BBK 10: "ಡ್ರೋನ್ ಪ್ರತಾಪ್ ಹೆಣ್ಮಕ್ಕಳನ್ನು ನೋಡುವ ದೃಷ್ಟಿನೇ ಸರಿಯಿಲ್ಲ".. ಹೀಗಂದಿದ್ದು ಯಾರು? ಕಿಚ್ಚ ಕ್ಲಾಸ್ ಕೊಟ್ಟಿದ್ಯಾರಿಗೆ?
ಬಿಗ್ ಬಾಸ್ ಸೀಸನ್ 10 ದಿನೇ ದಿನೇ ಕುತೂಹಲ ಹೆಚ್ಚಿಸುತ್ತಲೇ ಇದೆ. ಮನೆಯೊಳಗಿರುವ ಸ್ಪರ್ಧಿಗಳು ಈಗೀಗ ಅಂತರಂಗ ಬಿಚ್ಚಿ ಮಾತಾಡ್ತಾ ಇದ್ದಾರೆ ಎನಿಸುತ್ತಿದೆ. ಆರಂಭದ ದಿನಗಳ ಬಳಿಕ ಮುಖವಾಡಗಳೆಲ್ಲಾ ನಿಧಾನಕ್ಕೆ ಕಳಚಿ ಈಗೀಗ ನಿಜರೂಪ ಹೊರಬರುತ್ತಿವೆಯೇನೋ ಎನಿಸುವಂಥಾ ಘಟನೆಗಳು ಆಗಾಗ ನಡೆಯುತ್ತಿವೆ.
ಇದೆಲ್ಲಾ ಏನೇ ಇದ್ರೂ ಎಲ್ಲವೂ ಸೂಪರ್ ಸಂಡೇ ವಿತ್ ಸುದೀಪ್ ನಲ್ಲಿ ಚರ್ಚೆಗೆ ಬಮದೇ ಬರುತ್ತವೆ. ಇಂದು (ನವೆಂಬರ್ 5) ಭಾನುವಾರ ಕೂಡಾ ಇಂಥದ್ದೇ ಒಂದು ಸಂದಿಗ್ಧ-ಸೂಕ್ಷ್ಮ ವಿಚಾರ ಚರ್ಚೆಗೆ ಬರುವ ಬಗ್ಗೆ ಜಿಯೋ ಸಿನಿಮಾ ಬಿಡುಗಡೆ ಮಾಡಿರೋ ಪ್ರೋಮೋದಲ್ಲಿ ಕಾಣಬಹುದಾಗಿದೆ.

ಡ್ರೋನ್ ಪ್ರತಾಪ್ ಮೊದಮೊದಲು ಬಹಳ ಮುಗ್ಧರಾಗಿ ಹೆದರಿದಂತೆ ಇರ್ತಿದ್ದರು. ಆದರೆ ನಿಧಾನಕ್ಕೆ ಮನೆಯ ಇತರರೊಂದಿಗೆ ಬೆರೆತು ಮಾತು- ಕಥೆಯಲ್ಲಿ ತೊಡಗಿಕೊಳ್ತಿದ್ದಾರೆ. ಆದ್ರೀಗ ಮತ್ತೆ ಪ್ರತಾಪ್ ಮೇಲೆ ಗುರುತರವಾದ ಅಪವಾದವೊಂದು ಎದ್ದಿದೆ. ಅದರ ಬಗ್ಗೆ ಕಿಚ್ಚ ಸುದೀಪ್ ಸೂಪರ್ ಸಂಡೇಯಲ್ಲಿ ಚರ್ಚೆ ಮಾಡಲಿದ್ದಾರೆ.
ಕಳೆದ ವಾರ ವಿನಯ್ ಮಾತನಾಡುವಾಗ ಪ್ರತಾಪ್ ಹೆಣ್ಮಕ್ಕಳನ್ನು ನೋಡುವ ರೀತಿ ಸರಿ ಇಲ್ಲ ಎಂದಿದ್ರು. ಈ ಮಾತನ್ನು ಇಶಾನಿ ಹೌದು ಎಂದು ಒಪ್ಪಿಕೊಂಡ್ರೆ, ತುಕಾಲಿ ಸಂತು ಮತ್ತು ನಮ್ರತಾ ಕೂಡಾ ನಿಜ ಎಂದಿದ್ದರು. ಈ ವಿಚಾರ ಸ್ವಲ್ಪ ಹೆಚ್ಚೇ ಸೀರಿಯಸ್ ಎನಿಸುವಂಥಾ ಸನ್ನಿವೇಶ ಹುಟ್ಟು ಹಾಕಿದಂತಿದೆ.
ಹಾಗಾಗಿ, ಇಂದಿನ ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಈ ವಿಚಾರವನ್ನು ಕೈಗೆತ್ತಿಕೊಂಡಿದ್ದಾರೆ. ನೋಡುವ ದೃಷ್ಟಿ ಸರಿ ಇಲ್ಲ ಎನ್ನುವುದಕ್ಕೆ ಪೂರಕವಾಗಿ ನಡೆದ ಘಟನೆಗಳೇನು? ಆ ರೀತಿ ಯಾರ್ಯಾರಿಗೆ ಅನ್ನಿಸಿದೆ? ನಿಜಕ್ಕೂ ಇಲ್ಲಿ ಪ್ರತಾಪ್ ಅಪರಾಧಿಯಾ? ಮನೆಯ ಎಲ್ಲಾ ಹೆಣ್ಮಕ್ಕಳು ಈ ಬಗ್ಗೆ ಏನಂತಾರೆ ಅನ್ನೋದನ್ನೆಲ್ಲಾ ಸುದೀಪ್ ಚರ್ಚೆ ಮಾಡಲಿದ್ದಾರೆ.

