ಬಿಗ್ ಬಾಸ್‌ಗೆ ಟಕ್ಕರ್ ಕೊಡಲು ಮತ್ತೊಂದು ರಿಯಾಲಿಟಿ ಶೋ; ಲಾಯರ್ ಜಗದೀಶ್-ಗೋಲ್ಡ್ ಸುರೇಶ್ ಪ್ಲ್ಯಾನ್ ಏನು?

ಬಿಗ್ ಬಾಸ್ ಕನ್ನಡ ಸೀಸನ್ 12 ಅರ್ಧ ಹಾದಿಯನ್ನು ತಲುಪಿದೆ. ಈಗಾಗಲೇ 50 ದಿನಗಳನ್ನು ಪೂರೈಸಿರುವ ಬಿಗ್ ಬಾಸ್ ಟ್ವಿಸ್ಟ್‌ಗಳ ಮೇಲೆ ಟ್ವಿಸ್ಟ್ ಕೊಡುವುದಕ್ಕೆ ಸಜ್ಜಾಗಿದೆ. ಇನ್ನೊಂದು ಕಡೆ ಹೊರಗೆ ಬಿಗ್ ಬಾಸ್ ಕನ್ನಡದ 11ನೇ ಸೀಸನ್‌ನ ಸ್ಪರ್ಧಿಗಳು ಹವಾ ಎಬ್ಬಿಸುತ್ತಿದ್ದಾರೆ. ಅದರಲ್ಲೂ ಕೈ ಮಿಲಾಯಿಸಿಕೊಂಡು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದ ಲಾಯರ್ ಜಗದೀಶ್ ಆಗಾಗ ಸುದ್ದಿ ಮಾಡುತ್ತಲೇ ಇರುತ್ತಾರೆ.

ಇನ್ನು ಬಿಗ್ ಬಾಸ್‌ ಕನ್ನಡ ಸೀಸನ್‌ 11ರ ಮತ್ತೊಬ್ಬ ಸ್ಪರ್ಧಿ ಗೋಲ್ಡ್ ಸುರೇಶ್ ಅವರ ಸುದ್ದಿನೇ ಇರಲಿಲ್ಲ. ಈಗ ಮತ್ತೆ ಅವರಿಬ್ಬರೂ ಒಟ್ಟೊಟ್ಟಿಗೆ ಪ್ರತ್ಯಕ್ಷ ಆಗಿದ್ದಾರೆ. ಇದೇ ಸೀಸನ್‌ನಲ್ಲಿ ಎಲಿಮಿನೇಟ್ ಆಗಿರುವ ಡಾಗ್ ಸತೀಶ್ ಬರ್ತ್‌ಡೇಗೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಈ ಜೋಡಿ ಹೊಸ ಬಾಂಬ್ ಸಿಡಿಸಿದ್ದಾರೆ.

BBK 11 contestant Lawyer Jagadeesh and Gold Suresh planning to do new reality show in Kannada

ಬಿಗ್ ಬಾಸ್ ಮನೆಯಿಂದ ಹೊರ ಬಂದು ಒಂದು ವರ್ಷವಾದ ಬಳಿಕ ಈ ಜೋಡಿ ಹೊಸ ಸಾಹಸಕ್ಕೆ ಕೈ ಹಾಕಿದೆ. ಬಿಗ್ ಬಾಸ್‌ ಅನ್ನು ಹೊಗಳುತ್ತಲೇ ಅವರದ್ದೇ ಒಂದು ರಿಯಾಲಿಟಿ ಶೋ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಇಬ್ಬರೂ ಜಂಟಿಯಾಗಿ ಈ ಶೋ ಮಾಡುತ್ತಿದ್ದು, ಬಿಗ್ ಬಾಸ್‌ಗೆ ಟಕ್ಕರ್ ಕೊಡುವುದಕ್ಕೆ ಸಜ್ಜಾಗಿ ನಿಂತಿದ್ದಾರೆ. ಅಷ್ಟಕ್ಕೂ ಫಿಲ್ಮಿಬೀಟ್ ಸಂದರ್ಶನದಲ್ಲಿ ಲಾಯರ್‌ ಜಗದೀಶ್ ಹಾಗೂ ಗೋಲ್ಡ್ ಸುರೇಶ್ ಹೇಳಿದ್ದೇನು? ತಿಳಿಯುವುದಕ್ಕೆ ಮುಂದೆ ಓದಿ.

