BBK 10: ಕಿಲ ಕಿಲ ಅಂತ ನಗುತ್ತಿದ್ದ ಬಿಗ್ ಬಾಸ್ ಮಂದಿ: ಸ್ವಲ್ಪ ಹೊತ್ತಿಗೆ ರಾಂಗ್ ಆಗಿದ್ದೇಕೆ?

ಬಿಗ್ ಬಾಸ್ ಮನೆ ಅಂದ್ಮೇಲೆ ಜಗಳ, ವೈ ಮನಸ್ಸು, ಟಾಸ್ಕ್ ಎಲ್ಲವೂ ಇದ್ದೇ ಇರುತ್ತೆ. ಇದರ ಜೊತೆಗೆ ಯಾರಾದರೂ ಒಬ್ಬರು ಕಾಮಿಡಿ ಮಾಡುತ್ತಾ ಮನೆಯನ್ನೆಲ್ಲ ಕಿಲ ಕಿಲ ಅಂತ ನಗಿಸುತ್ತಲೇ ಇರುತ್ತಾರೆ. ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಆ ಸ್ಥಾನದಲ್ಲಿ ಇರೋದು ತುಕಾಲಿ ಸಂತೋಷ್.

ತುಕಾಲಿ ಸಂತೋಷ್ ಕಾಮಿಡಿ ಕೆಲವು ವೀಕ್ಷಕರಿಗೆ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಿತ್ತು. ಅದೇ ಮತ್ತೆ ಕೆಲವರಿಗೆ ಆಕ್ಷೇಪಾರ್ಹವಾಗಿ ಕಂಡಿತ್ತು. ಮೊದಲ ವಾರ ತುಕಾಲಿ ಸಂತೋಷ್ ಮಾಡಿದ ಕಾಮಿಡಿ ಸ್ವತ: ಕಿಚ್ಚ ಸುದೀಪ್‌ಗೆ ಇಷ್ಟ ಆಗಿರಲಿಲ್ಲ. ಹೀಗಾಗಿ ಕೆಲವು ದಿನಗಳಿಂದ ತುಕಾಲಿ ಸಂತೂ ಗಂಭೀರ ಸ್ವರೂಪ ತಾಳಿದ್ದರು.

bbk-10-sangeetha-vinay-karthik

ಮೊದಲ ವಾರದ ಬಳಿಕ ತುಕಾಲಿ ಸಂತೋಷ್ ಹಾಸ್ಯಕ್ಕೆ ಕಿಚ್ಚ ಬೇಸರ ವ್ಯಕ್ತಪಡಿಸಿದ್ದರು. ಜೊತೆ "ನಿಮ್ಮ ಕಾಮಿಡಿ ಬೇರೆಯವರ ಮನಸ್ಸನ್ನು ನೋಯಿಸಬಾರದು" ಎಂದು ಸುದೀಪ್ ಎಚ್ಚರಿಕೆ ನೀಡಿದ್ದರು. ಅಲ್ಲಿಂದ ತುಕಾಲಿ ಸಂತೋಷ್ ಸ್ವಲ್ಪ ಗಂಭೀರವಾಗಿಟ್ಟಿದ್ದರು. ವೀಕ್ಷಕರ ಕೂಡ ಮನೆಯಲ್ಲಿ ಹಾಸ್ಯವನ್ನು ಮಿಸ್ ಮಾಡಿಕೊಂಡಿದ್ದರು.

ಇಂದು (ನವೆಂಬರ್ 9) ಬೆಳಗ್ಗೆ ತುಕಾಲಿ ಸಂತೋಷ್ ಮನೆಯ ಸದಸ್ಯರನ್ನು ನಗಿಸುತ್ತಿರುವ ಪ್ರೋವೊವನ್ನು ಜಿಯೋ ಸಿನಿಮಾ ರಿಲೀಸ್ ಆಡಿತ್ತು. ತುಕಾಲಿ ಸಂತೂ ಕಾಮಿಡಿ ಮನೆಮಂದಿಯೆಲ್ಲ ಬಿದ್ದಿದ್ದು ನಕ್ಕಿದ್ದರು. ಅದೇ ಮಧ್ಯಾಹ್ನ ಆಗುವುದರೊಳಗೆ ಬಿಗ್ ಬಾಸ್ ಮನೆ ಗಂಭೀರ ಸ್ವರೂಪ ತಾಳಿದೆ. ಹೊಟ್ಟೆ ಹಿಡಿದುಕೊಂಡು ನಗುತ್ತಿದ್ದರು. ಕೆಲವೇ ಗಂಟೆಗಳಲ್ಲಿ ಕೆಂಡಾಮಂಡಲವಾಗಿದ್ದಾರೆ.

