BBK 10: ಮೈಕಲ್-ಇಶಾನಿ ಲವ್ ಸ್ಟೋರಿ ಕಥೆಯೇನು? ಇಬ್ಬರನ್ನೂ ಒಂದು ಮಾಡಿದ್ರಾ ಕಿಚ್ಚ ಸುದೀಪ್?

ಇಶಾನಿ ಹಾಗೂ ಮೈಕಲ್‌ರಿಂದಲೇ ಬಿಗ್ ಬಾಸ್ ಕನ್ನಡ ಸೀಸನ್ 10ರ ಮೊದಲ ಲವ್‌ ಸ್ಟೋರಿ ಶುರುವಾಗಿತ್ತು. ಆರಂಭದಿಂದಲೂ ಈ ಜೋಡಿ ನಡುವೆ ಏನೋ ಒಂದು ಕೆಮಿಸ್ಟ್ರಿ ವರ್ಕ್‌ಔಟ್ ಆಗಿತ್ತು. ಇಬ್ಬರೂ ಓಪನ್ ಆಗಿ ತಮ್ಮಿಬ್ಬರ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು. ಒಬ್ಬರಿಗೊಬ್ಬರು ಸಪೋರ್ಟ್ ಮಾಡಿಕೊಂಡಿದ್ದರು.

ಬಿಗ್ ಬಾಸ್ ಮನೆಯಲ್ಲಿ ಇಶಾನಿ ಹಾಗೂ ಮೈಕಲ್ ಇಬ್ಬರೂ ವಿಭಿನ್ನವಾಗಿಯೇ ಕಂಡಿದ್ದರು. ಇಬ್ಬರ ವ್ಯಕ್ತಿತ್ವ ಡಿಫ್ರೆಂಟ್, ಇಬ್ಬರ ಆಸೆಗಳು ಡಿಫ್ರೆಂಟ್ ಆಗಿತ್ತು. ಹೀಗಾಗಿ ಉಳಿದ ಸ್ಪರ್ಧಿಗಳಂತೆ ಈ ಜೋಡಿ ಕೂಡ ವೀಕ್ಷಕರ ಗಮನ ಸೆಳೆದಿತ್ತು.

bbk-10-kartik-michael-eshani

ಒಂದ್ಕಡೆ ಕಾರ್ತಿಕ್-ಸಂಗೀತಾ, ಇನ್ನೊಂದು ಕಡೆ ನಮ್ರತಾ-ಸ್ನೇಹಿತ್ ಜೋಡಿಯಾಗಿ ಕಂಡಿದ್ದರು. ಇವರೊಂದಿಗೆ ಇಶಾನಿ ಹಾಗೂ ಮೈಕಲ್ ಕೂಡ ಬಿಗ್‌ಬಾಸ್ ಮನೆಯಲ್ಲಿ ಸಾಕಷ್ಟು ಗಮನ ಸೆಳೆದಿದ್ದಾರೆ. ಆದ್ರೀಗ ಈ ಜೋಡಿ ಕಿತ್ತಾಡಿಕೊಂಡಿದೆ. ಇಬ್ಬರ ಪ್ರೀತಿ ಮುರಿದೇ ಬಿತ್ತು ಅನ್ನೋ ಮಟ್ಟಕ್ಕೆ ಬಂದು ನಿಂತಿದೆ. ಅಷ್ಟಕ್ಕೂ ಈ ಪ್ರಶ್ನೆ ಹುಟ್ಟುವಂತೆ ಮಾಡಿದ್ದು, ಜಿಯೋ ಸಿನಿಮಾದಲ್ಲಿ ಪ್ರಸಾರವಾಗಿರೋ ಒಂದು ಘಟನೆ.

ಅದಾಗಲೇ ಕಳಪೆ ಪಟ್ಟ ಹೊತ್ತುಕೊಂಡು ಸಂಗೀತಾ ಜೈಲಿನೊಳಗೆ ಹೋಗಿದ್ದರು. ಸಂಗೀತ ಜೈಲಿಗೆ ಹೋಗಿರೋ ಬೇಸರದಲ್ಲಿ ಕಾರ್ತಿಕ್ ಇದ್ದರು. ಅಡುಗೆ ಮನೆಯಲ್ಲಿ ಕಾರ್ತಿಕ್ ಕೆಲಸ ಮಾಡುತ್ತಿದ್ದರು. ಆಗ ಅಲ್ಲಿಗೆ ಬಂದ ಇಶಾನಿ ಮಾತಾಡುತ್ತಾ ಕಾರ್ತಿಕ್‌ರನ್ನು ಕೆಣಕಿದ್ದಾರೆ. ಮಾತಾಡ್ತಾ ಮಾತಾಡ್ತಾ ಕಾರ್ತಿಕ್ ಅನ್ನು 'ಪಪೆಟ್‌' ಎಂದು ಕರೆದಿದ್ದಾರೆ.