ಬಿಗ್ ಬಾಸ್ ಟರ್ನಿಂಗ್ ಪಾಯಿಂಟ್

ಬಿಗ್ ಬಾಸ್‌ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಲಾಯರ್ ಜಗದೀಶ್ ಜನಪ್ರಿಯತೆ ದುಪ್ಪಟ್ಟಾಗಿತ್ತು. ವೀಕ್ಷಕರು ಜಗದೀಶ್ ಅವರ ಆಟವನ್ನು ಇಷ್ಟ ಪಟ್ಟಿದ್ದರು. ಆದರೆ, ಕಿತ್ತಾಡಿಕೊಂಡು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು. ಇದ್ದಷ್ಟು ದಿನದಲ್ಲೇ ಅವರು ಸಾಕಷ್ಟು ಜನಪ್ರಿಯತೆ ಗಳಿಸಿ ಹೊರ ಬಂದಿದ್ದರು. "ಬಿಗ್ ಬಾಸ್ ಒಂದೊಳ್ಳೆ ಪ್ರೋಗ್ರಾಮ್. ನನಗೆ ಒಳ್ಳೆಯ ಐಡೆಂಟಿಟಿ ಕೊಟ್ಟಿದೆ. ಅದಕ್ಕೆ ಬಿಗ್ ಬಾಸ್‌ಗೆ ನಾನು ಥ್ಯಾಂಕ್‌ಫುಲ್ ಆಗಿದ್ದೇನೆ. ಬಿಗ್ ಬಾಸ್ ನನ್ನ ಲೈಫ್‌ನ ಟರ್ನಿಂಗ್ ಪಾಯಿಂಟ್ ಅಂತ ಹೇಳಬಹುದು. ಯಾರು ಬಳಿಸಿಕೊಂಡರೋ ನನಗೆ ಗೊತ್ತಿಲ್ಲ. ಆದರೆ, ನನಂತೂ ಚೆನ್ನಾಗಿಯೇ ಬಳಸಿಕೊಂಡೆ. ಅದಕ್ಕಾಗಿ ಬಿಗ್ ಬಾಸ್ ಬಗ್ಗೆ ನನಗೆ ಅಭಿಮಾನವಿದೆ." ಎಂದು ಲಾಯರ್ ಜಗದೀಶ್ ಫಿಲ್ಮಿಬೀಟ್‌ಗೆ ತಿಳಿಸಿದ್ದಾರೆ.

ಅವಕಾಶ ಸಿಕ್ಕಿದ್ದಕ್ಕೆ ನಮಗೆ ಹೆಮ್ಮೆ

ಇನ್ನು ಲಾಯರ್ ಜಗದೀಶ್ ಜೊತೆ ಗೋಲ್ಡ್ ಸುರೇಶ್ ಕೂಡ ಬಿಗ್‌ಬಾಸ್ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದಾರೆ. "ಬಿಗ್ ಬಾಸ್‌ಗೆ ಸರಿ ಸಾಟಿಯಾಗುವಂತಹ ಇನ್ನೊಂದು ಶೋ ಇಲ್ಲ. ಬಿಗ್ ಬಾಸ್‌ ಮನೆಗೆ ಹೋಗಿ ಒಂದು ಎಕ್ಸ್‌ಪೀರಿಯನ್ಸ್ ಮಾಡುವುದು ಯಾರಿಗೂ ಸಿಗುವುದಿಲ್ಲ. ಕೋಟಿ ಕೊಡುತ್ತೇನೆ ಅಂದರೂ ಈ ಅವಕಾಶ ಸಿಗುವುದಿಲ್ಲ. ಅಂತಹ ಅವಕಾಶ ನಮಗೆ ಸಿಕ್ಕಿತ್ತು. ಅದಕ್ಕೆ ನಮಗೆ ಹೆಮ್ಮೆಯಾಗುತ್ತೆ. ಒಳಗಡೆ ಎಲ್ಲರೂ ಒಳ್ಳೆಯ ಆಟ ಆಡುತ್ತಿದ್ದಾರೆ. ಅವರು ಏನೇ ಆಟ ಆಡಿದರೂ ಅವರ ವ್ಯಕ್ತಿತ್ವ ತೋರಿಸಿಯೇ ತೋರಿಸುತ್ತೆ." ಎಂದು ಗೋಲ್ಡ್ ಸುರೇಶ್ ಹೇಳಿದ್ದಾರೆ.