ಪ್ರೋಮೊದಲ್ಲಿ ಯೆಸ್ ಎಂದು ಹೇಳಿದ್ದ ಇಶಾನಿ, ವಿನಯ್ ಹಾಗೂ ತುಕಾಲಿ ಸಂತೋಷ್‌ಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೂವರ ಮನಸ್ಸಿನಲ್ಲಿರೋ ತಪ್ಪು ತಿಳುವಳಿಕೆಗಳನ್ನು ಕಿಚ್ಚ ಸುದೀಪ್ ಕ್ಲಿಯರ್ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ನೀಟ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ತಪ್ಪು ತಿಳುವಳಿಕೆಗಳನ್ನು ಮನವರಿಕೆ ಮಾಡಿದ್ದನ್ನು ಪ್ರೋಮೊದಲ್ಲಿ ಹೇಳಲಾಗಿದೆ.
ಈ ಹಿಂದೆ ಕೂಡಾ ಪ್ರತಾಪ್ ಬಗ್ಗೆ ಒಂದೆರಡು ಬಾರಿ ಕೆಲವು ಅಪಸ್ವರಗಳು ಎದ್ದಿದ್ದವು. ಆಗೆಲ್ಲಾ ಸುದೀಪ್ ಅವರಿಗೆ ಬಿಗ್ ಬಾಸ್ ಮನೆಯ ಬಗ್ಗೆ, ಅಲ್ಲಿನ ನಡವಳಿಕೆಗಳ ಬಗ್ಗೆ ತಿಳಿ ಹೇಳಿದ್ರು. ಅಷ್ಟೇ ಅಲ್ಲ, ಬಿಗ್ ಬಾಸ್ ಮನೆಯಿಂದ ಹೊರಬಂದ ಮೊಟ್ಟಮೊದಲ ಸ್ಪರ್ಧಿ ಸ್ನೇಕ್ ಶ್ಯಾಮ್ ಕೂಡಾ ಡ್ರೋನ್ ಪ್ರತಾಪ್ ಬಗ್ಗೆ ಬಹಳ ಒಳ್ಳೆಯ ಮಾತನಾಡಿದ್ರು.
ಈ ಎಲ್ಲಾ ಘಟನೆಗಳು ಆದ್ಮೇಲೆ ಪ್ರತಾಪ್ ನಿಧಾನಕ್ಕೆ ಓಪನ್ ಅಪ್ ಆದಂತೆ ಕಂಡಿತ್ತು. ಮನೆಯ ಉಳಿದ ಸದಸ್ಯರ ಜೊತೆ ಮುಕ್ತವಾಗಿ ಬೆರೆಯೋಕೆ ಶುರು ಮಾಡಿದ್ರು. ಆದ್ರೆ ಇಂದಿನ ಪ್ರೋಮೊ ನೋಡಿದ್ರೆ, ಪ್ರತಾಪ್ ಮೇಲೆ ಮನೆಯ ಕೆಲ ಸದಸ್ಯರು ಗಂಭೀರ ಆರೋಪ ಮಾಡಿರೋ ಹಾಗಿದೆ. ಇದನ್ನ ಸುದೀಪ್ ಹೇಗೆ ನಿಭಾಯಿಸ್ತಾರೆ? ಅದಕ್ಕೆ ಉಳಿದ ಸ್ಪರ್ಧಿಗಳು ಹೇಗೆ ರಿಯಾಕ್ಟ್ ಮಾಡ್ತಾರೆ? ಖುದ್ದು ಪ್ರತಾಪ್ ಈ ಬಗ್ಗೆ ಏನಂತಾರೆ ಅನ್ನೋ ಕುತೂಹಲ ಜೋರಾಗೇ ಇದೆ. ಇಂದಿನ ಸೂಪರ್ ಸಂಡೇ ವಿತ್ ಸುದೀಪ್ ಬಿಗ್ ಬಾಸ್ ಸ್ಪರ್ಧಿಗಳ ಯಾವೆಲ್ಲಾ ರಹಸ್ಯಗಳನ್ನು ಹೊರ ತರುತ್ತೆ ಅನ್ನೋ ಬಗ್ಗೆಯೂ ಕುತೂಹಲ ಇರೋದಂತೂ ಸತ್ಯ.


Click it and Unblock the Notifications