ಇಶಾನಿ ಪಪೆಟ್ ಅಂತ ಕರೆಯುತ್ತಿದ್ದಂತೆ ಕಾರ್ತಿಕ್ ಕೋಪ ನೆತ್ತಿಗೇರಿತ್ತು. "ನನ್ ಫ್ರೆಂಡ್ ಅವಳು. ಅವಳೇನೂ ತಪ್ಪು ಮಾಡಿಲ್ಲ. ಅವಳನ್ನು ಡಿಫೆಂಡ್ ಮಾಡುವ ಜವಾಬ್ದಾರಿ ನನ್ನದು. ಅದ್ಯಾವನೇ ಬರ್ಲಿ ನಾನು ಮಾಡೇ ಮಾಡ್ತೀನಿ" ಎಂದು ಏರಿದ ಧ್ವನಿಯಲ್ಲಿಯೇ ಡೈಲಾಗ್ ಬಿಟ್ಟಿದ್ದರು.

bbk-10-kartik-michael-eshani

"ಸೋತಾಗ ಮುಖ ಗಂಟು ಹಾಕಿಕೊಂಡು ಓಡಾಡೋದು. ಮಾರನೇ ದಿನ ಬಂದು ಸಾರಿ ಅನ್ನೋದೆಲ್ಲ ವ್ಯಕ್ತಿತ್ವದ ಬದಲಾವಣೆ ಅಲ್ಲ. ಒಬ್ಬ ತನ್ನ ಫ್ರೆಂಡ್‌ನ ಡಿಫೆಂಡ್ ಮಾಡ್ಕೊಂಡ್ರೆ ಅದು ನಿನ್ ಪ್ರಕಾರ ವ್ಯಕ್ತಿತ್ವದ ಬದಲಾವಣೆ ಅಲ್ವಾ?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಅದಕ್ಕೆ ಇಶಾನಿ, "ನಾನು ಯಾವತ್ತೂ ಹಾಗೆಲ್ಲ ಮಾಡಿಲ್ಲ. ನೀವಾಗಲೇ ಗುಂಪು ಮಾಡಿಕೊಂಡಿದ್ದೀರಾ" ಎಂದಿದ್ದಾರೆ. ಇಬ್ಬರ ನಡುವಿನ ಗಲಾಟೆ ಕೇಳಿ ಅಲ್ಲಿಗೆ ಮೈಕಲ್ ಎಂಟ್ರಿ ಕೊಟ್ಟಿದ್ದಾರೆ.

ಕಾರ್ತಿಕ್, 'ಓಹೋ... ಗ್ರೂಪ್‌ ಮಾಡಿರೋದು ಯಾರು ಅಂತ ಕಾಣಿಸ್ತಿದೆ' ಎಂದು ಚಪ್ಪಾಳೆ ತಟ್ಟಿ ನಕ್ಕಿದ್ದಾರೆ. ಈ ವೇಳೆ ಕಾರ್ತಿಕ್, ಇಶಾನಿ ನಡುವಿನ ಜಗಳದಲ್ಲಿ ಮೈಕಲ್ ಸಿಕ್ಕಿಕೊಂಡಿದ್ದಾರೆ. ಇದು ಇಬ್ಬರ ನಡುವಿನ ಬ್ರೇಕಪ್‌ಗೆ ಕಾರಣವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್, ಇಶಾನಿ ಹಾಗೂ ಮೈಕಲ್ ನಡುವೆ ನಡೆದ ಸಂಭಾಷಣೆಯ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

