ಕಮಲ್ ಹಾಸನ್ ಜೊತೆ ಕಿರಿಕ್ ಮಾಡಿಕೊಂಡಿದ್ದ ನಟಿ ಬಿಗ್ ಬಾಸ್ ಮನೆಗೆ ಎಂಟ್ರಿ? ಬಿಗ್ ಟ್ವಿಸ್ಟ್
ದೇಶಾದ್ಯಂತ ಬಿಗ್ ಬಾಸ್ ಹವಾ ಜೋರಾಗಿದೆ. ಉತ್ತರ ಭಾರತದಲ್ಲಿ ಹಿಂದಿ ಬಿಗ್ ಬಾಸ್ ಅಬ್ಬರಿಸುತ್ತಿದ್ದರೆ, ದಕ್ಷಿಣ ಭಾರತದಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ವರ್ಷನ್ ಬಿಗ್ ಬಾಸ್ ಜೋರಾಗಿ ಸದ್ದು ಮಾಡುತ್ತಿವೆ. ದಿನಕ್ಕೊಂದು ಟ್ವಿಸ್ಟ್ ಕೊಡುತ್ತಾ ವೀಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. ಎಲ್ಲಾ ಭಾಷೆಯ ಬಿಗ್ ಬಾಸ್ ರಿಯಾಲಿಟಿ ಶೋ ಕೂಡ ಇಂತಹದ್ದೊಂದು ಕಸರತ್ತು ಮಾಡುತ್ತಲೇ ಇದೆ.
ಈಗ ಬಿಗ್ ಬಾಸ್ ಸುದ್ದಿಗಳಲ್ಲಿ ಉಳಗನಾಯಗನ್ ಕಮಲ್ ಹಾಸನ್ ಜೊತೆ ಕಿರಿಕ್ ಮಾಡಿಕೊಂಡಿದ್ದ ನಟಿಯ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಬಿಗ್ ಬಾಸ್ ತಮಿಳಿನ 6ನೇ ಸೀಸನ್‌ನಲ್ಲಿ ಈ ನಟಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿ ಸನ್ನಿವೇಶವೊಂದರಲ್ಲಿ ಕಮಲ್ ಹಾಸನ್ ವಿರುದ್ಧವೇ ಆರೋಪ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಹೆವಿ ಟ್ರೋಲ್ ಆಗಿದ್ದರು.

ಈ ನಟಿಯೇ ಈಗ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡುತ್ತಿದ್ದಾರೆಂಬ ಸುದ್ದಿ ಹಬ್ಬಿದೆ. ಹಾಗಂತ ಮತ್ತೆ ತಮಿಳು ಬಿಗ್ ಬಾಸ್‌ಗೆ ಎಂಟ್ರಿ ಕೊಡುತ್ತಿಲ್ಲ. ಹಾಗೇ ಕನ್ನಡ ಬಿಗ್ ಬಾಸ್‌ಗೂ ಬರುತ್ತಿಲ್ಲ. ಆದರೆ, ಈ ವಾರ ನಾಗಾರ್ಜುನ ನಡೆಸಿ ಕೊಡುತ್ತಿರುವ ಬಿಗ್ ಬಾಸ್ ತೆಲುಗು ಸೀಸನ್ 9ಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡುತ್ತಿದ್ದಾರೆಂಬ ಸುದ್ದಿ ತೆಲುಗು ಕಿರುತೆರೆಯಲ್ಲಿ ಹರಿದಾಡುತ್ತಿದೆ.
ಸೆಪ್ಟೆಂಬರ್ 7 ರಿಂದ ಬಿಗ್ ಬಾಸ್ ತೆಲುಗು ಸೀಸನ್ 7 ಅದ್ಧೂರಿಯಾಗಿ ಆರಂಭ ಆಗಿದೆ. ಈಗ ಈ ಶೋ ಐದನೇ ವಾರದ ಅಂತಿಮ ಘಟ್ಟದಲ್ಲಿದೆ. ಮನೆಯೊಳಗೆ ಎಂಟ್ರಿ ಕೊಟ್ಟಿದ್ದ 15 ಸ್ಪರ್ಧಿಗಳ ಪೈಕಿ, ನಾಲ್ಕು ಮಂದಿ ಎಲಿಮಿನೇಟ್ ಆಗಿದ್ದಾರೆ. ಇದೇ ಹಂತದಲ್ಲಿ ಕೆಲವು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕವೂ ಈ ಶೋ ತೆಲುಗು ಮಂದಿಯ ಗಮನ ಸೆಳೆದಿದೆ. ಈಗಾಗಲೇ ಸಾಮಾನ್ಯ ಜನರ ಕೋಟಾದಡಿ ದಿವ್ಯಾ ನಿಕಿತಾ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಿದ್ದಾರೆ. ಈಗ ವೈಲ್ಡ್ ಕಾರ್ಡ್ ಎಂಟ್ರಿಗೆ ಇನ್ನಷ್ಟು ಕಿಚ್ಚು ಹಚ್ಚುವುದಕ್ಕೆ ಬಿಗ್ ಬಾಸ್ ಮಂದಿ ನಿರ್ಧರಿಸಿದ್ದಾರೆ. ಅದರ ಒಂದು ಭಾಗವೇ ಆಯೇಷಾ ಜೀನತ್ ಎನ್ನಲಾಗುತ್ತಿದೆ.
ಇದೇ ವಾರ ಅಂದರೆ, ಅಕ್ಟೋಬರ್ 12ರಂದು ಹೊಸ ಸ್ಪರ್ಧಿಗಳು ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡುತ್ತಿದ್ದಾರೆಂಬ ಸುದ್ದಿ ಓಡಾಡುತ್ತಿದೆ. ಅದರಲ್ಲಿ ಬಿಗ್ ಬಾಸ್ ತಮಿಳು ಸೀಸನ್ 6ರಲ್ಲಿ ಭಾಗವಹಿಸಿದ್ದ ಆಯೇಷಾ ಜೀನತ್ ಹೆಸರು ಕೂಡ ಹೇಳಿಬರುತ್ತಿದೆ. ತಮಿಳು ಹಾಗೂ ತೆಲುಗು ಕಿರುತೆರೆಯಲ್ಲಿ ಫೇಮಸ್ ಆಗಿರುವ ಆಯೇಷಾ ತಮಿಳು ಬಿಗ್ ಬಾಸ್‌ನಲ್ಲಿ ಕಮಲ್ ಹಾಸನ್ ವಿರುದ್ಧ ತಿರುಗಿ ಬಿದ್ದಿದ್ದರು. ಅದು ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು. ಇದೇ ನಟಿಯೀಗ ತೆಲುಗು ಬಿಗ್ ಬಾಸ್ ಸೀಸನ್ 9ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಡುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಕಮಲ್ ಹಾಗೂ ಆಯೇಷಾ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಏನು ನಡೀತು? ಅಂತ ನೋಡುವುದಾರೆ..

