ಧಾರವಾಹಿ ಮುಖ್ಯ ಕುತೂಹಲ. ಆ ಕುತೂಹಲವನ್ನು ಹಾಗೆ ಇಟ್ಟುಕೊಂಡು ಧಾರಾವಾಹಿಯನ್ನು ವೀಕ್ಷಿಸಿದರೆ ಮಾತ್ರ ನಿಜವಾದ ಮಜಾ ಇರುವುದು. ಹಾಗಾಗಿ ಈವರೆಗೂ ನಮ್ಮ ಧಾರವಾಹಿಯನ್ನು ವೀಕ್ಷಿಸುತ್ತಾ ಸಪೋರ್ಟ್ ಮಾಡಿಕೊಂಡು ಬಂದಿರುವ ಎಲ್ಲಾ ವೀಕ್ಷಕರು ಹೀಗೆ ಧಾರಾವಾಹಿ ವೀಕ್ಷಣೆ ಮುಂದುವರಿಸಿ ನಮ್ಮನ್ನು ಪ್ರೋತ್ಸಾಹಿಸಬೇಕು ಎಂಬುದು ನನ್ನ ವಿನಂತಿ.

ಈ ಧಾರಾವಾಹಿಯಲ್ಲಿ ಕರ್ಣ ಎಂಬ ನನ್ನ ಪಾತ್ರ ನನಗೆ ಬಹಳ ಅಚ್ಚುಮೆಚ್ಚು. ನಾಯಕನಾಗಿಯೂ ಖಳನಾಯಕನಂತೆ ಕಾಣಿಸುವ ಪಾತ್ರೆ ಇದಾಗಿರುವುದರಿಂದ, ಕರ್ಣ ಎಂಬ ವ್ಯಕ್ತಿ ಒಳ್ಳೆಯವನೋ ಅಥವಾ ಕೆಟ್ಟವನೋ ಎಂದು ಸರಳವಾಗಿ ಹೇಳಲು ಸಾಧ್ಯವಿಲ್ಲ. ಈಚೆ ಬಿಳುಪು ಅಲ್ಲದ ಆಚೆ ಕಪ್ಪು ಅಲ್ಲದ ಗ್ರೇ ಶೇಡ್ ನ ಪಾತ್ರವಿದು. ಕಥೆ ಹಾಗೂ ಪಾತ್ರ ಮುಂದುವರಿಯುತ್ತಿರುವ ರೀತಿ ನನಗೆ ಬಹಳ ಇಷ್ಟವಾಗಿದೆ. ವೀಕ್ಷಕರಿಗೂ ಹಿಡಿಸಿದಂತಿದೆ. ಇಂದು ತಮ್ಮ ಪಾತ್ರ ಹಾಗೂ ಧಾರಾವಾಹಿಯ ಕಥಾ ಹಂದರದ ಬಗ್ಗೆ ಮಾತನಾಡಿದ್ದಾರೆ ನಟ ಅಶ್ವಿನ್.

ಕರಿಮಣಿ ಧಾರವಾಹಿಯನ್ನು ಕಲರ್ಸ್ ಕನ್ನಡ ವಾಹಿನಿಯ ವೀಕ್ಷಕರು ಈಗಾಗಲೇ ಕಥೆ ಬಹಳಷ್ಟುಗಳೊಂದಿಗೆ ಮುಂದೆ ಸಾಗುತ್ತಿದೆ. ಯಾವ ರೀತಿ ಕಥೆ ವೀಕ್ಷಕರನ್ನು ಹೆಚ್ಚು ಹೆಚ್ಚು ತನ್ನತ್ತ ಸೆಳೆಯುತ್ತದೆ ಎಂಬುದನ್ನು ನೋಡಬೇಕಿದೆ.

More from Filmibeat

English summary
Ashwin said that it was the day when a ten year dream came true.
Read more about: actor serial tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X