ಲೆಜೆಂಡ್ ಬಾಲಕೃಷ್ಣ ಸಿನಿಮಾ 'ಅಖಂಡ' ಕಿರುತೆರೆಗೆ ಲಗ್ಗೆ: ಕನ್ನಡದಲ್ಲಿ ಬಾಲಯ್ಯ ಆರ್ಭಟ!

ಟಾಲಿವುಡ್‌ ಲೆಜೆಂಡ್ ಬಾಲಕೃಷ್ಣ ಅಭಿನಯದ ಸಿನಿಮಾ 'ಅಖಂಡ' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಸತತ ಸೋಲಿನಿಂದ ಕಂಗೆಟ್ಟು ಹೋಗಿದ್ದ ಬಾಲಕೃಷ್ಣಗೆ 'ಅಖಂಡ' ಸಿನಿಮಾ ಗೆಲುವಿನ ನಗೆ ಬೀರುವಂತೆ ಮಾಡಿತ್ತು. ಅದೇ ಸಿನಿಮಾವೀಗ ಕಿರುತೆರೆಯಲ್ಲಿ ದರ್ಬಾರ್ ಮಾಡುವುದಕ್ಕೆ ಸಜ್ಜಾಗುತ್ತಿದೆ.

ಟಾಲಿವುಡ್‌ನಲ್ಲಿ ಬಾಲಕೃಷ್ಣ ಹಾಗೂ ನಿರ್ದೇಶಕ ಬೊಯಪಾಟಿ ಶ್ರೀನು ಇಬ್ಬರೂ ಸೋಲಿನ ಸುಳಿಗೆ ಸಿಲುಕಿದ್ದರು. 'ಅಖಂಡ' ಸಿನಿಮಾ ಬಿಡುಗಡೆಗೂ ಮುನ್ನ ಸೋಲಿನಿಂದ ಕಂಗೆಟ್ಟಿದ್ದ ಜೋಡಿ ಬ್ಲಾಕ್ ಬಸ್ಟರ್ ಸಿನಿಮಾ ನೀಡುವಲ್ಲಿ ಯಶಸ್ವಿಯಾಗಿದ್ದರು. ಬಾಕ್ಸಾಫೀಸ್‌ನಲ್ಲಿ ಬಾಲಕೃಷ್ಣ ಅಬ್ಬರ ನೋಡಿ ಟಾಲಿವುಡ್ ಕಂಗಾಲಾಗಿ ಹೋಗಿತ್ತು. ಈಗ ಅದೇ ಸಿನಿಮಾ ಕಿರುತೆರೆಯಲ್ಲಿ ಅದೂ ಕನ್ನಡದಲ್ಲಿ ಪ್ರಸಾರ ಆಗಲಿದೆ.

ಸ್ಟಾರ್ ಸುವರ್ಣದಲ್ಲಿ ಅಖಂಡ ಕನ್ನಡ ವರ್ಷನ್

ನಂದಮೂರಿ ಬಾಲಕೃಷ್ಣ ಹಿಂದೆಂದೂ ಇಂತಹದ್ದೊಂದು ಸಕ್ಸಸ್ ಕಂಡಿರಲಿಲ್ಲ. ಅಗೋರಿ ಅವತಾರದಲ್ಲಿ ಬಾಲಕೃಷ್ಣ ಮಾಸ್ ಲುಕ್ ಕೊಟ್ಟಿದ್ದರು. ಬಾಲಯ್ಯನ ಈ ವಿಶಿಷ್ಟ ಅವತಾರವನ್ನು ನೋಡಿದ ಅಭಿಮಾನಿಗಳು ಥಿಯೇಟರ್‌ನಲ್ಲಿ ಶಿಳ್ಳೆ ಹಾಕಿದ್ದರು. ಬಾಲಕೃಷ್ಣ ಡೈಲಾಗ್‌ ಡಿಲೇವರಿಗೆ ಹುಚ್ಚೆದ್ದು ಕೇಕೆ ಹಾಕಿದ್ದರು.

Balakrishna Starrer Akhanda Movie Kannada Version Will Telecast In Star Suvarna

'ಅಖಂಡ' ಕರ್ನಾಟಕದಲ್ಲೂ ಸಾಕಷ್ಟು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿತ್ತು. ಆದರೆ, ತೆಲುಗಿನಲ್ಲಿ ಮಾತ್ರ ರಿಲೀಸ್ ಆಗಿದ್ದರಿಂದ ಬಹುತೇಕ ತೆಲುಗು ಮಂದಿಯಷ್ಟೇ ಸಿನಿಮಾ ನೋಡಿದ್ದರು. ಆದ್ರೀಗ ಈ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಲಾಗಿದ್ದು, ಅದು ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗಲಿದೆ.

ಸುವರ್ಣದಲ್ಲಿ ಅಖಂಡ ವರ್ಲ್ಡ್ ಪ್ರೀಮಿಯರ್

ಸ್ಟಾರ್ ಸುವರ್ಣದಲ್ಲಿ ನಂದಮೂರಿ ಬಾಲಕೃಷ್ಣ ಅಭಿನಯದ ಬ್ಲಾಕ್‌ಬಸ್ಟರ್ ಸಿನಿಮಾ 'ಅಖಂಡ' ಪ್ರಸಾರವಾಗುತ್ತಿದೆ. ಪ್ರಗ್ಯಾ ಜೈಸ್ವಾಲ್, ಜಗಪತಿ ಬಾಬು, ಶ್ರೀಕಾಂತ್ ಸೇರಿದಂತೆ ಬಹುದೊಡ್ಡ ತಾರಾಗಣವಿರುವ ಈ ಸಿನಿಮಾದಲ್ಲಿ ಬಾಲಯ್ಯ ದ್ವಿಪಾತ್ರದಲ್ಲಿ ನಟಿಸಿರುವುದು ವಿಶೇಷ. ಇದೇ ಸಿನಿಮಾ ಮೇ 15 ಭಾನುವಾರದಂದು ಸ್ಟಾರ್ ಸುವರ್ಣದಲ್ಲಿ ಸಂಜೆ 5.30ಕ್ಕೆ ಪ್ರಸಾರ ಆಗಲಿದೆ.

'ಅಖಂಡ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ನೂರು ಕೋಟಿ ಲೂಟಿ ಮಾಡಿತ್ತು. ವಿಶ್ವದಾದ್ಯಂತ ಸುಮಾರು 135 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು. ವಿಶೇಷ ಅಂದರೆ, ಕರ್ನಾಟಕದಲ್ಲೂ ಈ ಸಿನಿಮಾವನ್ನು ಮುಗಿಬಿದ್ದು ನೋಡಿದ್ದರು. ಕರ್ನಾಟಕದಲ್ಲಿಯೇ ಸುಮಾರು 18 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು.

More from Filmibeat

English summary
Balakrishna Starrer Akhanda Movie Kannada Version Will Telecast In Star Suvarna, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X