ಬಿಗ್ ಬಾಸ್ ತಮಿಳು ಸೀಸನ್ 6ರ ಅಕ್ಟೋಬರ್ 30 ಎಪಿಸೋಡ್‌ನಲ್ಲಿ ಕಮಲ್ ಹಾಸನ್ ಹಾಗೂ ಆಯೇಷಾ ಜೀನತ್ ನಡುವೆ ನಡೆದ ಸಂಭಾಷಣೆ ಸದ್ದು ಮಾಡಿತ್ತು. ಆ ವಾರಪೂರ್ತಿ ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದರು. ಹೀಗಾಗಿ ಕಮಲ್ ಹಾಸನ್ ಡಾಲ್ ಹೌಸ್ ಟಾಸ್ಕ್ ಬಗ್ಗೆ ಮಾತಾಡುತ್ತಿದ್ದರು. ಈ ವೇಳೆ ಈ ಟಾಸ್ಕ್‌ನ ಭಾಗವಾಗದೇ ಇದ್ದರೂ ಇನ್ನೊಬ್ಬ ಸ್ಪರ್ಧಿ ರಚಿತಾ ಡಾಲ್ ಅನ್ನು ಏಕೆ ತೆಗೆದುಕೊಂಡೆ ಎಂದು ಪ್ರಶ್ನೆ ಮಾಡಿದ್ದರು. ಇದು ಆಯೇಷಾಗೆ ತಡೆದುಕೊಳ್ಳಲು ಸಾಧ್ಯವಾಗಿಲ್ಲ. "ನಾನು ಬೇರೆ ಯಾವುದೇ ಉದ್ದೇಶದಿಂದ ಡಾಲ್ ಅನ್ನು ತೆಗೆದುಕೊಂಡಿಲ್ಲ ಸರ್. ನೀವು ನನ್ನನ್ನು ತಪ್ಪಾಗಿ ಬಿಂಬಿಸಬೇಡಿ" ಎಂದು ಆಯೇಷಾ ತಿರುಗಿ ಉತ್ತರಿಸಿದ್ದರು.
ಆಯೇಷಾ ಆಡಿದ ಮಾತಿಗೆ ಕೋಪಗೊಳ್ಳದ ಕಮಲ್ ಹಾಸನ್ ಶಾಂತವಾಗಿಯೇ ಉತ್ತರಿಸಿದ್ದರು. "ನಾನು ಇಲ್ಲಿ ನನ್ನ ಪಾತ್ರವನ್ನು ಮಾತ್ರ ಬಿಂಬಿಸುತ್ತಿದ್ದೇನೆ. ಇಲ್ಲಿ ಇರುವವರಿಗೆಲ್ಲರಿಗೂ ಅವರವರ ಪಾತ್ರದ ಬಗ್ಗೆ ಗೊತ್ತಿದೆ. ನಾನಗೂ ಭಾವಚಿತ್ರಗಳನ್ನು ಬಡಿಸುವುದಕ್ಕೆ ಗೊತ್ತಿಲ್ಲ" ಎಂದು ಉತ್ತರಿಸಿದ್ದರು. ಇದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದೇ ವೇಳೆ ಆಯೇಷಾ ಜೀನತ್ ವಿರುದ್ಧ ಕಟುಟೀಕೆಗಳನ್ನು ಮಾಡಿದ್ದರು.
ಇದೇ ನಟಿಯೀಗ ಬಿಗ್ ಬಾಸ್ ತೆಲುಗು ಸೀಸನ್ 9ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡುತ್ತಿದ್ದಾರೆಂಬ ಸುದ್ದಿ ಹಬ್ಬಿದ್ದು, ರಿಯಾಲಿಟಿ ಶೋಗೆ ಇನ್ನಷ್ಟು ವೈಲ್ಡ್ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇವರೊಂದಿಗೆ ದಿಬ್ಬೆಲ ಮಾಧುರಿ, ರಮ್ಯಾ ಮೋಕ್ಷ , ನಟರಾದ ನಿಖಿಲ್ ನಾಯರ್, ಗೌರವ್, ಶ್ರೀನಿವಾಸ್ ಸಾಯಿ, ಸುಹಾಸಿನಿ, ಕಾವ್ಯಶ್ರೀ, ತನಿಶ್, ಅಮರ್ ದೀಪ್ ಹೆಸರುಗಳು ಕೂಡ ಕೇಳಿ ಬರುತ್ತಿವೆ.


Click it and Unblock the Notifications











