BBK 12:ಕಿಚ್ಚನಿಗೆ ಸವಾಲೆಸೆದು ಸಿಕ್ಕಿ ಬಿದ್ದ ಅಶ್ವಿನಿ ಗೌಡ; ಮತ್ತೆ ಮುಖ ಭಂಗ.. ರಕ್ಷಿತಾ ಶೆಟ್ಟಿನೇ ಕಾರಣ

ವೀಕೆಂಡ್ ಬಂತು.. ಕಿಚ್ಚ ಸುದೀಪ್ ಎಂಟ್ರಿ ಆಯ್ತು ಅಂದರೆ, ಬಿಗ್‌ ಬಾಸ್ ಕನ್ನಡ ಸೀಸನ್ 12 ಮತ್ತಷ್ಟು ರಂಗೇರುತ್ತೆ. ಒಂದು ವಾರ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಆಟ-ಕಿತ್ತಾಟ, ಆರೋಪ-ಪ್ರತ್ಯಾರೋಪ, ಮೈಂಡ್‌ ಗೇಮ್ ಎಲ್ಲವನ್ನೂ ಬಿಡಿಸಿ ಅವರಿಗೆ ಮನವರಿಕೆ ಮಾಡಿಕೊಡಲಾಗುತ್ತೆ. ಈ ಎರಡು ದಿನ ಬಿಗ್ ಬಾಸ್ ಸ್ಪರ್ಧಿಗಳು ಕಿಚ್ಚ ಕೆಂಗಣ್ಣಿಗೆ ಗುರಿಯಾದ ಪ್ರಸಂಗಗಳೂ ಇವೆ. ಇನ್ನೊಂದು ಕಡೆ ಹೊಗಳಿಕೆ ಗಿಟ್ಟಿಸಿಕೊಂಡಿದ್ದೂ ಇವೆ.

ಕಳೆದ ಕೆಲವು ದಿನಗಳಿಂದ ಕಿಚ್ಚನ ಕೈಗೆ ಅಶ್ವಿನಿ ಗೌಡ ಸಿಕ್ಕಿಬೀಳುತ್ತಲೇ ಇದ್ದಾರೆ. ರಕ್ಷಿತಾ ಶೆಟ್ಟಿ ವಿರುದ್ಧ ಕಿತ್ತಾಡಿಕೊಂಡು ವಾರ ಕೊನೆಯಲ್ಲಿ ತಾನು ಮಾಡಿದ್ದೇ ಸರಿ ಎಂದು ಅಶ್ವಿನಿ ಗೌಡ ಹೇಳುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲೆಲ್ಲ ಅಶ್ವಿನಿ ಗೌಡ ಸೋತಿದ್ದೇ ಹೆಚ್ಚು. ಇಂದಿನ (ನವೆಂಬರ್ 8) ಎಪಿಸೋಡ್‌ನಲ್ಲೂ ಕಿಚ್ಚನಿಗೆ ಸವಾಲ್ ಆಗಿ ಸೋತಿದ್ದಾರೆ.

BBK 12 Ashwini Gowda Challenges Kichcha Sudeep but Fails to Prove She Didn t Target Rakshitha Shetty Personally

ರಕ್ಷಿತಾ ಶೆಟ್ಟಿ ಎರಡನೇ ವಾರದಿಂದ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಇಲ್ಲಿವರೆಗೂ ಅಶ್ವಿನಿ ಗೌಡ ಅವರನ್ನು ಟಾರ್ಗೆಟ್ ಮಾಡುತ್ತಲೇ ಬಂದಿದ್ದಾರೆ. ಈ ವಾರ ಕೂಡ ಅದೇ ಮಾಡಿದ್ದರು. ಅದನ್ನು ಕಿಚ್ಚ ಸುದೀಪ್ ವೇದಿಕೆಯಲ್ಲಿ ಚರ್ಚೆ ಮಾಡಿದ್ದರು. ಅಷ್ಟಕ್ಕೂ ಅಶ್ವಿನಿ ಗೌಡ ಹಾಕಿದ ಸವಾಲು ಏನು? ಕಿಚ್ಚನ ಮುಂದೆ ಸೋತು ಹೇಳಿದ್ದೇನು? ತಿಳಿಯಲು ಮುಂದಿ ಓದಿ.