ಇಶಾನಿ: ಇನ್‌ಡೈರೆಕ್ಟ್‌ ಆಗಿ ನಂಗೇ ಹೇಳ್ತಿದೀಯಾ ನೀನು
ಕಾರ್ತಿಕ್: ನಾನ್ ಹಾಗೆ ಹೇಳ್ಲೇ ಇಲ್ಲ. (ಮೈಕಲ್ ಕಡೆಗೆ ತಿರುಗಿ) ನಾನ್ ಹಂಗೆ ಹೇಳಿದ್ನೇನೋ?
ಇಶಾನಿ: ಅವನ್ಯಾಕೆ ಕರ್ಕೊಂಡ್ ಬರ್ತಿದೀಯಾ ಇಲ್ಲಿ? ನಾವು ಮಾತಾಡ್ತಿದೀವಲ್ವಾ? ಮಧ್ಯದಲ್ಲಿ ಅವನ್ಯಾಕೆ?
ಕಾರ್ತಿಕ್: ಕೇಳಿಸ್ಕೊಳ್ತಿದ್ನಲ್ವಾ... ಹಾಗಾಗಿ ಕೇಳ್ದೆ....
ಕಾರ್ತಿಕ್: ಒಬ್ಳೆ ನಿಂತು ನಿಂಗೆ ಇಲ್ಲಿ ನಿನ್ನ ಆಟ ಆಡೋಕೆ ಆಗಲ್ಲ.
ಇಶಾನಿ: ಓಹೋ... ಹೌದಾ? ಯಾಕೆ?
ಕಾರ್ತಿಕ್: ಯಾಕಂದ್ರೆ ನಿನ್ ಮುಂದೆ ಒಂದು ಗೋಡೆ ಇಟ್ಕೊಂಡಿದೀಯಾ....
ಇಶಾನಿ: ಹೌದಾ? ಏನ್ ಗೋಡೆ ಅದು? ನೀನ್ಯಾರು ನಂಗ್ ಹಾಗೆಲ್ಲ ಹೇಳೋಕೆ?
ಕಾರ್ತಿಕ್: ನೀನ್ಯಾರು ನಂಗೆ ಪಪೆಟ್ ಅನ್ನೋಕೆ?
ಇಶಾನಿ: ಅದು ನಂಗೆ ಆಬಿಯಸ್‌ ಆಗಿತ್ತು.
ಕಾರ್ತಿಕ್: ನಂಗೂ ಇದು ಆಬಿಯಸ್ ಆಗಿತ್ತು.
ಇಶಾನಿ: ನಾನು ಹುಡುಗಿ ಅನ್ನೋ ಕಾರಣಕ್ಕೆ, ನನ್ನ ಆಟ ಆಡೋಕೆ ನಂಗೆ ಬರಲ್ಲ ಅಂತ ನೀನು ಹೇಳ್ತಿದೀಯಾ... ಹಾಗೆ ಹೇಳೋದಕ್ಕೂ, ಪಪೆಟ್ ಅಂತ ಹೇಳೋದಕ್ಕೂ ವ್ಯತ್ಯಾಸ ಇದೆ...
ಕಾರ್ತಿಕ್: ಆಬಿಯಸ್ಲಿ... ಏನೂ ಡಿಫೆರೆನ್ಸ್‌....
ಇಶಾನಿ: ವ್ಯತ್ಯಾಸ ಇದೆ. ಈವಾಗ ನಿನ್ನ ನಿಜವಾದ ಮುಖ ಕಾಣಿಸ್ತಾ ಇದೆ. ನಾನ್ ಮಾತಾಡಲ್ಲ... ಜಸ್ಟ್ ಸ್ಟೇ ದ ಹೆಲ್ ಅವೇ ಫ್ರಮ್ ಮೀ! ಅಷ್ಟೆ...
ಕಾರ್ತಿಕ್: ಅಷ್ಟೆ. ನೀನೂ ಅದ್ನೇ ಮಾಡು ಫಸ್ಟು....
ಇಶಾನಿ: (ಎದ್ದು ಹೋಗುತ್ತಾಳೆ) ಸಾಕಾಗೋಯ್ತು....
ಕಾರ್ತಿಕ್: (ಉಳಿದವರೊಂದಿಗೆ) ನನ್ನ ಪಪೆಟ್ ಅಂದ್ರೆ ಸುಮ್ನಿದ್ಬಿಡ್ತೀನಾ? ನೀನು ಸೇಫ್ ಆಟ ಆಡ್ತಿದ್ದೀಯಾ... ನಿಂಗೊಬ್ಳೆ ನಿಂತ್ಕೊಂಡು ಆಡೋಕೆ ಆಗೋದೇ ಇಲ್ಲ ಅಂದೆ ಅಷ್ಟೆ.
