BBK 10: ನಮ್ರತಾ ಜೊತೆ ಡೇಟ್ ಮಾಡ್ಬೇಕಂತೆ ಕಾರ್ತಿಕ್.. ಸಂಗೀತಾ ಇಲ್ಲದಾಗ ಈ ಮಾತೇಕೆ?
ಬಿಗ್ ಬಾಸ್‌ಗೆ ಬಂದ್ಮೇಲೆ ಪ್ರೇಮಿಗಳು ಹುಟ್ಟಿಕೊಳ್ಳದೆ ಇರುವುದಕ್ಕೆ ಹೇಗೆ ಸಾಧ್ಯ? ಈ ಹಿಂದಿನ 9 ಸೀಸನ್‌ಗಳಲ್ಲಿ ಒಂದಲ್ಲ ಒಂದು ಜೋಡಿ ವೀಕ್ಷಕರಿಗೆ ಎಂಟರ್‌ಟೈನ್ಮೆಂಟ್ ಕೊಟ್ಟಿತ್ತು. ಅದೇ ರೀತಿ ಬಿಗ್ ಬಾಸ್ 10ನೇ ಸೀಸನ್‌ನಲ್ಲೂ ಅದೇ ರೀತಿ ಪ್ರೇಮಿಗಳ ಹುಟ್ಟಿಕೊಂಡಿದ್ದಾರೆ.
ಅದು ಶಾಶ್ವತವಾಗಿ ಉಳಿದುಕೊಳ್ಳುತ್ತಾ? ಇಲ್ಲಾ ಬಿಗ್ ಬಾಸ್ ಮನೆಗಷ್ಟೇ ಸೀಮಿತವಾಗುತ್ತಾ? ಅನ್ನೋ ಗೊಂದಲವಂತೂ ಇದ್ದೇ ಇದೆ. 10ನೇ ಸೀಸನ್‌ನಲ್ಲಿ ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಮಹೇಶ್ ನಡುವೆ ಏನೋ ಸಂಥಿಂಗ್ ಸಂಥಿಂಗ್ ಶುರುವಾಗಿದೆ ಅನ್ನೋದು ವೀಕ್ಷಕರು ಸೂಕ್ಷ್ಮವಾಗಿ ಗಮನಿಸಿದ್ದಾರೆ.

ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಇಬ್ಬರೂ ಬಿಗ್ ಬಾಸ್ ಮನೆಯೊಳಗೆ ಅನ್ಯೋನ್ಯವಾಗಿದ್ದಾರೆ. ಆದ್ರೀಗ ಕಾರ್ತಿಕ್ ಹಾಗೂ ಸಂಗೀತಾ ನಡುವೆ ವೈಮನಸ್ಸು ಮೂಡಿರುವ ಹಾಗಿದೆ. ಸಂಗೀತಾ ಇಲ್ಲದ ವೇಳೆ ಕಾರ್ತಿಕ್ ಹಾಗೂ ನಮ್ರತಾ ನಡುವೆ ನಡೆದ ಸಂಭಾವಷಣೆ ಏನು? ಇಬ್ಬರೂ ಮುನಿಸಿಕೊಂಡಿದ್ದಾರಾ? ಇಂತಹ ಪ್ರಶ್ನೆಗೆ ಉತ್ತರ ಇಲ್ಲಿದೆ.
ಕಾರ್ತಿಕ್-ಸಂಗೀತಾ ನಡುವೆ ಭಿನ್ನಾಭಿಪ್ರಾಯ?
ಬಿಗ್ ಬಾಸ್ ಮನೆಯೊಳಗೆ ಎಲ್ಲರ ಕಣ್ಣು ಕಾರ್ತಿಕ್ ಹಾಗೂ ಸಂಗೀತಾ ಮೇಲಿತ್ತು. ಆದರೆ, ಮನೆಯಲ್ಲಿ ಎರಡು ತಂಡಗಳ ನಾಯಕತ್ವವನ್ನು ಆಯ್ಕೆ ಮಾಡಿಕೊಳ್ಳುವ ವಿಷಯದಲ್ಲಿ ಇಬ್ಬರಲ್ಲೂ ಭಿನ್ನಾಭಿಪ್ರಾಯ ಮೂಡಿತ್ತು. "ನೀನು ಫೇಕ್.." ಎಂದು ಸಂಗೀತಾ ಹೇಳಿದ್ದಕ್ಕೆ ಕಾರ್ತಿಕ್ ಶಾಕ್ ಆಗಿದ್ದರು. ಸದ್ಯ ಕಾರ್ತಿಕ್ ಹಾಗೂ ಸಂಗೀತಾ ಇಬ್ಬರೂ ನಮ್ರತಾ ನಾಯಕತ್ವದ ಉಗ್ರಂ ತಂಡವನ್ನು ಸೇರಿಕೊಂಡಿದ್ದರು. ಇಲ್ಲಿಂದ ಕಾರ್ತಿಕ್ ವರಸೆ ಬದಲಿಸಿದ್ದಾರೆ.
ನಮ್ರತಾ-ಕಾರ್ತಿಕ್ ಕ್ಲೋಸ್ ಆದ್ರಾ?