ಜಗದೀಶ್-ಸುರೇಶ್ ಹೊಸ ರಿಯಾಲಿಟಿ ಶೋ

ಲಾಯರ್ ಜಗದೀಶ್ ಹಾಗೂ ಗೋಲ್ಡ್ ಸುರೇಶ್ ಇಬ್ಬರೂ ಹೊಸ ರಿಯಾಲಿಟಿ ಶೋಗೆ ಕೈ ಹಾಕಿದ್ದಾರೆ. ಆ ಬಗ್ಗೆನೂ ಮಾಹಿತಿ ಹಂಚಿಕೊಂಡಿದ್ದಾರೆ. "ನಾನು ಹಾಗೂ ಗೋಲ್ಡ್ ಸುರೇಶ್ ಸೇರಿಕೊಂಡು ಒಂದು ರಿಯಾಲಿಟಿ ಶೋ ಮಾಡುತ್ತಿದ್ದೇವೆ. ಜನವರಿಯಲ್ಲಿ ಆ ಶೋ ಅನ್ನು ಲಾಂಚ್ ಮಾಡುತ್ತೇವೆ. ಬಿಗ್ ಬಾಸ್‌ಗೆ ಕಲರ್ಸ್ ಕನ್ನಡವಿದ್ದರೆ, ನಮಗೆ ಬೇರೆ ಯಾವುದೋ ರೈಂಬೋ ಅಂತ ಇರೋದಿಲ್ವಾ? ಟೈಮ್ ಬಂದಾಗ ಎಲ್ಲವೂ ಹೇಳುತ್ತೇವೆ. ಆದರೆ, ಒಂದು ರಿಯಾಲಿಟಿ ಶೋ ಅನ್ನು ಮಾಡುತ್ತಿದ್ದೇವೆ. ಆದಷ್ಟು ಬೇಗ ಜನರ ಮುಂದೆ ಬರುತ್ತೆ." ಎಂದು ಲಾಯರ್ ಜಗದೀಶ್ ಹಾಗೂ ಗೋಲ್ಡ್ ಸುರೇಶ್ ಜಂಟಿಯಾಗಿ ಹೇಳಿದ್ದಾರೆ.

ಸಣ್ಣ ಬಿಗ್ ಬಾಸ್ ಶುರು

"ಬಿಗ್‌ಬಾಸ್ ಬಿಟ್ಟೆ ಕನ್ನಡದಲ್ಲಿ ಬೇರೆ ಯಾವುದೇ ರಿಯಾಲಿಟಿ ಶೋ ನೋಡುತ್ತಿಲ್ಲ. ಹಾಗಾಗಿ ಬಿಗ್ ಬಾಸ್‌ಗೆ ಒಂದು ಸಣ್ಣ ಬಿಗ್ ಬಾಸ್ ಕೊಡೋಣ ಅಂತ ನಾವು ಅಂದುಕೊಂಡ್ವಿ. ಪ್ಲಾನ್ ಮಾಡುತ್ತಿದ್ದೇವೆ. ಅದು ಹೇಗೆ ಬರುತ್ತೆ ಅನ್ನೋದು ಗೊತ್ತಿಲ್ಲ" ಎಂದು ಲಾಯರ್ ಜಗದೀಶ್ ಹೇಳಿದರೆ, "ಬಿಗ್ ಬಾಸ್ ಮನೆಯೊಳಗೆ ಹೇಳುತ್ತಿದ್ದರು. ಬಿಗ್ ಬಾಸ್‌ನ ಕೊಂಡುಕೊಳ್ಳುತ್ತೇನೆ ಅಂತ. ಅದರಂತೆ ಹೊರಗಡೆ ಬರುತ್ತಿದ್ದಂತೆ ಕಾನ್ಸೆಪ್ಟ್ ಹೇಳಿದರು. ಚೆನ್ನಾಗಿದೆ ಮಾಡೋಣ ಅಂತ ಕೈ ಜೋಡಿಸಿದ್ದೇನೆ" ಎಂದು ಗೋಲ್ಡ್ ಸುರೇಶ್ ಹೇಳಿದ್ದಾರೆ.

ನಾವು ವೇಸ್ಟ್ ಬಾಡಿಗಳಲ್ಲ

"ಬಿಗ್ ಬಾಸ್‌ ಮನೆಯಿಂದ ಹೊರ ಬರುತ್ತಿದ್ದಂತೆ ನಮಗೆ ಯಾರಿಗೂ ಇಂಡಸ್ಟ್ರಿಯಲ್ಲಿ ಒಳ್ಳೆಯ ಓಪನಿಂಗ್ ಸಿಗಲಿಲ್ಲ. ನಾವು ಅಷ್ಟೊಂದು ವೇಸ್ಟ್ ಬಾಡಿಗಳಂತೂ ಅಲ್ಲ ಅಂತ ಅಂದುಕೊಂಡ್ವಿ. ಯಾರೂ ಮಾಡಿಲ್ಲ ಅಂದರೆ, ನಾವೇ ಮಾಡೋಣ ಸುರೇಶ್ ಅಂತ ಹೇಳಿ ಒಂದು ದೊಡ್ಡ ಹೆಜ್ಜೆಯನ್ನು ಇಡುತ್ತಿದ್ದೇವೆ. ನಾವು ಯಾರೊಂದಿಗೂ ಸ್ಪರ್ಧೆ ಮಾಡುವುದಿಲ್ಲ. ಬಿಗ್ ಬಾಸ್ ನಮಗೆ ಒಂದೊಳ್ಳೆ ಜೀವನ ಕೊಟ್ಟಿದೆ. ನಾವು ಋಣಿಯಾಗಿರುತ್ತೇವೆ." ಎಂದು ಲಾಯರ್ ಜಗದೀಶ್ ಹೇಳಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X