ಇತ್ತ ಇಶಾನಿ ಹೊರಗೆ ಬಂದು ಸೋಪಾದಮೇಲೆ ಕೂತಾಗ ನೀತು ಅವರನ್ನು ಸಮಾಧಾನ ಮಾಡಿದರು. ಸ್ನೇಹಿತ್ ಮತ್ತು ನಮ್ರತಾ ಕೂಡ ಅವಳನ್ನು ಸಮಾಧಾನ ಮಾಡಲು ಬಂದರು. ಮೈಕಲ್ ಕೂಡ ಅಲ್ಲಿಗೆ ಬಂದರು.
ಇಶಾನಿ: ಅವ್ನು, ಹೆಣ್ಣುಮಕ್ಕಳು ಒಬ್ರೇ ನಿಂತು ಆಟ ಆಡಕ್ಕಾಗಲ್ಲ ಅಂತಾನೇ ಸರಿನಾ ಅದು?
ನಮ್ರತಾ: (ಮೈಕಲ್ ಕಡೆ ನೋಡಿ) ಕಾರ್ತಿಕ್ ಹಾಗೆ ಹೇಳಿದ್ನಾ?
ಇಶಾನಿ: (ಮೈಕಲ್ ಕಡೆಗೆ ತಿರುಗಿ) ಅವನು ಹಾಗೇ ಹೇಳಿದ್ದು. ಹೆಣ್ಣುಮಕ್ಕಳು ಆಟ ಆಡಕ್ಕಾಗಲ್ಲ ಅಂತಾನೆ. ನೀನು ಅಲ್ಲೇ ಕೂತಿದ್ದೀಯಾ... ಇಲ್ಲ ಅಂತ ಹೇಳ್ತೀಯಾ?
ಮೈಕಲ್: ಇಲ್ಲ ಇಲ್ಲ. ನಾನು ಅಲ್ಲೇ ಕೂತ್ಕೊಂಡು ಕೇಳಿಸ್ಕೊಂಡೆ. ಅವನು ಹಾಗೆ ಹೇಳಿಲ್ಲ. ಅವನು ಹೇಳಿದ್ದು, 'ನೀನು ಒಬ್ಬಳೇ ನಿಂತು ಆಟ ಆಡಕ್ಕಾಗಲ್ಲ ಅಂತ ಹೇಳಿದ್ದು. ಇದು ವೈಯಕ್ತಿಕವಾಗಿ ಹೇಳಿದ್ದು. ನೂರಕ್ಕೆ ನೂರರಷ್ಟು!
ಇಶಾನಿ: ವಾವ್...! ಓ... (ಅಲ್ಲಿಂದಲೂ ಎದ್ದು ಹೋಗುವಳು) ಜಸ್ಟ್ ಸ್ಟೇ ಅವೇ ಫ್ರಮ್ ಮೀ... ನೀನು ಸಾಕಾಗೋಯ್ತು ನಂಗೆ... ನಾನು ಏನು ಕೇಳಿಸ್ಕೊಂಡಿದೀನಿ ನಂಗೊತ್ತು. ನೀನು ಅವನ ಸೈಡ್ ತಗೋಬೇಕಾ ತಗೋ...
ಮೈಕಲ್: ನಾನು ಯಾರ ಸೈಡೂ ತಗೊಂಡಿಲ್ಲ...
ಇಶಾನಿ: (ಕಾರ್ತಿಕ್ ಇದ್ದಲ್ಲಿಗೆ ಬಂದು) ಕಾರ್ತಿಕ್ ನೀನು ಹೇಳಿದ್ಯಲ್ವಾ? ಹೆಣ್ಣುಮಕ್ಕಳು ಆಡಕ್ಕಾಗಲ್ಲ ಅಂದ್ಯಲ್ವಾ?
ನಮ್ರತಾ: ತಪ್ಪಾಗಿ ಹೇಳ್ತಿದೀಯಾ ಇಶಾನಿ. ಅವನು ಹಾಗೆ ಹೇಳಲಿಲ್ಲ. ಅವನು ನಿನಗೆ ಡೈರೆಕ್ಟ್ ಆಗಿ ಹೇಳಿದ್ದು...
