BBK 10: ಹಠ ಬಿಡ್ತಿಲ್ಲ ವರ್ತೂರು ಸಂತೋಷ್.. ಮನವೊಲಿಸಲು ಎಂಟ್ರಿ ಕೊಟ್ಟ ಭಾಗ್ಯಲಕ್ಷ್ಮಿ ನಟಿ
ಬಿಗ್ ಬಾಸ್ ಮನೆಯಲ್ಲಿ ಹೈ ಡ್ರಾಮ ನಡೆಯುತ್ತಿದೆ. ಇದು ಕಿಚ್ಚ ಸುದೀಪ್‌ಗೂ ದೊಡ್ಡ ಶಾಕ್. ವರ್ತೂರು ಸಂತೋಷ್ ಬಿಗ್ ಬಾಸ್ ಮನೆಯಿಂದ ಹೊರಬರಬೇಕು ಅಂತ ಹಠ ಹಿಡಿದು ಕೂತಿದ್ದಾರೆ. ಅದ್ಯಾರೇ ಮನವೊಲಿಸುವ ಪ್ರಯತ್ನ ಮಾಡಿದರೂ ಸಮಾಧಾನ ಆಗುವಂತೆ ಕಾಣುತ್ತಲ್ಲೇ ಇಲ್ಲ.
ನಿನ್ನೆ (ನವೆಂಬರ್ 12) ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮದ ಎಲಿಮಿನೇಷನ್ ರೌಂಡ್ ಇತ್ತು. ಈ ವೇಳೆ ಕಿಚ್ಚ ಸುದೀಪ್ ವರ್ತೂರು ಸಂತೋಷ್‌ರನ್ನು ನೀವು ಸೇಫ್ ಎಂದು ಅನೌನ್ಸ್ ಮಾಡುತ್ತಿದ್ದಂತೆ ವರ್ತೂರು ಸಂತೋಷ್ ಭಾವುಕರಾಗಿದ್ದರು. ಕಿಚ್ಚ ಸುದೀಪ್‌ಗೆ, ಬಿಗ್‌ಬಾಸ್ ಮನೆಯ ಸದಸ್ಯರಿಗೆ, ಓಟ್ ಹಾಕಿದ 34 ಲಕ್ಷಕ್ಕಿಂತ ಅಧಿಕ ಜನರಿಗೆ ಬಿಗ್ ಶಾಕ್ ಕೊಟ್ಟಿದ್ದರು.

"ನನಗೆ ಹೊರಗೆ ನಡೆದ ಘಟನೆಯನ್ನು ಮರೆತು ಆಡಬೇಕು ಎಂದು ಇಲ್ಲಿಗೆ ಬಂದೆ. ಆದರೆ ನನಗೆ ಅದರಿಂದ ಹೊರಗೆ ಬರಲು ಸಾಧ್ಯಾಗುತ್ತಿಲ್ಲ. ಹಾಗಾಗಿ ನಾನು ಶೋದಿಂದ ಹೊರಗೆ ಹೋಗಲು ಬಯಸುತ್ತೇನೆ" ಎಂದು ಹೇಳಿದರು. ಸುದೀಪ್ ಕೂಡ ಮನವೊಲಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಿರಲಿಲ್ಲ.
ವರ್ತೂರು ಸಂತೋಷ್ ಈ ನಿರ್ಧಾರ ಮನೆ ಮಂದಿಗೆ ಶಾಕ್ ಆಗಿತ್ತು. ಅವರು ಅದೆಷ್ಟೇ ಹೇಳಿದರೂ ವರ್ತೂರು ಸಂತೋಷ್ ಒಪ್ಪುವ ಹಾಗೆ ಕಾಣಿಸುತ್ತಿಲ್ಲ. ನಿನ್ನೆಯಿಂದಲೂ ಹಠ ಹಿಡಿದು ಕೂತಿದ್ದಾರೆ. ವರ್ತೂರು ಸಂತೋಷ್ ನಿರ್ಧಾರಕ್ಕೆ ಕಿಚ್ಚ ಸುದೀಪ್ ಕೂಡ ಬೇಸರ ಪಟ್ಟುಕೊಂಡಿದ್ದರು. "ನೀವು ಜನರ ಪ್ರೀತಿಯ ವಿರುದ್ಧ ಹೋಗ್ತಿದ್ದೀರಾ" ಎಂದು ಎಚ್ಚರಿಸಿದ್ದರು. ಅಲ್ಲದೆ "ಮನೆಯೊಳಗೆ ಇರ್ತೀರೋ ಬಿಡ್ತೀರೋ ನಿಮಗೆ ಬಿಟ್ಟಿದ್ದು. ಆದರೆ, ನನಗಂತೂ ನಿರಾಸೆಯಾಗಿದೆ " ಎಂದು ಹೇಳಿ ಬೇಸರದಿಂದಲೇ ವೇದಿಕೆ ಬಿಟ್ಟು ಹೋಗಿದ್ದರು.
ಈ ಘಟನೆ ನಡೆದ ಬಳಿಕವೂ ವರ್ತೂರು ಸಂತೋಷ್‌ರನ್ನು ಮನವೊಲಿಸಲು ಮನೆ ಮಂದಿಯೆಲ್ಲ ಯತ್ನಿಸುತ್ತಿದ್ದಾರೆ. ಆದರೆ, ವರ್ತೂರು ಸಂತೋಷ್ ಹಿಡಿದ ಪಟ್ಟನ್ನು ಬಿಟ್ಟಿಲ್ಲ. ಇದೀಗ ಬಿಗ್ ಬಾಸ್ ಮನೆಗೆ 'ಭಾಗ್ಯಲಕ್ಷ್ಮಿ' ಧಾರಾವಾಹಿಯ ನಟಿ ಸುಷ್ಮಾ ಕೆ ರಾವ್ ಎಂಟ್ರಿ ಕೊಟ್ಟಿದ್ದಾರೆ. ಈ ಘಟನೆ ನಡೆಯುತ್ತಿದ್ದ ಹಾಗೇ ಕಿರುತೆರೆ ನಟಿಯ ಎಂಟ್ರಿ ಕೊಡಿಸಿದ್ದಾರೆ. ಅದರ ಪ್ರೋಮೊವನ್ನು ಜಿಯೋ ಸಿನಿಮಾ ಬೆಳಗ್ಗೆನೇ ರಿಲೀಸ್ ಮಾಡಿದೆ.

