"ರಕ್ಷಿತಾ ಲುಕ್ ನೋಡಿ ಶಾರುಖ್ ಖಾನ್ ಆಗ್ಬಿಟ್ಟೆ" ಎಂದು ಲಾಯರ್ ಜಗದೀಶ್; ಕ್ರೇಜಿ ಕ್ವೀನ್ ರಿಯಾಕ್ಷನ್ ಏನು ಗೊತ್ತಾ?

ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಲಾಯರ್ ಜಗದೀಶ್ ಮೂರು ವಾರ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದರು. ಮನೆಯೊಳಗೆ ಇದ್ದ ಮೂರು ವಾರಗಳಲ್ಲಿಯೇ ಲಾಯರ್ ಜಗದೀಶ್ ಕರ್ನಾಟಕದ ಕ್ರಶ್ ಅಂತ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಮನೆಯೊಳಗೆ ತನ್ನದೇ ಹವಾ ಇಟ್ಟುಕೊಂಡಿದ್ದ ಲಾಯರ್ ಜಗದೀಶ್ ಮನೆಯಿಂದ ಹೊರ ಬಂದ ಮೇಲೂ ಸುದ್ದಿಯಲ್ಲಿ ಇದ್ದಾರೆ.

ಲಾಯರ್ ಜಗದೀಶ್ ಮಾತಾಡುವ ಶೈಲಿಗೆ, ಬಿಗ್ ಬಾಸ್ ಮನೆಯೊಳಗೆ ಏಕಾಂಗಿಯಾಗಿ ಹೋರಾಟ ಮಾಡಿದ್ದನ್ನು ನೋಡಿ ಕಿರುತೆರೆ ವೀಕ್ಷಕರು ಫಿದಾ ಆಗಿದ್ದರು. ಲಾಯರ್ ಜಗದೀಶ್ ಮತ್ತೆ ಬಿಗ್ ಬಾಸ್ ಮನೆಯೊಳಗೆ ಹೋಗಬೇಕು ಅಂತ ವೀಕ್ಷಕರು ಆಸೆ ಪಟ್ಟಿದ್ದರು. ಆದರೆ, ಕಿಚ್ಚ ಸುದೀಪ್ ಬಿಗ್ ಬಾಸ್ ಪಾಲಿಗೆ ಲಾಯರ್ ಜಗದೀಶ್ ಮುಗಿದ ಅಧ್ಯಾಯ ಎಂದು ಹೇಳಿ ಚರ್ಚೆಗೆ ಅಂತ್ಯ ಹಾಡಿದ್ದಾರೆ.

BBK 11 fame Lawyer Jagadish said to Rakshita Prem that after seeing her he became Shah Rukh Khan

ಈ ಮಧ್ಯೆ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡುತ್ತಾ ಲಾಯರ್ ಜಗದೀಶ್ ವೈರಲ್ ಆಗುತ್ತಿದ್ದಾರೆ. ಅಚ್ಚರಿ ಅಂದರೆ, ಲಾಯರ್ ಜಗದೀಶ್ ದಿಢೀರನೇ ಜಗ್ಗುದಾದ ಅವತಾರವೆತ್ತಿ ಜೀ ಕನ್ನಡದಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಸ್ಟೇಜ್ ಮೇಲೆ ಜಗ್ಗುದಾದ ಆಗಿ ಎಂಟ್ರಿ ಕೊಟ್ಟಿದರೂ, ರಕ್ಷಿತಾ ಪ್ರೇಮ್ ನೋಡಿ ರೊಮ್ಯಾಂಟಿಕ್ ಹೀರೋ ಶಾರುಖ್ ಖಾನ್ ಆಗಿಬಿಟ್ಟಿದ್ದಾರೆ. ರಕ್ಷಿತಾ ನೋಡಿ ಫಿದಾ ಆಗಿರೋ ಜಗ್ಗುದಾದ ರೊಮ್ಯಾಂಟಿಕ್ ಡೈಲಾಗ್ ಬಿಟ್ಟರೆ, ಅತ್ತ ರಕ್ಷಿತಾ ಪ್ರೇಮ್ ಕೌಂಟರ್ ಡೈಲಾಗ್ ಹೇಗಿತ್ತು ಗೊತ್ತೇ?

ಹೌದು, ಲಾಯರ್ ಜಗದೀಶ್ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಫುಲ್ ಆಕ್ಟಿವ್ ಆಗಿದ್ದಾರೆ. ಪ್ರತಿ ದಿನ ಇವರು ಏನಾದರೂ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಸದ್ಯ ಜೀ ಕನ್ನಡದ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದಾರೆ. ದರ್ಶನ್ ನಟಿಸಿದ ಜಗ್ಗುದಾದ ಅವತಾರದಲ್ಲಿ ಮಾಸ್ ಎಂಟ್ರಿ ಕೊಟ್ಟ ಜಗದೀಶ್‌ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

BBK 11 fame Lawyer Jagadish said to Rakshita Prem that after seeing her he became Shah Rukh Khan

