BBK 12: ಇಲ್ಲ ಕಿಚ್ಚ ಎಷ್ಟು ಹೇಳಿದ್ರೂ ಬುದ್ದಿ ಕಲಿತಿಲ್ಲ; ರಕ್ಷಿತಾ ಶೆಟ್ಟಿ ವಿರುದ್ಧ ಕಿಡಿಕಾರಿದ ಅಶ್ವಿನಿ-ರಾಶಿಕಾ

ಬಿಗ್ ಬಾಸ್‌ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿಯ ಮೇಲೆ ವೀಕ್ಷಕರು ಕಣ್ಣಿಟ್ಟಿದ್ದಾರೆ. ಅವರಿಬ್ಬರೂ ಪ್ರಾಮಾಣಿಕರಾಗಿ ಆಟ ಆಡುತ್ತಿದ್ದಾರೆನ್ನುವ ಭಾವನೆ ಅವರದ್ದು. ಇಷ್ಟೇ ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿಯೂ ಇವರಿಬ್ಬರ ಮೇಲೆ ಹೆಚ್ಚು ಒಲವು ಇದೆ. ಬಿಗ್ ಬಾಸ್ ಮನೆಯ ಹೊರಗೆ ಇಬ್ಬರಿಗೂ ಸಿಕ್ಕಾಪಟ್ಟೆ ಸಪೋರ್ಟ್ ಸಿಗುತ್ತಿದೆ.

ಆದರೆ, ಮನೆಯೊಳಗೆ ಪರಿಸ್ಥಿತಿ ವಿಭಿನ್ನವಾಗಿದೆ. ಅದರಲ್ಲೂ ರಕ್ಷಿತಾ ಶೆಟ್ಟಿಯನ್ನು ಸುಖಾ ಸುಮ್ಮನೆ ಟಾರ್ಗೆಟ್ ಮಾಡುತ್ತಿದ್ದಾರೆ. ಒಂದು ಅರ್ಥದಲ್ಲಿ ಮನೆ ಮಂದಿಯೆಲ್ಲ ಒಂದಾದರೆ, ಇನ್ನೊಂದು ಅರ್ಥದಲ್ಲಿ ರಕ್ಷಿತಾ ಶೆಟ್ಟಿಯೇ ಒಬ್ಬರು ಎನ್ನುವಂತಹ ಸ್ಥಿತಿಯಿದೆ. ಬಿಗ್ ಬಾಸ್ ಅನ್ನು ಒಂದು ದಿನವೂ ಬಿಡದೆ ನೋಡುವ ವೀಕ್ಷಕರಿಗೂ ಹಾಗೇ ಅನಿಸಿದೆ. ಇತ್ತೀಚೆಗಷ್ಟೇ ಅಶ್ವಿನಿ ಗೌಡ ಹಾಗೂ ಜಾಹ್ನವಿ ಇಬ್ಬರೂ ಸೇರಿಕೊಂಡು ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡಿದ್ದರು. ಆಗ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು.

BBK 12 Ashwini Gowda and Rashika Shetty targeted Rakshitha Shetty Here is why

ಕಿಚ್ಚ ಸುದೀಪ್ ಮುಂದೆ ಅಶ್ವಿನಿ ಗೌಡ ಕ್ಷಮೆಯನ್ನೂ ಕೇಳಿದ್ದರು. ಒಂದಿಷ್ಟು ದಿನ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಇಂದಿನ ಎಪಿಸೋಡ್‌ನಲ್ಲಿ ಮತ್ತೆ ಹಳೆ ಚಾಳಿಯನ್ನೇ ಮುಂದುವರೆಸಿದ್ದಾರೆ. ಅಶ್ವಿನಿ ಗೌಡರಿಂದ ಜಾಹ್ನವಿ ಬೇರೆಯಾಗುತ್ತಿದ್ದಂತೆ ಅವರ ಸ್ಥಾನಕ್ಕೆ ರಾಶಿಕಾ ಸೇರಿಕೊಂಡಿದ್ದು, ಇಬ್ಬರೂ ರಕ್ಷಿತಾ ಶೆಟ್ಟಿಯ ಮೇಲೆ ಕಿರುಚಾಡಿದ್ದಾರೆ. ಇದು ಈ ವೀಕೆಂಡ್‌ನಲ್ಲಿ ಕಿಚ್ಚ ಸಮ್ಮುಖದಲ್ಲಿ ಮತ್ತೆ ಚರ್ಚೆಯಾಗುವ ಸಾಧ್ಯತೆಯಿದೆ.

ರಕ್ಷಿತಾ ಶೆಟ್ಟಿಯನ್ನು ಕಂಡರೆ ಅಶ್ವಿನಿ ಗೌಡ ಉರಿದುರಿದು ಬೀಳುತ್ತಾರೆ. ಎರಡನೇ ವಾರ ಬಿಗ್ ಬಾಸ್ ಮನೆಗೆ ರಕ್ಷಿತಾ ಶೆಟ್ಟಿ ಎಂಟ್ರಿ ಕೊಟ್ಟ ದಿನದಿಂದ ಅಶ್ವಿನಿ ಗೌಡ ಟಾರ್ಗೆಟ್ ಮಾಡುತ್ತಲೇ ಇದ್ದಾರೆ. ಬಿಗ್ ಬಾಸ್ ಮನೆಯ ಕ್ಯಾಪ್ಟನ್ ರಘು ಅಡುಗೆ ಮನೆಯ ಜವಾಬ್ದಾರಿಯನ್ನು ರಕ್ಷಿತಾ ಶೆಟ್ಟಿಗೆ ಕೊಟ್ಟಿದ್ದರು. ಇವರ ಟೀಮ್‌ನಲ್ಲಿ ರಾಶಿಕಾ ಶೆಟ್ಟಿ ಇದ್ದಾರೆ. ಅಡುಗೆ ಮನೆ ನೋಡಿ ಕೊಳ್ಳುವುದು ರಕ್ಷಿತಾ ಅವರದ್ದಾಗಿದ್ದರಿಂದ ರಾಶಿಕಾಗೆ ಅಡುಗೆ ಮನೆಯ ಕೆಲಸ ಹೇಳಿದ್ದರು. ಆದರೆ, ರಾಶಿಕಾ ನೆಪ ಹೇಳಿಕೊಂಡು ಓಡಾಡುತ್ತಿದ್ದರು.