'ಭಾಗ್ಯಲಕ್ಷ್ಮಿ' ನಟಿ ಮನೆಯೊಳಗೆ ಪ್ರವೇಶ ಮಾಡುತ್ತಿದ್ದಂತೆ ನೇರವಾಗಿ ವರ್ತೂರು ಸಂತೋಷ್ ಬಳಿ ತೆರಳಿದ್ದಾರೆ. ಹೀಗಾಗಿ ವರ್ತೂರು ಸಂತೋಷ್ ಹಠಕ್ಕೆ ಕಿರುತೆರೆ ನಟಿ ಸುಷ್ಮಾ ಕೆ ರಾವ್ ಬ್ರೇಕ್ ಹಾಕಬಹುದೇ..? ಅವರ ಮನವೊಲಿಸುವಲ್ಲಿ ಸಫಲರಾಗುತ್ತಾರೆಯೇ? ಇಲ್ಲ ವರ್ತೂರು ಸಂತೋಷ್ ತಮ್ಮ ಹಠವನ್ನೇ ಮುಂದುವರೆಸುತ್ತಾರಾ? ಈ ಪ್ರಶ್ನೆಗೀಗ ಉತ್ತರ ಸಿಗಬಹುದು.
ಸದ್ಯ ಜಿಯೋ ರಿಲೀಸ್ ಮಾಡಿರೋ ಪ್ರೋಮೊದಲ್ಲಿ "ನಾನು ನಿಮ್ಮ ಅಕ್ಕನಾಗಿ ಹೇಳ್ತಿದೀನಿ. ನನ್ನಿಂದ ಆಗಲ್ಲ ಅನ್ನೋದನ್ನು ಮನಸ್ಸಿಂದ ತೆಗೆದುಬಿಡಿ" ಎಂದು ಪಕ್ಕ ಕೂತು ಮನವೊಲಿಸುತ್ತಿರುವುದನ್ನು ಬೆಳಗಿನ ಪ್ರೊಮೊದಲ್ಲಿ ರಿವೀಲ್ ಮಾಡಲಾಗಿದೆ. ನಟಿ ಎಂಟ್ರಿ ದೀಪಾವಳಿ ಸಂಭ್ರಮಕ್ಕೋ? ಇಲ್ಲ ವರ್ತೂರು ಸಂತೋಷ್ ಮನವೊಲಿಸುವುದಕ್ಕೋ ಅನ್ನೋದು ಇನ್ನೂ ರಿವೀಲ್ ಆಗಬೇಕಿದೆ.


Click it and Unblock the Notifications











