BBK 10: ಮನೆಯಿಂದ ಹೊರ ಕಳಿಸಿ ಎಂದು ಕಣ್ಣೀರಿಟ್ಟ ವರ್ತೂರು.. " ಬ್ರೋ ಹೊರಗೆ ಬರ್ಬೇಡಿ" ಎಂದ ನೆಟ್ಟಿಗರು

ವೀಕೆಂಡ್ ಬಂತು ಅಂದರೆ ಬಿಗ್ ಬಾಸ್ ಮನೆಯೊಳಗಿನ ಕಥೆ ರೋಚಕ ತಿರುವು ಪಡೆದುಕೊಳ್ಳುತ್ತೆ. ಕಿಚ್ಚ ಸುದೀಪ್ ಎಂಟ್ರಿ ಆಗುತ್ತಿದ್ದಂತೆ ಸ್ಪರ್ಧಿಗಳಿಗೆ ಟೆನ್ಷನ್ ಶುರುವಾಗುತ್ತೆ. ಈ ವಾರ ಯಾರು ಮನೆಯಿಂದ ಹೊರ ಹೋಗುತ್ತೇವೆಯೋ? ನಮ್ಮ ಹಣೆ ಬರಹ ಏನಾಗಿದೆಯೋ? ಅಂತ ತಳಮಳ ಶುರುವಾಗುತ್ತೆ.

ಇನ್ನು ಭಾನುವಾರ ಎಲಿಮಿನೇಷನ್ ಯಾರು ಅನ್ನೋದು ರಿವೀಲ್ ಆಗುತ್ತೆ. ಕಿಚ್ಚ ಸುದೀಪ್ ಮುಂದೆ ನೀತು, ವರ್ತುರ್ ಸಂತೋಷ್, ಸ್ನೇಹಿತ್, ಇಶಾನಿ ನಾಲ್ಕು ಮಂದಿ ಇದ್ದಾರೆ. ಇವರಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಅನ್ನೋ ಕುತೂಹಲಕ್ಕೆ ಇಂದು (ನವೆಂಬರ್ 12) ತೆರೆಬೀಳಲಿದೆ. ಈ ಕೂತೂಹಲಕ್ಕೆ ಬೆಳ ಬೆಳಗ್ಗೆನೇ ಬಿಟ್ಟಿರೋ ಪ್ರೋಮೊ ಮತ್ತಷ್ಟು ಕಿಚ್ಚು ಹಚ್ಚಿದೆ.

BBK 10 Promo Varthur Santhosh wants to go out of bigg boss Kichcha Sudeep disappointed

ಜಿಯೋ ಸಿನಿಮಾ ಹಾಗೂ ಕಲರ್ಸ್ ಕನ್ನಡ ಹೊರಬಿಟ್ಟಿರೋ ಪ್ರೋಮೊದಲ್ಲಿ ಕಿಚ್ಚ ಸುದೀಪ್ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್‌ರನ್ನು ಸೇಫ್ ಎಂದು ಘೋಷಿಸಿದ್ದಾರೆ. ಆದರೆ, ವರ್ತೂರು ಸಂತೋಷ್ ಕಣ್ಣೀರಿಟ್ಟು, ಕೈ ಮುಗಿದು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಬೇಕು ಅಂತ ಹಠ ಹಿಡಿದಿದ್ದಾರೆ. ಇದು ಕಿಚ್ಚ ಸುದೀಪ್‌ಗೆ ಬೇಸರ ತರಿಸಿದೆ.

ಇತ್ತೀಚೆಗೆ ವರ್ತೂರು ಸಂತೋಷ್ ಅವರನ್ನು ಹುಲಿ ಉರುಗು ಧರಿಸಿದ್ದ ಆರೋಪದ ಮೇಲೆ ಅರಣ್ಯ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಜಾಮೀನ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದು ತಮ್ಮ ಮೇಲೆ ಪರಿಣಾಮ ಬೀರಿದ್ದು, ಮನೆಯೊಳಗೆ ಇರಲು ಆಗುತ್ತಿಲ್ಲ ಎಂದು ವರ್ತೂರು ಸಂತೋಷ್ ಹೇಳಿದ್ದಾರೆ. ಇದೇ ವೇಳೆ ವರ್ತೂರ್ ಸಂತೋಷ್‌ಗೆ ಬಂದ ವೋಟ್‌ಗಳನ್ನೂ ಕಿಚ್ಚ ಸುದೀಪ್ ರಿವೀಲ್ ಮಾಡಿದ್ದಾರೆ.

ಹುಲಿ ಉಗುರು ಧರಿಸಿದ ಆರೋಪದ ಮೇಲೆ ಜೈಲಿಗೆ ಹೋಗಿ ವಾಪಸ್ ಮನೆಯೊಳಗೆ ಬಂದಿರೋ ವರ್ತೂರು ಸಂತೋಷ್‌ಗೆ ಕ್ರೇಜ್ ಹೆಚ್ಚಾಗಿದೆ. ಈ ವಾರ ವರ್ತೂರು ಸಂತೋಷ್ ಮನೆಯೊಳಗೆ ಉಳಿಯಬೇಕು ಅಂತ 34 ಲಕ್ಷದ 15 ಸಾವಿರಕ್ಕೂ ಅಧಿಕ ವೋಟ್‌ಗಳು ಬಂದಿವೆ. ಹೀಗಿದ್ದರೂ ವರ್ತೂರು ಮನೆಯಿಂದ ಆಚೆ ಬರೋಕೆ ನಿರ್ಧರಿಸಿದ್ದಾರೆ. ಕಿಚ್ಚ ಸುದೀಪ್ ಕೂಡ ಜನರ ಆದೇಶದಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.