ರಾಶಿಕಾಗೆ ಅಡುಗೆ ಕೆಲಸ ಮಾಡುವಂತೆ ರಕ್ಷಿತಾ ಹೇಳುವಷ್ಟು ಹೇಳಿದ್ದರು. ಆದರೆ ರಾಶಿಕಾ ಮಾತನ್ನು ಕೇಳಲಿಲ್ಲ. ಇದರಿಂದ ರೊಚ್ಚಿಗೆದ್ದ ರಕ್ಷಿತಾ ಕ್ಯಾಪ್ಟನ್ ರಘುಗೆ ಬಳಿ ಹೇಳಿದ್ದರು. ಇದನ್ನು ನೋಡಿ ರಕ್ಷಿತಾ ವಿರುದ್ಧ ರಾಶಿಕಾ ತಿರುಗಿಬಿದ್ದರು. ಅಡುಗೆ ಮಾಡುವುದಿಲ್ಲ ಅಂತ ನಾನು ಹೇಳಿಲ್ಲ ಎಂದು ವಾದಕ್ಕೆ ಬಿದ್ದರು. ರಕ್ಷಿತಾ ಶೆಟ್ಟಿಯ ಎದುರು ಕೂಗಾಡಿದರು. ಸುಮ್ಮನಿರಲಾದೆ, ಅಶ್ವಿನಿ ಗೌಡ ಕೂಡ ಅಖಾಡಕ್ಕೆ ಇಳಿಸಿದ್ದರು. ಇದು ಮತ್ತಷ್ಟು ಕಿತ್ತಾಟಕ್ಕೆ ಕಾರಣವಾಗಿದೆ.

ಅಶ್ವಿನಿ ಗೌಡ ಮತ್ತೆ ರಕ್ಷಿತಾ ಶೆಟ್ಟಿಯ ವಿರುದ್ಧ ಕೂಗಾಡಿದ್ದಾರೆ. "ಅತಿಯಾಗಿ ಆಡಬೇಡ. ಎಲ್ಲಾ ವಿಚಾರಕ್ಕೂ ಮಧ್ಯ ಬಂದರೆ ಹುಷಾರ್" ಎಂದು ರಕ್ಷಿತಾ ಶೆಟ್ಟಿಯ ಎದುರು ಕಿರುಚಾಡಿದ್ದಾರೆ. ಅಲ್ಲಿಗೆ ಅಶ್ವಿನಿ ಗೌಡ ಜೊತೆ ರಾಶಿಕಾ ಶೆಟ್ಟಿ ಇಬ್ಬರೂ ಸೇರಿಕೊಂಡು ರಕ್ಷಿತಾ ವಿರುದ್ಧ ತಿರುಗಿಬಿದ್ದಿದ್ದರು. ಸಾಲದ್ದಕ್ಕೆ ಇವರಿಬ್ಬರೂ ರಿಶಾ ಜೊತೆ ಸೇರಿ ರಕ್ಷಿತಾ ವಿರುದ್ಧ ಸಂಚು ರೂಪಿಸುವುದಕ್ಕೆ ಹೊರಟಿದ್ದಾರೆ.

ಮನೆ ಮಂದಿಗೆ ಈಗಾಗಲೇ ರಕ್ಷಿತಾ ಶೆಟ್ಟಿ ಟಾರ್ಗೆಟ್ ಆಗಿರೋದು ಗೊತ್ತಿದೆ. ಈ ಹಿಂದೆನೇ ಅಶ್ವಿನಿ ಗೌಡ ಒಂದು ಪಿತೂರಿ ಮಾಡಿದ್ದರು. ಕಿಚ್ಚ ಸುದೀಪ್ ಅಷ್ಟೇ ಅಲ್ಲ ಹೇಳಿದರೂ ಬುದ್ದಿನೇ ಕಲಿಯದ ಅಶ್ವಿನಿ ಗೌಡ ಮತ್ತೆ ಅದನ್ನೇ ಮುಂದುವರೆಸಿದ್ದಾರೆ. ಈ ವೀಕೆಂಡ್‌ನಲ್ಲಿ ಮತ್ತೆ ಕಿಚ್ಚ ಸುದೀಪ್ ಅಶ್ವಿನಿ, ರಾಶಿಕಾ ಹಾಗೂ ರಿಶಾಗೆ ಕ್ಲಾಸ್ ತೆಗೆದುಕೊಳ್ಳುವುದು ಗ್ಯಾರಂಟಿ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.

More from Filmibeat

English summary
BBK 12 Ashwini Gowda and Rashika Shetty targeted Rakshitha Shetty Here is why.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X