BBK 10: ಡ್ರೋನ್ ಪ್ರತಾಪ್ ಮೇಲೆ ಮುಗಿಬಿದ್ದ ವಿನಯ್, ಕಾರ್ತಿಕ್.. ಕಿರುಚಾಡಿದ್ರೂ ಬಿಡಲಿಲ್ಲ.. ಯಾಕಿಂಗೆ?
ನಿನ್ನೆ (ಅಕ್ಟೋಬರ್ 29) ತಾನೇ ಕಿಚ್ಚನ ಸೂಪರ್ ಸಂಡೇ ವಿತ್ ಸುದೀಪ್ ನಡೆದಿದೆ. ಬಿಗ್ ಬಾಸ್ ಸ್ಪರ್ಧಿಗಳು ಕಿಚ್ಚನೊಂದಿಗೆ ಮಾತುಕತೆ ನಡೆಸಿ ಸ್ಪೂರ್ತಿ ಪಡೆದಿದ್ದಾರೆ. ಸುದೀಪ್ ಕೂಡ ಸ್ಪರ್ಧಿಗಳಿಗೆ ಭರಪೂರ ಸ್ಪೂರ್ತಿ ನೀಡಿ ಹೋಗಿದ್ದಾರೆ. ಅದಾದ ಬಳಿಕ ಸ್ಪರ್ಧಿಗಳಲ್ಲಿ ಜೋಷ್ ದುಪ್ಪಟ್ಟಾಗಿದೆ.
ಬಿಗ್ ಬಾಸ್ ಮನೆಯ ನಾಲ್ಕನೇ ವಾರದ ಮುಂಜಾನೆಯೇ ಸ್ಪರ್ಧಿಗಳಲ್ಲಿ ಜೋಷ್ ಎದ್ದು ಕಾಣುತ್ತಿದೆ. ಎಲ್ಲಾ ಸ್ಪರ್ಧಿಗಳೂ ಆಕ್ಟಿವಿಟಿ ಮಾಡುವುದಕ್ಕೆ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಬೆಳಗ್ಗೆ ಎದ್ದ ಕೂಡಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸಿಕ್ಕದೊಂದು ಟಾಸ್ಕ್ ನೀಡಿತ್ತು. ಕಿಚ್ಚನಿಂದ ಸ್ಪೂರ್ತಿ ಪಡೆದ ಪ್ರತಾಪ್ ಸಿಕ್ಕಾಪಟ್ಟೆ ಜೋಷ್‌ನಲ್ಲಿ ಇದ್ದಾರೆ.

ಬಿಗ್‌ಬಾಸ್ ನಾಮಿನೇಷನ್ ಪಾಸ್ ಪಡೆಯಲು ಟಾಸ್ಕ್ ನೀಡಿತ್ತು. ಈ ವೇಳೆ ಪ್ರತಾಪ್ ಮೇಲೆ ವಿನಯ್, ಕಾರ್ತಿಕ್ ಹಾಗೂ ಸ್ನೇಹಿತ್ ಬಲ ಪ್ರಯೋಗಕ್ಕೆ ಮುಂದಾಗಿದ್ದರು. ಕೂಗಾಡಿದರೂ, ಕಿರುಚಾಡಿದರೂ ಬಿಡಲಿಲ್ಲ. ಅಷ್ಟಕ್ಕೂ ನಾಮಿನೇಷನ್ ಪಾಸ್ ವಿಚಾರಕ್ಕೆ ಅಂತಹದ್ದೇನಾಯ್ತು?
ಸೋಮವಾರ (ಅಕ್ಟೋಬರ್ 30) ಜಿಯೋ ಸಿನಿಮಾ ಬೆಳಗ್ಗೆನೇ ಹೊಸ ಪ್ರೋಮೊ ರಿಲೀಸ್ ಮಾಡಿದೆ. ಇದರಲ್ಲಿ ಡ್ರೋನ್ ಪ್ರತಾಪ್, ವಿನಯ್, ಕಾರ್ತಿಕ್ ಹಾಗೂ ಸ್ನೇಹಿತ್ ನಡುವಿನ ಕಾದಾಟವೇ ಹೈಲೈಟ್ ಆಗಿದೆ. ಅಷ್ಟಕ್ಕೂ ಈ ನಾಲ್ಕು ಮಂದಿಯ ನಡುವೆ ಅಂತಹದ್ದು ಆಗಿದ್ದೇನು? ಅನ್ನೋ ಪ್ರಶ್ನೆಗೂ ಉತ್ತರ ಸಿಕ್ಕಿದೆ.
ಮುಂಜಾನೆ ಸಿಹಿನಿದ್ದೆಯಲ್ಲಿದ್ದ ಬಿಗ್ ಬಾಸ್ ಸದಸ್ಯರಿಗೆ ಚಿಕ್ಕದೊಂದು ಟಾಸ್ಕ್ ಸಿಕ್ಕಿತ್ತು. ಈವಾರ ಎಲ್ಲರಿಗೂ ನಾಮಿನೇಷನ್ ಮಾಡುವ ಅವಕಾಶ ಇರುವುದಿಲ್ಲ. ಈಗಾಗಲೇ ಮನೆಯೊಳಗೆ ಇಟ್ಟಿರುವ ಬಲೂನ್‌ಗಳನ್ನು ಒಡೆಯಬೇಕು. ಅದರೊಳಗೆ ಇರುವ ನಾಮಿನೇಷನ್ ಪಾಸ್‌ಗಳನ್ನು ಹುಡುಕಿ ತೆಗೆಯಬೇಕೆಂದು ಬಿಗ್‌ಬಾಸ್ ತನ್ನ ಸದಸ್ಯರಿಗೆ ಆದೇಶ ನೀಡಿದ್ದಾರೆ.
ಬಿಗ್ ಬಾಸ್ ಆದೇಶ ಬಂದೊಡನೇ ಮನೆಯ ಸದಸ್ಯರೆಲ್ಲರೂ ಬಲೂನ್‌ಗಳನ್ನು ಇಟ್ಟಿರುವ ಜಾಗಕ್ಕೆ ಹೋಗಿ ಅವುಗಳನ್ನು ಒಡೆದು ನೋಡಿದ್ದಾರೆ. ಈ ಬಲೂನ್ ಆಟದಲ್ಲಿ ಕೊನೆಗೂ ನಾಮಿನೇಷನ್ ಪಾಸ್ ಡ್ರೋನ್ ಪ್ರತಾಪ್‌ಗೆ ಸಿಕ್ಕಿದೆ.