ಬಿಗ್‌ಬಾಸ್ ಮನೆಯ ಕಿಚನ್‌ನಲ್ಲಿ ಸ್ಪರ್ಧಿಗಳು ಅಡುಗೆ ಮಾಡುವುದರಲ್ಲಿ ಬ್ಯುಸಿಯಾಗಿದ್ದರೆ, ಇತ್ತ ನಮ್ರತಾರನ್ನು ಫ್ಲರ್ಟ್ ಮಾಡುವುದರಲ್ಲಿ ಕಾರ್ತಿಕ್ ನಿರತರಾಗಿದ್ದರು. ಕಾರ್ತಿಕ್ ತಮಾಷೆ ಮಾಡುತ್ತಲೇ ಡೇಟ್ ಮಾಡುವವರೆಗೂ ಬಂದು ನಿಂತಿತ್ತು. ಬಿಗ್ ಬಾಸ್ ಮನೆಯ ಬಾಲ್ಕನಿಯಲ್ಲಿ ನಮ್ರತಾ ಜೊತೆ ಡೇಟ್ ಮಾಡುವುದಕ್ಕೆ ಕಾರ್ತಿಕ್ ಪ್ಲಾನ್ ಮಾಡಿದ್ದಾರೆ. ಇಬ್ಬರ ನಡುವಿನ ಈ ಮಾತುಕತೆ ಜಿಯೋ ಸಿನಿಮಾ(JioCinema)ದಲ್ಲಿ ಪ್ರಸಾರ ಆಗುತ್ತಿದೆ. 24 ಗಂಟೆಯ ನೇರ ಪ್ರಸಾರದಲ್ಲಿ ನಡೆದ ಸಂಭಾಷಣೆ ಸಾರಾಂಶ ಹೀಗಿದೆ.
ನಿಂಗೆ ಏನ್ ಮಾಡಿಕೊಡ್ಬೇಕು?
"ನಿಂಗೆ ಏನ್ ಮಾಡ್ಕೊಡ್ಬೇಕು ಹೇಳು.. ನಾನು ಮಾಡ್ಕೊಡ್ತೀನಿ" ಎಂದು ಕಾರ್ತಿಕ್ ಮಾತು ಆರಂಭಿಸಿದ್ದರು. ಆಗ ನಮ್ರತಾ "ಟೂ ಡಿಶ್ ಲಂಚ್ ಮಾಡೋಣ.. ಒನ್ ಇಟಾಲಿಯನ್ ಆಮ್ಲೆಟ್ ಬೇಕು. ಐಸ್‌ಕ್ರೀಮ್ ಕೂಡ ಬೇಕು. ಜೊತೆಗೆ ಒಂದು ಡ್ರಿಂಕ್" ಎಂದು ಹೇಳಿದ್ದಾರೆ. ಆಗ ಕಾರ್ತಿಕ್ "ಓ ಐಸ್ ಕ್ರೀಮ್.. ಆರಾಮಾಗಿ ಮಾಡ್ಬೋದು. ನಾನು ಇಲ್ಲೇ ಮಾಡ್ಕೊಡ್ತೀನಿ" ಎಂದು ಹೇಳಿದ್ದಾರೆ. ಆಗ ಉಳಿದ ಸಹ ಸ್ಪರ್ಧಿಗಳು ಕಾರ್ತಿಕ್ ಕಾಲೆಳೆದಿದ್ದಾರೆ.
ಸಂಗೀತಾ ಇಲ್ಲದಾಗ ಈ ಮಾತೇಕೆ?
ಕಾರ್ತಿಕ್ ಹಾಗೂ ನಮ್ರತಾ ನಡುವಿನ ಮಾತುಕತೆ ನಡೆದಾಗ ಸಂಗೀತಾ ಇರಲಿಲ್ಲ. ಈ ಕಾರಣಕ್ಕೆ ತನಿಷಾ, "ಸಂಗೀತಾ ಸ್ನಾನಕ್ಕೆ ಹೋಗಿದಾರೆ ಅಂತ ಒಬ್ಬರ ಉತ್ಸಾಹ ಜಾಸ್ತಿ ಆಗ್ತಿದೆ" ಎಂದು ತಮಾಷೆ ಮಾಡಿದ್ದಾರೆ. ನಮ್ರತಾ ಜೊತೆ ಡೇಟ್ ಮಾಡೋದಷ್ಟೇ ಅಲ್ಲ. ಸಂಗೀತಾನೇ ವೇಟರ್ ಆಗಿ ಇರಬೇಕು" ಎಂದೂ ಕಾರ್ತಿಕ್ ಹೇಳಿದ್ದಾರೆ. ತನಿಷಾ, ಮೈಕಲ್, ಸಿರಿ,ವಿನಯ್, ತುಕಾಲಿ ಸಂತೋಷ್, ಪ್ರತಾಪ್ ಎಲ್ಲವೂ ಇವರಿಬ್ಬರ ಮಾತುಕತೆ ಕೇಳಿಸಿಕೊಂಡು ನಗುತ್ತ ನಿಂತಿದ್ದರು. ಇದನ್ನು ಸಂಗೀತಾ ಕೇಳಿಸಿಕೊಂಡರೆ, ಏನು ಮಾಡುತ್ತಾರೆ ಅನ್ನೋ ಪ್ರಶ್ನೆ ಎದುರಾಗಿದೆ.


Click it and Unblock the Notifications