ರಕ್ಷಿತಾ ವಿರುದ್ಧ ಸಿಟ್ಟು ಕಮ್ಮಿಯಾಗಿಲ್ಲ

ಪ್ರತಿ ವಾರದಂತೆ ಈ ವಾರ ಕೂಡ ಒಂದು ಟ್ರಿಕ್ಕಿ ಟಾಸ್ಕ್ ಇತ್ತು. ಅದುವೇ ಲೆಟರ್ ಟಾಸ್ಕ್. ಕಳೆದ ನಾಲ್ಕೈದು ವಾರದಿಂದ ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ನಡುವೆ ಕಿತ್ತಾಟ, ವೈಮನಸ್ಸು ಮುಂದುವರೆದಿತ್ತು. ಇದು ಲೆಟರ್‌ ಟಾಸ್ಕ್‌ನಲ್ಲೂ ಎದ್ದು ಕಾಣುತ್ತಿತ್ತು. ರಾಶಿಕಾ ಶೆಟ್ಟಿ ಹಾಗೂ ರಕ್ಷಿತಾ ಶೆಟ್ಟಿ ಇಬ್ಬರೂ ಎದುರು ಬದುರಾಗಿದ್ದರು. ಈ ವೇಳೆ ರಕ್ಷಿತಾ ಶೆಟ್ಟಿಗೆ ಲೆಟರ್ ಸಿಗೋದು ಅಶ್ವಿನಿ ಗೌಡಗೆ ಇಷ್ಟವಿರಲಿಲ್ಲ. ಇದನ್ನು ಗಮನಿಸಿದ ಸೂರಜ್, ಅಶ್ವಿನಿ ಗೌಡ ಪರ್ಸನಲ್ ಆಗಿ ತೆಗೆದುಕೊಂಡಿದ್ದರು ಎಂದು ಅಭಿಪ್ರಾಯವಿಟ್ಟರು.

ಕಿಚ್ಚನಿಗೆ ಸವಾಲ್

ಸೂರಜ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಂತೆ ಅಶ್ವಿನಿ ಗೌಡ ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದರು. "ನಾನು ಹಾಗೆ ಹೇಳಿಯೇ ಇಲ್ಲ. ಒಂದು ವೇಳೆ ಹಾಗೆ ಮಾತಾಡಿದ್ದರೆ, ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತೇನೆ" ಎಂದು ಕಿಚ್ಚ ಸುದೀಪ್‌ಗೆ ಸವಾಲೆಸೆದರು. ಆಗ ಕಿಚ್ಚ ವಿಡಿಯೋ ಪ್ಲೇ ಮಾಡಿಸಿದರು. ಆ ವಿಡಿಯೋದಲ್ಲಿ ಅಶ್ವಿನಿ ಗೌಡ ಮುಖಭಂಗ ಆಗಿತ್ತು.

BBK 12 Ashwini Gowda Challenges Kichcha Sudeep but Fails to Prove She Didn t Target Rakshitha Shetty Personally

ಲೆಟರ್ ಸಿಗೋದು ಬೇಡ

ಲೆಟರ್‌ ಟಾಸ್ಕ್‌ನಲ್ಲಿ ರಾಶಿಕಾ ಶೆಟ್ಟಿ ಹಾಗೂ ರಕ್ಷಿತಾ ಶೆಟ್ಟಿ ಎದುರಾದಾಗ ಅಶ್ವಿನಿ ಗೌಡ ಆ ಮಾತನ್ನು ಹೇಳಿದ್ದರು. ರಕ್ಷಿತಾಗೆ ಲೆಟರ್ ಸಿಗೋದು ಬೇಡ ಎಂದು ಹೇಳಿದ್ದರು. ಇದು ಕಿಚ್ಚ ಪ್ಲೇ ಮಾಡಿದ ವಿಡಿಯೋದಲ್ಲಿ ಸಾಬೀತಾಗಿತ್ತು. ಆಗ ಕಿಚ್ಚ ಸುದೀಪ್ ಈಗ ಏನು ಹೇಳುತ್ತೀರಿ ಎಂದಾಗ ತನ್ನ ತಪ್ಪನ್ನು ಅಶ್ವಿನಿ ಗೌಡ ಒಪ್ಪಿಕೊಂಡಿದ್ದಾರೆ.

ರಕ್ಷಿತಾ ಮೇಲೆ ಆರೋಪಗಳ ಸುರಿಮಳೆ

ಇಷ್ಟೆಲ್ಲ ಆದರೂ, ರಕ್ಷಿತಾ ಶೆಟ್ಟಿಯ ವಿರುದ್ಧ ಅಶ್ವಿನಿ ಗೌಡ ಆರೋಪ ಮಾಡುವುದನ್ನು ನಿಲ್ಲಿಸಲಿಲ್ಲ. ಬಿಗ್ ಬಾಸ್ ಮನೆಯ ಛಿದ್ರ ಆಗುವುದಕ್ಕೆ ರಕ್ಷಿತಾ ಶೆಟ್ಟಿಯೇ ಕಾರಣ. ಅವರು ಬಂದಾಗಿನಿಂದ ನನ್ನ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತಿದೆ ಎಂದು ಈ ಹಿಂದೆ ಹೇಳಿದ್ದರು. ಅದರ ಬಗ್ಗೆನೂ ಚರ್ಚೆಯಾಗಿದೆ. ಹಾಗೇ ಕಳೆದ ವಾರದ ಚಪ್ಪಲಿ ತೋರಿಸಿದ ವಿಷಯದ ಬಗ್ಗೆನೂ ಕಿಚ್ಚ ಇಬ್ಬರಿಗೂ ಕ್ಲಾಸ್ ತೆಗೆದುಕೊಂಡು ಕ್ಲಾರಿಟಿ ಕೊಟ್ಟಿದ್ದಾರೆ.

More from Filmibeat

English summary
BBK 12: Ashwini Gowda Challenges Kichcha Sudeep but Fails to Prove She Didn’t Target Rakshitha Shetty Personally.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X