BBK 10 Promo Varthur Santhosh wants to go out of bigg boss Kichcha Sudeep disappointed

ಇಷ್ಟೆಲ್ಲ ಹೇಳಿದ ಮೇಲೂ ಬಿಗ್ ಬಾಸ್ ಮನೆಯಿಂದ ವರ್ತೂರು ಸಂತೋಷ್ ಹೊರಗೆ ಬರುತ್ತಾರಾ? ಇಲ್ಲ ಜನರ ಪ್ರೀತಿಗೆ, ಕಿಚ್ಚ ಮಾತಿಗೆ ಬೆಲೆ ಕೊಟ್ಟು ಮನೆಯೊಳಗೆ ಉಳಿದುಕೊಳ್ಳುತ್ತಾರಾ? ಅನ್ನೋದು ಇಂದಿನ 'ಸಂಡೇ ವಿತ್ ಸುದೀಪ' ಕಾರ್ಯಕ್ರಮದಲ್ಲಿ ಗೊತ್ತಾಗಲಿದೆ. ಇತ್ತ ಪ್ರೋಮೊ ಹೊರಬೀಳುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಮೇಲೆ ಕಮೆಂಟ್ ಮಾಡುತ್ತಿದ್ದಾರೆ. "ನಿಮಗಾಗೇ ಬಿಗ್ ಬಾಸ್ ನೋಡ್ತಿರೋದು ಬ್ರೋ.." ಎನ್ನುತ್ತಿದ್ದಾರೆ.

ನೆಟ್ಟಿಗರೊಬ್ಬರು "ಅಧಿಕಾರಿಗಳು ಮಾಡುವ ತಪ್ಪು ಬಡ ಜನಗಳ ಮೇಲೆ ಎಷ್ಟು ಪ್ರಭಾವ ಬಿರುತ್ತೆ ಎನ್ನುವುದಕ್ಕೆ ಇದೆ ಸಾಕ್ಷಿ.." ಎಂದು ಕಿಡಿಕಾರಿದ್ದರೆ, ಇನ್ನೊಬ್ಬರು "ಅಯ್ಯೋ ಸಂತೋಷ್ ನೀವು ಹೊರಗೆ ಬಂದು ಹೋದ ಮೇಲೆ ತುಂಬಾ ಚೆನ್ನಾಗಿ ಆಡ್ತಾ ಇದ್ದಿರಾ.. ಸ್ಟ್ರಾಂಗ್ ಆಗಿ ಇರಿ." ಎಂದಿದ್ದಾರೆ.

"ನೀವು ಇರ್ಬೇಕು ಬ್ರೋ.. ಪ್ಲೀಸ್ ಆ ನೀತೂ ಬೇಡ ಅವಳೂ ಹೋಗ್ಲಿ.. ನಿಮಗೆ ಕನ್ನಡ ಜನರ ಸಪೋರ್ಟ್ ಇದೆ." ಎಂದರೆ, ಮತ್ತೊಬ್ಬರು "ಯಾವುದೇ ವ್ಯಕ್ತಿ ಸ್ಟ್ರಾಂಗ್ ಇರುವಾಗ ಅವರ ಜೀವನದಲ್ಲಿ ನಡೆಯುಬಾರದ ನಡೆದರೆ ಮನಸ್ಥಿತಿ ಕುಗ್ಗುತ್ತದೆ ಹಾಗೆ ಯಾವುದರ ಕಡೆಗೂ ಗಮನ ಇರೋದಿಲ್ಲ. ಹಾಗೆ ವರ್ತೂರು ಸಂತೋಷ್ ಅವರಿಗೆ ಈ ರೀತಿ ಆಗಿದೆ. ಹಳ್ಳಿ ರೈತರು ಬೆಳೆಯಬೇಕು." ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ವರ್ತೂರ್ ಸರ್ ಬಿಗ್ ಬಾಸ್ ಶೋ ರೈತ ಮಕ್ಕಳಿಗೆ ಇನ್ನೂ ಅವಕಾಶ ಕೊಟ್ಟಿಲ್ಲ. ಈ ಬಾರಿ ಒಂದು ಸದುಪಯೋಗ ಪಡಿಸಿಕೊಳ್ಳಿ. ಹೊರಗಡೆ ಆಗಿದ್ದು ಆಗಿ ಹೋಯ್ತು. ಜನರು ನಿಮ್ಮ ಬೆಂಬಲಕ್ಕೆ ನಿಂತು, ನಿಮ್ಮನ್ನು ಬಹುದೊಡ್ಡ ಸಮಸ್ಯೆ ಇಂದ ಹೊರಗೆ ತಂದಿದ್ದಾರೆ. ನಿಮಗೆ ಪ್ರೀತಿ ವಿಶ್ವಾಸ ನೀಡಿ ನಿಮ್ಮನ್ನು ಒಪ್ಪಿಕೊಂಡಿದ್ದಾರೆ. ದಯವಿಟ್ಟು ಒಂದು ವಿನಂತಿ ನೀವು ಹೊರಹೋಗುವ ನಿರ್ಧಾರವನ್ನು ಹಿಂದೆ ತೆಗೆದುಕೊಳ್ಳಿ." ಎಂದಿದ್ದಾರೆ.

More from Filmibeat

English summary
BBK 10 Promo: Vartur Santhosh wants to leave Bigg Boss|
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X