ಕಳೆದ ವಾರದ ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಆಡಿದ ಮಾತುಗಳಿಂದ ಡ್ರೋನ್ ಪ್ರತಾಪ್ ಸಿಕ್ಕಾಪಟ್ಟೆ ಸ್ಫೂರ್ತಿ ಪಡೆದಿದ್ದಾರೆ. ಹೀಗಾಗಿ ನಾಮಿನೇಷನ್ ಪಾಸ್ ಕೊಡುವ ಟಾಸ್ಕ್ ಕೂಡ ಗೆದ್ದಿದ್ದಾರೆ. ಪಾಸ್ ನೋಡುವ ಭರಾಟೆಯಲ್ಲಿ ಕಾರ್ತಿಕ್ ಅಂತೂ ಬಲಪ್ರಯೋಗಕ್ಕೆ ಮುಂದಾಗಿದ್ದಾರೆ. ವಿನಯ್ ಹಳೇ ಟೋನ್‌ನಲ್ಲಿ ಆವಾಜ್ ಹಾಕಿದರೂ ಡ್ರೋನ್ ಪ್ರತಾಪ್ ಮಾತ್ರ ಕ್ಯಾರೇ ಅಂದಿಲ್ಲ.
ಕಿಚ್ಚನ ಜೊತೆಗಿನ ವೀಕೆಂಡ್ ಎಪಿಸೋಡ್‌ನಲ್ಲಿ ಕಂಟೆಂಟ್ ಏನಿಲ್ಲ ಎಂದು ಹೇಳಿದ್ದರು. ಹೀಗಾಗಿ ಈ ವಾರ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಫುಲ್ ಆಕ್ವೀವ್ ಆಗಿದ್ದಾರೆ. ಪ್ರತಾಪ್‌ಗೆ ಪಾಸ್ ಸಿಕ್ಕಿದೊಡನೇ ಆ ಪಾಸ್ ಅನ್ನು ಕಿಸೆಯಲ್ಲಿಟ್ಟುಕೊಂಡು ಹೋಗುತ್ತಿದ್ದರು. ಈ ವೇಳೆ ವಿನಯ್ "ಹೆಂಗಿರತ್ತೆ ನೋಡೋಣ ತೋರಿಸು" ಎಂದು ಕೇಳಿದ್ದಾರೆ. ಆದರೆ, ಪ್ರತಾಪ್ ಪಾಸ್ ಅನ್ನು ವಿನಯ್ ಕೈಗೆ ಕೊಡಲಿಲ್ಲ. ಈ ವೇಳೆ ಮಾತಿಗೆ ಮಾತು ಬೆಳೆದಿದೆ.
ಇದೇ ವೇಳೆ ವಿನಯ್ ಜೊತೆ ಕಾರ್ತಿಕ್ ಹಾಗೂ ಸ್ನೇಹಿತ್ ಸೇರಿಕೊಂಡಿದ್ದಾರೆ. ಮೂವರೂ ಪ್ರತಾಪ್ ಮೈಮೇಲೆ ಮುಗಿಬಿದ್ದು ಪಾಸ್ ಕಸಿಯಲು ಯತ್ನಿಸಿದ್ದಾರೆ. ಮೂವರ ನಡುವೆ ಸಿಲುಕಿ ಒದ್ದಾಡುತ್ತಿರುವ ಪ್ರತಾಪ್ ಅದೆಷ್ಟೇ ಕಿರುಚಾಡಿದರೂ ಬಿಟ್ಟಿಲ್ಲ. ಈ ದೃಶ್ಯಗಳನ್ನು ನೋಡಿದ ಬಳಿಕ ಬಿಗ್‌ಬಾಸ್ ಮನೆ ಹೊಡೆದಾಟಕ್ಕೆ ಸಾಕ್ಷಿಯಾಗುತ್ತಿದೆಯೇ? ದೈಹಿಕವಾಗಿ ಬಲಶಾಲಿಯಾಗಿರುವ ವಿನಯ್, ಕಾರ್ತಿಕ್, ಸ್ನೇಹಿತ್ ಮೂವರೂ ಡ್ರೋನ್ ಪ್ರತಾಪ್ ಮೇಲೆ ಮುಗಿಬಿದ್ದಿದ್ದು ಯಾಕೆ? ಅನ್ನೋದು ಸಖತ್ ಇಂಟ್ರೆಸ್ಟಿಂಗ್ ಆಗಿದೆ.


Click it and Unblock the Notifications