ಇಶಾನಿ: (ಅಲ್ಲಿಂದ ಹೊರಡುತ್ತ ಮೈಕಲ್ ಉದ್ದೇಶಿಸಿ) ಥೂ.... ನನ್ ಬಾಯ್‌ಫ್ರೆಂಡಾ ಅವ್ನು? ಅಸಹ್ಯ ಇರೋರೆಲ್ಲರೂ... ಏನಕ್ಕೆ ಅವ್ರ ಜೊತೆಗೆ ಮಾತಾಡ್ಬೇಕು... ನಂಗೆ ಕನ್ನಡ ಸರಿಯಾಗಿ ಬರಲ್ಲ ಅಂತ ಎಷ್ಟು ಅಡ್ವಾಂಟೇಜ್ ತಗೋತಾರೆ...
(ಇಶಾನಿ ಅಳುತ್ತ ಕೂಡುತ್ತಾಳೆ. ನಮ್ರತಾ ಬಂದು ಸಮಾಧಾನ ಮಾಡ್ತಾರೆ. ಅಲ್ಲಿಗೆ ಮೈಕಲ್ ಕೂಡ ಬರ್ತಾನೆ...)
ಮೈಕಲ್: ನಾನು ಅಲ್ಲಿಗೆ ಬಂದಿದ್ದೇ ನಿನ್ನ ಸಪೋರ್ಟ್‌ ಮಾಡೋಕೆ...
ಇಶಾನಿ: ಏನ್ ಸಪೋರ್ಟ್‌ ಮಾಡ್ದೆ? ಅವ್ನು ಹಾಗೆ ಹೇಳಿದ್ದು ನಂಗೆ ಕೇಳಿಸ್ತು. ನೀನು ಇಲ್ಲ ಅಂತಿದೀಯಾ....
ಮೈಕಲ್: ನನ್ನ ಫ್ರೆಂಡಾದ್ರೂ ಸರಿ, ಗರ್ಲ್‌ಫ್ರೆಂಡಾದ್ರೂ ಸರಿ... ಯಾರಾದ್ರೂ ಸುಳ್ಳು ಹೇಳಿದ್ರೆ ನಾನದನ್ನು ಒಪ್ಪಲ್ಲ....
ಇಶಾನಿ: ನಾನು ಸುಳ್ ಹೇಳ್ಲಿಲ್ಲ... (ಅಷ್ಟರಲ್ಲಿ ವಿನಯ್ ಕೂಡ ಅಲ್ಲಿಗೆ ಬಂದು ಇಶಾನಿ ಸಮಾಧಾನ ಮಾಡಲು ಯತ್ನಿಸುತ್ತಾರೆ.)
ಇಶಾನಿ: ಬ್ರೋ... ಅವ್ನು ಹಾಗೆ ಹೇಳ್ದ. ಬಟ್ ಇವ್ನು ಅವನಿಗೆ ಸಪೋರ್ಟ್ ಮಾಡ್ತಿದಾನೆ. (ಮೈಕಲ್‌ ಅಲ್ಲಿಂದ ಹೊರಡುತ್ತ 'ಸೈಕೊ' ಎಂದು ಉದ್ಘರಿಸಿ ಹೊರಟುಬಿಟ್ಟರು.)

ಇಶಾನಿ ಹಾಗೂ ಮೈಕಲ್ ನಡುವಿನ ಕಿತ್ತಾಟ, ವೈಮಸ್ಸಿಗೆ ಕಿಚ್ಚ ಸುದೀಪ್ ಮುಲಾಮು ಹಚ್ಚುತ್ತಾರಾ? ಅನ್ನೋದೇ ಕುತೂಹಲ. ಇಶಾನಿ,ಕಾರ್ತಿಕ್ ಹಾಗೂ ಮೈಕಲ್ ನಡುವಿನ ಘಟನೆಯನ್ನು ಕಿಚ್ಚ ಸುದೀಪ್ ವಿವರಿಸಿ ಇಬ್ಬರಿಗೂ ಹೇಳಿದರೆ ಮತ್ತೆ ಸರಿಹೋಗುತ್ತಾರಾ? ಇದಕ್ಕೆಲ್ಲ ಉತ್ತರ ಶೀಘ್ರದಲ್ಲೇ ಸಿಗುತ್ತೆ.

More from Filmibeat

English summary
BBK 10: Will Kichcha Sudeep talk about Eshani and Michael's misunderstanding?|
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X