ಜಗ್ಗುದಾದ ಸಿನಿಮಾದಲ್ಲಿ ದರ್ಶನ್ ಧರಿಸಿದ್ದ ಕಾಸ್ಟ್ಯೂಮ್‌ನಲ್ಲಿಯೇ ಲಾಯರ್ ಜಗದೀಶ್ ವೇದಿಕೆ ಮೇಲೆ ಎಂಟ್ರಿ ಕೊಟ್ಟಿದ್ದಾರೆ. ಇವರ ಎಂಟ್ರಿ, ಡ್ಯಾನ್ಸ್ ನೋಡಿ ಸೆಂಚುರಿ ಸ್ಟಾರ್ ಶಿವಣ್ಣ, ರಕ್ಷಿತಾ ಪ್ರೇಮ್ ಹಾಗೂ ವಿಜಯ್ ರಾಘವೇಂದ್ರ ಫಿದಾ ಆಗಿದ್ದಾರೆ. ದೀಪಾವಳಿ ಹಬ್ಬದ ವಿಶೇಷ ಸಂಚಿಕೆಯಲ್ಲಿ ಲಾಯರ್ ಜಗದೀಶ್ ಅವರನ್ನು ಡ್ಯಾನ್ಸ್ ಕರ್ನಾಟಕ ವೇದಿಕೆ ಮೇಲೆ ಕರೆದುಕೊಂಡು ಬರಲಾಗಿದೆ.

ಈ ವೇಳೆ ಲಾಯರ್ ಜಗದೀಶ್ ಶಿವಣ್ಣನನ್ನು ನೋಡಿ "ನಮ್ಮಂಥವರು ಅವರ ಮುಂದೆ ನಿಂತುಕೊಂಡಿರುವುದೇ ನಮ್ಮ ಅದೃಷ್ಟ" ಎಂದು ಹೇಳಿದ್ದು ಪ್ರೋಮೊದಲ್ಲಿ ರಿವೀಲ್ ಆಗಿದೆ. ಶಿವಣ್ಣಗೆ ಕೂಡ ಲಾಯರ್ ಜಗದೀಶ್ ಅವರ ಎಂಟ್ರಿ, ರೊಮ್ಯಾಂಟಿಕ್ ಲುಕ್, ಡೈಲಾಗ್‌ ನೋಡಿ ನಗು ತಡೆದುಕೊಳ್ಳುವುದಕ್ಕೆ ಆಗಲಿಲ್ಲ. ಡಿಕೆಡಿಯ ಈ ವಿಶೇಷ ಸಂಚಿಕೆಯನ್ನು ಶಿವಣ್ಣ ಸಖತ್ ಎಂಜಾಯ್ ಮಾಡಿದ್ದಾರೆ.

ಈ ವೇದಿಕೆ ಮೇಲೆ ರಕ್ಷಿತಾ ಪ್ರೇಮ್ ಅವರನ್ನು ನೋಡಿ ಲಾಯರ್ ಜಗದೀಶ್ ರೊಮ್ಯಾಂಟಿಕ್ ಮೂಡಿಗೆ ಜಾರಿದ್ದಾರೆ. "ರಕ್ಷಿತಾ ಅವರನ್ನು ನೋಡಿ ಎಲ್ಲಾ ಮರೆತು ಹೋಗಿಬಿಟ್ಟೆ. ನೀವು, ನಿಮ್ಮ ಲುಕ್ಕು. ನಾನು ಶಾರುಖ್ ಖಾನ್ ಆಗಿಬಿಟ್ಟಿದ್ದೀನಿ ಇವತ್ತು" ಎಂದು ಕ್ರೇಜಿ ಕ್ವೀನ್ ಅನ್ನು ಲಾಯರ್ ಜಗದೀಶ್ ಹಾಡಿ ಹೊಗಳಿದ್ದರು. ಜಗದೀಶ್ ಮಾತುಗಳಿಗೆ ರಕ್ಷಿತಾ ಪ್ರೇಮ್ ಕೂಡ ನಾಚಿ ನೀರಾಗಿದ್ದಾರೆ.

ಹಾಗಂತ ಇಲ್ಲಿಗೆ ಸುಮ್ಮನಾಗಿಲ್ಲ. ರಕ್ಷಿತಾ ಪ್ರೇಮ್ ಕೂಡ ಸಖತ್ ಆಗಿಯೇ ಕೌಂಟರ್ ಕೊಟ್ಟಿದ್ದಾರೆ. "ನೀವು ನಾಟಿ ಎಟ್ ಫಾರ್ಟಿ ಸರ್" ಎಂದು ರಕ್ಷಿತಾ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಲಾಯರ್ ಜಗದೀಶ್ ಡ್ಯಾನ್ ಕರ್ನಾಟಕ ಡ್ಯಾನ್ಸ್‌ಗೆ ಎಂಟ್ರಿ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ನಾಳೆನ (ನವೆಂಬರ್ 2) ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎಪಿಸೋಡ್‌ನಲ್ಲಿ ಸಂಜೆ 7.30ಕ್ಕೆ ಈ ವಿಶೇಷ ಕ್ಷಣಗಳು ಪ್ರಸಾರ ಆಗಲಿದೆ.

More from Filmibeat

English summary
Bigg Boss Kannada 11 fame Lawyer Jagadish said to Rakshita Prem that after seeing her, he became Shah Rukh Khan;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X