ಬಿಗ್ ಬಾಸ್ ಮನೆಯ ಸದಸ್ಯರ ನಡುವೆ ಧಗಧಗನೇ ಹೊತ್ತಿ ಉರಿಯುತ್ತಿರೋದಕ್ಕೆ ಕಾರಣ ಟಾಸ್ಕ್. ಬಿಗ್‌ಬಾಸ್‌ನಲ್ಲಿ ಸ್ಪರ್ಧಿಗಳಿಗೆ ವಿವಿಧ ಭಾವಗಳನ್ನು ಮೂಡಿಸುವ ಟಾಸ್ಕ್ ಅನ್ನು ನೀಡಿದ್ದರು. ಅದೇ ಟಾಸ್ಕ್‌ನ ವಿಡಿಯೋವನ್ನು ಜಿಯೋ ಸಿನಿಮಾ ರಿಲೀಸ್ ಮಾಡಿದೆ. ಅದರಲ್ಲಿ ವಿನಯ್, ಕಾರ್ತಿಕ್ ಹಾಗೂ ಸಂಗೀತಾ ಶೃಂಗೇರಿ ಮತ್ತೆ ಕಿತ್ತಾಡುತ್ತಿರುವುದು ಎದ್ದು ಕಾಣುತ್ತಿದೆ.

bbk-10-sangeetha-vinay-karthik

ಅಂದ್ಹಾಗೆ ಬಿಗ್ ಬಾಸ್ ಒಂದು ಪ್ಲ್ಯಾಸ್ಟಿಕ್‌ ಬಾಕ್ಸ್‌ನ ಎರಡೂ ಬದಿಯಲ್ಲಿ ಹಗ್ಗಗಳಿಂದ ಪೋಣಿಸಿ, ಅದನ್ನು ಎರಡು ಸ್ಪರ್ಧಿಗಳ ಸೊಂಟಕ್ಕೆ ಕಟ್ಟಲಾಗಿತ್ತು. ಅದನ್ನು ಇಟ್ಟುಕೊಂಡು ಓಡುವ ಟಾಸ್ಕ್‌ ಅನ್ನು ಬಿಗ್‌ಬಾಸ್‌ ಮನೆಯ ಸ್ಪರ್ಧಿಗಳಿಗೆ ನೀಡಲಾಗಿದೆ. ಈ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಪರಸ್ಪರ ತಳ್ಳಿಕೊಳ್ಳುವ, ಕಿರುಚಾಡಿಕೊಳ್ಳುವ ಸನ್ನಿವೇಶಗಳು ಸೃಷ್ಟಿಯಾಗಿವೆ.

ಎಂದಿನಂತೆ ವಿನಯ್-ಕಾರ್ತಿಕ್‌ ನಡುವೆ ಮಾತಿಗೆ ಮಾತು ಬೆಳೆದಿದೆ. ಸಂಗೀತಾ ಶೃಂಗೇರಿ ಕೆಂಡಾ ಮಂಡಲ ಆಗಿದ್ದಾರೆ. ಇನ್ನೊಂದು ಕಡೆ ಸಂಗೀತಾರನ್ನು ವಿನಯ್ ಪರೋಕ್ಷವಾಗಿ ಅಣುಕಿಸುತ್ತಿರೋದು ಎದ್ದು ಕಾಣುತ್ತಿದೆ. ಮತ್ತೆ 'ಫೇರ್‍ ಗೇಮ್‌' ಬಗ್ಗೆನೇ ಚರ್ಚೆ ಆರಂಭ ಆಗಿದೆ. ಅಷ್ಟಕ್ಕೂ ಈ ಟಾಸ್ಕ್‌ ಏನು? ಇದರಲ್ಲಿ ಗೆದ್ದವರು ಯಾರು? ವಿನಯ್, ಕಾರ್ತಿಕ್ ಹಾಗೂ ಸಂಗೀತಾ ನಡುವಿನ ಜಿದ್ದಾಜಿದ್ದಿಯೇನು? ಅನ್ನೋದೇ ಇಂಟ್ರೆಸ್ಟಿಂಗ್.

More from Filmibeat

English summary
BBK 10: Task fight between Vinay Karthik Sangeeth Sringeri
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X